Get Updates
Get notified of breaking news, exclusive insights, and must-see stories!

ಅಖಿಲೇಶ ಯಾದವ

ಅಖಿಲೇಶ ಯಾದವ
ಅಖಿಲೇಶ ಯಾದವ ಸಮಾಜವಾದಿ ಪಕ್ಷದ ಅತಿ ಸಕ್ರಿಯ ರಾಜಕಾರಣಿಯಾಗಿದ್ದಾರೆ. ಇವರು ಉತ್ತರ ಪ್ರದೇಶದ 20ನೇ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದಾರೆ.
By Rashmi | Thursday, May 30, 2019, 03:45:57 PM [IST]

ಅಖಿಲೇಶ ಯಾದವ ಜೀವನ ಚರಿತ್ರೆ

ಅಖಿಲೇಶ ಯಾದವ ಸಮಾಜವಾದಿ ಪಕ್ಷದ ಅತಿ ಸಕ್ರಿಯ ರಾಜಕಾರಣಿಯಾಗಿದ್ದಾರೆ. ಇವರು ಉತ್ತರ ಪ್ರದೇಶದ 20ನೇ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಎಟಾವಾದ ಸೇಂಟ್ ಮಾರಿಯಾ ಶಾಲೆಯಲ್ಲಿ ಇವರು ಪ್ರಾಥಮಿಕ ಶಿಕ್ಷಣ ಪೂರೈಸಿದರು. ನಂತರ ರಾಜಸ್ಥಾನದ ಢೋಲಪುರದ ಢೋಲಪುರ ಮಿಲಿಟರಿ ಶಾಲೆಗೆ ಸೇರಿದರು. ನಂತರ ಆಸ್ಟ್ರೇಲಿಯಾದಲ್ಲಿ ಪರಿಸರ ಸಂರಕ್ಷಣೆ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. 1999 ರ ನವೆಂಬರ್ 24 ರಂದು ಡಿಂಪಲ್ ಅವರೊಂದಿಗೆ ವಿವಾಹವಾದರು. ಅಖಿಲೇಶ ಯಾದವ ಉತ್ತರ ಪ್ರದೇಶ ಕಂಡ ಅತಿ ಕಿರಿಯ ವಯಸ್ಸಿನ ಮುಖ್ಯಮಂತ್ರಿ ಎಂದು ಹೆಸರು ಮಾಡಿದ್ದಾರೆ. ತಮ್ಮ 38 ನೇ ವಯಸ್ಸಿನಲ್ಲಿ 2012 ರ ಮಾರ್ಚ್ನಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಇವರು 2017 ರ ಮಾರ್ಚ್ 11 ರಂದು ಹುದ್ದೆಗೆ ರಾಜಿನಾಮೆ ನೀಡಿದರು.

ಮತ್ತಷ್ಟು ಓದು

ಅಖಿಲೇಶ ಯಾದವ ವಯಕ್ತಿಕ ಜೀವನ

ಪೂರ್ಣ ಹೆಸರು ಅಖಿಲೇಶ ಯಾದವ
ಜನ್ಮ ದಿನಾಂಕ 01 Jul 1973 (ವಯಸ್ಸು 52)
ಹುಟ್ಟಿದ ಸ್ಥಳ 01-07-1973
ಪಕ್ಷದ ಹೆಸರು Samajwadi Party
ವಿದ್ಯಾರ್ಹತೆ 12th Pass
ಉದ್ಯೋಗ ಸ್ನಾತಕೋತ್ತರ ಪದವೀಧರ
ತಂದೆಯ ಹೆಸರು ಮುಲಾಯಂ ಸಿಂಗ್ ಯಾದವ
ತಾಯಿಯ ಹೆಸರು ಮಾಲತಿ ದೇವಿ
ಅವಲಂಬಿತರ ಹೆಸರು ಡಿಂಪಲ್ ಯಾದವ್
ಅವಲಂಬಿತರ ಉದ್ಯೋಗ ಸಂಸದೆ
ಮಕ್ಕಳು 1 ಪುತ್ರ(ರು) 2 ಪುತ್ರಿ(ಯರು)
ಧರ್ಮ ಹಿಂದು
ವೆಬ್‌ಸೈಟ್ www.akhileshyadav.com

