Monsoon Report: ಕರ್ನಾಟಕದಲ್ಲಿ ಕೊರತೆ ತಗ್ಗಿಸಿ ದುರ್ಬಲಗೊಂಡ ಮುಂಗಾರು! ಜೂನ್ 1-ಜುಲೈ 10ರ ಮಳೆ ವರದಿ

ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜೂನ್‌ನಲ್ಲಿ ಕೈ ಕೊಟ್ಟಿದ್ದ ಮುಂಗಾರು ಮಳೆ ಜುಲೈ ಆರಂಭದಲ್ಲಿ ಸುರಿಯುವ ಮೂಲಕ ಈವರೆಗಿನ ಶೇ. 42ರಷ್ಟಿದ್ದ ಮಳೆ ಕೊರತೆಯನ್ನು ತಗ್ಗಿಸಿದೆ. ವಿಪರ್ಯಾಸವೆಂದರೆ ಕರ್ನಾಟಕದಲ್ಲಿ ಮುಂಗಾರು ಮತ್ತೆ ದುರ್ಬಲವಾಗಿದೆ. ಗಮನಿಸಬೇಕಾದ ಅಂಶವೆಂದರೆ ಜುಲೈ 1 ರಿಂದ 10ರವರೆಗೆ ಅವಧಿಯಲ್ಲಿ ಒಟ್ಟಾರೆ ರಾಜ್ಯದಲ್ಲಿ ನಿರೀಕ್ಷೆಗೂ ಮೀರಿ ಸ್ವಲ್ಪ ಹೆಚ್ಚೇ ಮಳೆ ಆಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ವರದಿ ತಿಳಿಸಿದೆ.

ಮೊದಲಿಗೆ ಜುಲೈ 10 ದಿನಗಳ ಒಟ್ಟು ಮಳೆ ದಾಖಲಾರಿ ಹಾಗೂ ಜೂನ್ 1ರಿಂದ ಇಲ್ಲಿಯವರೆಗೆ ಸುರಿದ ಮಳೆ, ಒಟ್ಟಾರೆ ಕೊರತೆ ಪ್ರಮಾಣ, ಯಾವ ಭಾಗದಲ್ಲಿ ಹೆಚ್ಚು ಮತ್ತು ಯಾವ ಜಿಲ್ಲೆಗಳಲ್ಲಿ ಕಡಿಮೆ ಮಳೆ ಆಗಿದೆ? ಎಂಬ ಸಂಪೂರ್ಣ ವಿವರ ಇಲ್ಲಿ ತಿಳಿಯಿರಿ.

Karnataka Rains

ಜುಲೈನಲ್ಲಿ ಅಧಿಕ ಮಳೆ ದಾಖಲು, ಶೇ.6ರಷ್ಟು ಕೊರತೆ

ಜುಲೈ ಮೊದಲ ಹತ್ತು ದಿನಗಳ (ಜುಲೈ 1-10) ಅವಧಿಯಲ್ಲಿ ನಿರೀಕ್ಷೆ ವಾಡಿಕ 84 ಮಿಲಿ ಮೀಟರ್ ಆಗಬೇಕು, ಆಗಿದ್ದು 85 ಮಿಲಿ ಮೀಟರ್. ಈ ಮೂಲಕ ರಾಜ್ಯದಲ್ಲಿ ಒಟ್ಟಾರೆ ಶೇ. 2ರಷ್ಟು ಅಧಿಕ ಮಳೆ ದಾಖಲಾಗಿದೆ. ಪ್ರತ್ಯೇಕವಾಗಿ ನೋಡುವುದಾದರೆ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ವಾಡಿಕೆಗಿಂತ (21ಮಿ.ಮೀ) ಕಡಿಮೆ 9ಮಿಲಿ ಮೀಟರ್ ಮಳೆ ಆಗುವ ಮೂಲಕ ಈ ಭಾಗದಲ್ಲಿ ಶೇ.58ರಷ್ಟು ಕೊರತೆ ಸೃಷ್ಟಿಸಿದೆ.

ಉತ್ತರ ಒಳನಾಡಿನಲ್ಲಿ ವಾಡಿಕೆ (34 ಮಿ.ಮೀ) ಗಿಂತ ಕಡಿಮೆ 31 ಮಿಲಿ ಮೀಟರ್ ಮಳೆ ಆಗಿ ಶೇ. 6 ರಷ್ಟು ಮಳೆ ಕೊರತೆ ಉಂಟು ಮಾಡಿದೆ. ಅದೇ ರೀತಿ ಮಲೆನಾಡಿನಲ್ಲಿ ಶೇ. 17 ಮತ್ತು ಕರಾವಳಿಯಲ್ಲಿ ಶೇ.16ರಷ್ಟು ಮಳೆ ಕೊರತೆ ಆಗಿದೆ.

