ನಾಸಾದಿಂದ ರಿಜೆಕ್ಟ್ ಆಗಿದ್ದ 14 ವರ್ಷದ ಬಾಲಕಿ ಇಂದು ಮಂಗಳ ಗ್ರಹದ ಅನ್ವೇಷಣೆಯ ನಾಯಕಿ: ಇದು ಕ್ಲೇರ್ ಸಾಧನೆಯ ಕಥೆ

ಬದುಕಿನಲ್ಲಿ ಎದುರಾಗುವ ಸೋಲುಗಳು ಅಥವಾ ತಿರಸ್ಕರವೇ ಜೀವನದ ಅಂತ್ಯವಲ್ಲ. ಕೆಲವೊಮ್ಮೆ ಈ ಸೋಲುಗಳೇ ಭವಿಷ್ಯದಲ್ಲಿ ದೊಡ್ಡ ಸಾಧನೆಗೆ ಮೆಟ್ಟಿಲಾಗಬಹುದು ಎನ್ನುವುದಕ್ಕೆ ಇಂದು ಬಾಹ್ಯಾಕಾಶ ಕ್ಷೇತ್ರದಲ್ಲಿ ತುಂಬ ದೊಡ್ಡ ಹೆಸರು ಮಾಡಿರುವ ವಿಜ್ಞಾನಿ ಕ್ಲೇರ್‌ ಪಾರ್ಫಿಟ್‌ ಅವರೇ ಒಂದು ಒಳ್ಳೇಯ ಉದಾಹರಣೆ. ಆಕೆ ಚಿಕ್ಕವಳಿದ್ದಾಗ ನಾಸಾ ಒಂದು ಇಂಟರ್ನ್‌ಶಿಪ್ ಅವಕಾಶ ಕೊಡಲು ನಿರಾಕರಿಸಿತ್ತು. ಆದರೆ ಇಂದು ಯುರೋಪಿಯನ್ ಸ್ಪೇಸ್ ಏಜೆನ್ಸಿಯ ಬಹುಮುಖ್ಯವಾದ ಮಂಗಳ ಗ್ರಹದ ಅನ್ವೇಷಣಾ ಕಾರ್ಯಾಚರಣೆಯ ಪ್ರಮುಖ ನಾಯಕಿಯಾಗಿ ಹೊರಹೊಮ್ಮಿದ್ದಾರೆ.

ನಾಸಾದಿಂದ ತಿರಸ್ಕಾರಗೊಂಡ ಬಾಲಕಿ

ಕ್ಲೇರ್ ಪಾರ್ಫಿಟ್ ಅವರಿಗೆ ಚಿಕ್ಕಂದಿನಿಂದಲ್ಲೂ ಬಾಹ್ಯಾಕಾಶದ ಬಗ್ಗೆ ಅಪಾರ ಆಸಕ್ತಿ ಇತ್ತು. ಇಂಗ್ಲೆಂಡ್‌ನ ಮಿಡ್‌ಲ್ಯಾಂಡ್ಸ್‌ನಲ್ಲಿ ವಾಸಿಸುತ್ತಿದ್ದ ಅವರಿಗೆ ಕೇವಲ 14 ವರ್ಷ ವಯಸ್ಸಾಗಿದ್ದಾಗ, ಇಂಟರ್ನ್‌ಶಿಪ್ ಅವಕಾಶ ಕೇಳಿ ನೇರವಾಗಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾಗೆ ಪತ್ರ ಬರೆದಿದ್ದರು. ಆದರೆ, ನಾಸಾ ಇವರ ಮನವಿಯನ್ನು ತಿರಸ್ಕರಿಸಿತ್ತು. ನಾಸಾದ ಈ ಪ್ರತಿಕ್ರಿಯೆ ಆಕೆಯ ಕನಸುಗಳನ್ನ ಕೊಲ್ಲಲಿಲ್ಲ. ಬದಲಿಗೆ, 2001ರಲ್ಲಿ ಕ್ಲೇರ್ ಲೀಸೆಸ್ಟರ್‌ನಲ್ಲಿರುವ ನ್ಯಾಷನಲ್ ಸ್ಪೇಸ್ ಸೆಂಟರ್‌ನಲ್ಲಿ ಕೆಲಸಕ್ಕೆ ಸೇರಿಕೊಂಡರು. ಅಲ್ಲಿ ಅವರು ವಸ್ತುಸಂಗ್ರಹಾಲಯದ ಪ್ರದರ್ಶನಕ್ಕೆ ಇಡಲಾಗಿದ್ದ 'ಸ್ಪೇಸ್ ಶೌಚಾಲಯ' ಸ್ವಚ್ಛಗೊಳಿಸುವ ಮತ್ತು ಜೋಡಿಸುವ ಕೆಲಸವನ್ನ ಮಾಡುತ್ತಿದ್ದಾರೆ. ಈ ಕೆಲಸದಿಂದಲೇ ಅವರ ಬಾಹ್ಯಾಕಾಶ ಪಯಣ ಶುರುವಾಯಿತು.

