Padmanabhanagar Constituency : ಆಡಳಿತಾರೂಢ ಬಿಜೆಪಿ ಮಣಿಸಲಿವೆಯೇ ಕಾಂಗ್ರೆಸ್-ಜೆಡಿಎಸ್, ಇಲ್ಲಿದೆ ವರದಿ, ವಿಶ್ಲೇಷಣೆ
ಬೆಂಗಳೂರಿನ ಒಟ್ಟು ವಿಧಾನಸಭಾ ಕ್ಷೇತ್ರಗಳಲ್ಲಿ ಪದ್ಮನಾಭನಗರವು ಒಂದು. ಆಡಳಿತಾರೂಢ ಬಿಜೆಪಿ ಪ್ರಭಾವ ಇಲ್ಲಿದೆ. ಈ ಬಾರಿ ಬಿಜೆಪಿಯನ್ನು ಹಣಿಯಲು ಜೆಡಿಎಸ್ ಮತ್ತು ಕಾಂಗ್ರೆಸ್ ಸಜ್ಜಾಗಿವೆ. ಅದೃಷ್ಠ ಯಾರ ಪಾಲಾಗಲಿದೆ ಎಂದು ಕಾದುನೋಡಬೇಕಿದೆ.
ಬೆಂಗಳೂರು, ಫೆಬ್ರವರಿ 21: ರಾಜ್ಯ ರಾಜಧಾನಿ ಬೆಂಗಳೂರಿನ ಒಟ್ಟು ವಿಧಾನಸಭಾ ಕ್ಷೇತ್ರಗಳ ಪೈಕಿ ಪದ್ಮನಾಭ ನಗರವು ಒಂದು. ನಗರದ ಐಶಾರಾಮಿ ಪ್ರದೇಶವನ್ನು ಹೊಂದಿರುವ ಹಾಗೂ ನಗರದ ಪ್ರಮುಖ ಬಡಾವಣೆಗಳನ್ನು ಒಳಗೊಂಡ ವಿಧಾನಸಭಾ ಕ್ಷೇತ್ರ ಇದಾಗಿದೆ.
ಈ ಕ್ಷೇತ್ರದಲ್ಲಿ ಒಂದೇ ಹೆಸರಿನ ಪ್ರಸಿದ್ಧ ಲಕ್ಷ್ಮೀಕಾಂತ ದೇವಾಲಯ ಹಾಗೂ ಉದ್ಯಾನವನವಿದೆ. ಗಣೇಶ್ ಸೇರಿದಂತೆ ಹಲವು ದೇವಾಲಯಗಳು ಇಲ್ಲಿವೆ. ವಿಶೇಷವೆಂದರೆ ಲಕ್ಷ್ಮೀಕಾಂತ ಉದ್ಯಾನದಲ್ಲಿ ಔಷಧಿ ಗಿಡಗಳು ಇವೆ. ಈ ಕ್ಷೇತ್ರವು ನಗರದ ಪ್ರಮುಖ ಬಡಾವಣೆಗಳಾದ ಕುಮಾರಸ್ವಾಮಿ ಲೇಔಟ್, ಯಡಿಯೂರು, ತ್ಯಾಗರಾಜನಗರ, ಬನಶಂಕರಿ ಎರಡನೇ ಹಂತ, ಯಾರಬ್ ನಗರ, ಬನಶಂಕರಿ ದೇವಸ್ಥಾನದ ವಾರ್ಡ್ ಸೇರಿದಂತೆ ಇನ್ನಿತರ ಭಾಗಗಳನ್ನು ಒಳಗೊಂಡ ಪ್ರದೇಶವಾಗಿದೆ.
