Get Updates
Get notified of breaking news, exclusive insights, and must-see stories!

ಒಮನ್ ಚಾಂಡಿ

ಒಮನ್ ಚಾಂಡಿ
ಒಮನ್ ಚಾಂಡಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಹಿರಿಯ ನಾಯಕ ಮತ್ತು ಕೇರಳದ ಮಾಜಿ ಮುಖ್ಯಮಂತ್ರಿ. ಸದ್ಯ ಕೇರಳ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿದ್ದಾರೆ.
By Moumi Majumdar | Thursday, March 18, 2021, 10:59:13 AM [IST]

ಒಮನ್ ಚಾಂಡಿ ಜೀವನ ಚರಿತ್ರೆ

ಒಮನ್ ಚಾಂಡಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಹಿರಿಯ ನಾಯಕ ಮತ್ತು ಕೇರಳದ ಮಾಜಿ ಮುಖ್ಯಮಂತ್ರಿ. ಸದ್ಯ ಕೇರಳ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿದ್ದಾರೆ. ಉಮ್ಮನ್ ಚಾಂಡಿ ಕೇರಳದ ಕೊಟ್ಟಾಯಂ ಜಿಲ್ಲೆಯ ಕುಮಾರಕೋಮ್ ನಲ್ಲಿ ಜನಿಸಿದರು. ಪುತ್ತುಪಲ್ಲಿಯ ಸೇಂಟ್ ಜಾರ್ಜ್ ಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನು ಪೂರ್ಣಗೊಳಿಸಿದರು. ನಂತರ ಅವರು ಕೊಟ್ಟಾಯಂನ ಸಿಎಮ್ಎಸ್ ಕಾಲೇಜು ಮತ್ತು ಚಂಗನಾಸ್ಸೆರಿಯ ಸೇಂಟ್ ಬರ್ಚ್ಮನ್ಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದರು. ಎರ್ನಾಕುಲಂನ ಸರ್ಕಾರಿ ಕಾನೂನು ಕಾಲೇಜಿನಿಂದ ಎಲ್‌ಎಲ್‌ಬಿ ಪದವಿ ಪೂರೈಸಿದರು. ಮುಖ್ಯಮಂತ್ರಿ ಆಗಿ ಉನ್ನತ ಸ್ಥಾನಕ್ಕೇರುವ ಮೊದಲು ಅವರು ಕೇರಳದ ವಿದ್ಯಾರ್ಥಿ ಸಂಘದೊಂದಿಗೆ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದ್ದರು. ಸಿಎಂ ಆಗಿ ಆಯ್ಕೆಯಾಗುವ ಮೊದಲು ಅವರು ರಾಜ್ಯದಲ್ಲಿ ಹಣಕಾಸು, ಗೃಹ ಮತ್ತು ಕಾರ್ಮಿಕದಂತಹ ಪ್ರಮುಖ ಖಾತೆಗಳನ್ನು ನಿರ್ವಹಿಸಿದ್ದರು.

ಮತ್ತಷ್ಟು ಓದು

ಒಮನ್ ಚಾಂಡಿ ವಯಕ್ತಿಕ ಜೀವನ

ಪೂರ್ಣ ಹೆಸರು ಒಮನ್ ಚಾಂಡಿ
ಜನ್ಮ ದಿನಾಂಕ 31 Oct 1943
ಮೃತಪಟ್ಟ ದಿನಾಂಕ 18 Jul 2023 (ವಯಸ್ಸು 79)
ಹುಟ್ಟಿದ ಸ್ಥಳ ಕುಮಾರಕೋಮ್
ಪಕ್ಷದ ಹೆಸರು Indian National Congress
ವಿದ್ಯಾರ್ಹತೆ Graduate Professional
ಉದ್ಯೋಗ ರಾಜಕಾರಣಿ
ತಂದೆಯ ಹೆಸರು ಕೆ.ಒ. ಚಾಂಡಿ
ತಾಯಿಯ ಹೆಸರು ಬೇಬಿ ಚಾಂಡಿ
ಅವಲಂಬಿತರ ಹೆಸರು ಮರಿಯಮ್ಮ ಒಮನ್
ಅವಲಂಬಿತರ ಉದ್ಯೋಗ ನಿವೃತ್ತ ಬ್ಯಾಂಕ್ ಉದ್ಯೋಗಿ
ಮಕ್ಕಳು 1 ಪುತ್ರ(ರು) 2 ಪುತ್ರಿ(ಯರು)
ಧರ್ಮ ಕ್ರಿಶ್ಚಿಯನ್
ವೆಬ್‌ಸೈಟ್ oommenchandy.net

