ನರೇಂದ್ರ ಮೋದಿ

ನರೇಂದ್ರ ಮೋದಿ

ನರೇಂದ್ರ ಮೋದಿ ಭಾರತದ 14ನೇ ಮತ್ತು ಪ್ರಸ್ತುತ ಪ್ರಧಾನಿ. ಉತ್ತರ ಪ್ರದೇಶದ ವಾರಣಾಸಿ ಕ್ಷೇತ್ರದ ಸಂಸದರು.

ನರೇಂದ್ರ ಮೋದಿ ಜೀವನ ಚರಿತ್ರೆ

ನರೇಂದ್ರ ಮೋದಿ ಭಾರತದ 14ನೇ ಮತ್ತು ಪ್ರಸ್ತುತ ಪ್ರಧಾನಿ. ಉತ್ತರ ಪ್ರದೇಶದ ವಾರಣಾಸಿ ಕ್ಷೇತ್ರದ ಸಂಸದರು. 2014ರಲ್ಲಿ ದೇಶದಲ್ಲಿ ಎನ್‌ಡಿಎ ಮೈತ್ರಿಕೂಟವನ್ನು ಅಧಿಕಾರಕ್ಕೆ ತಂದ ಕೀರ್ತಿ ಇವರಿಗೆ ಸಲ್ಲುತ್ತದೆ. 2019ರ ಚುನಾವಣೆಯಲ್ಲಿಯೂ ವಾರಣಾಸಿ ಕ್ಷೇತ್ರದಲ್ಲಿ ಜಯಗಳಿಸಿ 2ನೇ ಅವಧಿಗೆ ಪ್ರಧಾನಿಯಾಗಿ ಮುಂದುವರೆದಿದ್ದಾರೆ.

ಪ್ರಥಮ ಬಾರಿಗೆ ಶಾಸಕರಾದ ನಂತರ ಗುಜರಾತಿನ ಮುಖ್ಯಮಂತ್ರಿಯಾಗಿದ್ದು ಮೋದಿ ಹೆಗ್ಗಳಿಕೆ. ಹಾಗೆಯೇ ಮೊದಲ ಬಾರಿ ಸಂಸದರಾದ ಕೂಡಲೇ ಪ್ರಧಾನಮಂತ್ರಿಯಾದರು. 1984ರ ನಂತರ ಪ್ರಥಮ ಬಾರಿಗೆ ಲೋಕಸಭೆಯಲ್ಲಿ ಬಿಜೆಪಿ ಬಹುಮತ ಪಡೆಯಲು ಮೋದಿ ಅವರೇ ಕಾರಣ.

1950ರ ಸೆಪ್ಟೆಂಬರ್ 17ರಂದು ಗುಜರಾತಿನ ವಾಡನಗರದ ಸಾಮಾನ್ಯ ಕುಟುಂಬವೊಂದರಲ್ಲಿ ಜನಿಸಿದ ನರೇಂದ್ರ ಮೋದಿ ಅವರ ಆರಂಭಿಕ ಜೀವನ ಕಷ್ಟಕರವಾಗಿತ್ತು. ಇವರ ತಂದೆ ನಡೆಸುತ್ತಿದ್ದ ಚಿಕ್ಕ ಟೀ ಸ್ಟಾಲ್ ಒಂದರಲ್ಲಿ ಇವರೂ ಸಹ ಚಹಾ ಮಾರಲು ತಂದೆಗೆ ನೆರವಾಗುತ್ತಿದ್ದರು.

ತಮ್ಮ 8ನೇ ವಯಸ್ಸಿನಲ್ಲಿಯೇ ಆರ್‌ಎಸ್‌ಎಸ್‌ ಸಂಪರ್ಕಕ್ಕೆ ಬಂದ ಇವರು ನಂತರದ ಅವಧಿಯಲ್ಲಿ ಸಂಘ ಪರಿವಾರದೊಂದಿಗೆ ನಿಕಟ ಸಂಬಂಧ ಬೆಳೆಸಿಕೊಂಡರು. 1985ರಲ್ಲಿ ನರೇಂದ್ರ ಮೋದಿ ಬಿಜೆಪಿ ಸೇರಿದರು. ಸಾಮಾನ್ಯ ಬಿಜೆಪಿ ಕಾರ್ಯಕರ್ತರಾಗಿದ್ದ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿ, ದೇಶದ ಪ್ರಧಾನಿಯಾಗಿ ಬೆಳೆದರು. ಈ ಕುರಿತು ಚಲನಚಿತ್ರ ಸಹ ಮಾಡಲಾಗಿದೆ.

