ಮುಖ್ಯಪುಟ
 » 
ಅಮಿತ್ ಶಾ

ಅಮಿತ್ ಶಾ

ಅಮಿತ್ ಶಾ

2019ರ ಲೋಕಸಭೆ ಚುನಾವಣೆಯಲ್ಲಿ ಗುಜರಾತ್‌ನ ಗಾಂಧಿ ನಗರ ಕ್ಷೇತ್ರದಿಂದ ಜಯಗಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಗೃಹ ಸಚಿವರು.

ಅಮಿತ್ ಶಾ ಜೀವನ ಚರಿತ್ರೆ

2019ರ ಲೋಕಸಭೆ ಚುನಾವಣೆಯಲ್ಲಿ ಗುಜರಾತ್‌ನ ಗಾಂಧಿ ನಗರ ಕ್ಷೇತ್ರದಿಂದ ಜಯಗಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಗೃಹ ಸಚಿವರು. ಗೃಹ ಸಚಿವರಾದ ಬಳಿಕ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 2014 ರಲ್ಲಿ ಬಿಜೆಪಿಯ ಅಭೂತಪೂರ್ವ ಯಶಸ್ಸಿಗೆ ಅಮಿತ್ ಅವರೇ ಕಾರಣರೆಂದು ಹೇಳಲಾಗುತ್ತದೆ. ಉತ್ತರ ಪ್ರದೇಶ, ಗುಜರಾತ್ ಹಾಗೂ ಉತ್ತರಾಖಂಡ್ ರಾಜ್ಯಗಳಲ್ಲಿ ಬಿಜೆಪಿ ಗೆಲುವಿಗೆ ಇವರ ರಣತಂತ್ರಗಳೇ ಕಾರಣ ಎಂಬ ಮಾತುಗಳಿವೆ. ಗುಜರಾತ್ ವಿಧಾನಸಭೆಗೆ ಎರಡು ಬಾರಿ ಶಾಸಕ ಆಯ್ಕೆಯಾಗಿದ್ದ ಅಮಿತ್ ಶಾ ನರೇಂದ್ರ ಮೋದಿ ಅವರ ಅತಿ ನಂಬಿಕಸ್ಥರಲ್ಲಿ ಒಬ್ಬರು. ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅಮಿತ್ ಶಾ ರಾಜ್ಯದ ಗೃಹ ಸಚಿವರಾಗಿದ್ದರು. ಪಿವಿಸಿ ಪೈಪುಗಳ ಬೃಹತ್ ಉದ್ಯಮದ ಒಡೆಯರಾಗಿರುವ ಶಾ, ಅಹಮದಾಬಾದ್‌ನಲ್ಲಿ ತಮ್ಮ ಕಾಲೇಜು ದಿನಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಾದರು. ಸಂಘದ ನಿಕಟ ಒಡನಾಟದ ಕಾರಣದಿಂದ 1982 ರಲ್ಲಿ ಇವರು ನರೇಂದ್ರ ಮೋದಿಯವರ ಸಂಪರ್ಕಕ್ಕೆ ಬಂದರು. ಸಂಘ ಪರಿವಾರದ ವಿದ್ಯಾರ್ಥಿ ಘಟಕದ ನಾಯಕನಾಗಿ ರಾಜಕೀಯ ಆರಂಭಿಸಿದ ಶಾ 1986 ರಲ್ಲಿ ಬಿಜೆಪಿ ಸೇರಿದರು. ನಂತರ ಬಿಜೆಪಿಯ ಏಳಿಗೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಪಕ್ಷದಲ್ಲಿ ಅತ್ಯಂತ ಪ್ರಭಾವಶಾಲಿ ವ್ಯಕ್ತಿಯಾದರು.

ಮತ್ತಷ್ಟು ಓದು
By Zainab Ashraf Updated: Sunday, January 31, 2021, 12:47:32 PM [IST]

