Shiva Rajkumar: ಹುಟ್ಟುಹಬ್ಬದಂದೇ ಈಡೇರಿತು ಶಿವಣ್ಣನ ಆಸೆ, 2500 ಫ್ಯಾನ್ ಕುಟುಂಬಗಳಿಗೆ ವಿಶೇಷ ಗಿಫ್ಟ್
ಬೆಂಗಳೂರು: ಕರುನಾಡ ಚಕ್ರವರ್ತಿ, ದೊಡ್ಮನೆ ಕುಡಿ ಡಾ.ಶಿವರಾಜ್ ಕುಮಾರ್ ಈ ಮೊದಲೇ ಹೇಳಿದಂತೆ ಇಂದು ಭಾನುವಾರ (ಜುಲೈ 12) ಅತ್ಯಂತ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಚಿತ್ರರಂಗದ ಅನೇಕ ಕಲಾವಿದರು, ಆಪ್ತರು, ಕುಟುಂಬಸ್ಥರು ಸೇರಿದಂತೆ ಅಪಾರ ಅಭಿಮಾನಿಗಳು ಅವರ ಜನ್ಮದಿನಕ್ಕೆ ಶುಭ ಕೋರಿದ್ದಾರೆ. ಇದೇ ವೇಳೆ ಶಿವರಾಜ್ ಕುಮಾರ್ ಅವರು ಅಭಿಮಾನಿಗಳಿಗೆ ಭರ್ಜರಿ ಉಡುಗೊರೆ ನೀಡುವ ಮೂಲಕ ಮಾದರಿಯಾಗಿದ್ದಾರೆ. ಬಹಳ ದಿನಗಳ ಬಳಿಕ ಆಸೆ ಈಡೇರಿತು ಎಂದು ಶಿವಣ್ಣ ಹೇಳಿಕೊಂಡಿದ್ದಾರೆ.
ಹೌದು, ಸೆಂಚುರಿ ಸ್ಟಾರ್ ಶಿವಣ್ಣ ಅವರು 64ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಹುಟ್ಟುಹಬ್ಬ ಪ್ರಯುಕ್ತ ಇತ್ತೀಚೆಗೆ ಅವರು ವಿಡಿಯೋ ಹಂಚಿಕೊಂಡಿದ್ದರು. ಅದರಲ್ಲಿ ನಾನು ಅತ್ಯಂತ ಸರಳವಾಗಿ ಹುಟ್ಟು ಹಬ್ಬ ಆಚರಿಸಿಕೊಳ್ಳಲಿದ್ದೇನೆ. ನಿಮ್ಮ ಪ್ರೀತಿಗೆ ನಾನು ಆಭಾರಿ, ಯಾರೊಬ್ಬ ಅಭಿಮಾನಿಯು ಕೂಡ ಹಾರ, ಕೇಕ್ ತರದಂತೆ ಅವರು ಕೋರಿದ್ದರು. ಅದರಂತೆ ತುಂಬಾ ಸಿಂಪಲ್ ಆಗಿ ಬರ್ತ್‌ಡೆ ಆಚರಿಸಿಕೊಂಡ ಶಿವಣ್ಣ ತಮಗೆ ವಯಸ್ಸೆ ಆಗಲ್ಲವೆನೋ ಎಂಬಂತೆ ಫ್ಯಾನ್ಸ್ ಜೊತೆ ಕುಣಿದು ಕುಪ್ಪಳಿಸಿದ್ದಾರೆ.

2500 ಕುಟುಂಬಗಳಿಗೆ ಶಿವಣ್ಣನ ಹೆಲ್ತ್ ಕಾರ್ಡ್ ಗಿಫ್ಟ್
ಸಾಮಾನ್ಯವಾಗಿ ಜನ್ಮದಿನ ಆಚರಿಸಿಕೊಳ್ಳುವವರಿಗೆ ಉಡುಗೊರೆ ನೀಡುವುದು ವಾಡಿಕೆ. ಆದರೆ ದೊಡ್ಮನೆ ವಿಚಾರದಲ್ಲಿ ಬದಲಾಗಿದೆ. ತಮ್ಮ ಹುಟ್ಟು ಹಬ್ಬಕ್ಕೆ ಶಿವರಾಜ್ ಕುಮಾರ್ ಅವರು ಬರೋಬ್ಬರಿ 2,500 ಅಭಿಮಾನಿ ಕುಟುಂಬಗಳಿಗೆ ಹೆಲ್ತ್ ಕಾರ್ಡ್ ನೀಡಿದ್ದಾರೆ. ಆರೋಗ್ಯವೇ ಭಾಗ್ಯ ಅದು ಅಭಿಮಾನಿಯದ್ದಾದರೂ ಸರಿ, ಕಲಾವಿದರದ್ದಾದರೂ ಸರಿ ಎಂಬ ಸಂದೇಶ ರವಾನಿಸಿದ್ದಾರೆ.