8ನೇ ವಯಸ್ಸಿನಲ್ಲಿಯೇ ಆರ್‌ಎಸ್ಎಸ್‌ ಸೇರ್ಪಡೆಯಾದ ಮೋದಿ 20ನೇ ವಯಸ್ಸಿಗೆ ಬರುವಷ್ಟರಲ್ಲಿ ಸಂಘದ ವಿಚಾರಧಾರೆಗಳಿಂದ ಬಹಳಷ್ಟು ಪ್ರಭಾವಿತರಾದರು. ಯುವಕರಾಗಿದ್ದಾಗಲೇ ದೇಶ ಹಾಗೂ ಜನತೆಯ ಸೇವೆಗಾಗಿ ತಮ್ಮನ್ನು ಅರ್ಪಿಸಿಕೊಂಡರು.

ಆನಂತರ ಭಾರತೀಯ ಜನತಾ ಪಕ್ಷವನ್ನು ಸೇರಿದರು. ರಾಜ್ಯ ಮತ್ತು ರಾಷ್ಟ್ರ ಮಟ್ಟದ ರಾಜಕಾರಣದಲ್ಲಿ ಸಕ್ರಿಯ ಪಾತ್ರವಹಿಸಿ ಕಾರ್ಯಪ್ರವೃತ್ತರಾದರು. ನರೇಂದ್ರ ಮೋದಿ ಗುಜರಾತ್ ವಿಶ್ವವಿದ್ಯಾನಿಲಯದಿಂದ ಕಲಾ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ನರೇಂದ್ರ ಮೋದಿ 2001ರಲ್ಲಿ ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾದರು. ಅನಂತರ ಸತತ 4 ಬಾರಿ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿ ದಾಖಲೆ ನಿರ್ಮಿಸಿದರು. ಗುಜರಾತ್‌ನಲ್ಲಿ ಭೂಕಂಪ ಉಂಟಾದಾಗ ಮೋದಿ ಕಾರ್ಯ ನಿರ್ವಹಣೆ ಮಾಡಿದ ರೀತಿ ಮೆಚ್ಚುಗೆಗೆ ಕಾರಣವಾಗಿದೆ. 2007ರಲ್ಲಿ ಇಂಡಿಯಾ ಟುಡೇ ನಡೆಸಿದ ಸಮೀಕ್ಷೆಯಲ್ಲಿ ಭಾರತದ ಅತ್ಯುತ್ತಮ ಮುಖ್ಯಮಂತ್ರಿ ಎಂದು ಹೆಸರು ಪಡೆದಿದ್ದರು.

ವಿಶ್ವದ ಪ್ರಭಾವಿ ನಾಯಕರಾಗಿರುವ ಮೋದಿ ಸಾಮಾಜಿಕ ಜಾಲತಾಣದಲ್ಲಿಯೂ ಸಕ್ರಿಯರಾಗಿದ್ದಾರೆ. ಫೇಸ್ ಬುಕ್, ಟ್ವಿಟರ್, ಇನ್‌ಸ್ಟಾಗ್ರಾಮ್ ಸೇರಿದಂತೆ ವಿವಿಧ ಜಾಲತಾಣಗಳನ್ನು ಬಳಸುತ್ತಾರೆ. ಪ್ರತಿ ತಿಂಗಳ ಕೊನೆಯ ಭಾನುವಾರ ಮತ್ ಕೀ ಬಾತ್ ರೇಡಿಯೋ ಕಾರ್ಯಕ್ರಮದಲ ಮೂಲಕ ದೇಶದ ಜನರನ್ನು ಉದ್ದೇಶಿಸಿ ಮಾತನಾಡುತ್ತಾರೆ.

