ಒಂಟಿ ಮಹಿಳೆ ಮನೆಗೆ ನುಗ್ಗಿ ಅಸಭ್ಯ ವರ್ತನೆ; ವೈರಲ್ ವಿಡಿಯೋ ಬಳಿಕ ಡೆಲಿವರಿ ಬಾಯ್ ಬಂಧನ, Flipkart ಪ್ರತಿಕ್ರಿಯೆ
ಬೆಂಗಳೂರು: ಬೆಂಗಳೂರು ಮನೆಗಳಲ್ಲಿ ಒಬ್ಬಂಟಿ ಮಹಿಳೆಯರಿಗೂ ಸುರಕ್ಷತೆ ಇಲ್ಲವೇ ಎಂಬಂತಹ ಅಸಹ್ಯಕರ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮಹಿಳೆ ಅನುಮತಿ ಇಲ್ಲದೇ ಫ್ಲ್ಯಾಟ್ ಒಳಗೆ ನುಗ್ಗಿ, ಬಳಿಕ ಖಾಸಗಿ ಅಂಗ ತೋರಿಸಿದ ಡೆಲಿವರಿ ಬಾಯ್ ವಿಡಿಯೋ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಮನೆ ಮಾಲೀಕಳಾದ ಮಹಿಳೆಯ ದೂರಿನ ಮೇರೆಗೆ ಪೊಲೀಸರು ಡೆಲಿವರಿ ಬಾಯ್‌ನನ್ನು ಬಂಧಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಫ್ಲಿಪ್ ಕಾರ್ಟ್ (Flipkart) ಸಹ ಪ್ರತಿಕ್ರಿಯಿಸಿದೆ.
ಬಂಧಿತ ಆರೋಪಿ ಡೆಲಿವರಿ ಬಾಯ್‌ನನ್ನು ವಿಜಯ್ ಮಲ್ಲಿಕಾರ್ಜುನ ಕಾಮತ್ ಎಂದು ಗುರುತಿಸಲಾಗಿದೆ. ಕಾನೂನಿನ ಪ್ರಕಾರ ಆತನ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 75, 79 ಮತ್ತು 329 (2) ಪ್ರಕರಣ ದಾಖಲಾಗಿದೆ. ಮುಂದಿನ ತನಿಖೆ ನಡೆಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಜೊತೆಗೆ ಮಹಿಳೆಯಿಂದ ಇನ್ನಷ್ಟು ಅಗತ್ಯ ಮಾಹಿತಿ ಪಡೆದು ಮುಂದುವರಿಯುವುದಾಗಿ ಅವರು ತಿಳಿಸಿದ್ದಾರೆ.

ಮಹಿಳೆ ಕಣ್ಣೀರು! ಆಸಲಿಗೆ ಆಗಿದ್ದೇನು?
ಮಹಿಳೆ ಮನೆಯಲ್ಲಿ ಒಬ್ಬಂಟಿಯಾಗಿದ್ದಳು. ಈ ವೇಳೆ ಮನೆಗೆ ಪಾರ್ಸೆಲ್ ನೀಡಲು ಪ್ಲ್ಯಾಟ್ ಗೆ ಬಂದ ಡೆಲಿವರಿ ಬಾಯ್ ನಿಮ್ಮ ಮನೆಯ ಟಾಯ್ಲೆಟ್ ಬಳಕೆ ಮಾಡಬಹುದೆಂದು ಕೇಳಿದ್ದಾನೆ. ಇದಕ್ಕೆ ಮಹಿಳೆ ಸೌಜನ್ಯಯುತವಾಗಿ ನಿರಾಕರಿಸಿದ್ದಾರೆ. ಇದು ಒಂಟಿ ಮಹಿಳೆಯ ಮನೆ, ಅಪರಿಚಿತರಿಗೆ ಅವಕಾಶ ಇಲ್ಲವೆಂದು ಹೇಳಿದ್ದಾರೆ. ಮುಂದೆ ಬ್ಯಾಚಲರ್ ಅಥವಾ ಗಂಡುಮಕ್ಕಳಿರುವ ಫ್ಲ್ಯಾಟ್ ಕೇಳುವಂತೆ ಸೂಚನೆ ನೀಡಿದ್ದಾರೆ. ಆತ ಪದೇ ಪದೇ ಒತ್ತಾಯಿಸಿದಾಗ ಮತ್ತೆ ಮತ್ತೆ ಪ್ರವೇಶವಿಲ್ಲ ಎಂದು ಮಹಿಳೆ ಆತನ ಪ್ರವೇಶವನ್ನು ನಿರಾಕರಿಸಿದ್ದಾರೆ.
ಮಹಿಳೆಯ ನಿರ್ಬಂಧದ ಹೊರತಾಗಿಯು ಬಂಧಿತ ಡೆಲಿವರಿ ಬಾಯ್ ವಿಜಯ್ ಮಲ್ಲಿಕಾರ್ಜುನ್ ಕಾಮತ್ ಬಲವಂತವಾಗಿ ಮನೆಯೊಳಗೆ ಶೌಚಾಲಯಕ್ಕೆ ನುಗ್ಗಿದ್ದಾನೆ. ಟಾಯ್ಲೆಟ್ ಬಳಕೆ ನೆಪದಲ್ಲಿ ಯುವತಿಗೆ ಜಿಪ್ ತೆಗೆದು ಖಾಸಗಿ ಅಂಗ ಪ್ರದರ್ಶಿಸಿದ್ದಾನೆ ಎನ್ನಲಾಗಿದೆ. ಆತನ ವರ್ತನೆಗೆ ಆಘಾತಕ್ಕೊಳಗಾದ ಮಹಿಳೆ ಪ್ರಶ್ನಿಸಿದ್ದಾಳೆ. ಅಷ್ಟೊತ್ತಿಗೆ ಇಳಿದು ದಢ ದಢನೇ ಆತ ತೆರಳಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮನೆಯಲ್ಲಿದ್ದರೂ ಮಹಿಳೆಗೆ ಸುರಕ್ಷತೆ ಇಲ್ಲವೇ. ಇಂತಹ ನಡವಳಿಕೆ ಸಹಿಸುವಿಲ್ಲ. ಇದೊಂದು ಕೆಟ್ಟ ಘಟನೆ ಎಂದು ಮಹಿಳೆ ಮನನೊಂದು ಮಹಿಳೆ ಕಣ್ಣೀರಿಟ್ಟಿದ್ದಾರೆ. ಪೊಲೀಸರಿಗೆ ದೂರು ನೀಡಿದ್ದಾಳೆ. ದೂರಿನ ಮೇರೆಗೆ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಇದರಲ್ಲಿ ರಾಜಿ ಇಲ್ಲ: ಫ್ಲಿಪ್‌ಕಾರ್ಟ್ ಹೇಳಿದ್ದೇನು?
ಬಂಧಿತ ವ್ಯಕ್ತಿ ಫ್ಲಿಪ್‌ಕಾರ್ಟ್ ಆರ್ಡರ್ ನೀಡಲು ಬಂದಾಗ ಈ ರೀತಿ ವರ್ತಿಸಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ವಿಡಿಯೋ ನೋಡಿದ ಫ್ಲಿಪ್‌ಕಾರ್ಟ್ ಬೆಂಗಳೂರು ಮುಖ್ಯಸ್ಥರು ಈ ವಿಚಾರ ನಮ್ಮ ಗಮನಕ್ಕೆ ಬರುತ್ತಿದ್ದಂತೆ ತಡಮಾಡದೇ ಈ ಡೆಲಿವರಿ ಬಾಯ್‌ನನ್ನು ಕೆಲಸದಿಂದ ತೆಗೆದು ಹಾಕಿದ್ದೇವೆ. ಇಂತಹ ಘಟನೆಗಳು ಆದಾಗ ಗ್ರಾಹಕರು, ಅದರಲ್ಲೂ ಮಹಿಳೆ ವಿಚಾರದಲ್ಲಿ ಕಂಪನಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಗ್ರಾಹಕರಿಗೆ ಅಗತ್ಯ ಎಲ್ಲ ಸಹಕಾರ ನೀಡಲಾಗುವುದು. ಜೊತೆಗೆ ಪೊಲೀಸ್ ತನಿಖಾಧಿಕಾರಿಗಳಿಗೆ ಕೈ ಜೊಡಿಸುವುದಾಗಿ ತಿಳಿಸಿದೆ.
ಮುಂದಿನ ದಿನಗಳಲ್ಲಿ ಕೆಲಸ ನಿಯೋಜಿಸುವವರ ಹಿನ್ನೆಲೆ, ಮಾಹಿತಿ ತಿಳಿದುಕೊಳ್ಳುವುದು, ಗ್ರಾಹಕರ ಸುರಕ್ಷತೆಗಾಗಿ, ಸೇವೆಯಲ್ಲಿ ಇನ್ನಷ್ಟು ಕಠಿಣ ನಿಯಮಗಳನ್ನು ಜಾರಿಗೆ ತರಲಾಗುವುದು. ಇಂದಿನ ಘಟನೆ ಸ್ವೀಕಾರಾರ್ಹವಲ್ಲ, ಇಂತಹ ಯಾವುದೇ ವರ್ತನೆ ಸಹಿಸುವುದಿಲ್ಲ ಎಂದು ಕಂಪನಿ ಹೇಳಿದೆ.
Horrifying incident in Bengaluru: A Flipkart/Myntra delivery agent forced his way into a woman's (@/nilofer_vlogs) flat against her clear refusals and exposed himself inside her home. This requires immediate action! @BlrCityPolice
— Daku Incel Singh (@nightbeatsdrop) July 11, 2026
(Re-uploading this after editing out the ✏️ flash… pic.twitter.com/730aVT2Bs4


Click it and Unblock the Notifications
