ಸೋನಿಯಾ ಗಾಂಧಿಯವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಮಾಜಿ ಅಧ್ಯಕ್ಷರು. ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಯುನೈಟೆಡ್ ಪ್ರೊಗ್ರೆಸಿವ್ ಅಲಯನ್ಸ್ (ಯುಪಿಎ) ಇದರ ಸಮನ್ವಯ ಸಮಿತಿಯ ಅಧ್ಯಕ್ಷೆಯಾಗಿದ್ದರು. ಸೋನಿಯಾ 1946ರ ಡಿಸೆಂಬರ್ 9 ರಂದು ಇಟಲಿಯಲ್ಲಿ ಜನಿಸಿದರು. ತಮ್ಮ ಮೂಲ ಶಿಕ್ಷಣದ ನಂತರ ಇವರು ವಿದೇಶಿ ಭಾಷೆಗಳ ಶಿಕ್ಷಣ ಸಂಸ್ಥೆಗೆ ಸೇರಿ ಇಂಗ್ಲಿಷ್, ಫ್ರೆಂಚ್ ಹಾಗೂ ರಶಿಯನ್ ಭಾಷೆಗಳನ್ನು ಕಲಿತರು. ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಕೋರ್ಸ್ ಕಲಿಯುತ್ತಿರುವಾಗ ಇವರು ರಾಜೀವ ಗಾಂಧಿಯವರನ್ನು ಭೇಟಿಯಾದರು. ನಂತರ ಇವರಿಬ್ಬರೂ 1968 ರಲ್ಲಿ ಹೊಸದಿಲ್ಲಿಯಲ್ಲಿ ವಿವಾಹವಾದರು. ಇವರಿಗೆ ರಾಹುಲ ಹಾಗೂ ಪ್ರಿಯಾಂಕಾ ಎಂಬ ಮಕ್ಕಳು ಹಾಗೂ ಇಬ್ಬರು ಮೊಮ್ಮಕ್ಕಳು ಇದ್ದಾರೆ. ಸೋನಿಯಾ ತಮ್ಮ ಬಹುತೇಕ ವೈವಾಹಿಕ ಜೀವನವನ್ನು ಮನೆಯ ವ್ಯವಹಾರ ನೋಡಿಕೊಳ್ಳುತ್ತ ಒಬ್ಬ ಸಾಮಾನ್ಯ ಗೃಹಿಣಿಯಾಗಿಯೇ ಕಳೆದರು. ಆಗ ಪ್ರಧಾನಿಯಾಗಿದ್ದ ತಮ್ಮ ಅತ್ತೆ ಇಂದಿರಾ ಗಾಂಧಿಯವರ ಅನೇಕ ಕಚೇರಿ ಕೆಲಸಗಳಲ್ಲಿ ಇವರು ಸಹಾಯ ಮಾಡುತ್ತ ಅವರಿಗೆ ಬೆಂಬಲವಾಗಿದ್ದರು. 1984 ರಿಂದ 1991 ರ ಅವಧಿಯಲ್ಲಿ ಪತಿ ರಾಜೀವ ಗಾಂಧಿಯವರು ಪ್ರಧಾನಿಯಾಗಿದ್ದಾಗ ಹಾಗೂ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನಾಗಿದ್ದಾಗ ಯಾವಾಗಲಾದರೊಮ್ಮೆ ಇವರು ಪತಿಯೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದರು. ವಿರಳವಾಗಿ ಅವರೊಂದಿಗೆ ವಿದೇಶಗಳಿಗೆ ಹೋಗುತ್ತಿದ್ದರು. ಇದೇ ಸಮಯದಲ್ಲಿ ಪತಿಯ ಅಮೇಥಿ ಕ್ಷೇತ್ರದಲ್ಲಿ ನಡೆಯುತ್ತಿದ್ದ ಆರೋಗ್ಯ ಶಿಬಿರಗಳು ಹಾಗೂ ಇನ್ನಿತರ ಸಮಾಜ ಕಲ್ಯಾಣ ಕೆಲಸಗಳ ಉಸ್ತುವಾರಿಯನ್ನು ಸಹ ಇವರು ನೋಡಿಕೊಳ್ಳುತ್ತಿದ್ದರು.