ಮೋದಿ ದಿನಚರಿ ಯೋಗಾಭ್ಯಾಸದೊಂದಿಗೆ ಪ್ರಾರಂಭವಾಗುತ್ತದೆ. ಯೋಗ ನವರಾತ್ರಿ ಸಮಯದಲ್ಲಿ ಉಪವಾಸವೃತವನ್ನು ಅವರು ಆಚರಣೆ ಮಾಡುತ್ತಾರೆ. ವಿಶ್ವ ಮತ್ತು ಭಾರತದ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ನರೇಂದ್ರ ಮೋದಿ ಸ್ಥಾನ ಪಡೆದಿದ್ದಾರೆ.

ಮತ್ತಷ್ಟು ಓದು

ನರೇಂದ್ರ ಮೋದಿ ವಯಕ್ತಿಕ ಜೀವನ

ಪೂರ್ಣ ಹೆಸರು ನರೇಂದ್ರ ಮೋದಿ
ಜನ್ಮ ದಿನಾಂಕ 17 Sep 1950 (ವಯಸ್ಸು 73)
ಹುಟ್ಟಿದ ಸ್ಥಳ ವಾಡನಗರ, ಮೆಹಸಾಣಾ, ಗುಜರಾತ್
ಪಕ್ಷದ ಹೆಸರು Bharatiya Janta Party
ವಿದ್ಯಾರ್ಹತೆ Post Graduate
ಉದ್ಯೋಗ ರಾಜಕಾರಣಿ
ತಂದೆಯ ಹೆಸರು ನರೇಂದ್ರ ದಾಮೋದರದಾಸ ಮೋದಿ
ತಾಯಿಯ ಹೆಸರು ಹಿರಾಬೆನ್
ಅವಲಂಬಿತರ ಹೆಸರು ಜಶೋದಾಬೆನ್ ಮೋದಿ
ಅವಲಂಬಿತರ ಉದ್ಯೋಗ ಗೃಹಿಣಿ
ಧರ್ಮ ಹಿಂದು
ಖಾಯಂ ವಿಳಾಸ ಸಿ-1, ಸೋಮೇಶ್ವರ ಟೆನಮೆಂಟ್, ರಾನಿಪ್, ಅಹ್ಮದಾಬಾದ್, ಗುಜರಾತ್, 382480
ಪ್ರಸ್ತುತ ವಿಳಾಸ ನಂ.7, ಲೋಕಕಲ್ಯಾಣ ಮಾರ್ಗ, ನವದೆಹಲಿ, 110 011
ಸಂಪರ್ಕ ಸಂಖ್ಯೆ 079-23232611
ವೆಬ್‌ಸೈಟ್ http://www.narendramodi.in
ಸಾಮಾಜಿಕ ಜಾಲತಾಣದ ವಿಳಾಸ ಸಾಮಾಜಿಕ ಜಾಲತಾಣದ ವಿಳಾಸ:

ನರೇಂದ್ರ ಮೋದಿ ಒಟ್ಟು ಆಸ್ತಿ

ಒಟ್ಟು ಆಸ್ತಿ: ₹2.51 CRORE
ಆಸ್ತಿ:₹2.51 CRORE
ಸಾಲಸೋಲ: N/A

Disclaimer: The information relating to the candidate is an archive based on the self-declared affidavit filed at the time of elections. The current status may be different. For the latest on the candidate kindly refer to the affidavit filed by the candidate with the Election Commission of India in the recent election.

ನರೇಂದ್ರ ಮೋದಿ ಕುರಿತು ಆಸಕ್ತಿದಾಯಕ ಸಂಗತಿಗಳು

ಆರ್‌ಎಸ್ಎಸ್‌ ಸೇರ್ಪಡೆಯಾದ ಮೋದಿ ಸಂಘದ ವಿಚಾರಧಾರೆಗಳಿಂದ ಬಹಳಷ್ಟು ಪ್ರಭಾವಿತರಾದರು. ದೇಶ ಹಾಗೂ ಜನತೆಯ ಸೇವೆಗಾಗಿ ತಮ್ಮನ್ನು ಅರ್ಪಿಸಿಕೊಂಡರು.

ಅಪಾರ ದೈವ ಭಕ್ತರಾಗಿರುವ ಮೋದಿ ನವರಾತ್ರಿಯ ಸಮಯದಲ್ಲಿ ಉಪವಾಸ ಮಾಡುತ್ತಾರೆ.

