• search
  • Live TV
ಮುಖ್ಯಪುಟ
 » 
ರಾಜಕಾರಣಿಗಳು
 » 
ಅರವಿಂದ ಕೇಜ್ರಿವಾಲ್

ಅರವಿಂದ ಕೇಜ್ರಿವಾಲ್

ಜೀವನ ಚರಿತ್ರೆ

ಭಾರತ ರಾಜಕಾರಣದಲ್ಲಿ ಪ್ರಮುಖ ಸ್ಥಾನ ಪಡೆದಿರುವ ಅರವಿಂದ ಕೇಜ್ರಿವಾಲ್ ಓರ್ವ ಸಕ್ರಿಯ ಸಾಮಾಜಿಕ ಕಾರ್ಯಕರ್ತರೂ ಆಗಿದ್ದಾರೆ. ಇವರು ಹುಟ್ಟಿದ್ದು ಹರಿಯಾಣದ ಚಿಕ್ಕ ಗ್ರಾಮವೊಂದರಲ್ಲಿ. ಚಿಕ್ಕಂದಿನಿಂದಲೇ ಅತ್ಯಂತ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದ ಅರವಿಂದ, ಪ್ರಥಮ ಪರೀಕ್ಷೆಯಲ್ಲಿಯೇ ಐಐಟಿ ಖರಗಪುರ್ನಲ್ಲ ಸ್ಥಾನ ಪಡೆದು ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದರು. ಪದವಿ ನಂತರ ಟಾಟಾ ಸ್ಟೀಲ್ ಕಂಪನಿಯಲ್ಲಿ ಉದ್ಯೋಗಕ್ಕೆ ಸೇರಿದರಾದರೂ ಸಿವಿಲ್ ಸರ್ವಿಸ್ ಪರೀಕ್ಷೆಗಳಿಗೆ ಕುಳಿತುಕೊಳ್ಳುವ ಸಲುವಾಗಿ ಕೆಲ ಕಾಲದಲ್ಲಿಯೇ ಕೆಲಸ ಬಿಟ್ಟರು. ಸಿವಿಲ್ ಸರ್ವಿಸ್ ಪಾಸು ಮಾಡುವುದು ಅವರ ಬಹುಕಾಲದ ಕನಸಾಗಿತ್ತು. ಕಾಲಿಘಾಟ್ ಆಶ್ರಮದಲ್ಲಿ ಎರಡು ತಿಂಗಳ ಕಾಲ ಮದರ್ ತೆರೇಸಾ ಅವರೊಂದಿಗೆ ಕೆಲಸ ಮಾಡುವ ಅವಕಾಶವೂ ಇವರಿಗೆ ಲಭಿಸಿತ್ತು. 1993 ರಲ್ಲಿ ಸಿವಿಲ್ ಸರ್ವಿಸ್ ಪರೀಕ್ಷೆ ಪಾಸು ಮಾಡಿ ಭಾರತೀಯ ರೆವಿನ್ಯೂ ಸೇವೆ ಸೇರಿದರು. ನಂತರ 1995 ರಲ್ಲಿ ತಮ್ಮ 1993 ರ ಐಆರ್ಎಸ್ ಸಹಪಾಠಿ ಸುನೀತಾ ಅವರನ್ನು ವಿವಾಹವಾದರು.
1999 ರಲ್ಲಿ ಪರಿವರ್ತನ್ ಎಂಬ ಆಂದೋಲನ ಆರಂಭಿಸಿ ದೆಹಲಿಯಲ್ಲಿನ ನಕಲಿ ಪಡಿತರ ಚೀಟಿಯ ಹಗರಣವನ್ನು ಬೆಳಕಿಗೆ ತಂದ ಇವರು ಇದೇ ಕಾರಣದಿಂದ ಬಹು ಬೇಗನೆ ಸಮಾಜದಲ್ಲಿ ಗುರುತಿಸಿಕೊಂಡರು. ಆದಾಯ ತೆರಿಗೆ, ವಿದ್ಯುತ್ ಹಾಗೂ ಪಡಿತರ ಮುಂತಾದ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಸಾಮಾಜಿಕ ಕಾರ್ಯಗಳ ಮೇಲೆ ಹೆಚ್ಚು ಗಮನಹರಿಸುವ ನಿಟ್ಟಿನಲ್ಲಿ 2006 ರಲ್ಲಿ ತಮ್ಮ ಕೆಲಸಕ್ಕೆ ರಾಜಿನಾಮೆ ಸಲ್ಲಿಸಿ ಪಬ್ಲಿಕ್ ಕಾಸ್ ರಿಸರ್ಚ್ ಫೌಂಡೇಶನ್ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದರು.
