• search
  • Live TV
ಮುಖ್ಯಪುಟ
 » 
ರಾಜಕಾರಣಿಗಳು
 » 
ಯೋಗಿ ಆದಿತ್ಯನಾಥ

ಯೋಗಿ ಆದಿತ್ಯನಾಥ

ಜೀವನ ಚರಿತ್ರೆ

ಯೋಗಿ ಆದಿತ್ಯನಾಥ ಹಿಂದೂ ಧರ್ಮದ ಪ್ರಬಲ ಬೆಂಬಲಿಗ ಬಲಪಂಥೀಯ ಫೈರಬ್ರ್ಯಾಂಡ್ ರಾಜಕಾರಣಿಯಾಗಿದ್ದಾರೆ. ಪ್ರಸ್ತುತ ಇವರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದಾರೆ. ಇವರು ಪೌರಿ ಗಢವಾಲ (ಈಗಿನ ಉತ್ತರಾಖಂಡ) ಜಿಲ್ಲೆಯಲ್ಲಿ ಜನಿಸಿದರು. ಆಗ ಇವರ ಹೆಸರು ಅಜಯ ಮೋಹನ ಎಂದಿತ್ತು. ವಿಜ್ಞಾನ ವಿಷಯದಲ್ಲಿ ಇವರು ಪದವಿ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿ ಜೀವನದಲ್ಲಿ ಹಲವಾರು ಸಾಮಾಜಿಕ ಚಳವಳಿ ಹಾಗೂ ಆಂದೋಲನಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ತಮ್ಮ 22ನೇ ವಯಸ್ಸಿನಲ್ಲಿ ಕುಟುಂಬವನ್ನು ತೊರೆದು ಸನ್ಯಾಸತ್ವ ಸ್ವೀಕರಿಸಿದರು. ಒಂದು ಕಡೆ ಕುಳಿತು ದೈವಾರಾಧನೆ ಮಾಡುವ ಬದಲಾಗಿ ಎಲ್ಲ ಕಡೆಗೆ ಸುತ್ತಾಡುತ್ತ ಜನರಲ್ಲಿ ಅರಿವು ಮೂಡಿಸತೊಡಗಿದರು. ಪೂರ್ವ ಉತ್ತರ ಪ್ರದೇಶದಲ್ಲಿ ಜನಜಾಗರಣ ಅಭಿಯಾನ ಆರಂಭಿಸಿದರು. ಅಸ್ಪೃಶ್ಯತೆಯ ವಿರುದ್ಧ ಹೋರಾಡಿದ ಇವರು ಎಲ್ಲ ವರ್ಗದ ಜನರೊಂದಿಗೆ ಬೆರೆತು ಅವರೊಂದಿಗೆ ಊಟ ಸೇವಿಸಿದರು. 1998 ರಲ್ಲಿ ಪ್ರಥಮ ಬಾರಿಗೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಸಂಸದರಾದರು. ಉತ್ತರ ಪ್ರದೇಶದ ಮುಖ್ಯಮಂತ್ರಿಯಾದ ನಂತರ ಸಂಸದ ಸ್ಥಾನಕ್ಕೆ ರಾಜಿನಾಮೆ ನೀಡಿದರು.

ವಯಕ್ತಿಕ ಜೀವನ

ಪೂರ್ಣ ಹೆಸರು ಯೋಗಿ ಆದಿತ್ಯನಾಥ
ಜನ್ಮ ದಿನಾಂಕ 05 Jun 1972 (ವಯಸ್ಸು 49)
ಹುಟ್ಟಿದ ಸ್ಥಳ ಪಾಂಚೂರ, ಪೌರಿ ಗಢವಾಲ್
ಪಕ್ಷದ ಹೆಸರು Bharatiya Janta Party
ವಿದ್ಯಾರ್ಹತೆ Graduate
ಉದ್ಯೋಗ ಸನ್ಯಾಸಿ ಹಾಗೂ ರಾಜಕಾರಣಿ
ತಂದೆಯ ಹೆಸರು ಆನಂದ ಸಿಂಗ್ ಬಿಷ್ಟ್
ತಾಯಿಯ ಹೆಸರು ಸಾವಿತ್ರಿ ದೇವಿ

ವಿಳಾಸ

ಖಾಯಂ ವಿಳಾಸ ನಂ.361, ಓಲ್ಡ್ ಗೋರಖಪುರ, ಪಿಎಸ್ ಮತ್ತು ಪಿಓ ಗೋರಖಪುರ, ಸದರ ಬಜಾರ ತೆಹಸೀಲ್, ಗೋರಖಪುರ ಜಿಲ್ಲೆ
ಪ್ರಸ್ತುತ ವಿಳಾಸ ನಂ.5 ಕಾಳಿದಾಸ ಮಾರ್ಗ, ಲಖನೌ, ಉತ್ತರ ಪ್ರದೇಶ
ಸಂಪರ್ಕ ಸಂಖ್ಯೆ 9450966551, 0551-2255453, 0551-2255454
ಈ ಮೇಲ್ yogiadityanath72@gmail.com
ವೆಬ್‌ಸೈಟ್ http://www.yogiadityanath.in/
ಸಾಮಾಜಿಕ ಜಾಲತಾಣದ ವಿಳಾಸ

ಆಸಕ್ತಿಕರ ಅಂಶಗಳು

’ಹಿಂದಿ ವೀಕ್ಲಿ’ ಎಂಬ ಪತ್ರಿಕೆ ಹಾಗೂ ’ಯೋಗವಾಣಿ’ ಮಾಸಿಕದ ಪ್ರಧಾನ ಸಂಪಾದಕರಾಗಿದ್ದಾರೆ.
ಹಿಂದು ಯುವ ವಾಹಿನಿ ಎಂಬ ಯುವಕರ ಸಂಘಟನೆಯನ್ನು ಇವರು ಕಟ್ಟಿದ್ದಾರೆ. ಕೋಮು ಸಂಘರ್ಷಗಳಲ್ಲಿ ಇದರ ಸದಸ್ಯರು ಭಾಗವಹಿಸಿದ್ದಾರೆ ಎಂಬ ಆರೋಪಗಳಿವೆ.
ಒಟ್ಟು ಆಸ್ತಿ72.18 LAKHS
ಆಸ್ತಿ72.18 LAKHS
ಸಾಲಸೋಲN/A

Disclaimer: The information relating to the candidate is an archive based on the self-declared affidavit filed at the time of elections. The current status may be different. For the latest on the candidate kindly refer to the affidavit filed by the candidate with the Election Commission of India in the recent election.

ಸಾಮಾಜಿಕ

ಆಲ್ಬಂ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X