ಒಮನ್ ಚಾಂಡಿ ಒಟ್ಟು ಆಸ್ತಿ

ಒಟ್ಟು ಆಸ್ತಿ
₹60.92 LAKHS
ಆಸ್ತಿ
₹91.22 LAKHS
ಸಾಲಸೋಲ
₹30.3 LAKHS

ಒಮನ್ ಚಾಂಡಿ ಕುರಿತು ಆಸಕ್ತಿದಾಯಕ ಸಂಗತಿಗಳು

ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ ಸಾರ್ವಜನಿಕ ಸೇವೆಯಲ್ಲಿನ ಭ್ರಷ್ಟಾಚಾರವನ್ನು ತಡೆಗಟ್ಟಲು ಶ್ರಮಿಸಿದ ಕಾರಣ ಒಮ್ಮನ್ ಚಾಂಡಿಗೆ 2013 ರಲ್ಲಿ ವಿಶ್ವಸಂಸ್ಥೆಯ ಸಾರ್ವಜನಿಕ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅವರು ಬಹ್ರೇನ್‌ನಲ್ಲಿ ಈ ಪ್ರಶಸ್ತಿಯನ್ನು ಆಗಿನ ಯುಎನ್ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ಸೆಕ್ರೆಟರಿ ಜನರಲ್ ವೂ ಹಾಂಗ್‌ಬೊ ಅವರಿಂದ ಸ್ವೀಕರಿಸಿದರು.

