Bengaluru Rains: ಕೊನೆಗೂ ಮುಂಗಾರು ದರ್ಶನ, ಇಂದು ಅನೇಕ ಬಡಾವಣೆಗಳಲ್ಲಿ ಮಳೆ ದಾಖಲು, ಜುಲೈ 20ರವರೆಗೆ ಮಳೆ

Bengaluru Rain Report: ರಾಜ್ಯದ ಬಹುತೇಕ ಭಾಗಗಳಲ್ಲಿ ಸುರಿದಿದ್ದ ಮುಂಗಾರು ಮಳೆ ವಾರಗಳ ಬಳಿಕ ಕೊನೆಗೂ ಬೆಂಗಳೂರಿನಲ್ಲೂ ಸುರಿದಿದೆ. ಇಂದು ಗುರುವಾರ (ಜುಲೈ 11) ಸಂಜೆ ವಿವಿಧ ಬಡಾವಣೆಗಳಲ್ಲಿ ಸುರಿದು ವಾತಾವರಣ ತಂಪುಗೊಳಿಸಿತು. ಸುಮಾರು 20ಕ್ಕೂ ಅಧಿಕ ವಾರ್ಡ್‌ಗಳಲ್ಲಿ ಹಗುರ ಮಳೆ ಆಗಿದೆ. ಇತ್ತೀಚೆಗೆ ನಗರದಲ್ಲಿ ಬಿಸಿಲ ಧಗೆ ಹೆಚ್ಚಾಗಿತ್ತು, ಇಂದಿನ ಮಳೆ ವಾತಾವರಣ ತಂಪಾಗಿಸಿದೆ. ಇನ್ನೂ ಕೆಲವು ದಿನಗಳ ಕಾಲ ನಗರದಲ್ಲಿ ಮಳೆ ಆಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮಾಹಿತಿ ನೀಡಿದೆ.

ಇಂದು ಸಂಜೆ 7 ಗಂಟೆವರೆಗೆ ಮಾಹಿತಿ ಪ್ರಕಾರ, ಸುಬ್ರಹ್ಮಣ್ಯ ನಗರ, ವಿಜ್ಞಾನ ನಗರ, ಸಂಪಂಗಿ ರಾಮನಗರ, ಬೆಳ್ಳಂದೂರು, ಎಚ್‌.ಎ.ಎಲ್ ಏರ್‍‌ಪೋರ್ಟ್, ವಿದ್ಯಾರಣ್ಯಪುರ, ಜಕ್ಕೂರು, ಬಸವನಪುರ, ಸಿವಿ.ರಾಮನ್ ನಗರ, ಜಯಮಹಲ್, ಪುಲಕೇಶಿ ನಗರ ಸೇರಿದಂತೆ ಮಹದೇವಪುರ, ಪೂರ್ವ ಹಾಗೂ ಯಲಹಂಕ ವಲಯ ವ್ಯಾಪ್ತಿಯಲ್ಲಿ ಗುರುವಾರ ಮಳೆ ದಾಖಲಾಗಿದೆ.

Rain Alert

ಜುಲೈ ತಿಂಗಳಲ್ಲಿ ಮೊದಲ ಮುಳೆ

ಬೆಳಗ್ಗೆಯಿಂದ ಸಾಮಾನ್ಯ ಬಿಸಿಲಿನಿಂದ ಕೂಡಿದ್ದ ವಾತಾವರಣ ಮಧ್ಯಾಹ್ನ ಬಳಿಕ ಬದಲಾಯಿತು. ತಂಪು ಗಾಳಿ ಜೊತೆಗೆ ಮೋಡ ಕವಿದ ವಾತಾವರಣ ಸೃಷ್ಟಿ ಆಯಿತು. ಸಂಜೆ ಹೊತ್ತಿಗೆ ವಿವಿಧ ಪ್ರದೇಶಗಳಲ್ಲಿ ಜಿಟಿ ಜಿಟಿ ಮಳೆ ಸುರಿಯಿತು. ಈ ಮೂಲಕ ಜುಲೈ ತಿಂಗಳಲ್ಲಿ ಬೆಂಗಳೂರಿನಲ್ಲಿ ಮೊದಲ ಮುಂಗಾರು ಮಳೆ ಸುರಿಯಿತು.

