Stampede: ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಕಾಲ್ತುಳಿತ: 1 ಸಾವು, ಆಸ್ಪತ್ರೆ ಸೇರಿದ 200 ಭಕ್ತರು
ಭವನೇಶ್ವರ: ಓಡಿಶಾ ರಾಜ್ಯದ ಪುರಿ ಜಗನ್ನಾಥ ರಥಾಯಾತ್ರೆ ಇಂದು ನೆರೆವೇರಿತು. ಇಂದಿನ ರಥಯಾತ್ರೆಯ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿದ್ದು, ಸುಮಾರು 200 ಭಕ್ತರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಒಬ್ಬರು ತಪಟ್ಟಿದ್ದಾರೆ. ಮೃತ ವ್ಯಕ್ತಿಯನ್ನು ಕಟಕ್ ಜಿಲ್ಲೆ ಅನಿಲ್ ದಾಸ್ ಎಂದು ಗುರುತಿಸಲಾಗಿದೆ.
ವಿಶ್ವಪ್ರಸಿದ್ಧ ಪುರಿಯ ಜಗನ್ನಾಥ ರಥಯಾತ್ರೆಗೆ ಪ್ರತಿ ವರ್ಷದಂತೆ ಈ ವರ್ಷವು ಅಪಾರ ಭಕ್ತಗಣ ಸೇರಿತ್ತು. ಜಗನ್ನಾಥ ದೇವರು ಸೇರಿದಂತೆ ಬಲಭದ್ರ ಮತ್ತು ಸುಭದ್ರೆಯ ವಿಗ್ರಹಗಳು ಇದ್ದ ರಥವು ರಥಬೀದಿಯಾದ ಇಲ್ಲಿನ ಗ್ರ್ಯಾಂಡ್ ರಸ್ತೆಯಲ್ಲಿ ಸಾಗುವಾಗ ಈ ಕಾಲ್ತುಳಿತ ಉಂಟಾಗಿದೆ. ಓರ್ವ ಸಾವನ್ನಪ್ಪಿದ್ದು, ಅನೇಕ ಮಂದಿ ಗಾಯಾಳುಗಳನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಿಸಲಾಗಿದೆ.

ರಥಬೀದಿಯಲ್ಲಿ ಅಪಾರ ಭಕ್ತರು ಸೇರಿದಂತೆ ನೂಕು ನುಗ್ಗಲು ಉಂಟಾಗಿತ್ತು. ಉಸಿರಾಡಲು ಕಷ್ಟಪಡುವ ಸ್ಥಿತಿ ಇತ್ತು. ರಥ ಎಳೆಯಲು ನಾ ಮುಂದು, ತಾಮುಂದು ಎನ್ನುತ್ತಿದ್ದ ಭಕ್ತರ ಮಧ್ಯೆ ನೂಕಾಟ ಜೋರಾಗಿತ್ತು. ಈ ತಳ್ಳಾಟದಲ್ಲಿ ನೆಲಕ್ಕೆ ಬಿದ್ದ ಇಬ್ಬರು ಮೇಲೆ ಏಳಲಾಗದೇ ಮೃತಪಟ್ಟಿದ್ದಾರೆ. ನೂರಾರು ಜನರನ್ನು ಕಾಲ್ತುಳಿತದಿಂದ ರಕ್ಷಿಸಲಾಗಿದೆ ಎಂದು ಪ್ರಾಥಮಿಕ ಮಾಹಿತಿಗಳು ತಿಳಿಸಿವೆ. ಬಹುವಿಜೃಂಭಣೆಯಿಂದ ನಡೆಯುತ್ತಿದ್ದ ಪರಿ ಜಗನ್ನಾಥನ ರಥಾಯಾತ್ರೆ ವೇಳೆ ಇಂಥದೊಂದು ದುರಂತ ಸಂಭವಿಸಿದೆ, ದೇಶಾದ್ಯಂತ ಜನರು ಪುರಿಯತ್ತ ನೋಡುವಂತಾಗಿದೆ.
ರಥಯಾತ್ರೆ ವೇಳೆ ಅಪಾರ ಜನ ಸೇರಿದ್ದರಿಂದ ಉಂಟಾದ ನೂಕು ನುಗ್ಗಲು ನಿಭಾಯಿಸುವಲ್ಲಿ ಪೊಲೀಸರು, ರಕ್ಷಣಾ ಪಡೆಗಳು ಹರಸಾಹಸಪಟ್ಟಿವೆ. ಮಳೆಯನ್ನೂ ಲೆಕ್ಕಿಸದೇ ಒಂಬತ್ತು ದಿನಗಳ ವಾರ್ಷಿಕ ರಥಯಾತ್ರೆ ವೀಕ್ಷಿಸಲು ಅಪಾರ ಜನ ಸೇರಿದ್ದರು. ಜಗನ್ನಾಥ ದೇವರ ಹೆಸರಿನಲ್ಲಿ ಘೋಷಣೆ ಮೊಳಗಿದವು. ಧಾರ್ಮಿಕ ವಿಧಿವಿಧಾನಗಳು ನೆರವೇರಿದ್ದು ಒಂದೆಡೆಯಾದರೆ, ಸಾಂಸ್ಕೃತಿಕ ಕಾರ್ಯಕ್ರಗಳು ಇನ್ನೊಂದೆಡೆ ಜರುಗಿದವು.
ಪ್ರತಿ ವರ್ಷದಂತೆ ಈ ವರ್ಷವು ಮಳೆಯಲ್ಲೆ ಅದ್ಧೂರಿ ರಥಯಾತ್ರೆ ನಡೆಯುತ್ತಿತ್ತು. ಈ ನಡುವೆ ದಿಢೀರ್ ಕಾಲ್ತುಳಿತ ಹೇಗೆ ಸಂಭವಿಸಿತ್ತು. ಅದಕ್ಕೆ ಕಾರಣವೇನು ಎಂಬುದನ್ನು ಪೊಲೀಸರು, ದೇವಸ್ಥಾನ ಆಡಳಿತ ಮಂಡಳಿ ಸಹಕಾರದಲ್ಲಿ ತನಿಖೆ ಆರಂಭಿಸಿದ್ದಾರೆ ಎನ್ನಲಾಗಿದೆ. ಕಾಲ್ತುಳಿತ ಜರುಗಿದ ಬೆನ್ನಲ್ಲೆ ಕಟ್ಟುನಿಟ್ಟಿನ ನಿಯಮ ಪಾಲಿಸಲಾಗಿದೆ. ಧ್ವನಿ ವರ್ಧಕ ಮೂಲಕ ಸುರಕ್ಷಿತವಾಗಿರುವಂತೆ, ಅಪಾರ ಜನರು ಇರುವ ಕಡೆ, ಗುಂಪಿನಲ್ಲಿ ತೆರಳದಂತೆ, ರಥಬೀದಿ ಸ್ಥಳದಿಂದ ಕದಲುವಂತೆ ಸೂಚನೆ ನೀಡಲಾಗುತ್ತಿದೆ. ಘಟನೆ ಬಳಿಕ್ಕ ಅಲ್ಲಲಿ ಕಂಡು ಬಂದ ಭಕ್ತರ ಗುಂಪುನ್ನು ಚುದುರಿಸಿದ್ದು ಕಂಡು ಬಂತು.












Click it and Unblock the Notifications