ಈವರೆಗಿನ ಮುಂಗಾರು ಋತುವಿನ ಮಳೆ ವರದಿ

ಜೂನ್ ತಿಂಗಳಲ್ಲಿ ಶೇ.42ರಷ್ಟು ಮಳೆ ಕೊರತೆ ಆಗಿತ್ತು. ಅದೇ ಜೂನ್ 1ರಿಂದ ಜುಲೈ 10ರವರೆಗೆ ಒಟ್ಟು 40 ದಿನಗಳ ಅವಧಿಯಲ್ಲಿ ಒಟ್ಟು ಮಳೆ ಕೊರತೆ ಪ್ರಮಾಣ ಶೇ. 29ಕ್ಕೆ ಇಳಿಕೆ ಆಗಿದೆ. ಈ ಅವಧಿಯಲ್ಲಿ ಕರಾವಳಿಗೆ ಶೇಕಡಾ 30, ಮಲೆನಾಡಿನ ಭಾಗ ಶೇ.32, ಉತ್ತರ ಒಳನಾಡಿನಲ್ಲಿ ಶೇ. 23 ಹಾಗೂ ಉತ್ತರ ಒಳನಾಡಿನಲ್ಲಿ ಶೇ. 18 ರಷ್ಟು (ರಾಜ್ಯದ ಒಟ್ಟಾರೆ ಶೇ. 29) ಮಳೆ ಕೊರತೆ ಎದುರಾಗಿದೆ ಎಂದು ಹವಾಮಾನ ಕೇಂದ್ರ ವರದಿಯಲ್ಲಿ ತಿಳಿಸಿದೆ.

ರಾಜ್ಯದಲ್ಲಿ ಮಳೆ ದುರ್ಬಲ, ಮತ್ತೆ ಬರಗಾಲ?

ಮಲೆನಾಡು, ಕರಾವಳಿ ಭಾಗ ಮತ್ತು ಕೆಲವು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ನಿರಂತರವಾಗಿ ಸುರಿದಿದ್ದ ಮುಂಗಾರು ಮತ್ತೆ ದುರ್ಬಲಗೊಂಡಿದೆ. ಕಳೆದ ಮೂರು ದಿನಗಳಿಂದ ವಾತಾವರಣ ಸಾಮಾನ್ಯವಾಗಿದೆ. ಕೆಲವೆಡೆ ಕೊಂಚ ತಂಪು ವಾತಾವರಣ ಬಿಟ್ಟರೆ ಉಳಿದೆಲ್ಲ ಕಡೆ ನೀಲಿ ಆಕಾಶವಿದ್ದು, ಉತ್ತಮ ಬಿಸಿಲಿದೆ. ಹೀಗೆ ಮುಂಗಾರು ಮಳೆ ದುರ್ಬಲತೆ, ಶಾಖದ ವಾತಾವರಣ ಮುಂದುವರಿದರೆ ರಾಜ್ಯಕ್ಕೆ ಭಾರೀ ಮಳೆ ಕೊರತೆ, ಬರಗಾಲ ಎದುರಾಗುವ ಸಾಧ್ಯತೆ ಇದೆ. ಇದು ರೈತರಲ್ಲಿ ಮತ್ತೆ ಆತಂಕ ಹೆಚ್ಚಿಸಲಿದೆ.

ರಾಜ್ಯದ ಅಣೆಕಟ್ಟುಗಳಿಗೆ ಜೀವಕಳೆ

ಇನ್ನೂ ಜುಲೈ ಮಳೆಗೆ ರಾಜ್ಯದ ಪ್ರಮುಖ ಕೆಆರ್‍ಎಸ್, ತುಂಗಭದ್ರಾ, ಕಬಿನಿ, ಆಲಮಟ್ಟಿ ಜಲಾಶಯಗಳಲ್ಲಿ ಒಳಹರಿವು ಹೆಚ್ಚಾಗಿದೆ. ಉಳಿದಂತೆ ಹಾರಂಗಿ, ವಾಣಿವಿಲಾಸ ಸಾಗರ, ತುಂಗಾ, ಲಿಂಗನಮಕ್ಕಿ, ಹಿಪ್ಪರಗಿ, ಹಮ್ಮಿಗೆ ಸೇರಿದಂತೆ ಮೊದಲಾದ ಅಣೆಕಟ್ಟುಗಳು, ನದಿಗಳಲ್ಲಿ ನೀರಿನ ಒಳಹರಿವು ಹೆಚ್ಚಾಗಿದ್ದ, ರೈತರಿಗೆ ತಾತ್ಕಾಲಿಕ ರಿಲೀಫ್ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+