Get Updates
Get notified of breaking news, exclusive insights, and must-see stories!

ಎಂ.ಕೆ. ಸ್ಟಾಲಿನ್

ಎಂ.ಕೆ. ಸ್ಟಾಲಿನ್
ಎಂ. ಕೆ.
By Rashmi | Monday, April 5, 2021, 01:02:20 PM [IST]

ಎಂ.ಕೆ. ಸ್ಟಾಲಿನ್ ಜೀವನ ಚರಿತ್ರೆ

ಎಂ.ಕೆ. ಸ್ಟಾಲಿನ್ ಎಂದೇ ಜನಪ್ರಿಯರಾಗಿರುವ ಮುತ್ತುವೆಲ್ ಕರುಣಾನಿಧಿ ಸ್ಟಾಲಿನ್ ಅವರು 1953 ಮಾರ್ಚ್ 1 ರಂದು ದಕ್ಷಿಣದ ಪ್ರಮುಖ ದ್ರಾವಿಡ ನಾಯಕ ಮತ್ತು ಐದು ಬಾರಿ ತಮಿಳುನಾಡಿನ ಮುಖ್ಯಮಂತ್ರಿ ಕಲೈನಾರ್ ಎಂ. ಕರುಣಾನಿಧಿ ಮತ್ತು ಅವರ ಎರಡನೇ ಪತ್ನಿ ದಯಾಲು ಅಮ್ಮಲ್ ಅವರ ಪುತ್ರನಾಗಿ ತಮಿಳುನಾಡಿನ ಚೆನ್ನೈನಲ್ಲಿ ಜನಿಸಿದರು. ಸ್ಟಾಲಿನ್ ಅವರನ್ನು ಕರುಣಾನಿಧಿಯ ಉತ್ತರಾಧಿಕಾರಿ ಎಂದು ಹೆಸರಿಸಲಾಯಿತು. ಸದ್ಯ ಎಂ.ಕೆ. ಸ್ಟಾಲಿನ್ ಡಿಎಂಕೆ ಪಕ್ಷದ ಅಧ್ಯಕ್ಷರಾಗಿದ್ದಾರೆ.

ಮತ್ತಷ್ಟು ಓದು

ಎಂ.ಕೆ. ಸ್ಟಾಲಿನ್ ವಯಕ್ತಿಕ ಜೀವನ

ಪೂರ್ಣ ಹೆಸರು ಎಂ.ಕೆ. ಸ್ಟಾಲಿನ್
ಜನ್ಮ ದಿನಾಂಕ 01 Mar 1953 (ವಯಸ್ಸು 73)
ಹುಟ್ಟಿದ ಸ್ಥಳ ಚೆನ್ನೈ
ಪಕ್ಷದ ಹೆಸರು Dravida Munetra Kazhagam
ವಿದ್ಯಾರ್ಹತೆ Graduate
ಉದ್ಯೋಗ ಸಾಮಾಜಿಕ ಸೇವೆ, ರಾಜಕಾರಣಿ
ತಂದೆಯ ಹೆಸರು ಎಂ. ಕರುಣಾನಿಧಿ
ತಾಯಿಯ ಹೆಸರು ಧಯಾಲು ಅಮ್ಮಲ್
ಅವಲಂಬಿತರ ಹೆಸರು ದುರ್ಗಾ ಸ್ಟಾಲಿನ್
ಅವಲಂಬಿತರ ಉದ್ಯೋಗ ಗೃಹಿಣಿ
ಮಕ್ಕಳು 1 ಪುತ್ರ(ರು) 1 ಪುತ್ರಿ(ಯರು)
ಧರ್ಮ ಹಿಂದು
ವೆಬ್‌ಸೈಟ್ http://www.mkstalin.in/

ಎಂ.ಕೆ. ಸ್ಟಾಲಿನ್ ಒಟ್ಟು ಆಸ್ತಿ

ಒಟ್ಟು ಆಸ್ತಿ
₹8.89 CRORE
ಆಸ್ತಿ
₹8.89 CRORE
ಸಾಲಸೋಲ
N/A

ಎಂ.ಕೆ. ಸ್ಟಾಲಿನ್ ಕುರಿತು ಆಸಕ್ತಿದಾಯಕ ಸಂಗತಿಗಳು

ಎಂ.ಕೆ. ಸ್ಟಾಲಿನ್ ಅವರಿಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿ. ಕ್ರಿಕೆಟ್, ಬ್ಯಾಡ್ಮಿಂಟನ್ ಮತ್ತು ಚೆಸ್ ಅವರ ನೆಚ್ಚಿನ ಕ್ರೀಡೆಗಳು.

ಎಂ.ಕೆ. ಸ್ಟಾಲಿನ್ ರಾಜಕೀಯ ಟೈಮ್‌ಲೈನ್

  • 2018 : ಪಕ್ಷದ ಅಧ್ಯಕ್ಷ ಕಲೈನಾರ್ ಎಂ. ಕರುಣಾನಿಧಿ ಅವರ ನಿಧನದ ನಂತರ ಸ್ಟಾಲಿನ್ ಅವರನ್ನು ಪಕ್ಷದ ಜನರಲ್ ಕೌನ್ಸಿಲ್ ಡಿಎಂಕೆ ಪಕ್ಷದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿತು.
  • 2017 : ಪಕ್ಷದ ಜನರಲ್ ಕೌನ್ಸಿಲ್ ಆಣತಿಯಂತೆ ಡಿಎಂಕೆ ಕಾರ್ಯಕಾರಿ ಅಧ್ಯಕ್ಷರಾಗಿ ಆಯ್ಕೆಯಾದರು.
  • 2016 : ಚೆನ್ನೈನ ಕೊಲಥೂರ್ ಕ್ಷೇತ್ರದಿಂದ ಮತ್ತೊಮ್ಮೆ ಶಾಸಕರಾಗಿ ಆಯ್ಕೆಯಾದರು. ತಮಿಳುನಾಡು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದರು. ತಮಿಳುನಾಡು ವಿಧಾನಸಭೆಯ ಇತಿಹಾಸದಲ್ಲಿ ಇದುವರೆಗೆ ಪ್ರಬಲ ಪ್ರತಿಪಕ್ಷ ನಾಯಕನಾಗಿ ಹೊರ ಹೊಮ್ಮಿದ್ದಾರೆ.
  • 2011 : ತಮ್ಮ ಹಿಂದಿನ ಕ್ಷೇತ್ರವಾದ ಥೌಸಂಡ್ ಲೈಟ್ಸ್‌ನಿಂದ ಸತತ ನಾಲ್ಕು ಬಾರಿ ಗೆಲುವು ಸಾಧಿಸಿದರೂ, ಈ ಬಾರಿ ಚೆನ್ನೈನ ಕೊಲಥೂರ್ ಕ್ಷೇತ್ರಕ್ಕೆ ತೆರಳಿ ಅಲ್ಲಿಂದ ಶಾಸಕರಾಗಿ ಆಯ್ಕೆಯಾದರು.
  • 2009 : ರಾಜ್ಯದ ಉಪಮುಖ್ಯಮಂತ್ರಿಯಾಗಿ ನೇಮಕಗೊಂಡರು. ತಮಿಳುನಾಡಿನ ಮೊದಲ ಉಪಮುಖ್ಯಮಂತ್ರಿ ಎಂಬ ಹೆಗ್ಗಳಿಕೆ.
  • 2008 : ಪಕ್ಷದ ಜನರಲ್ ಕೌನ್ಸಿಲ್ ಆಣತಿಯಂತೆ ಡಿಎಂಕೆ ಖಜಾಂಚಿಯಾಗಿ ಆಯ್ಕೆಯಾದರು.
  • 2006 : ನಾಲ್ಕನೇ ಬಾರಿಗೆ ಚೆನ್ನೈನ ಥೌಸಂಡ್ ಲೈಟ್ಸ್ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು. ಅಲ್ಲದೆ, ಪುರಸಭೆ ಆಡಳಿತ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾದರು.
  • 2003 : ಪಕ್ಷದ ಜನರಲ್ ಕೌನ್ಸಿಲ್ ಆಣತಿಯಂತೆ ಡಿಎಂಕೆ ಉಪ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು.
  • 2001 : ಸತತ ಎರಡನೇ ಬಾರಿಗೆ ಚೆನ್ನೈ ಮೇಯರ್ ಆಗಿ ಆಯ್ಕೆಯಾದರು.
  • 2001 : ಮೂರನೇ ಬಾರಿಗೆ ಚೆನ್ನೈನ ಥೌಸಂಡ್ ಲೈಟ್ಸ್ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು.
  • 1996 : ಚೆನ್ನೈ ಮೇಯರ್ ಆಗಿ ಆಯ್ಕೆಯಾದರು. ನಗರದ ಮೊದಲ ಚುನಾಯಿತ ಮೇಯರ್ ಎಂಬ ಹೆಗ್ಗಳಿಕೆ.
  • 1996 : ಚೆನ್ನೈನ ಥೌಸಂಡ್ ಲೈಟ್ಸ್ಕ್ಷೇತ್ರದ ಶಾಸಕರಾಗಿ ಮತ್ತೆ ಆಯ್ಕೆಯಾದರು
  • 1991 : ಥೌಸಂಡ್ ಲೈಟ್ಸ್ ಕ್ಷೇತ್ರದಿಂದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸೋತರು.
  • 1989 : ಚೆನ್ನೈನ ಥೌಸಂಡ್ ಲೈಟ್ಸ್ಕ್ಷೇತ್ರದ ಶಾಸಕರಾಗಿ ಆಯ್ಕೆಯಾದರು. ಎಐಎಡಿಎಂಕೆ ಪಕ್ಷದ ತಂಬಿದುರೈ ವಿರುದ್ಧ ದೊಡ್ಡ ಅಂತರದಲ್ಲಿ ಗೆದ್ದ ಅವರು ತಮಿಳುನಾಡು ವಿಧಾನಸಭೆಗೆ ಪಾದಾರ್ಪಣೆ ಮಾಡಿದರು.
  • 1984 : ಪಕ್ಷದ ಯುವ ವಿಭಾಗದ ಕಾರ್ಯದರ್ಶಿಯಾಗಿ ನೇಮಕಗೊಂಡರು. ಚೆನ್ನೈನ ಥೌಸಂಡ್ ಲೈಟ್ಸ್ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತರು.
  • 1976 : ತುರ್ತು ಪರಿಸ್ಥಿತಿ ವೇಳೆ ಮೀಸಾ ಕಾಯಿದೆಯಡಿ ಸ್ಟಾಲಿನ್ ಅವರನ್ನು ಬಂಧಿಸಲಾಗಿತ್ತು. ಜೊತೆಗೆ ಪೊಲೀಸರು ಗಂಭೀರವಾಗಿ ಹಲ್ಲೆ ಮಾಡಿದ್ದರು.
  • 1973 : ದ್ರಾವಿಡ ಮುನ್ನೇಟಾ ಕಳಗಂ (ಡಿಎಂಕೆ)ನ ಸಾಮಾನ್ಯ ಸಮಿತಿಗೆ ಆಯ್ಕೆಯಾದರು.
  • 1967 : ಎಂ.ಕೆ. ಸ್ಟಾಲಿನ್ ಅವರ ರಾಜಕೀಯ ಜೀವನವು ಅವರ 14ನೇ ವಯಸ್ಸಿನಿಂದ ಪ್ರಾರಂಭವಾಯಿತು. 1967 ರ ಚುನಾವಣೆಯಲ್ಲಿ ತಮ್ಮ ಪಕ್ಷ ಡಿಎಂಕೆ ಪರವಾಗಿ ಪ್ರಚಾರ ಮಾಡಿದರು.

ಎಂ.ಕೆ. ಸ್ಟಾಲಿನ್ ಸಾಧನೆಗಳು

ಸ್ಟಾಲಿನ್ ಅವರು ಮೇಯರ್ ಆಗಿದ್ದಾಗ ಚೆನ್ನೈನ ಕಾರ್ಪೊರೇಷನ್ ಶಾಲೆಗಳ ಗುಣಮಟ್ಟದ ಬಗ್ಗೆ ಇದ್ದ ಸಾಮಾನ್ಯ ಕಲ್ಪನೆಯನ್ನು ಬದಲಾಯಿಸಿದರು. ಪ್ಲಸ್-ಟು ಪಾಸಿಂಗ್ ಶೇಕಡವಾರುವನ್ನು 55 ರಿಂದ 72 ಕ್ಕೆ ಹೆಚ್ಚಿಸಿದರು. ನಗರದಲ್ಲಿ ರಸ್ತೆ ಸಂಚಾರ ದಟ್ಟಣೆ ಕಡಿಮೆ ಮಾಡಲು 94.5 ಕೋಟಿ ವೆಚ್ಚದಲ್ಲಿ 9 ಫ್ಲೈಓವರ್‌ಗಳನ್ನು ಮತ್ತು 4.92 ಕೋಟಿ ವೆಚ್ಚದಲ್ಲಿ 49 ಸಣ್ಣ ಸೇತುವೆಗಳನ್ನು ನಿರ್ಮಿಸಿದರು.‌‌‌ ಜಪಾನ್‌ನ ಆರ್ಥಿಕ ಸಹಾಯದಿಂದ ಹೊಗೆನಕಲ್ ನೀರಿನ ಯೋಜನೆಯನ್ನು ಯಶಸ್ವಿಯಾಗಿ ನಿರ್ವಹಿಸಿದರು.

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+