1991 ರ ಮೇ ತಿಂಗಳಲ್ಲಿ ಪತಿ ರಾಜೀವ ಗಾಂಧಿಯವರ ಹತ್ಯೆಯ ನಂತರ ಲಾಭರಹಿತ ರಹಿತ ರಾಜೀವ ಗಾಂಧಿ ಫೌಂಡೇಶನ್ ಹಾಗೂ ಇದಕ್ಕೆ ಸಂಬಂಧಿಸಿದಂತೆ ಬುದ್ಧಿಜೀವಿಗಳ ರಾಜೀವ ಗಾಂಧಿ ಇನಸ್ಟಿಟ್ಯೂಟ್ ಆಫ್ ಕಂಟೆಂಪೊರರಿ ಸ್ಟಡೀಸ್ ಸಂಸ್ಥೆಯನ್ನು ಹುಟ್ಟು ಹಾಕಿದರು. ಈ ಸಂಘಟನೆಗಳ ಮುಖ್ಯಸ್ಥೆಯಾಗಿ ಪತಿ ರಾಜೀವ ಗಾಂಧಿಯವರು ಆದರ್ಶಗಳನ್ನು ಸಮಾಜದಲ್ಲಿ ಜಾರಿಗೆ ತರಲು ಪ್ರಯತ್ನಿಸಿದರು. ಸೋನಿಯಾ ಇನ್ನೂ ಹಲವಾರು ಎನ್ಜಿಓ ಸಂಸ್ಥೆಗಳನ್ನು ನಡೆಸುತ್ತಾರೆ.
1998ರ ಲೋಕಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರ ಒತ್ತಾಯಕ್ಕೆ ಮಣಿದು ಇವರು ಸಾರ್ವಜನಿಕ ಜೀವನ ಪ್ರವೇಶಿಸಿದರು. ನಂತರ ಪಕ್ಷಕ್ಕಾಗಿ ಹಗಲಿರುಳು ಚುನಾವಣಾ ಪ್ರಚಾರ ನಡೆಸಿ ಇವರು 1998ರ ಏಪ್ರಿಲ್ನಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದರು.
1999ರಲ್ಲಿ ಅಮೇಥಿ ವಿಧಾನಸಭಾ ಕ್ಷೇತ್ರದಿಂದ ಪ್ರಥಮ ಬಾರಿಗೆ ಚುನಾವಣೆಗೆ ಸ್ಪರ್ಧಿಸಿ ಜಯಶಾಲಿಯಾದ ಸೋನಿಯಾ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾದರು. 2004 ರ ಸಾರ್ವತ್ರಿಕ ಚುನಾವಣೆಗಳಲ್ಲಿ ಇವರು ನಡೆಸಿದ ಪ್ರಚಾರದಿಂದ ಕಾಂಗ್ರೆಸ್ ಅತ್ಯಧಿಕ ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಯಿತು. ಹೀಗಾಗಿ ಕಾಂಗ್ರೆಸ್ ಪಕ್ಷವು ಕೇಂದ್ರದಲ್ಲಿ ಯುಪಿಎ ಸರಕಾರ ರಚಿಸಲು ಸಾಧ್ಯವಾಯಿತು. ಈ ಚುನಾವಣೆಯಲ್ಲಿ ಸೋನಿಯಾ ರಾಯಬರೇಲಿ ಕ್ಷೇತ್ರದಿಂದ ಸಂಸದೆಯಾಗಿ ಚುನಾಯಿತರಾಗಿದ್ದರು.