NASA

ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯಲ್ಲಿ ಕ್ಲೇರ್ ಸಾಧನೆ

ತಾವು ಕಂಡ ಕನಸನ್ನಾ ನನಸು ಮಾಡಿಕೊಳ್ಳಲುಒಂದು ದಿಟ್ಟ ಹೆಜ್ಜೆ ಇಟ್ಟ ಕ್ಲೇರ್, ಭೌತಶಾಸ್ತ್ರದಲ್ಲಿ ಉನ್ನತ ವ್ಯಾಸಂಗ ಮುಗಿಸಿ, ಸ್ಪೇಸ್‌ಕ್ರಾಫ್ಟ್ ಪವರ್ ಸಿಸ್ಟಮ್ಸ್ ಎಂಜಿನಿಯರಿಂಗ್‌ನಲ್ಲಿ ಡಾಕ್ಟರೇಟ್ ಪಡೆದರು. ಈ ಶೈಕ್ಷಣಿಕ ಸಾಧನೆ ಅವರಿಗೆ ಬ್ರಿಟನ್‌ನ ಬಾಹ್ಯಾಕಾಶ ಉದ್ಯಮದಲ್ಲಿ ದೊಡ್ಡ ಮಟ್ಟದ ಅವಕಾಶವನ್ನಾ ಮಾಡಿಕೊಟ್ಟಿತು. ಸಿಸ್ಟಮ್ಸ್ ಎಂಜಿನಿಯರ್ ಆಗಿ ಪರಿಣತರಾದ ನಂತರ, ಕ್ಲೇರ್ ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ಸೇರಿದರು. ಅಲ್ಲಿ ಅವರು ಮಂಗಳ ಗ್ರಹದಲ್ಲಿ ಜೀವಿಗಳ ಅಸ್ತಿತ್ವವನ್ನು ಹುಡುಕುವ 'ಎಕ್ಸೋಮಾರ್ಸ್' ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಮಂಗಳನ ಮೇಲ್ಮೈಯಿಂದ 2 ಮೀಟರ್ ಆಳದವರೆಗೆ ಕೊರೆಯಬಲ್ಲ 'ರೊಸಾಲಿಂಡ್ ಫ್ರಾಂಕ್ಲಿನ್ ರೋವರ್' ವಿನ್ಯಾಸದಲ್ಲಿ ಇವರ ಕೊಡುಗೆ ಹೆಚ್ಚಿದೆ.

Inspiring Story: IAS ಹುದ್ದೆ ಬಿಟ್ಟು 26,000 ಕೋಟಿ ರೂ. ಮೌಲ್ಯದ 'ಅನ್ ಅಕಾಡೆಮಿ' ಕಟ್ಟಿದ ರೋಮನ್ ಸೈನಿ
Inspiring Story: IAS ಹುದ್ದೆ ಬಿಟ್ಟು 26,000 ಕೋಟಿ ರೂ. ಮೌಲ್ಯದ 'ಅನ್ ಅಕಾಡೆಮಿ' ಕಟ್ಟಿದ ರೋಮನ್ ಸೈನಿ