ಏನಿದು ಹೆಲ್ತ್ ಕಾರ್ಡ್? ಏನೆಲ್ಲ ಸೌಲಭ್ಯಗಳಿವೆ
ನಟ ಶಿವಣ್ಣ ಇತ್ತೀಚೆಗೆ ವೈದೇಹಿ ಸ್ಪೆಷಾಲಿಟಿ ಆಸ್ಪತ್ರೆಯ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಅಭಿಮಾನಿಗಳಿಗೆ ಉಡುಗೊರೆ ನೀಡಲೆಂದರೆ ಅವರು ಆ ಜಾಹೀರಾತಿನಲ್ಲಿ ಪಾಲ್ಗೊಂಡಿದ್ದರು ಅಂತಲೇ ಹೇಳಲಾಗುತ್ತಿದೆ. ಅದೇ ವೈದೇಹಿ ಆಸ್ಪತ್ರೆ ಸಹಕಾರದಲ್ಲಿ ಫ್ಯಾನ್ಸ್‌ಗೆ 2500 'ಹ್ಯಾಟ್ರಿಕ್ ಹಿರೋ ಫ್ಯಾಮಿಲಿ ಹೆಲ್ತ್ ಕಾರ್ಡ್' ವಿತರಿಸಿದ್ದಾರೆ. ಅದರಿಂದ ಒಬ್ಬ ಅಭಿಮಾನಿಗೆ ಮಾತ್ರವಲ್ಲದೇ ಅವರ ಇಡೀ ಕುಟುಂಬವು ಸಹಿತ ಉಚಿತ ಆರೋಗ್ಯ ತಪಾಸಣೆ, ಹೃದಯ ಸಂಬಂಧಿ ಕಾಯಿಲೆ, ಸಕ್ಕರೆ ಕಾಯಿಲೆ, ಹೈಸ್ಪೀಡ್ ಆಂಬುಲೆನ್ಸ್ ಸೇವೆ ಸೇರಿದಂತೆ ಅಗತ್ಯ ಆರೋಗ್ಯ ಸೇವೆ ಪಡೆಯಬಹುದಾಗಿದೆ. ಈ ಕಾರ್ಡ್ 2029ರವರೆಗೆ ಮಾನ್ಯವಾಗಿರಲಿದೆ.
Boss ❤️🙇♂️📈🔥#Shivanna #Shivarajkumar #KingShivanna #DrShivarajkumar #DrShivarajkumarUpdates pic.twitter.com/nksf9fJQAO
— Dr Shivarajkumar updates ™ (@shivannaupdates) July 12, 2026
ಶಿವಣ್ಣ ಹರ್ಷ: ಆರೋಗ್ಯವೇ ಭಾಗ್ಯ. ನನ್ನ ಆರೋಗ್ಯ ವಿಚಾರದಲ್ಲಿ ವೈದೇಹಿ ಆಸ್ಪತ್ರೆ ಪ್ರಮುಖವಾಗಿದೆ. ನಾನು ಆರೋಗ್ಯವಾಗಿದ್ದೇನೆ. ನನ್ನೊಂದಿಗೆ ನನ್ನ ಕುಟುಂಬ ಅಂದರೆ ಪ್ಯಾನ್, ಮತ್ತವರ ಕುಟುಂಬ ಆರೋಗ್ಯವಾಗಿರಬೇಕು. ಈ ರೀತಿ ಉಡುಗೊರೆ ನೀಡಲು ಬಹಳ ದಿನಗಳಿಂದ ನನಗೆ ಆಸೆ ಇತ್ತು. ಅದು ಇದೀಗ ನೆರವೇರಿದೆ ಎಂದು ಶಿವಣ್ಣ ಹರ್ಷ ವ್ಯಕ್ತಪಡಿಸಿದ್ದಾರೆ.


Click it and Unblock the Notifications
