2019ರ ಜುಲೈ 26ರಂದು ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ 2021ರ ಜುಲೈ 26ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಒಟ್ಟು 4 ಬಾರಿ ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿದ್ದರು.
ಕರ್ನಾಟಕ ರಾಜಕೀಯ ರಂಗದಲ್ಲಿ ಬಿಜೆಪಿ ಮುನ್ನೆಲೆಗೆ ಬರಲು ಬಿ.ಎಸ್. ಯಡಿಯೂರಪ್ಪನವರ ಪಾತ್ರ ಅತಿ ಮಹತ್ವದ್ದಾಗಿದೆ. 2008ಕ್ಕೂ ಮುನ್ನ ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಇವರು ಗೆಲುವು ಸಾಧಿಸಿ ಶಾಸಕರಾದಾಗ ಕರ್ನಾಟಕದಲ್ಲಿ ಬಿಜೆಪಿಗೆ ನೆಲೆಯೇ ಇರಲಿಲ್ಲ. ಆದರೆ 2008 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ನೇತೃತ್ವ ವಹಿಸಿದ್ದ ಯಡಿಯೂರಪ್ಪನವರು ಕರ್ನಾಟಕದಲ್ಲಿ ಬಿಜೆಪಿಗೆ ದೊಡ್ಡ ಮಟ್ಟದ ಜಯ ತಂದುಕೊಟ್ಟು 2008 ರ ಮೇ 30 ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
2007 ರಲ್ಲಿ ಧರಂ ಸಿಂಗ್ ನೇತೃತ್ವದ ಸಮ್ಮಿಶ್ರ ಸರಕಾರವನ್ನು ಪತನಗೊಳಿಸುವಲ್ಲಿ ಜೆಡಿಎಸ್ ಮುಖಂಡ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಕೈಜೋಡಿಸಿದರು. ಧರಂ ಸಿಂಗ್ ನೇತೃತ್ವದ ಸಮ್ಮಿಶ್ರ ಸರಕಾರ ಬೀಳಿಸಿ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರಕಾರ ಸ್ಥಾಪನೆಗೆ ಕಾರಣಕರ್ತರಾದರು.
ಈ ಸರಕಾರ ರಚನೆಯ ಸಂದರ್ಭದಲ್ಲಿ ಮೊದಲ 20 ತಿಂಗಳ ಅವಧಿಗೆ ಎಚ್.ಡಿ. ಕುಮಾರಸ್ವಾಮಿ ಹಾಗೂ ನಂತರದ 20 ತಿಂಗಳು ಯಡಿಯೂರಪ್ಪನವರು ಮುಖ್ಯಮಂತ್ರಿಯಾಗುವ ಒಪ್ಪಂದಕ್ಕೆ ಬರಲಾಗಿತ್ತು. ಈ ಸಂದರ್ಭದಲ್ಲಿ ಮೊದಲ 20 ತಿಂಗಳಿಗೆ ಮುಖ್ಯಮಂತ್ರಿಯಾದ ಕುಮಾರಸ್ವಾಮಿ ಸರಕಾರದ ಅವಧಿಯಲ್ಲಿ ಯಡಿಯೂರಪ್ಪನವರು ಉಪಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರಾದರು.
ಆದರೆ 20 ತಿಂಗಳ ಕಾರ್ಯಾವಧಿಯ ನಂತರ ಯಡಿಯೂರಪ್ಪನವರಿಗೆ ಅಧಿಕಾರ ಬಿಟ್ಟುಕೊಡಲು ಕುಮಾರಸ್ವಾಮಿ ಒಪ್ಪದ ಕಾರಣ ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಯಿತು. ಈ ಹಂತದಲ್ಲಿ ಯಡಿಯೂರಪ್ಪನವರು 2007 ರ ನವೆಂಬರ್ 12 ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರೂ ಜೆಡಿಎಸ್‌ನೊಂದಿಗಿನ ಖಾತೆ ಹಂಚಿಕೆ ಬಿಕ್ಕಟ್ಟಿನ ಕಾರಣದಿಂದ 2007 ರ ನವೆಂಬರ್ 19 ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಬೇಕಾಯಿತು.
ಇವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬೆಂಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಭೂ ಅಕ್ರಮ ಎಸಗಿದ ಆರೋಪಗಳು ಕೇಳಿ ಬಂದವು. ಈ ಹಂತದಲ್ಲಿ ಬಿಜೆಪಿಯೊಳಗಿನಿಂದಲೇ ಸಾಕಷ್ಟು ವಿರೋಧ ಎದುರಿಸಿದ ಯಡಿಯೂರಪ್ಪ ಕೆಲ ಕಾಲ ಬಿಜೆಪಿಯಿಂದ ದೂರವಿದ್ದರು.
ನಂತರ ಮತ್ತೆ ಬಿಜೆಪಿ ಸೇರಿ 2018 ರಲ್ಲಿ ಬಿಜೆಪಿ 104 ಸ್ಥಾನ ಗೆದ್ದಾಗ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಆದರೆ ಬಹುಮತ ಸಾಬೀತು ಪಡಿಸಲು ಸಾಧ್ಯವಾಗದ ಕಾರಣ ಎರಡೇ ದಿನಗಳಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದರು.
| ಪೂರ್ಣ ಹೆಸರು | ಬಿ. ಎಸ್. ಯಡಿಯೂರಪ್ಪ |
| ಜನ್ಮ ದಿನಾಂಕ | 27 Feb 1943 (ವಯಸ್ಸು 83) |
| ಹುಟ್ಟಿದ ಸ್ಥಳ | ಬೂಕನಕೆರೆ, ಮಂಡ್ಯ, ಕರ್ನಾಟಕ |
| ಪಕ್ಷದ ಹೆಸರು | Bharatiya Janta Party |
| ವಿದ್ಯಾರ್ಹತೆ | 12th Pass |
| ಉದ್ಯೋಗ | ಕೃಷಿಕ |
| ತಂದೆಯ ಹೆಸರು | ದಿ. ಸಿದ್ದಲಿಂಗಪ್ಪ |
| ತಾಯಿಯ ಹೆಸರು | ದಿ. ಪುಟ್ಟತಾಯಮ್ಮ |
| ಅವಲಂಬಿತರ ಹೆಸರು | ದಿ. ಮೈತ್ರಾ ದೇವಿ |
| ಅವಲಂಬಿತರ ಉದ್ಯೋಗ | ತೀರಿಕೊಂಡಿದ್ದಾರೆ |
| ಮಕ್ಕಳು | 2 ಪುತ್ರ(ರು) 3 ಪುತ್ರಿ(ಯರು) |
| ಧರ್ಮ | ಹಿಂದು |
Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.