ಅಮಿತ್ ಶಾ ವಯಕ್ತಿಕ ಜೀವನ

ಪೂರ್ಣ ಹೆಸರು ಅಮಿತ್ ಶಾ
ಜನ್ಮ ದಿನಾಂಕ 22 Oct 1964 (ವಯಸ್ಸು 59)
ಹುಟ್ಟಿದ ಸ್ಥಳ ಮುಂಬೈ, ಮಹಾರಾಷ್ಟ್ರ
ಪಕ್ಷದ ಹೆಸರು Bharatiya Janta Party
ವಿದ್ಯಾರ್ಹತೆ NULL
ಉದ್ಯೋಗ ಕೃಷಿಕ, ಸಾಮಾಜಿಕ ಹಾಗೂ ರಾಜಕೀಯ ಕಾರ್ಯಕರ್ತ
ತಂದೆಯ ಹೆಸರು ಅಮಿತ್ ಅನಿಲ ಚಂದ್ರ ಶಾ
ತಾಯಿಯ ಹೆಸರು ಶ್ರೀಮತಿ ಕುಸುಮ ಬೆನ್ ಶಾ
ಧರ್ಮ ಹಿಂದು
ವೆಬ್‌ಸೈಟ್ http://amitshah.co.in
ಸಾಮಾಜಿಕ ಜಾಲತಾಣದ ವಿಳಾಸ ಸಾಮಾಜಿಕ ಜಾಲತಾಣದ ವಿಳಾಸ:

ಅಮಿತ್ ಶಾ ಒಟ್ಟು ಆಸ್ತಿ

ಒಟ್ಟು ಆಸ್ತಿ: ₹39.85 CRORE
ಆಸ್ತಿ:₹40.33 CRORE
ಸಾಲಸೋಲ: ₹47.7 LAKHS

ಅಮಿತ್ ಶಾ ಕುರಿತು ಆಸಕ್ತಿದಾಯಕ ಸಂಗತಿಗಳು

ಶಾ ಅವರಿಗೆ ಆಟೋಟಗಳಲ್ಲಿ ತುಂಬಾ ಆಸಕ್ತಿ. 2006 ರಲ್ಲಿ ಗುಜರಾತ್ ಚೆಸ್ ಅಸೋಸಿಯೇಶನ್ ಅಧ್ಯಕ್ಷ, 2009 ರಲ್ಲಿ ಸೆಂಟ್ರಲ್ ಬೋರ್ಡ ಆಫ್ ಕ್ರಿಕೆಟ್ ಅಸೋಸಿಯೇಶನ್, 2014 ರಲ್ಲಿ ಗುಜರಾತ್ ಸ್ಟೇಟ್ ಕ್ರಿಕೆಟ್ ಅಸೋಸಿಯೇಶನ್ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. 2009 ರಲ್ಲಿ ಗುಜರಾತ್ ಸ್ಟೇಟ್ ಕ್ರಿಕೆಟ್ ಅಸೋಸಿಯೇಶನ್ ಉಪಾಧ್ಯಕ್ಷರಾಗಿದ್ದರು. ಗುಜರಾತ್ ಸ್ಟೇಟ್ ಚೆಸ್ ಅಸೋಸಿಯೇಶನ್ ಅಧ್ಯಕ್ಷರಾಗಿದ್ದಾಗ, ಅಹ್ಮದಾಬಾದಿನ ಸರಕಾರಿ ಶಾಲೆಗಳಲ್ಲಿ ಚೆಸ್ ಆಟವನ್ನು ಪ್ರಾಯೋಗಿಕವಾಗಿ ಜಾರಿಗೆ ತಂದರು. ತಮ್ಮ ಶಾಲಾ ದಿನಗಳಲ್ಲಿ ಹಲವಾರು ವೇದಿಕೆ ಕಾರ್ಯಕ್ರಮಗಳಲ್ಲಿ ಇವರು ಭಾಗವಹಿಸಿದ್ದರು.

ಅಮಿತ್ ಶಾ ಸಾಧನೆಗಳು

ಮೊದಲಿಗೆ ಬಿಜೆಪಿಯ ತರಬೇತಿ ಶಿಬಿರಗಳಲ್ಲಿ 3500 ರಷ್ಟು ಜನ ಭಾಗವಹಿಸುತ್ತಿದ್ದರು. ಆದರೆ ಅಮಿತ್ ಶಾ ಉಸ್ತುವಾರಿ ಪಡೆದುಕೊಂಡ ನಂತರ 2015 ರಲ್ಲಿ 7 ಲಕ್ಷ 25 ಸಾವಿರಕ್ಕೂ ಅಧಿಕ ಜನ ತರಬೇತಿ ಶಿಬಿರಗಳಲ್ಲಿ ಭಾಗವಹಿಸಿದರು. ಶಾ ಅವರ ಮುಂದಾಳತ್ವದಲ್ಲಿ ಬಿಜೆಪಿಯ ಸದಸ್ಯತ್ವ ಸಂಖ್ಯೆ 3 ಕೋಟಿಯಿಂದ 11 ಕೋಟಿಗೆ ಏರಿದ್ದು ಅಸಾಮಾನ್ಯ ಸಾಧನೆಯಾಗಿದೆ.

Disclaimer: The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X