ಸುಮಾರು ಎರಡು ಕಿಲೋ ಮೀಟರ್ ವ್ಯಾಪ್ತಿಯ ಪದ್ಮನಾಭನಗರ ವಿಧಾನಸಭಾ ಕ್ಷೇತ್ರವು ಆರೋಗ್ಯಕ್ಕೆ ಹೆಚ್ಚು ಕಾಳಜಿ ವಹಿಸಿದಂತಿದ್ದು, ಹಲವು ಪ್ರಮುಖ ಆಸ್ಪತ್ರೆಗಳನ್ನು ಈ ಕ್ಷೇತ್ರದಲ್ಲಿ ಕಾಣಬಹುದು. ಈ ಕ್ಷೇತ್ರ ಮೊದಲಿನಿಂದಲೂ ಪಕ್ಷೇತರ, ಕಾಂಗ್ರೆಸ್ ಗೆಲುವು ಸಾಧಿಸುತ್ತಾ ಬಂದಿವೆ. ಆದರೆ ಹಿಡಿತ ಸಾಧಿಸುವಲ್ಲಿ ಅವುಗಳು ವಿಫಲವಾಗಿವೆ. ಆದರೆ ಈ ನಿಟ್ಟಿನಲ್ಲಿ ಬಿಜೆಪಿ ವರ್ಷಗಳಿಂದಲೂ ಪದ್ಮನಾಭನಗರ ಕ್ಷೇತ್ರದಲ್ಲಿ ಹಿಡಿತ ಸಾಧಿಸಿದೆ. ಈಗಿನ ಹಾಲಿ ಕಂದಾಯ ಸಚಿವ ಆರ್. ಅಶೋಕ್ ಅವರು ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಾ ಬಂದಿದ್ದಾರೆ.

ಪದ್ಮನಾಭನಗರ ಕ್ಷೇತ್ರದ ರಾಜಕೀಯ ಇತಿಹಾಸ
ಪದ್ಮನಾಭನಗರ ಕ್ಷೇತ್ರದಲ್ಲಿ ಬಿಜೆಪಿ ಅತೀ ವೇಗವಾಗಿ ಓಡುತ್ತಿದೆ. ಇದಕ್ಕೆ ಬ್ರೇಕ್ ಹಾಕಲು ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಯತ್ನಿಸುತ್ತಿವೆ. ಈ ಕ್ಷೇತ್ರದಲ್ಲಿ ಸತತವಾಗಿ ಬಿಜೆಪಿಯೇ ವಿಜಯ ಪತಾಕೆ ಹಾರಿಸಿದೆ. ಈ ಕ್ಷೇತ್ರದಲ್ಲಿ 1967 ರಿಂದಲೂ ಕಾಂಗ್ರೆಸ್, ಪಕ್ಷೇತರ, ಜನತಾಪಾರ್ಟಿ ಅಭ್ಯರ್ಥಿಗಳು ಆಯ್ಕೆಯಾಗುತ್ತಾ ಬಂದಿದ್ದರು. 1994ರ ನಂತರ ಬಿಜೆಪಿ ಅಭ್ಯರ್ಥಿಗಳು ಗೆಲ್ಲುತ್ತಾ ಬಂದಿದ್ದು, 2018ರವರೆಗೂ ಅದೇ ಮುಂದುವರಿದಿದೆ. ಈಗಿನ ವಿಧಾನಸಭೆಯ ಸಭಾಧಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಇಲ್ಲಿಂದಲೇ ಮೂರು ಭಾರಿ ಆಯ್ಕೆಯಾಗಿದ್ದಾರೆ. ನಂತರ 2008ರಿಂದ ಆರ್.ಅಶೋಕ್ ಚುನಾಯಿತರಾಗಿದ್ದಾರೆ.

ಕ್ಷೇತ್ರದಲ್ಲಿ ಆರ್.ಅಶೋಕ್ ಪ್ರಭಾವ
ಕ್ಷೇತ್ರ ವಿಂಗಡಣೆ ಆದ ಮೇಲೆ ಪದ್ಮನಾಭನಗರ ಕ್ಷೇತ್ರದಿಂದ 2008 ರಿಂದ ಆರ್.ಅಶೋಕ್ ಅವರು ಮೂರು ಭಾರಿ ಆಯ್ಕೆಯಾಗಿದ್ದಾರೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನ ಗೋಪಾಲ್ ಎಂಬವವರು ವಿರುದ್ಧ ಆರ್.ಅಶೋಕ್ ಅವರು ಭಾರಿ ಅಂತರದಿಂದ (32,166) ಗೆದ್ದಿದ್ದಾರೆ. ಅದರ ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಇದೇ ಅಶೋಕ್ ಅವರು ಮಣಿಸಿದ್ದರು. ಹೀಗಾಗಿ ಈ ಕ್ಷೇತ್ರ ಪ್ರತಿಪಕ್ಷಗಳಿಗೆ ನುಂಗಲಾರದ ತುತ್ತು ಆಗಿದೆ. ಆರ್. ಅಶೋಕ್ ಅವರು ಈ ಭಾರಿಯ ಗೆಲುವು ಸಾಧಿಸಲು ಹವಣಿಸುತ್ತಿದ್ದಾರೆ. ಅವರಿಗೆ ಬಿಜೆಪಿಯಿಂದ ಎಲ್ಲ ಬೆಂಬಲವು ಇದೆ ಎಂದು ತಿಳಿದು ಬಂದಿದೆ.