2010 ರ ದಶಕದ ಆರಂಭದಲ್ಲಿ ಜನ ಲೋಕಪಾಲ್ ಕಾಯ್ದೆ ಜಾರಿಗಾಗಿ ಖ್ಯಾತ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಬೃಹತ್ ಆಂದೋಲನ ಆರಂಭಿಸಿದ್ದರು. ಈ ಹಂತದಲ್ಲಿ ಅಣ್ಣಾ ಅವರೊಂದಿಗೆ ಕೈಜೋಡಿಸಿ ಚಳವಳಿಯಲ್ಲಿ ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡಿದ ಅರವಿಂದ ಕೇಜ್ರಿವಾಲ್ ದೇಶಾದ್ಯಂತ ಜನಪ್ರಿಯತೆ ಗಳಿಸಿಕೊಂಡರು. ಇಂಡಿಯಾ ಅಗೇನ್ಸ್ಟ್ ಕರಪ್ಷನ್ ಚಳವಳಿಯನ್ನು ರಾಜಕೀಯಗೊಳಿಸುವ ವಿಷಯದಲ್ಲಿ ಅಣ್ಣಾ ಹಜಾರೆ ಅವರೊಂದಿಗೆ ಭಿನ್ನಾಭಿಪ್ರಾಯ ಉಂಟಾದ ಕಾರಣದಿಂದಜ್ರಿವಅವರಿಂದ ದೂರವಾದ ಕೇಜ್ರಿವಾಲ್ ಆಮ್ ಆದ್ಮಿ ಪಾರ್ಟಿ ಪಕ್ಷ (ಆಪ್) ಸ್ಥಾಪಿಸಿದರು. 2013 ರಲ್ಲಿ ದೆಹಲಿ ವಿಧಾನ ಸಭಾ ಚುನಾವಣೆಗೆ ಸ್ಪರ್ಧಿಸಿದ ಆಪ್ 70 ಸ್ಥಾನಗಳ ಪೈಕಿ 28 ಸ್ಥಾನಗಳನ್ನು ಗೆದ್ದಿತು. ಕಾಂಗ್ರೆಸ್ನ ಷರತ್ತಿನ ಬೆಂಬಲ ಪಡೆದು ದೆಹಲಿಯಲ್ಲಿ ಸರಕಾರ ರಚಿಸಿದ ಕೇಜ್ರಿವಾಲ್ ದೆಹಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಆದರೆ ಜನಲೋಕಪಾಲ್ ಬಿಲ್ ಜಾರಿ ಮಾಡಲು ಸಾಧ್ಯವಾಗಲಿಲ್ಲ ಎಂಬ ಕಾರಣದಿಂದ ನೈತಿಕ ಹೊಣೆ ಹೊತ್ತು 49 ದಿನಗಳಲ್ಲಿಯೇ ರಾಜಿನಾಮೆ ನೀಡಿದರು.
ಈ ಸಂದರ್ಭದಲ್ಲಿ ದೆಹಲಿಯಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾಯಿತು. ನಂತರ 16ನೇ ಲೋಕಸಭೆಯ ಚುನಾವಣೆಯಲ್ಲಿ ವಾರಣಾಸಿ ಕ್ಷೇತ್ರದಿಂದ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸಿ ಸೋತರು. ನಂತರ 2015 ರಲ್ಲಿ ದೆಹಲಿ ವಿಧಾನ ಸಭಾ ಚುನಾವಣೆಯಲ್ಲಿ ಆಪ್ 70 ಸ್ಥಾನಗಳ ಪೈಕಿ 67 ಸ್ಥಾನಗಳನ್ನು ಗೆದ್ದು ಪ್ರಚಂಡ ಬಹುಮತ ಗಳಿಸಿತು. ಕೇಜ್ರಿವಾಲ್ ದೆಹಲಿಯ 7ನೇ ಮುಖ್ಯಮಂತ್ರಿಯಾಗಿ ಮತ್ತೊಮ್ಮೆ ಅಧಿಕಾರಕ್ಕೇರಿದರು.
ತಮ್ಮ ವಿಶಿಷ್ಟ ಸಿದ್ಧಾಂತ ಹಾಗೂ ಜನಪರ ನಿಲುವುಗಳ ಕಾರಣದಿಂದ ಕೇಜ್ರಿವಾಲ್ ವಿಭಿನ್ನ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದಾರೆ.

ವಯಕ್ತಿಕ ಜೀವನ

ಪೂರ್ಣ ಹೆಸರು ಅರವಿಂದ ಕೇಜ್ರಿವಾಲ್
ಜನ್ಮ ದಿನಾಂಕ 16 Aug 1968 (ವಯಸ್ಸು 54)
ಹುಟ್ಟಿದ ಸ್ಥಳ ಸಿವಾನಿ, ಭಿವಾನಿ ಜಿಲ್ಲೆ, ಹರಿಯಾಣ
ಪಕ್ಷದ ಹೆಸರು Aam Aadmi Party
ವಿದ್ಯಾರ್ಹತೆ Graduate Professional
ಉದ್ಯೋಗ ಕಾರ್ಯಕರ್ತ, ರಾಜಕಾರಣಿ
ತಂದೆಯ ಹೆಸರು ಗೋಬಿಂದ್ ರಾಮ ಕೇಜ್ರಿವಾಲ್
ತಾಯಿಯ ಹೆಸರು ಗೀತಾ ದೇವಿ
ಅವಲಂಬಿತರ ಹೆಸರು ಸುನೀತಾ ಕೇಜ್ರಿವಾಲ್
ಅವಲಂಬಿತರ ಉದ್ಯೋಗ ಐಆರ್ಎಸ್ ಅಧಿಕಾರಿ
ಮಕ್ಕಳು 1 ಪುತ್ರ(ರು) 1 ಪುತ್ರಿ(ಯರು)

ವಿಳಾಸ

ಖಾಯಂ ವಿಳಾಸ 87 ಬ್ಲಾಕ್, ಬಿ.ಕೆ. ದತ್ತ ಕಾಲನಿ, ಹೊಸದಿಲ್ಲಿ - 110001
ಪ್ರಸ್ತುತ ವಿಳಾಸ ಬಂಗಲೆ ನಂ.6, ಫ್ಲ್ಯಾಗ್ ಸ್ಟಾಫ್ ರೋಡ, ಸಿವಿಲ್ ಲೈನ್ಸ್, ದೆಹಲಿ.
ಸಂಪರ್ಕ ಸಂಖ್ಯೆ 9911576726
ಈ ಮೇಲ್ parivartanindia@gmail.com
ವೆಬ್‌ಸೈಟ್ http://aamaadmiparty.org/
ಸಾಮಾಜಿಕ ಜಾಲತಾಣದ ವಿಳಾಸ

ಆಸಕ್ತಿಕರ ಅಂಶಗಳು

ಸರಳ ಜೀವನದಲ್ಲಿ ನಂಬಿಕೆ ಇಟ್ಟಿರುವ ಕೇಜ್ರಿವಾಲ್ ಸಸ್ಯಾಹಾರವನ್ನು ಇಷ್ಟಪಡುತ್ತಾರೆ. ಯಾವಾಗಲೂ ಹೊಸದನ್ನು ಕಲಿಯುತ್ತಲೇ ಇರುವ ಇವರು ಬಾಲಿವುಡ್ ಸ್ಟಾರ್ ಅಮೀರ ಖಾನ್ ಅವರ ಅಭಿಮಾನಿ. ಹಾಸ್ಯ ಚಲನಚಿತ್ರಗಳನ್ನು ಇಷ್ಟಪಡುವ ಇವರು ತಮ್ಮ ಎಲ್ಲ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಾರೆ. ಕಚೇರಿಯಲ್ಲಿ ಕೂಡ ಇವರು ಸಹಾಯಕರನ್ನು ನೇಮಿಸಿಕೊಂಡಿಲ್ಲ. ತಮ್ಮ ಅಥವಾ ತಮ್ಮ ಮಕ್ಕಳ ಹುಟ್ಟುಹಬ್ಬಗಳನ್ನು ಅದ್ದೂರಿಯಾಗಿ ಆಚರಣೆ ಮಾಡುವುದು ಇವರಿಗೆ ಇಷ್ಟವಿಲ್ಲ.

ಇವರಿಗೆ ಸಂದ ಪ್ರಶಸ್ತಿ, ಸನ್ಮಾನಗಳ ಪಟ್ಟಿ ಇಂತಿದೆ:
2004: ಶ್ರೇಷ್ಠ ನಾಗರಿಕ ಸೇವೆಗಾಗಿ ಅಶೋಕಾ ಫೆಲೋ ಪ್ರಶಸ್ತಿ
2005: ಆಡಳಿತದಲ್ಲಿ ಪಾರದರ್ಶಕತೆ ತಂದ ಕಾರಣಕ್ಕಾಗಿ ಐಐಟಿ ಕಾನ್ಪುರದ ಸತ್ಯೇಂದ್ರ ಕೆ. ದುಬೆ ಮೆಮೋರಿಯಲ್ ಪ್ರಶಸ್ತಿ.
2006: ಶ್ರೇಷ್ಠ ನಾಯಕತ್ವಕ್ಕಾಗಿ ರಾಮೋನ್ ಮ್ಯಾಗ್ಸೆಸೆ ಪ್ರಶಸ್ತಿ.
2006: ಸಿಎನ್ಎನ್ ಐಬಿಎನ್ ಇಂಡಿಯನ್ ಆಫ್ ದಿ ಇಯರ್ ಇನ್ ಪಬ್ಲಿಕ್ ಸರ್ವಿಸ್.
2009: ಉತ್ತಮ ನಾಯಕತ್ವಕ್ಕಾಗಿ ಐಐಟಿ ಖರಗಪುರ್ನಿಂದ ವಿಶಿಷ್ಟ ಹಳೆಯ ವಿದ್ಯಾರ್ಥಿ ಪ್ರಶಸ್ತಿ.
2009: ಅಸೋಸಿಯೇಶನ್ ಆಫ್ ಇಂಡಿಯಾಸ್ ಡೆವಲಪಮೆಂಟ್ನಿಂದ ಅನುದಾನ ಹಾಗೂ ಫೆಲೊಶಿಪ್.
2010: ಎಕನಾಮಿಕ್ ಟೈಮ್ಸ್ನ ಪಾಲಿಸಿ ಚೇಂಜ್ ಏಜೆಂಟ್ ಪ್ರಶಸ್ತಿ.
ಒಟ್ಟು ಆಸ್ತಿ1.69 CRORE
ಆಸ್ತಿ2.1 CRORE
ಸಾಲಸೋಲ41 LAKHS

Disclaimer: The information relating to the candidate is an archive based on the self-declared affidavit filed at the time of elections. The current status may be different. For the latest on the candidate kindly refer to the affidavit filed by the candidate with the Election Commission of India in the recent election.

ಆಲ್ಬಂ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X