ನರೇಂದ್ರ ಮೋದಿ ದಿನಚರಿ ಯೋಗಾಭ್ಯಾಸದ ಮೂಲಕ ಆರಂಭವಾಗುತ್ತದೆ

ನರೇಂದ್ರ ಮೋದಿ ರಾಜಕೀಯ ಟೈಮ್‌ಲೈನ್

2019
  • ಮೇ 30, 2019ರಂದು ನರೇಂದ್ರ ಮೋದಿ ಭಾರತದ ಪ್ರಧಾನಮಂತ್ರಿಯಾಗಿ ಎರಡನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಿದರು.
2014
  • ಮೇ ತಿಂಗಳಿನಲ್ಲಿ ವಾರಣಾಸಿ ಕ್ಷೇತ್ರದಿಂದ ಗೆಲುವು ಸಾಧಿಸಿದ ಬಳಿಕ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ
2001
  • ಮೊದಲ ಬಾರಿಗೆ ಗುಜರಾತ್ ಮುಖ್ಯಮಂತ್ರಿಯಾಗಿ ಆಯ್ಕೆ

ನರೇಂದ್ರ ಮೋದಿ ಸಾಧನೆಗಳು

2007ರಲ್ಲಿ ಇಂಡಿಯಾ ಟುಡೇ ಮಾಧ್ಯಮ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಭಾರತದ ಅತ್ಯುತ್ತಮ ಮುಖ್ಯಮಂತ್ರಿಯಾಗಿ ಗುರುತಿಸಿಕೊಂಡರು.

ಟೈಮ್ ಮ್ಯಾಗಜೀನ್ ನಿಯತಕಾಲಿಕೆಯ ಏಷ್ಯಾ ಅವತರಣಿಕೆಯ ಮುಖಪುಟದಲ್ಲಿ ಕಾಣಿಸಿಕೊಂಡರು. 2014ರಲ್ಲಿ ಸಿಎನ್ಎನ್-ಐಬಿಎನ್ ಸುದ್ದಿಸಂಸ್ಥೆಯ ಇಂಡಿಯನ್ ಆಫ್ ದ ಇಯರ್ ಪ್ರಶಸ್ತಿ ಪಡೆದರು.

ಟೈಮ್ ಮ್ಯಾಗಜೀನ್ 2014, 2015 ಹಾಗೂ 2017ರ ಅತಿ ಪ್ರಭಾವಶಾಲಿ 100 ಭಾರತೀಯ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ಮೋದಿ ಪಡೆದರು.

ಟೈಮ್ ಮ್ಯಾಗಜೀನ್ 2014, 2016ರ ಓದುಗರ ಸಮೀಕ್ಷೆಯಲ್ಲಿ ವರ್ಷದ ವ್ಯಕ್ತಿಯಾಗಿ ಆಯ್ಕೆಯಾದರು. 2014ರಲ್ಲಿ ಫೋರ್ಬ್ಸ್ ನಿಯತಕಾಲಿಕೆಯ ಜಾಗತಿಕ ಅತಿ ಬಲಿಷ್ಠ ವ್ಯಕ್ತಿಗಳ ಪಟ್ಟಿಯಲ್ಲಿ 15ನೇ ಸ್ಥಾನ ಪಡೆದರು.

2015, 2016 ಹಾಗೂ 2018ನೇ ಸಾಲಿನಲ್ಲಿ ಜಗತ್ತಿನಲ್ಲಿ 9ನೇ ಅತಿ ಬಲಿಷ್ಠ ವ್ಯಕ್ತಿಯಾಗಿ ಹೊರಹೊಮ್ಮಿದರು. 2015ರಲ್ಲಿ ಫಾರ್ಚ್ಯೂನ್ ಮ್ಯಾಗಜೀನ್ ಪ್ರಥಮ ವಾರ್ಷಿಕ ಜಾಗತಿಕ ಅತಿ ಪ್ರಭಾವಶಾಲಿ ನಾಯಕರ ಪಟ್ಟಿಯಲ್ಲಿ 5ನೇ ಸ್ಥಾನ ಪಡೆದರು.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X