Get Updates
Get notified of breaking news, exclusive insights, and must-see stories!

ಅಸಾದುದ್ದೀನ್ ಓವೈಸಿ

ಅಸಾದುದ್ದೀನ್ ಓವೈಸಿ
ಅಸಾದುದ್ದೀನ್ ಓವೈಸಿ ಇವರು ಆಲ್ ಇಂಡಿಯಾ ಮಜ್ಲೀಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಪಕ್ಷದ ಅಧ್ಯಕ್ಷರಾಗಿದ್ದಾರೆ. ಇವರು ಹೈದರಾಬಾದ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದಾರೆ.
By Rashmi | Monday, April 29, 2019, 06:14:14 PM [IST]

ಅಸಾದುದ್ದೀನ್ ಓವೈಸಿ ಜೀವನ ಚರಿತ್ರೆ

ಅಸಾದುದ್ದೀನ್ ಓವೈಸಿ ಇವರು ಆಲ್ ಇಂಡಿಯಾ ಮಜ್ಲೀಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಪಕ್ಷದ ಅಧ್ಯಕ್ಷರಾಗಿದ್ದಾರೆ. ಇವರು ಹೈದರಾಬಾದ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದಾರೆ. ಓಸ್ಮಾನಿಯಾ ವಿಶ್ವವಿದ್ಯಾಲಯದಿಂದ ಪದವಿ ಶಿಕ್ಷಣ ಪೂರೈಸಿದ ನಂತರ ಲಂಡನ್‌ನಲ್ಲಿ ಉನ್ನತ ವಿದ್ಯಾಭ್ಯಾಸ ಕೈಗೊಂಡರು. ಲಂಡನ್‌ನ ಲಿಂಕನ್ ಇನ್‌ನಲ್ಲಿ ಬ್ಯಾಚುಲರ್ ಆಫ್ ಲಾ ಹಾಗೂ ಬ್ಯಾರಿಸ್ಟರ್ ಆಟ್ ಲಾ ಪಡೆದು ವಕೀಲರಾದರು. ನಕೀಬ್-ಎ-ಮಿಲ್ಲತ್ ಕೈದ್ ಎಂದೂ ಕರೆಸಿಕೊಳ್ಳುವ ಇವರು ಅಭಿಮಾನಿ ವಲಯದಲ್ಲಿ ಅಸಾದ್ ಭಾಯಿ ಎಂದು ಹೆಸರಾಗಿದ್ದಾರೆ. ಇವರ ರಾಜಕಾರಣ ಮುಸ್ಲಿಂ ಹಾಗೂ ದಲಿತ ಕೇಂದ್ರಿಕೃತವಾಗಿದೆ. ತಮ್ಮ ವಿವಾದಾಸ್ಪದ ಹೇಳಿಕೆಗಳಿಂದ ಆಗಾಗ ಇವರು ಸುದ್ದಿಯಲ್ಲಿರುತ್ತಾರೆ. ಹೈದರಾಬಾದಿನಲ್ಲಿರುವ ಓವೈಸಿ ಹಾಸ್ಪಿಟಲ್ ಹಾಗೂ ರಿಸರ್ಚ ಸೆಂಟರ್‌ನ ಚೇರಮನ್‌ರಾಗಿದ್ದಾರೆ. ಇವರ ಈ ಆಸ್ಪತ್ರೆಯಲ್ಲಿ ಕಡಿಮೆ ದರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಓವೈಸಿ ಅವರ ಮುತ್ತಜ್ಜನ ಕಾಲದಲ್ಲಿಯೇ ಆಸ್ಪತ್ರೆ ಆರಂಭಿಸಲಾಗಿತ್ತು. ಸರಕಾರಿ ಉದ್ಯೋಗ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದುಳಿದ ಮುಸ್ಲಿಮರಿಗೆ ಮೀಸಲಾತಿಗಾಗಿ ಓವೈಸಿ ಹೋರಾಟ ಮಾಡುತ್ತಲೇ ಬಂದಿದ್ದಾರೆ. ತಾವು ಹಿಂದೂಗಳ ವಿರೋಧಿಯಲ್ಲ, ಆದರೆ ಹಿಂದೂತ್ವ ಮೂಲಭೂತವಾದಕ್ಕೆ ತಮ್ಮ ವಿರೋಧವಿದೆ ಎಂದು ಪ್ರತಿಪಾದಿಸುತ್ತಾರೆ.

