Get Updates
Get notified of breaking news, exclusive insights, and must-see stories!

ರಾಹುಲ ಗಾಂಧಿ

ರಾಹುಲ ಗಾಂಧಿ
ರಾಹುಲ ಗಾಂಧಿಯವರು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು. ಭಾರತದ ಪ್ರಥಮ ಪ್ರಧಾನ ಮಂತ್ರಿ ಜವಾಹರಲಾಲ ನೆಹರು ಅವರ ಮರಿಮೊಮ್ಮಗ ಇವರು.
By Rashmi | Thursday, May 30, 2019, 03:45:57 PM [IST]

ರಾಹುಲ ಗಾಂಧಿ ಜೀವನ ಚರಿತ್ರೆ

ರಾಹುಲ ಗಾಂಧಿಯವರು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು. ಭಾರತದ ಪ್ರಥಮ ಪ್ರಧಾನ ಮಂತ್ರಿ ಜವಾಹರಲಾಲ ನೆಹರು ಅವರ ಮರಿಮೊಮ್ಮಗ ಇವರು. ಇವರ ಅಜ್ಜಿ ಇಂದಿರಾ ಗಾಂಧಿ ಸಹ ಭಾರತದ ಪ್ರಧಾನಿಯಾಗಿದ್ದರು. ರಾಹುಲ ಭಾರತದ ಮಾಜಿ ಪ್ರಧಾನಿ ದಿವಂಗತ ರಾಜೀವ ಗಾಂಧಿ ಹಾಗೂ ಸೋನಿಯಾ ಗಾಂಧಿಯವರ ಮಗ. ಇವರ ಹಿರಿಯ ಸಹೋದರಿ ಪ್ರಿಯಾಂಕಾ ಗಾಂಧಿ ಸಹ ಸಕ್ರಿಯ ರಾಜಕಾರಣಿಯಾಗಿದ್ದಾರೆ. ತಮ್ಮ ತಂದೆಯ ಕ್ಷೇತ್ರವಾದ ಉತ್ತರ ಪ್ರದೇಶದ ಅಮೇಠಿ ಲೋಕಸಭಾ ಕ್ಷೇತ್ರದಿಂದ 2004ರಲ್ಲಿ ಚುನಾವಣೆಗೆ ಸ್ಪರ್ಧಿಸುವ ಮೂಲಕ ರಾಹುಲ ಗಾಂಧಿ ರಾಜಕೀಯಕ್ಕೆ ಬಂದರು. ಇವರು 2007 ರ ಸೆಪ್ಟೆಂಬರ್ 24 ರಂದು ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡರು. ಇವರು ದೆಹಲಿಯ ಸೇಂಟ್ ಸ್ಟೀಫನ್ ಕಾಲೇಜಿನಲ್ಲಿ ಮೂಲ ವಿದ್ಯಾಭ್ಯಾಸ ಕೈಗೊಂಡು ನಂತರ ಡೆಹ್ರಾಡೂನ್ನಲ್ಲಿ ಶಿಕ್ಷಣ ಮುಂದುವರೆಸಿದರು. ಇವರು ಹಾರ್ವರ್ಡ್ ಕಾಲೇಜು ಹಾಗೂ ಫ್ಲೊರಿಡಾದ ರಾಲಿನ್ಸ್ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಪದವಿ ಪಡೆದರು. ನಂತರ ಕೇಂಬ್ರಿಜ್ ವಿಶ್ವವಿದ್ಯಾಲಯದ ಟ್ರಿನಿಟಿ ಕಾಲೇಜಿನಲ್ಲಿ ಡೆವಲಪಮೆಂಟ್ ಸ್ಟಡೀಸ್ ವಿಷಯದಲ್ಲಿ ಎಂಫಿಲ್ ಮಾಡಿದರು. ರಾಜಕೀಯಕ್ಕೆ ಬರುವ ಮುನ್ನ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡಿದರು. ಪ್ರಸ್ತುತ ರಾಹುಲ ಗಾಂಧಿ ಅಮೇಥಿ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದಾರೆ.

