Kittur Elections: ಅಧಿಕಾರ ಹಿಡಿದು ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸಲು ಸೆಡ್ಡು ಹೊಡೆದ ಬಿಜೆಪಿ-ಕಾಂಗ್ರೆಸ್
ಬೆಂಗಳೂರು, ಮಾರ್ಚ್ 25: ಕರ್ನಾಟಕದ ಗಡಿಭಾಗದ ಬೆಳಗಾವಿ ಜಿಲ್ಲೆ ವ್ಯಾಪ್ತಿಗೆ ಬರುವ ಕಿತ್ತೂರು ಸಾಕಷ್ಟು ವೈಶಿಷ್ಯಗಳಿಂದ ಕೂಡಿದೆ. ವಿಧಾನಸಭಾ ಕ್ಷೇತ್ರವು ಆಗಿರುವ ಕಿತ್ತೂರಿನಲ್ಲಿ ಬಿಜೆಪಿಯಿಂದ ಮಹಾಂತೇಶ್ ದೊಡ್ಡಗೌಡ ಚುನಾಯಿತರಾಗಿದ್ದಾರೆ. ಮತ್ತೆ ಈ ಸಲವು ಅವರು ಚುನಾವಣೆ ಎದುರಿಸಲು ಸಜ್ಜಾಗಿದೆ. ಕಿತ್ತೂರು ಕ್ಷೇತ್ರ ಚುನಾವಣಾ ರಣಕಣವಾಗಿ ಬದಲಾಗುತ್ತಿದೆ. ಕ್ಷೇತ್ರದ ಐತಿಹಾಸಿಕ ಪರಿಚಯ, ರಾಜಕೀಯ ಹಿನ್ನೆಲೆ, ಚುನಾವಣಾ ಪೈಪೋಟಿ ಬಗ್ಗೆ ಮಾಹಿತಿ ಇಲ್ಲಿದೆ.
ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ (NH4) 12ನೆ ಶತಮಾನದಿಂದ ಕಿತ್ತೂರು ಎಂಬ ಹೆಸರು ಬಳಕೆಯಲ್ಲಿದೆ. ಇದರ ಬಗ್ಗೆ ಇಲ್ಲಿನ ಬಸವೇಶ್ವರ ದೇವಾಲಯದ ಶಾಸನವೊಂದರಲ್ಲಿ ಉಲ್ಲೇಖಿಸಲಾಗಿದೆ. ಕಿತ್ತೂರು ಎಂದರೆ ನೆನಪಾಗುವುದು ರಾಣಿ ಚೆನ್ನಮ್ಮ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ.

ಸ್ವಾತಂತ್ರ್ಯ ಹೋರಾಟಕ್ಕಾಗಿ ಕ್ಷೇತ್ರದ ಜನರಲ್ಲಿ ನಶಿಸಿದ್ದ ದೇಶ ಪ್ರೇಮಕ್ಕೆ ಕಿಡಿ ಹೊತ್ತಿಸಿದ್ದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ. ಬ್ರಿಟಿಷರ ವಿರುದ್ಧ ಕಿತ್ತೂರು ರಾಣಿ ಚನ್ನಮ್ಮಳ ಜೊತೆ ಹೋರಾಡಿದ್ದರು. ಬ್ರಿಟಿಷರ ವಿರುದ್ಧ ಗಟ್ಟಿಗಿತ್ತಿಯಾಗಿ ಧ್ವನಿಎತ್ತಿ ಹೋರಾಡಿದ ಮಹಿಳಾ ಹೋರಾಟಗಾರ್ತಿ ಈ ಕಿತ್ತೂರು ರಾಣಿ ಚನ್ನಮ್ಮ.
ಇನ್ನೂ ರಾಜಕೀಯವಾಗಿ ಕಿತ್ತೂರು ನೋಡುವುದಾದರೆ, ಕಾಂಗ್ರೆಸ್ ಹಿಂದಿನಿಂದಲೂ ಕಿತ್ತೂರಲ್ಲಿ ಅಧಿಪತ್ಯ ಸಾಧಿಸಲು ಮುಂದಾಗಿದೆ. ಆದರೆ ಅದು ಅಷ್ಟಾಗಿ ಸಫಲವಾಗಿಲ್ಲ. 1967ರಿಂದಲೇ ಗೆಲವು ಕಂಡಿದ್ದ ಕಾಂಗ್ರೆಸ್‌ಗೆ ಆಗಾಗ ಸೋಲು ಸಹ ಎದುರಿಸಿದೆ. ಜನತಾಪಾರ್ಟಿ, ಕೆಆರ್‌ಎಸ್ ಪಕ್ಷ ಸಹ ಅಂದಿನ ಕಾಲದಲ್ಲಿ ಪ್ರಬಲ ಎದುರಾಗಿಳಾಗಿದ್ದವು. ಆದರೆ ಬಹುತೇಕ ಸಲ ಕಾಂಗ್ರೆಸ್ ಚುನಾಯಿತಗೊಂಡಿದೆ.