ಮತ್ತಷ್ಟು ಓದು

ಅಸಾದುದ್ದೀನ್ ಓವೈಸಿ ವಯಕ್ತಿಕ ಜೀವನ

ಪೂರ್ಣ ಹೆಸರು ಅಸಾದುದ್ದೀನ್ ಓವೈಸಿ
ಜನ್ಮ ದಿನಾಂಕ 13 May 1969 (ವಯಸ್ಸು 56)
ಹುಟ್ಟಿದ ಸ್ಥಳ ಹೈದರಾಬಾದ
ಪಕ್ಷದ ಹೆಸರು All India Majlis-e-ittehadul Muslimoon
ವಿದ್ಯಾರ್ಹತೆ Graduate Professional
ಉದ್ಯೋಗ ನ್ಯಾಯವಾದಿ, ರಾಜಕಾರಣಿ
ತಂದೆಯ ಹೆಸರು ಸುಲ್ತಾನ ಸಲಾಹುದ್ದೀನ್ ಓವೈಸಿ
ತಾಯಿಯ ಹೆಸರು ನಜ್ಮುನ್ನೀಸಾ ಬೇಗಂ
ಅವಲಂಬಿತರ ಹೆಸರು ಫರ್ಹೀಕನ್ ಓವೈಸಿ
ಅವಲಂಬಿತರ ಉದ್ಯೋಗ ಹೌಸವೈಫ್
ಮಕ್ಕಳು 1 ಪುತ್ರ(ರು) 5 ಪುತ್ರಿ(ಯರು)
ಧರ್ಮ ಇಸ್ಲಾಂ
ವೆಬ್‌ಸೈಟ್ http://www.asadowaisi.com/

ಅಸಾದುದ್ದೀನ್ ಓವೈಸಿ ಒಟ್ಟು ಆಸ್ತಿ

ಒಟ್ಟು ಆಸ್ತಿ
₹16.83 CRORE
ಆಸ್ತಿ
₹23.88 CRORE
ಸಾಲಸೋಲ
₹7.05 CRORE

ಅಸಾದುದ್ದೀನ್ ಓವೈಸಿ ಕುರಿತು ಆಸಕ್ತಿದಾಯಕ ಸಂಗತಿಗಳು

ಮಜ್ಲೀಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಎಂದು ಹೆಸರಿದ್ದ ಪಕ್ಷವನ್ನು ಓವೈಸಿಯವರ ಮುತ್ತಜ್ಜ 1957 ರಲ್ಲಿ ಆಲ್ ಇಂಡಿಯಾ ಮಜ್ಲೀಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಎಂದು ಮರುನಾಮಕರಣ ಮಾಡಿದರು. ಇವರ ನಂತರ ಕಾಸೀಮ್ ರಿಜ್ವಿ ಪಕ್ಷದ ಮುಖ್ಯಸ್ಥರಾದರು. ಅಸಾದುದ್ದೀನ್ ಓವೈಸಿ ಓರ್ವ ಕ್ರಿಯಾಶೀಲ ರಾಜಕಾರಣಿಯಾಗಿದ್ದು, ಆಂಧ್ರ ವಿಧಾನ ಸಭೆ (1962) ಹಾಗೂ ಲೋಕಸಭೆಗಳ (1984 ರಿಂದ 2004) ಸದಸ್ಯರಾಗಿ ಚುನಾಯಿತರಾಗಿದ್ದಾರೆ. ಇವರ ಸಹೋದರ ಅಕ್ಬರುದ್ದೀನ್ ಓವೈಸಿ ಆಂಧ್ರ ವಿಧಾನ ಸಭೆಯ ಸದಸ್ಯರಾಗಿದ್ದಾರೆ. ಅಸಾದುದ್ದೀನ್ ಅವರ ಕಿರಿಯ ಸಹೋದರ ಬುರ್ಹಾದನುದ್ದೀನ್ ಓವೈಸಿ ಎಟೆಮಾಡ ಪತ್ರಿಕೆಯ ಸಂಪಾದಕರಾಗಿದ್ದಾರೆ.