ವಿಧಾನಸಭಾ ಚುನಾವಣೆ 2023: ಟಿಕೆಟ್ ಆಕಾಂಕ್ಷಿಗಳು
ಆಡಳಿತಾರೂಢ ಬಿಜೆಪಿಯಿಂದ ಆರ್.ಅಶೋಕ್ ಅವರೇ ಈ ಭಾರಿಯು ಚುನಾವಣೆ ಅಖಾಡಕ್ಕಿಳಿಯಲಿದ್ದಾರೆ. ಕಾಂಗ್ರೆಸ್‌ನಿಂದ ಈ ಹಿಂದೊಮ್ಮೆ ಸೋತಿದ್ದ ಡಾ.ಗುರಪ್ಪ ನಾಯ್ಡು ಅವರು ಆಕಾಂಕ್ಷಿ ಎನ್ನಬಹುದು. ಮತ್ತೊಬ್ಬ ಕೈ ಮುಖಂಡ ಗುರುನಾಥ್ ನಾಯ್ಡು ಅವರು ಸಹ ಈ ಸಲ ಟಿಕೆಟ್ ಬಯಸಿದ್ದಾರೆ. ಇನ್ನೂ ಕ್ಷೇತ್ರದಲ್ಲಿ ತುಸು ಗುರುತಿಸಿಕೊಂಡಿರುವ ಜೆಡಿಎಸ್‌ನಿಂದ ಹರಿಬಾಬು ಅವರು ಸ್ಪರ್ಧಿಸುವ ಸಾಧ್ಯತೆ ಇದೆ. ಇಲ್ಲಿ ಬಿಜೆಪಿಯನ್ನು ಮಣಿಸಲು ಪ್ರತಿಪಕ್ಷಗಳು ಸಾಕಷ್ಟು ತಯಾರಿ ಮಾಡಿಕೊಂಡಿವೆ. ಈ ಭಾರಿ ಯಾರಿಗೆ ಅಧಿಕಾರದ ಅದೃಷ್ಠ ಒಲಿಯಲಿದೆ ಎಂದು ಕಾದು ನೋಡಬೇಕಿದೆ.

ಕ್ಷೇತ್ರದಲ್ಲಿ ಒಕ್ಕಲಿಗ- ಬ್ರಾಹ್ಮಣರೇ ನೀರ್ಣಾಯಕ
ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚಿರುವ ಒಕ್ಕಲಿಗರು, ಬ್ರಾಹ್ಮಣರು, ನಾಯ್ಡು ಸಮುದಾಯದವರು ಅಭ್ಯರ್ಥಿಗಳ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಇಲ್ಲಿ ಒಕ್ಕಲಿಗ ಸಮುದಾಯ ನಾಯಕರ ಜೊತೆಗೆ ನಾಯ್ಡು ಸಮುದಾಯದ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಅದೃಷ್ಠವನ್ನು ಪರೀಕ್ಷೆ ಮಾಡಿಕೊಂಡ ಉದಾಹರಣೆಗಳು ಇವೆ. ಜಾತಿ ಆಧಾರಿತ ರಾಜಕೀಯ ಪ್ರಭಾವವು ಇಲ್ಲಿ ಹೆಚ್ಚಿದೆ.
ಮತದಾರರು ಸಂಖ್ಯೆ
ಬಿಬಿಎಂಪಿ ವಾರ್ಡ್ ಸಂಖ್ಯೆ-182
ಒಟ್ಟು ಮತದಾರರು- 2,87,000
ಒಕ್ಕಲಿಗರು - 60,000
ಲಿಂಗಾಯತ - 10,000
ಬ್ರಾಹ್ಮಣ - 25,000
ಒಬಿಸಿ - 72,000
ಎಸ್‌ಸಿ, ಎಸ್‌ಟಿ - 18,000
ಮುಸ್ಲಿಂ - 44,000
ಇತರೆ - 58,000
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications