ಆಲ್ ಇಂಡಿಯಾ ತೃಣಮೂಲ ಪಕ್ಷದ ಅಧ್ಯಕ್ಷೆಯಾಗಿರುವ ಮಮತಾ ಬ್ಯಾನರ್ಜಿ ಪ್ರಸ್ತುತ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದಾರೆ. ಕೋಲ್ಕತ್ತಾದ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಮಮತಾ ತಮ್ಮ ಕಾಲೇಜು ದಿನಗಳಲ್ಲಿಯೇ ರಾಜಕೀಯಕ್ಕೆ ಬಂದರು. ಯುವ ವಯಸ್ಸಿನಲ್ಲಿದ್ದಾಗಲೇ ರಾಜಕೀಯಕ್ಕೆ ಬಂದ ಇವರು 1984 ರಲ್ಲಿ ಸೌತ್ ಕೋಲ್ಕತಾ ಲೋಕಸಭಾ ಕ್ಷೇತ್ರದಿಂದ ಸಂಸದೆಯಾಗಿ ಜಯ ಗಳಿಸಿದರು. ಇದೇ ಕ್ಷೇತ್ರದಲ್ಲಿ ಇವರು 1989 ಹಾಗೂ 1991 ರಲ್ಲಿ ಸೋಲನುಭವಿಸಿದರು. ನಂತರ 2009ರ ಸಾರ್ವತ್ರಿಕ ಚುನಾವಣೆಗಳವರೆಗೂ ಈ ಕ್ಷೇತ್ರದಲ್ಲಿ ಸತತವಾಗಿ ಜಯಗಳಿಸಿದರು. 1997 ರಲ್ಲಿ ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಎರಡು ಬಾರಿ ಕೇಂದ್ರದಲ್ಲಿ ರೈಲ್ವೆ ಖಾತೆ ಸಚಿವರಾದರು. ಎನ್ಡಿಎ ಹಾಗೂ ಯುಪಿಎ ಎರಡೂ ಮೈತ್ರಿಕೂಟಗಳ ಸರಕಾರಗಳಲ್ಲಿ ಸಚಿವೆಯಾಗಿದ್ದ ಇವರು ನಂದಿಗ್ರಾಮ ಹಾಗೂ ಸಿಂಗೂರ ಹೋರಾಟಗಳಿಂದ ದೇಶಾದ್ಯಂತ ಹೆಸರುವಾಸಿಯಾದರು. 2011 ರಲ್ಲಿ ಪ್ರಥಮ ಬಾರಿಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾದರು. ನಂತರ 2016 ರಲ್ಲಿ ಮತ್ತೂ ಹೆಚ್ಚಿನ ಸ್ಥಾನಗಳನ್ನು ಗಳಿಸಿ ಮತ್ತೊಮ್ಮೆ ಮುಖ್ಯಮಂತ್ರಿ ಪಟ್ಟಕ್ಕೇರಿದರು.
| ಪೂರ್ಣ ಹೆಸರು | ಮಮತಾ ಬ್ಯಾನರ್ಜಿ |
| ಜನ್ಮ ದಿನಾಂಕ | 05 Jan 1955 (ವಯಸ್ಸು 71) |
| ಹುಟ್ಟಿದ ಸ್ಥಳ | ಕೋಲ್ಕತಾ |
| ಪಕ್ಷದ ಹೆಸರು | All India Trinamool Congress |
| ವಿದ್ಯಾರ್ಹತೆ | Post Graduate |
| ಉದ್ಯೋಗ | ರಾಜಕಾರಣಿ, ಸಾಮಾಜಿಕ ಕಾರ್ಯಕರ್ತೆ |
| ತಂದೆಯ ಹೆಸರು | ಪ್ರೊಮಿಲೇಸ್ವರ ಬ್ಯಾನರ್ಜಿ |
| ತಾಯಿಯ ಹೆಸರು | ಗಾಯತ್ರಿ ಬ್ಯಾನರ್ಜಿ |
| ಧರ್ಮ | ಹಿಂದು |
| ವೆಬ್‌ಸೈಟ್ | https://wb.gov.in/portal/web/guest/meet-the-chief-minister |
Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.