ಒಮನ್ ಚಾಂಡಿ ರಾಜಕೀಯ ಟೈಮ್‌ಲೈನ್

  • 2016 : ಪುತ್ತುಪಲ್ಲಿ ಕ್ಷೇತ್ರದಿಂದ ಜೈಕ್ ಸಿ. ಥಾಮಸ್ ಅವರನ್ನು ಸೋಲಿಸಿ ಕೇರಳ ವಿಧಾನಸಭೆಗೆ ಚುನಾಯಿತರಾದರು
  • 2011 : ಸುಜಾ ಸುಸಾನ್ ಜಾರ್ಜ್ ಅವರನ್ನು ಪುತ್ತುಪಲ್ಲಿ ಕ್ಷೇತ್ರದಿಂದ ಸೋಲಿಸಿ ಹತ್ತನೇ ಬಾರಿಗೆ ಗೆದ್ದು ಮುಖ್ಯಮಂತ್ರಿಯಾಗಿ ಆಯ್ಕೆಯಾದರು.
  • 2006 : ಕೇರಳ ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕರಾದರು.
  • 2006 : ಸಿಂಧು ಜಾಯ್ ಅವರನ್ನು ಸೋಲಿಸಿ ಒಂಬತ್ತನೇ ಬಾರಿಗೆ ಕೇರಳ ವಿಧಾನಸಭೆಗೆ ಚುನಾಯಿತರಾದರು.
  • 2004 : ಸಂಸತ್ ಚುನಾವಣೆಯಲ್ಲಿ ಕಳಪೆ ಫಲಿತಾಂಶದಿಂದಾಗಿ ಎಕೆ ಆಂಟನಿ ರಾಜೀನಾಮೆ ನೀಡಿದ ನಂತರ ಮೊದಲ ಬಾರಿಗೆ ಕೇರಳ ರಾಜ್ಯದ ಮುಖ್ಯಮಂತ್ರಿಯಾದರು.
  • 2001 : ಚೆರಿಯನ್ ಫಿಲಿಪ್ ಅವರನ್ನು ಸೋಲಿಸಿ ಎಂಟನೇ ಬಾರಿಗೆ ಕೇರಳ ವಿಧಾನಸಭೆಗೆ ಆಯ್ಕೆಯಾದರು.
  • 1996 : ರೆಜಿ ಜಕಾರಿಯಾ ಅವರನ್ನು ಸೋಲಿಸಿ ಕೇರಳ ವಿಧಾನಸಭೆಗೆ ಏಳನೇ ಬಾರಿಗೆ ಚುನಾಯಿತರಾದರು.
  • 1991 : ರಾಜ್ಯದ ಹಣಕಾಸು ಖಾತೆಯ ಉಸ್ತುವಾರಿ ವಹಿಸಲಾಯಿತು.
  • 1991 : ವಿ.ಎನ್.ವಾಸವನ್ ಅವರನ್ನು ಸೋಲಿಸಿ ಆರನೇ ಬಾರಿಗೆ ಕೇರಳ ವಿಧಾನಸಭೆಗೆ ಆಯ್ಕೆಯಾದರು.
  • 1987 : ವಿ.ಎನ್.ವಾಸವನ್ ಅವರನ್ನು ಸೋಲಿಸಿ ಕೇರಳ ವಿಧಾನಸಭೆಗೆ ಐದನೇ ಬಾರಿಗೆ ಚುನಾಯಿತರಾದರು.
  • 1982 : ರಾಜ್ಯದಲ್ಲಿ ಗೃಹ ಖಾತೆಯ ಉಸ್ತುವಾರಿ ವಹಿಸಲಾಯಿತು.
  • 1982 : ಥಾಮಸ್ ರಾಜನ್ ಅವರನ್ನು ಸೋಲಿಸಿ ಕೇರಳ ವಿಧಾನಸಭೆಗೆ ನಾಲ್ಕನೇ ಬಾರಿಗೆ ಚುನಾಯಿತರಾದರು.
  • 1980 : ಎಂಆರ್‌ಜಿ ಪ್ಯಾನಿಕರ್ ಅವರನ್ನು ಸೋಲಿಸಿ ಮೂರನೇ ಬಾರಿಗೆ ಕೇರಳ ವಿಧಾನಸಭೆಗೆ ಆಯ್ಕೆಯಾದರು.
  • 1977 : ಕೇರಳದಲ್ಲಿ ಕಾರ್ಮಿಕ ಸಚಿವರಾದರು.
  • 1977 : ಪಿಸಿ ಚೆರಿಯನ್ ಅವರನ್ನು ಸೋಲಿಸಿ ಎರಡನೇ ಬಾರಿಗೆ ಕೇರಳ ವಿಧಾನಸಭೆಗೆ ಆಯ್ಕೆಯಾದರು.
  • 1970 : ಇ.ಎಂ. ಜಾರ್ಜ್ ಅವರನ್ನು ಸೋಲಿಸಿ ಪುತ್ತುಪಲ್ಲಿ ಕ್ಷೇತ್ರದಿಂದ ಕೇರಳ ವಿಧಾನಸಭೆ ಪ್ರವೇಶಿಸಿದರು
  • 1970 : ಕೇರಳದಲ್ಲಿ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕರಾದರು.
  • 1967 : ಕೇರಳ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಚುನಾಯಿತರಾದರು.

ಒಮನ್ ಚಾಂಡಿ ಸಾಧನೆಗಳು

ಒಮನ್ ಚಾಂಡಿ 1970 ರಲ್ಲಿ ಪುತ್ತುಪಲ್ಲಿ ಕ್ಷೇತ್ರದಿಂದ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಜಯ ಸಾಧಿಸಿದರು. ಇಲ್ಲಿಯವರೆಗೆ ಈ ಕ್ಷೇತ್ರದಿಂದ 11 ಬಾರಿ ಗೆದ್ದಿದ್ದಾರೆ.
2004 ರ ಲೋಕಸಭಾ ಚುನಾವಣೆಯಲ್ಲಿ ಒಂದೇ ಒಂದು ಸ್ಥಾನವನ್ನು ಕೇರಳದಲ್ಲಿ ಗೆಲ್ಲಲು ಕಾಂಗ್ರೆಸ್ ವಿಫಲವಾದ ನಂತರ ಎ.ಕೆ. ಆ್ಯಂಟನಿ ರಾಜೀನಾಮೆ ನೀಡಿದರು. ನಂತರ ಒಮನ್ ಚಾಂಡಿ ಅಧಿಕಾರ ವಹಿಸಿಕೊಂಡರು. 2006 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲನುಭವಿಸಿದರೂ 40 ಸ್ಥಾನಗಳನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಅಲ್ಲದೆ, ಶೇ.10 ರಷ್ಟು ಮತ ಪ್ರಮಾಣವನ್ನು ಹೆಚ್ಚಿಸಿಕೊಂಡಿತು.

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+