ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರ ಪುತ್ರ ಎಚ್. ಡಿ. ಕುಮಾರಸ್ವಾಮಿಯವರು ಕರ್ನಾಟಕದ ಪ್ರಮುಖ ರಾಜಕಾರಣಿಗಳಲ್ಲಿ ಒಬ್ಬರು. ಎರಡು ಬಾರಿ ಇವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
ಎಚ್. ಡಿ. ದೇವೇಗೌಡರ ಕಿರಿಯ ಪುತ್ರ ಎಚ್. ಡಿ. ಕುಮಾರಸ್ವಾಮಿ ಕರ್ನಾಟಕ ಜೆಡಿಎಸ್ ಘಟಕದ ರಾಜ್ಯಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಣೆ ಮಾಡಿದ್ದಾರೆ. ಎಚ್. ಡಿ. ಕುಮಾರಸ್ವಾಮಿ ಪೂರ್ಣ ಹೆಸರು ಹರದನಹಳ್ಳಿ ದೇವೇಗೌಡ ಕುಮಾರಸ್ವಾಮಿ.
ಜೆಡಿಎಸ್ ಕಾರ್ಯಕರ್ತರು, ಅಭಿಮಾನಿಗಳು ಪ್ರೀತಿಯಿಂದ ಎಚ್. ಡಿ. ಕುಮಾರಸ್ವಾಮಿಯನ್ನು ’ಕುಮಾರಣ್ಣ’ ಎಂದು ಕರೆಯುತ್ತಾರೆ. ರಾಜಕೀಯಕ್ಕೆ ಬರುವ ಮೊದಲು ಎಚ್. ಡಿ. ಕುಮಾರಸ್ವಾಮಿ ಹಲವು ವರ್ಷಗಳ ಕಾಲ ಕನ್ನಡ ಸಿನಿಮಾ ರಂಗದಲ್ಲಿ ಕಾರ್ಯ ನಿರ್ವಹಣೆ ಮಾಡಿದ್ದರು. ಹಲವಾರು ವರ್ಷಗಳಿಂದ ಚಲನಚಿತ್ರಗಳನ್ನು ನಿರ್ಮಾಣ ಮಾಡಿದ್ದರು.
ಹಲವಾರು ವಿವಾದಗಳು ಕುಮಾರಸ್ವಾಮಿ ವಿರುದ್ಧ ಕೇಳಿ ಬಂದಿವೆ. ದ್ವಿಪತ್ನಿತ್ವ, ಜಂತಕಲ್ ಮೈನಿಂಗ್ ಹಗರಣ, ವಿಶ್ವಭಾರತಿ ಪ್ರಕರಣ ಮುಂತಾದ ಆರೋಪಗಳು ಇವರ ಮೇಲಿವೆ. 2006 ರಲ್ಲಿ ಇವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕರ್ನಾಟಕದ ಜಿಡಿಪಿ ಅತ್ಯುನ್ನತ ಮಟ್ಟವನ್ನು ಮುಟ್ಟಿದ್ದು ದಾಖಲೆಯಾಗಿದೆ.
| ಪೂರ್ಣ ಹೆಸರು | ಎಚ್.ಡಿ. ಕುಮಾರಸ್ವಾಮಿ |
| ಜನ್ಮ ದಿನಾಂಕ | 16 Dec 1959 (ವಯಸ್ಸು 66) |
| ಹುಟ್ಟಿದ ಸ್ಥಳ | ಹರದನಹಳ್ಳಿ, ಹಾಸನ ಜಿಲ್ಲೆ |
| ಪಕ್ಷದ ಹೆಸರು | Janata Dal (Secular) |
| ವಿದ್ಯಾರ್ಹತೆ | Graduate |
| ಉದ್ಯೋಗ | ಸಾಮಾಜಿಕ ಕಾರ್ಯಕರ್ತ ಹಾಗೂ ಕೃಷಿಕ |
| ತಂದೆಯ ಹೆಸರು | ಎಚ್.ಡಿ. ದೇವೇಗೌಡ |
| ತಾಯಿಯ ಹೆಸರು | ಚೆನ್ನಮ್ಮ |
| ಅವಲಂಬಿತರ ಹೆಸರು | ಅನಿತಾ ಕುಮಾರಸ್ವಾಮಿ |
| ಅವಲಂಬಿತರ ಉದ್ಯೋಗ | ಉದ್ಯಮಿ ಹಾಗೂ ರಾಜಕಾರಣಿ |
| ಮಕ್ಕಳು | 1 ಪುತ್ರ(ರು) |
| ಧರ್ಮ | ಹಿಂದು |
| ವೆಬ್‌ಸೈಟ್ | http://www.cmkarnataka.gov.in/ |
Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.