ಅಸಾದುದ್ದೀನ್ ಓವೈಸಿ ರಾಜಕೀಯ ಟೈಮ್‌ಲೈನ್

  • 2017: ಗೋವಧೆ ನಿಷೇಧ ಕುರಿತು ಓವೈಸಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು. ಉತ್ತರ ಪ್ರದೇಶ ಹಾಗೂ ಉತ್ತರ ಭಾರತದ ರಾಜ್ಯಗಳಲ್ಲಿ ಪೂಜನೀಯವಾಗುವ ಗೋವು ಈಶಾನ್ಯ ರಾಜ್ಯಗಳಲ್ಲಿ ಹಾಗೂ ಕೇರಳ, ಗೋವಾದಲ್ಲಿ ಹೇಗೆ ಪವಿತ್ರ ಹಾಗೂ ಪೂಜನೀಯವಾಗುವುದಿಲ್ಲ ಎಂದು ಬಿಜೆಪಿ ದ್ವಿಮುಖ ನೀತಿಯನ್ನು ಪ್ರಶ್ನಿಸಿದ್ದರು. ಇವರ ಹೇಳಿಕೆಗೆ ಸೋಶಿಯಲ್ ಮೀಡಿಯಾದಲ್ಲಿ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು.

  • 2016: ಐಸಿಸ್ ಉಗ್ರವಾದಿ ಸಂಘಟನೆಯು ಮುಸ್ಲಿಂ ಸಮಾಜಕ್ಕೆ ಕಂಟಕವಾಗಿದೆ ಹಾಗೂ ಐಸಿಸ್ ಉಗ್ರರು ನರಕದ ನಾಯಿಗಳೆಂದು ಓವೈಸಿ ಟೀಕೆ ಮಾಡಿದ್ದರು. ಅವರ ನಿಲುವಿಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು.
  • 2016: ಐಸಿಸ್ ಉಗ್ರವಾದಿ ಸಂಘಟನೆಯು ಮುಸ್ಲಿಂ ಸಮಾಜಕ್ಕೆ ಕಂಟಕವಾಗಿದೆ ಹಾಗೂ ಐಸಿಸ್ ಉಗ್ರರು ನರಕದ ನಾಯಿಗಳೆಂದು ಓವೈಸಿ ಟೀಕೆ ಮಾಡಿದ್ದರು. ಅವರ ನಿಲುವಿಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು.
  • 2014: ತನ್ನ ಪಕ್ಷದ ಪರವಾಗಿ ಪ್ರಚಾರ ಸಂದರ್ಭದಲ್ಲಿ ಬಿಜೆಪಿಯ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿ ಅವರ ವಿರುದ್ಧ ನಿಂದನಾತ್ಮಕ ಭಾಷಣ ಮಾಡಿದ ಆರೋಪ ಇವರ ವಿರುದ್ಧ ಕೇಳಿ ಬಂದಿತ್ತು. 2014ರಲ್ಲಿ ಹೈದರಾಬಾದ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯ ಡಾ. ಭಗವಂತ ರಾವ್ ಅವರನ್ನು ಸೋಲಿಸಿ 16ನೇ ಲೋಕಸಭೆಯ ಸಂಸದರಾಗಿ ಲೋಕಸಭೆಗೆ ಮರು ಆಯ್ಕೆಯಾದರು.