2004ರಿಂದ ಕಾಂಗ್ರೆಸ್‌ಗೆ ಬಿಜೆಪಿ ಸೆಡ್ಡು
ಕಾಂಗ್ರೆಸ್‌ನ ಈ ಗೆಲುವಿನ ಓಟಕ್ಕೆ 2004ರಲ್ಲಿ ಬ್ರೇಕ್ ಹಾಕಲು ಮುಂದಾಗಿತ್ತು, ಆದರೆ ಅದು ಸಾಧ್ಯವಾಗಲಿಲ್ಲ. ಮರಳಿ ಯತ್ನ ಮಾಡಿದ್ದ ಬಿಜೆಪಿಗೆ ಫಲ ದೊರೆತಿತ್ತು. 2008ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸುರೇಶ್ ಶಿವರುದ್ರಪ್ಪ ಮಾರಿಹಾಳ್ ಅವರು ಪ್ರಚಂಡ ಬಹುಮತದಿಂದ ಗೆದ್ದರು.
ಮಾರನೇ ವರ್ಷದ ಚುನಾವಣೆ ವೇಳೆ 2013 ರಲ್ಲಿ ಮತ್ತೆ ಶಿವರುದ್ರಪ್ಪ ಮಾರಿಹಾಳ್ ಅವರು ಸೋಲು ಕಂಡಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಮಳೆ ಇನ್ನೇನು ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸಬೇಕು ಎನ್ನುವಷ್ಟರಲ್ಲಿ ಕ್ಷೇತ್ರ 2018ರಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಆದರೆ ಇದುವರೆಗೂ ಯಾವೊಂದು ಪ್ರಮುಖ ರಾಷ್ಟ್ರೀಯ ಪಕ್ಷದ ಬಲ ಕ್ಷೇತ್ರದಲ್ಲಿ ನಿಂತಿಲ್ಲ. ಪ್ರತಿರ್ಷ ಬದಲಾಗುತ್ತಲೇ ಬಂದಿದೆ.

ಡಿ.ಬಿ.ಇನಾಮ್‌ದಾರ್ ಕಾಂಗ್ರೆಸ್ ಪ್ರಬಲ ಟಿಕೆಟ್ ಆಕಾಂಕ್ಷಿ
ಮಾಜಿ ಶಾಸಕ ಡಿ.ಬಿ ಇನಾಮದಾರ್ ಕಿತ್ತೂರು ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇತ್ತೀಚೆಗೆ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಆಗಮಿಸಿದ್ದ ಕೇಂದ್ರ ರಕ್ಷಣಾ ಇಲಾಖೆ ಸಚಿವ ರಾಜನಾಥ್ ಸಿಂಗ್ ಡಿ.ಬಿ.ಇನಾಮ್‌ದಾರ್ ಜೊತೆ ಊಟ ಮಾಡಿದ್ದರು. ಅದು ಕ್ಷೇತ್ರದ ತುಂಬ ದೊಡ್ಡ ಸುದ್ದಿಯಾಗಿತ್ತು. ಇತ್ತ ಚುನಾವಣೆ ಸಮೀಪಿಸುತ್ತಿದ್ದ ಮೊದಲ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯಲ್ಲಿ ಕಿತ್ತೂರು ಇಲ್ಲ. ಎರಡನೇ ಹಂತದ ಪಟ್ಟಿಯಲ್ಲಿ ಕಾಂಗ್ರೆಸ್ ಕಿತ್ತೂರಿನಿಂದ ಇನಾಮ್‌ದಾರ್ ಅವರಿಗೆ ನೀಡುತ್ತಲೋ ಇಲ್ಲ ಹೊಸಬರಿಗೆ ಮಣೆ ಹಾಕಲಿದಿಯೋ ತಿಳಿಯಬೇಕಿದೆ.
ಅದೇ ರೀತಿ ಬಿಜೆಪಿಯಲ್ಲಿ ಸಹ ಹಾಲಿ ಶಾಸಕ ಮಹಾಂತೇಶ್ ದೊಡ್ಡಗೌಡರಿಗೆ ಟಿಕೆಟ್ ಎಂಬುದು ಬಹುತೇಕ ಖಚಿತವಾಗಿದೆ. ಈ ಕ್ಷೇತ್ರದಲ್ಲಿ ಜೆಡಿಎಸ್ ನ ಸದ್ದುಗದ್ದಲ್ಲ ಇಲ್ಲದಾಗಿದೆ. ಅಧಿಪತ್ಯ ಸಾಧಿಸುವಲ್ಲಿ ಈ ಸಲ ಯಾವ ಪಕ್ಷ ಯಶಸ್ವಿಯಾಗಲಿದೆ, ಜನಾಶೀರ್ವಾದ ಯಾವ ಪಕ್ಷಕ್ಕೆ ಧಕ್ಕಲಿದೆ ಎಂದು ಕಾದು ನೋಡಬೇಕಿದೆ.
Kittur Karnataka Elections
| ವರ್ಷ | ಗೆದ್ದವರು | ಮತಗಳು | ಸೋತವರು | ಮತಗಳು |
| 2018 | ಮಹಾಂತೇಶ್ ದೊಡ್ಡಗೌಡರ್ | 73,155 | ಬಿ.ಡಿ.ಇನಾಮ್‌ದಾರ್ | 40,293 |
| 2013 | ಬಿ.ಡಿ.ಇನಾಮ್‌ದಾರ್ | 53924 | ಸುರೇಶ್ ಮಾರಿಹಾಳ್ | 35,634 |
| 2008 | ಸುರೇಶ್ ಮಾರಿಹಾಳ್ | 48,581 | ಬಿ.ಡಿ.ಇನಾಮ್‌ದಾರ್ | 44,216 |












Click it and Unblock the Notifications