ಕಾಂಗ್ರೆಸ್ ಪಕ್ಷವು ಲೋಕಸಭೆಯಲ್ಲಿ ಅವರನ್ನು ಒಮ್ಮತದಿಂದ ಲೋಕಸಭಾ ನಾಯಕಿಯನ್ನಾಗಿ ಆಯ್ಕೆ ಮಾಡಿದ್ದರಿಂದ ಇವರೇ ಪ್ರಧಾನಿಯಾಗಬೇಕೆಂಬ ಬೇಡಿಕೆ ಇತ್ತು. ಆದರೆ ಈ ಬೇಡಿಕೆಯನ್ನು ಒಪ್ಪದ ಸೋನಿಯಾ ಮನಮೋಹನ ಸಿಂಗ್ ಅವರನ್ನು ಪ್ರಧಾನಿಯಾಗಿ ಮಾಡಿದರು. ಯುಪಿಎ ಅಧ್ಯಕ್ಷೆಯಾಗಿ ಹಾಗೂ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕಿಯಾಗಿ ಅವರು ಕೆಲಸ ಮಾಡಿದರು.
ಸಾಮಾಜಿಕ ಹಾಗೂ ಆರ್ಥಿಕ ನೀತಿ ನಿಯಮಾವಳಿಗಳನ್ನು ರೂಪಿಸುವಲ್ಲಿ ಸರಕಾರಕ್ಕೆ ಮಹತ್ವದ ನಿರ್ದೇಶನಗಳನ್ನು ನೀಡುವ ನ್ಯಾಷನಲ್ ಅಡ್ವೈಸರಿ ಕೌನ್ಸಿಲ್ ಅಧ್ಯಕ್ಷೆಯಾಗಿ ಮೇ 2006 ರವರೆಗೆ ಕಾರ್ಯನಿರ್ವಹಿಸಿದರು. ಇವರ ಕಾರ್ಯಾವಧಿಯಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಮಾಹಿತಿ ಹಕ್ಕು ಕಾಯ್ದೆ, ರಾಷ್ಟ್ರೀಯ ಗ್ರಾಮೀನ ಆರೋಗ್ಯ ಮಿಷನ್, ಮಧ್ಯಾಹ್ನ ಆಹಾರ ಯೋಜನೆ, ಜವಾಹರಲಾಲ ನೆಹರು ಅರ್ಬನ್ ರಿನೀವಲ್ ಮಿಷನ್ ಮತ್ತು ನ್ಯಾಷನಲ್ ರಿಹ್ಯಾಬಿಲಿಟೇಷನ್ ಪಾಲಿಸಿ ಮುಂತಾದ ಅತಿ ಪ್ರಮುಖ ಯೋಜನೆಗಳ ಕುರಿತಾಗಿ ನ್ಯಾಷನಲ್ ಅಡ್ವೈಸರಿ ಕೌನ್ಸಿಲ್ ನೀಡಿತ್ತು.
| ಪೂರ್ಣ ಹೆಸರು | ಸೋನಿಯಾ ಗಾಂಧಿ |
| ಜನ್ಮ ದಿನಾಂಕ | 09 Dec 1946 (ವಯಸ್ಸು 79) |
| ಹುಟ್ಟಿದ ಸ್ಥಳ | ವಿಸೆಂಜಾ, ಇಟಲಿ |
| ಪಕ್ಷದ ಹೆಸರು | Indian National Congress |
| ವಿದ್ಯಾರ್ಹತೆ | Others |
| ಉದ್ಯೋಗ | ರಾಜಕಾರಣಿ |
| ತಂದೆಯ ಹೆಸರು | ಸ್ಟೆಫಾನೊ ಮೈನೊ |
| ತಾಯಿಯ ಹೆಸರು | ಪಾವೊಲಾ ಮೈನೊ |
| ಅವಲಂಬಿತರ ಹೆಸರು | ದಿವಂಗತ ಶ್ರೀ ರಾಜೀವ ಗಾಂಧಿ |
| ಅವಲಂಬಿತರ ಉದ್ಯೋಗ | ಮಾಜಿ ಪ್ರಧಾನ ಮಂತ್ರಿಗಳು |
| ಮಕ್ಕಳು | 1 ಪುತ್ರ(ರು) 1 ಪುತ್ರಿ(ಯರು) |
| ಧರ್ಮ | ಹಿಂದು |
Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.