  • 2013: ಕರ್ನಾಟಕದ ಬೀದರ್‌ನಲ್ಲಿ ಅನುಮತಿ ಇಲ್ಲದೆ ರ್ಯಾಲಿ ಆಯೋಜಿಸಿದ್ದಕ್ಕೆ ಹಾಗೂ ಲೈಸೆನ್ಸ್ ಇಲ್ಲದೆ ಗನ್ ಇಟ್ಟುಕೊಂಡಿರುವ ಆರೋಪದಲ್ಲಿ ಓವೈಸಿಯವರನ್ನು ಬಂಧಿಸಲಾಗಿತ್ತು.
  • 2013: ಕರ್ನಾಟಕದ ಬೀದರ್‌ನಲ್ಲಿ ಅನುಮತಿ ಇಲ್ಲದೆ ರ್ಯಾಲಿ ಆಯೋಜಿಸಿದ್ದಕ್ಕೆ ಹಾಗೂ ಲೈಸೆನ್ಸ್ ಇಲ್ಲದೆ ಗನ್ ಇಟ್ಟುಕೊಂಡಿರುವ ಆರೋಪದಲ್ಲಿ ಓವೈಸಿಯವರನ್ನು ಬಂಧಿಸಲಾಗಿತ್ತು.
  • 2009: ಟಿಡಿಪಿಯ ಜಾಹಿದ್ ಅಲಿ ಖಾನ್ ಅವರನ್ನು ಸೋಲಿಸಿ ಲೋಕಸಭಾ ಸದಸ್ಯರಾಗಿ ಮರು ಆಯ್ಕೆಯಾದರು. ಚುನಾವಣೆಯ ಸಂದರ್ಭದಲ್ಲಿ ಮೊಘಲಿಪುರ ಪ್ರದೇಶದಲ್ಲಿ ಟಿಡಿಪಿಯ ಚುನಾವಣಾ ಏಜೆಂಟ್ ಸೈಯದ್ ಸಲೀಮುದ್ದೀನ್ ಎಂಬುವರನ್ನು ಅಟ್ಟಾಡಿಸಿ ಹೊಡೆದಿದ್ದಕ್ಕೆ ಇವರ ವಿರುದ್ಧ ಪ್ರಕರಣ ದಾಖಲಿಸುವಂತೆ ಚುನಾವಣಾ ಆಯೋಗ ಆದೇಶ ನೀಡಿತ್ತು. ಲೋಕಸಭೆಯ ರಕ್ಷಣಾ ಖಾತೆ ಕಮಿಟಿ ಹಾಗೂ ನೈತಿಕತೆ ಕಮಿಟಿಗಳ ಸದಸ್ಯರಾಗಿ ಸೇವೆ ಸಲ್ಲಿಸಿದರು. ಅಲ್ಲದೆ ಆಲ್ ಇಂಡಿಯಾ ಮಜ್ಲೀಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಪಾರ್ಲಿಮೆಂಟರಿ ಪಕ್ಷದ ನಾಯಕನಾಗಿ ಆಯ್ಕೆಯಾದರು.