ಸಂಜೆ ದಿಢೀರ್ ಬಂದ ಮಳೆಗೆ ವ್ಯಾಪಾರ, ವಾಹನ ಸವಾರರಿಗೆ ಕಿರಿ ಕಿರಿ ಉಂಟಾಯಿತು. ಹಲಸೂರು, ಹೆಬ್ಬಾಳ, ಯಲಹಂಕ ಭಾಗದಲ್ಲಿ ಜಿಟಿ ಜಿಟಿ ಮಳೆ ಸುರಿದಿದ್ದು, ಕೆಲವೆಡೆ ಈ ಮಳೆ ತಡರಾತ್ರಿ ವರೆಗೂ ಮುಂದುವರಿಯುವ ನಿರೀಕ್ಷೆ ಇದೆ. ಮುಂದಿನ ನಾಲ್ಕು ದಿನಗಳ ಪೈಕಿ ಮೂರು ದಿನ ಮತ್ತೆ ಮಳೆರಾಯನ ದರ್ಶನವಾಗಲಿದೆ ಎಂದು ಹವಾಮಾನ ಕೇಂದ್ರ ಮುನ್ಸೂಚನೆ ನೀಡಿದೆ.

ಜುಲೈ 20ರವರೆಗೆ ಬೆಂಗಳೂರಿಗೆ ಮಳೆ ಮುನ್ಸೂಚನೆ

KSNDMC ಹವಾಮಾನ ಮುನ್ಸೂಚನಾ ವರದಿ ಪ್ರಕಾರ, ಬೆಂಗಳೂರಿನಲ್ಲಿ ಮುಂದಿನ ಜುಲೈ 20ರವರೆಗೆ ಮಳೆ ಆಗಲಿದೆ. ಆ ಪೈಕಿ ನಾಳೆ ಶುಕ್ರವಾರ (ಜುಲೈ 17)ರಂದು ಮತ್ತೆ ಎಂದಿನಂತೆ ಬಿಸಿಲಿನ ದರ್ಶನವಾಗಲಿದ್ದು, ನಂತರ ಜುಲೈ 18, 19 ಮತ್ತು 20 ರಂದು ಇವತ್ತು ಸುರಿದಂತೆ ಅಲ್ಲಲ್ಲಿ ಹಗುರದಿಂದ ಸಾಮಾನ್ಯ ಮಳೆ ಆಗುವ ಸಾಧ್ಯತೆ ಇದೆ.

ಈ ಅವಧಿಯಲ್ಲಿ ಬೆಂಗಳೂರು ನಗರದಲ್ಲಿ ಮಬ್ಬು ಕವಿದ ವಾತಾವರಣ ನಿರ್ಮಾಣವಾಗಲಿದೆ. ತಾಪಮಾನವು ಗರಿಷ್ಟ 32-33ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 21-22 ಡಿಗ್ರಿ ಸೆಲ್ಸಿಯಸ್ ಕಂಡು ಬರುವ ಸಂಭವವಿದೆ. ಕಳೆದ ಮೂರು ದಿನಗಳ ಹಿಂದೆ ನಗರದಲ್ಲಿ ತಾಪಮಾನ ದಿಢೀರ್ ಹೆಚ್ಚಾಗಿತ್ತು. ಮಳೆಗಾಲದಲ್ಲೂ ಸುಮಾರು 32 ಡಿಗ್ರಿ ಸೆಲ್ಸಿಯಸ್ ನಷ್ಟು ದಾಖಲಾಗುವ ಮೂಲಕ ಜನರಲ್ಲಿ ಆತಂಕ ಸೃಷ್ಟಿಸಿತ್ತು. ಸದ್ಯ ಗುರುವಾರ ಮಳೆ ಬಂದ ನಗರದ ವಾತಾವರಣವನ್ನೇ ಬದಲಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+