ಮಂಗಳ ಗ್ರಹದ ಭವಿಷ್ಯದ ಯೋಜನೆಗಳ ನೇತೃತ್ವ

ತಮ್ಮ ಅಪಾರ ಅನುಭವದ ಮೇಲೆ, 2023ರಲ್ಲಿ ಕ್ಲೇರ್ ಪಾರ್ಫಿಟ್ ಅವರು ಯುರೋಪಿಯನ್ ಸ್ಪೇಸ್ ಏಜೆನ್ಸಿಯ ಹ್ಯೂಮನ್ ಮತ್ತು ರೊಬೊಟಿಕ್ ಎಕ್ಸ್‌ಪ್ಲೋರೇಷನ್ ವಿಭಾಗದಲ್ಲಿ 'ಮಾರ್ಸ್ ಎಕ್ಸ್‌ಪ್ಲೋರೇಷನ್ ಸ್ಟಡಿ ಲೀಡ್' ಆಗಿ ನೇಮಕಗೊಂಡರು. ಸದ್ಯಕ್ಕೆ ಯಾವುದೇ ಬಾಹ್ಯಾಕಾಶ ಸಂಸ್ಥೆಗಳು ಮಂಗಳ ಗ್ರಹಕ್ಕೆ ಮಾನವ ಸಹಿತ ಯಾನವನ್ನು ಅಧಿಕೃತವಾಗಿ ಘೋಷಿಸಿಲ್ಲವಾದರೂ, ಮುಂದಿನ ದಿನಗಳಿಗೆ ಯೋಜನೆಗಳ ಸಿದ್ಧತೆಗಳು ಭರದಿಂದ ಸಾಗುತ್ತಿವೆ.

ಮಂಗಳ ಗ್ರಹಕ್ಕೆ ತೆರಳಿ ಬರಲು ಕನಿಷ್ಠ ಎರಡು-ಮೂರು ವರ್ಷಗಳೇ ಬೇಕಾಗುತ್ತವೆ ಹಾಗೂ ಅಲ್ಲಿನ ವಿಕಿರಣಗಳ ಅಪಾಯವೂ ಹೆಚ್ಚಿದೆ. ಇಂತಹ ಸವಾಲುಗಳನ್ನು ಎದುರಿಸಲು ಬೇಕಾದ ಹೊಸ ತಂತ್ರಜ್ಞಾನಗಳ ಅಭಿವೃದ್ಧಿ, ದೀರ್ಘಾವಧಿಯ ಯೋಜನೆ ಮತ್ತು ಅಂತಾರಾಷ್ಟ್ರೀಯ ಸಹಕಾರದ ಜವಾಬ್ದಾರಿಯನ್ನು ಕ್ಲೇರ್ ಹೊತ್ತಿದ್ದಾರೆ.

NASA Mission: ಭಾರತೀಯರಿಗೆ ಐತಿಹಾಸಿಕ ಕ್ಷಣ: ಇಂಡಿಯಾ ಮೂಲದ ಅನಿಲ್ ಮೆನನ್ ಜುಲೈ 14ಕ್ಕೆ ಮೊದಲ ಬಾರಿಗೆ ಬಾಹ್ಯಾಕಾಶಕ್ಕೆ
NASA Mission: ಭಾರತೀಯರಿಗೆ ಐತಿಹಾಸಿಕ ಕ್ಷಣ: ಇಂಡಿಯಾ ಮೂಲದ ಅನಿಲ್ ಮೆನನ್ ಜುಲೈ 14ಕ್ಕೆ ಮೊದಲ ಬಾರಿಗೆ ಬಾಹ್ಯಾಕಾಶಕ್ಕೆ

ಅಂದು ನಾಸಾದಲ್ಲಿ ಕೆಲಸ ಸಿಗದೆ ನಿರಾಸೆಗೊಂಡಿದ್ದ ಆ ಬಾಲಕಿ, ಇಂದು ಅದೇ ನಾಸಾ, ಜಾಕ್ಸಾ ಸೇರಿದಂತೆ ಜಗತ್ತಿನ ದಿಗ್ಗಜ ಬಾಹ್ಯಾಕಾಶ ಸಂಸ್ಥೆಗಳೊಂದಿಗೆ ಹಿಡಿತ ಸಾಧಿಸಿ ಮಂಗಳನಂಗಳಕ್ಕೆ ಮನುಷ್ಯನನ್ನು ಕಳುಹಿಸುವ ಭವಿಷ್ಯದ ಯೋಜನೆಗಳಿಗೆ ಕೆಲಸ ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+