ಅಖಿಲೇಶ ಯಾದವ ಒಟ್ಟು ಆಸ್ತಿ

ಒಟ್ಟು ಆಸ್ತಿ
₹41.03 CRORE
ಆಸ್ತಿ
₹42.03 CRORE
ಸಾಲಸೋಲ
₹99.86 LAKHS

ಅಖಿಲೇಶ ಯಾದವ ಕುರಿತು ಆಸಕ್ತಿದಾಯಕ ಸಂಗತಿಗಳು

ಉತ್ತರ ಪ್ರದೇಶದ ಅತಿ ಕಿರಿಯ ವಯಸ್ಸಿನ ಮುಖ್ಯಮಂತ್ರಿ ಅಖಿಲೇಶ ಯಾದವ. ಮೂರು ಬಾರಿ ಇವರು ಲೋಕಸಭಾ ಚುನಾವಣೆಗಳಲ್ಲಿ ಜಯ ಸಾಧಿಸಿದ್ದಾರೆ. 2017 ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಅಖಿಲೇಶ ಯಾದವ 10 ಸಾವಿರ ಕಿಮೀ ಸುತ್ತಾಡಿ ಉತ್ತರ ಪ್ರದೇಶದ ವಿವಿಧೆಡೆ 800 ರ್ಯಾಲಿಗಳಲ್ಲಿ ಭಾಗವಹಿಸಿದ್ದು ಅಸಾಮಾನ್ಯವಾಗಿದೆ. ಗ್ರಾಮೀಣ ಜನರ ಬದುಕಿನ ಮಟ್ಟ ಸುಧಾರಿಸಲು, ಕೃಷಿಕರ ಜೀವನ ಮಟ್ಟ ಹೆಚ್ಚಿಸಲು ಹಾಗೂ ಬಡವರ ಶ್ರೇಯೋಭಿವೃದ್ಧಿಗೆ ಇವರು ಕೈಗೊಂಡ ಕ್ರಮಗಳಿಂದ ಉತ್ತರ ಪ್ರದೇಶದಲ್ಲಿ ಅಭಿವೃದ್ಧಿಯ ಹೊಸ ಅಲೆ ಆರಂಭವಾಯಿತು. ಭಾರತೀಯ ರಾಜಕಾರಣದ ಯುವ ನಾಯಕರಾಗಿರುವ ಇವರು ಯುವ ಸಮುದಾಯದ ಏಳಿಗೆಗಾಗಿ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ.

ಅಖಿಲೇಶ ಯಾದವ ಸಾಧನೆಗಳು

ಅತಿ ಕಿರಿಯ ವಯಸ್ಸಿನಲ್ಲಿಯೇ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದು ಇವರ ಜೀವನದ ಮಹತ್ಸಾಧನೆಯಾಗಿದೆ. ಸಮಾಜವಾದಿ ಪಕ್ಷದ ವರ್ಚಸ್ಸಿನ ಬದಲಾವಣೆಗೆ ಕಾರಣರಾದ ಇವರು ಚುನಾವಣಾ ಪ್ರಚಾರದಲ್ಲಿ ಅತ್ಯಾಧುನಿಕ ಕ್ರಮಗಳನ್ನು ಅಳವಡಿಸಿಕೊಂಡರು. ಗ್ರಾಮೀಣ ಜನರ ಬದುಕಿನ ಮಟ್ಟ ಸುಧಾರಿಸಲು, ಕೃಷಿಕರ ಜೀವನ ಮಟ್ಟ ಹೆಚ್ಚಿಸಲು ಹಾಗೂ ಬಡವರ ಶ್ರೇಯೋಭಿವೃದ್ಧಿಗೆ ಇವರು ಕೈಗೊಂಡ ಕ್ರಮಗಳಿಂದ ಉತ್ತರ ಪ್ರದೇಶದಲ್ಲಿ ಅಭಿವೃದ್ಧಿಯ ಹೊಸ ಅಲೆ ಆರಂಭವಾಯಿತು. ಇವರು ತಮ್ಮ ಸೈಕಲ್ ರ್ಯಾಲಿಯಿಂದ ಬಹಳ ಜನಪ್ರಿಯತೆ ಗಳಿಸಿಕೊಂಡರು ಹಾಗೂ ಯುವ ಸಮುದಾಯದಲ್ಲಿ ನಾಯಕನಾಗಿ ಗುರುತಿಸಿಕೊಂಡರು.

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+