  • 2008: ಮುಂಬೈ ಮೇಲಿನ ಭಯೋತ್ಪಾದನಾ ದಾಳಿಯ ನಂತರ ಜಕೀಯುರ್ ರೆಹಮಾನ್ ಲಖ್ವಿ ಹಾಗೂ ಹಫೀಜ ಸಯೀದ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದರು. ದೇಶದ ಶತ್ರುಗಳು ಮುಸ್ಲಿಮರ ಶತ್ರುಗಳೂ ಹೌದು ಎಂದು ಹೇಳಿದ್ದರು.
  • 2008: ಮುಂಬೈ ಮೇಲಿನ ಭಯೋತ್ಪಾದನಾ ದಾಳಿಯ ನಂತರ ಜಕೀಯುರ್ ರೆಹಮಾನ್ ಲಖ್ವಿ ಹಾಗೂ ಹಫೀಜ ಸಯೀದ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದರು. ದೇಶದ ಶತ್ರುಗಳು ಮುಸ್ಲಿಮರ ಶತ್ರುಗಳೂ ಹೌದು ಎಂದು ಹೇಳಿದ್ದರು.
  • 2006: ರಕ್ಷಣಾ ಖಾತೆಯ ಸ್ಥಾಯಿ ಸಮಿತಿ ಸದಸ್ಯರಾಗಿ ಒಂದು ವರ್ಷ ಸೇವೆ ಸಲ್ಲಿಸಿದರು.
  • 2006: ರಕ್ಷಣಾ ಖಾತೆಯ ಸ್ಥಾಯಿ ಸಮಿತಿ ಸದಸ್ಯರಾಗಿ ಒಂದು ವರ್ಷ ಸೇವೆ ಸಲ್ಲಿಸಿದರು.
  • 2005: 2005ರಲ್ಲಿ ಮೇಡಕ್ ಜಿಲ್ಲೆಯ ಕಲೆಕ್ಟರ್ ಅವರ ಮೇಲೆ ಹಲ್ಲೆ ಮಾಡಿದ ಆರೋಪದಲ್ಲಿ ಓವೈಸಿ ಹಾಗೂ ಅವರ ಸಹೋದರ ಅಕ್ಬರುದ್ದೀನ್ ವಿರುದ್ಧ ಪ್ರಕರಣ ದಾಖಲಿಸಲಾಯಿತು.
  • 2005: 2005ರಲ್ಲಿ ಮೇಡಕ್ ಜಿಲ್ಲೆಯ ಕಲೆಕ್ಟರ್ ಅವರ ಮೇಲೆ ಹಲ್ಲೆ ಮಾಡಿದ ಆರೋಪದಲ್ಲಿ ಓವೈಸಿ ಹಾಗೂ ಅವರ ಸಹೋದರ ಅಕ್ಬರುದ್ದೀನ್ ವಿರುದ್ಧ ಪ್ರಕರಣ ದಾಖಲಿಸಲಾಯಿತು.
  • 2004: ಹೈದರಾಬಾದ ಲೋಕಸಭಾ ಕ್ಷೇತ್ರದಲ್ಲಿ ಜಿ. ಸುಭಾಷ ಚಂದರಜಿ ಅವರನ್ನು ಸೋಲಿಸಿ ಸಂಸದರಾಗಿ ಆಯ್ಕೆಯಾದರು. ಲೋಕಸಭೆಯ ಸ್ಥಳೀಯ ಪ್ರದೇಶಾಭಿವೃದ್ಧಿ ಸ್ಕೀಂ ಕಮಿಟಿ ಹಾಗೂ ಸಾಮಾಜಿಕ ಮತ್ತು ಸಬಲೀಕರಣ ಕಮಿಟಿಗಳ ಸದಸ್ಯರಾದರು. 2006ರ ವರೆಗೂ ಈ ಕಮಿಟಿಗಳ ಸದಸ್ಯರಾಗಿ ಸೇವೆ ಸಲ್ಲಿಸಿದರು.

  • 1999: ಟಿಡಿಪಿಯ ಸೈಯದ್ ಶಾ ನೂರುಲ್ ಹಕ್ಕಾದ್ರಿ ಅವರನ್ನು ಸೋಲಿಸಿ ಆಂಧ್ರ ವಿಧಾನ ಸಭೆಯ ಸದಸ್ಯರಾಗಿ ಮರು ಆಯ್ಕೆಯಾದರು.
  • 1999: ಟಿಡಿಪಿಯ ಸೈಯದ್ ಶಾ ನೂರುಲ್ ಹಕ್ಕಾದ್ರಿ ಅವರನ್ನು ಸೋಲಿಸಿ ಆಂಧ್ರ ವಿಧಾನ ಸಭೆಯ ಸದಸ್ಯರಾಗಿ ಮರು ಆಯ್ಕೆಯಾದರು.
  • 1994: ಎಂಬಿಟಿ ಪಕ್ಷದ ಹುಸೇನ್ ಶಾಹಿದ್ ಅವರನ್ನು ಸೋಲಿಸಿ ಚಾರ್ಮಿನಾರ್ ವಿಧಾನ ಸಭಾ ಕ್ಷೇತ್ರದಿಂದ ಗೆಲುವು ಸಾಧಿಸುವ ಮೂಲಕ ರಾಜಕೀಯ ರಂಗಕ್ಕೆ ಪಾದಾರ್ಪಣೆ ಮಾಡಿದರು.
  • 1994: ಎಂಬಿಟಿ ಪಕ್ಷದ ಹುಸೇನ್ ಶಾಹಿದ್ ಅವರನ್ನು ಸೋಲಿಸಿ ಚಾರ್ಮಿನಾರ್ ವಿಧಾನ ಸಭಾ ಕ್ಷೇತ್ರದಿಂದ ಗೆಲುವು ಸಾಧಿಸುವ ಮೂಲಕ ರಾಜಕೀಯ ರಂಗಕ್ಕೆ ಪಾದಾರ್ಪಣೆ ಮಾಡಿದರು.

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+