ಮತ್ತಷ್ಟು ಓದು

ರಾಹುಲ ಗಾಂಧಿ ವಯಕ್ತಿಕ ಜೀವನ

ಪೂರ್ಣ ಹೆಸರು ರಾಹುಲ ಗಾಂಧಿ
ಜನ್ಮ ದಿನಾಂಕ 19 Jun 1970 (ವಯಸ್ಸು 55)
ಹುಟ್ಟಿದ ಸ್ಥಳ ದೆಹಲಿ
ಪಕ್ಷದ ಹೆಸರು Indian National Congress
ವಿದ್ಯಾರ್ಹತೆ Post Graduate
ಉದ್ಯೋಗ ರಾಜಕಾರಣಿ
ತಂದೆಯ ಹೆಸರು ರಾಜೀವ ಗಾಂಧಿ
ತಾಯಿಯ ಹೆಸರು ಸೋನಿಯಾ ಗಾಂಧಿ
ಧರ್ಮ ಹಿಂದು
ವೆಬ್‌ಸೈಟ್ rahulgandhi.in

ರಾಹುಲ ಗಾಂಧಿ ಒಟ್ಟು ಆಸ್ತಿ

ಒಟ್ಟು ಆಸ್ತಿ
₹19.9 CRORE
ಆಸ್ತಿ
₹20.4 CRORE
ಸಾಲಸೋಲ
₹49.79 LAKHS

ರಾಹುಲ ಗಾಂಧಿ ಕುರಿತು ಆಸಕ್ತಿದಾಯಕ ಸಂಗತಿಗಳು

1991 ರಲ್ಲಿ ಇವರ ತಂದೆ ರಾಜೀವ ಗಾಂಧಿ ಅವರ ಹತ್ಯೆಯ ನಂತರ ಸುರಕ್ಷತಾ ಕಾರಣಗಳಿಗಾಗಿ ಇವರು ಫ್ಲೋರಿಡಾದ ರಾಲಿನ್ಸ್ ಕಾಲೇಜಿಗೆ ಶಿಫ್ಟ್ ಆಗಿ ಅಲ್ಲಿ ಬಿಎ ಪದವಿ ಪಾಸು ಮಾಡಿದರು. ರಾಲಿನ್ಸ್ ಕಾಲೇಜಿನಲ್ಲಿರುವಾಗ ಇವರನ್ನು ರಾಲ್ ವಿನ್ಸಿ ಎಂದೂ ಕರೆಯಲಾಗುತ್ತಿತ್ತು. ಸುರಕ್ಷತಾ ಕಾರಣಗಳಿಗಾಗಿ ಇವರ ನಿಜ ನಾಮಧೇಯವನ್ನು ಮುಚ್ಚಿಟ್ಟು ರಾಲ್ ವಿನ್ಸಿ ಎಂದು ಹೇಳಲಾಗುತ್ತಿತ್ತು.
ರಾಜೀವ ಗಾಂಧಿ ಫೌಂಡೇಶನ್, ಜವಾಹರಲಾಲ ನೆಹರು ಮೆಮೋರಿಯಲ್ ಫಂಡ್, ಸಂಜಯ ಗಾಂಧಿ ಮೆಮೊರಿಯಲ್ ಟ್ರಸ್ಟ್, ರಾಜೀವ ಗಾಂಧಿ ಚಾರಿಟೆಬಲ್ ಟ್ರಸ್ಟ್ ಹಾಗೂ ಇಂದಿರಾ ಗಾಂಧಿ ಮೆಮೊರಿಯಲ್ ಟ್ರಸ್ಟ್ಗಳ ಮೂಲಕ ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದರ ಜೊತೆಗೆ ಕಣ್ಣು ಆರೋಗ್ಯಕ್ಕಾಗಿ ಸೇವೆ ಸಲ್ಲಿಸುವ ಲಾಭರಹಿತ ಸಂಸ್ಥೆಯೊಂದನ್ನು ಉತ್ತರ ಪ್ರದೇಶದಲ್ಲಿ ನಡೆಸುತ್ತಿದ್ದಾರೆ.
2009ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕೇವಲ 6 ವಾರಗಳ ಅವಧಿಯಲ್ಲಿ ಇವರು ದೇಶಾದ್ಯಂತ 125 ಚುನಾವಣಾ ರ್ಯಾಲಿಗಳನ್ನು ನಡೆಸಿದ್ದರು.

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+