Get Updates
Get notified of breaking news, exclusive insights, and must-see stories!

ಸುಬ್ರಮಣಿಯನ್ ಸ್ವಾಮಿ

ಸುಬ್ರಮಣಿಯನ್ ಸ್ವಾಮಿ
ಡಾ. ಸುಬ್ರಮಣಿಯನ್ ಸ್ವಾಮಿ ಭಾರತದ ಆರ್ಥಿಕ ತಜ್ಞ, ಅಂಕಿ-ಸಂಖ್ಯೆ ಶಾಸ್ತ್ರಜ್ಞ ಮತ್ತು ರಾಜಕಾರಣಿ.
By Moumi Majumdar | Monday, February 8, 2021, 12:46:20 PM [IST]

ಸುಬ್ರಮಣಿಯನ್ ಸ್ವಾಮಿ ಜೀವನ ಚರಿತ್ರೆ

ಡಾ. ಸುಬ್ರಮಣಿಯನ್ ಸ್ವಾಮಿ ಭಾರತದ ಆರ್ಥಿಕ ತಜ್ಞ, ಅಂಕಿ-ಸಂಖ್ಯೆ ಶಾಸ್ತ್ರಜ್ಞ ಮತ್ತು ರಾಜಕಾರಣಿ. ಇವರು ರಾಜ್ಯಸಭೆ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಮಾಜಿ ಪ್ರಧಾನಿ ಚಂದ್ರಶೇಖರ್ ಅವರ ಅವಧಿಯಲ್ಲಿ ಕ್ಯಾಬಿನೆಟ್ ಸಚಿವರಾಗಿ, ಯೋಜನಾ ಆಯೋಗದ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಸ್ವಾಮಿ ಜನತಾ ಪಕ್ಷದ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದು, 1990ರಿಂದ 2013ರವರೆಗೆ ಅಧ್ಯಕ್ಷರಾಗಿದ್ದರು. ನಂತರದಲ್ಲಿ ಈ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಿದರು. 1974 ರಿಂದ 1999 ರ ಅವಧಿಯಲ್ಲಿ ಲೋಕಸಭೆಗೆ ಐದು ಬಾರಿ ಚುನಾಯಿತರಾಗಿದ್ದರು.

ಮತ್ತಷ್ಟು ಓದು

ಸುಬ್ರಮಣಿಯನ್ ಸ್ವಾಮಿ ವಯಕ್ತಿಕ ಜೀವನ

ಪೂರ್ಣ ಹೆಸರು ಸುಬ್ರಮಣಿಯನ್ ಸ್ವಾಮಿ
ಜನ್ಮ ದಿನಾಂಕ 15 Sep 1939 (ವಯಸ್ಸು 86)
ಹುಟ್ಟಿದ ಸ್ಥಳ ಮೈಲಾಪೋರ್ ಚೆನೈ (ತಮಿಳನಾಡು)
ಪಕ್ಷದ ಹೆಸರು Bharatiya Janta Party
ವಿದ್ಯಾರ್ಹತೆ Doctorate
ಉದ್ಯೋಗ ಪ್ರೊಫೆಸರ್, ಶಿಕ್ಷಣ ತಜ್ಞ, ಆರ್ಥಿಕ ತಜ್ಞ
ತಂದೆಯ ಹೆಸರು ಸೀತಾರಾಮ ಸುಬ್ರಮಣಿಯನ್
ತಾಯಿಯ ಹೆಸರು ಪದ್ಮಾವತಿ
ಅವಲಂಬಿತರ ಹೆಸರು ರೋಕ್ಸಾನಾ
ಅವಲಂಬಿತರ ಉದ್ಯೋಗ ವಕೀಲರು, ಗೃಹಿಣಿ
ಮಕ್ಕಳು 2 ಪುತ್ರಿ(ಯರು)
ಧರ್ಮ ಹಿಂದು
ವೆಬ್‌ಸೈಟ್ NIL

ಸುಬ್ರಮಣಿಯನ್ ಸ್ವಾಮಿ ಒಟ್ಟು ಆಸ್ತಿ

ಒಟ್ಟು ಆಸ್ತಿ
₹1.75 CRORE
ಆಸ್ತಿ
₹1.75 CRORE
ಸಾಲಸೋಲ
N/A

ಸುಬ್ರಮಣಿಯನ್ ಸ್ವಾಮಿ ಕುರಿತು ಆಸಕ್ತಿದಾಯಕ ಸಂಗತಿಗಳು

ಕಾಂಗ್ರೆಸ್ ಸರ್ಕಾರದ 2ಜಿ ತರಂಗಾಂತರ ಹಗರಣ ಸೇರಿದಂತೆ ಹಲವು ಹಗರಣಗಳು ಬೆಳಕಿಗೆ ತರುವಲ್ಲಿ ಸುಬ್ರಮಣಿಯನ್ ಸ್ವಾಮಿ ಪ್ರಮುಖ ಪಾತ್ರ ವಹಿಸಿದರು. ಪ್ರಪಂಚದಾದ್ಯಂತ ಕಠಿಣ ಭಾಷೆಗಳಲ್ಲಿ ಒಂದಾಗಿರುವ ಚೀನಿ ಭಾಷೆಯನ್ನು 1 ವರ್ಷದೊಳಗೆ ಕಲಿತು ತೋರಿಸುವಂತೆ ಇವರಿಗೆ ಸವಾಲು ಹಾಕಲಾಗಿತ್ತು. ಇದನ್ನು ಸ್ವೀಕರಿಸಿದ ಸುಮ್ರಮಣಿಯನ್ ಸ್ವಾಮಿ ಕೇವಲ 3 ತಿಂಗಳಲ್ಲಿ ಅದನ್ನು ಕರಗತ ಮಾಡಿಕೊಂಡು ತೋರಿಸುವ ಮೂಲಕ ಸವಾಲನ್ನು ಮೆಟ್ಟಿದರು. ಭಾರತೀಯ ಮುಸ್ಲೀಮರು ಹಿಂದು ವಂಶಕ್ಕೆ ಸೇರಿದವರು ಎಂದು ಒಪ್ಪಿಕೊಳ್ಳುವವರೆಗೂ ಅವರ ಮತದಾನ ಹಕ್ಕನ್ನು ಕಸಿದುಕೊಳ್ಳುವಂತೆ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರದ ಮುಂದಿಟ್ಟಿದ್ದರು. ಇದೇ ಕಾರಣಕ್ಕಾಗಿ ಹಾರ್ವರ್ಡ್ ವಿವಿಯಲ್ಲಿ ಪ್ರೊಪೆಸರ್ ಆಗಿದ್ದ ಅವರನ್ನು ಹುದ್ದೆಯಿಂದ ತೆಗೆದುಹಾಕಲಾಯಿತು. ಜತೆಗೆ ಅವರು ಬೇಸಿಗೆ ವೇಳೆ ನೀಡಿದ್ದ ಅರ್ಥಶಾಸ್ತ್ರದ ಎರಡು ಉಪನ್ಯಾಸಗಳನ್ನು ಅವರ ಪಠ್ಯಕ್ರಮದಿಂದಲೇ ಕೈಬಿಡಲಾಯಿತು. ತಮ್ಮ ಪತ್ನಿ ರೋಕ್ಸಾನಾ ಅವರಿಗೆ ಕಾನೂನು ತರಬೇತಿ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಕೊಚ್ಚಿಯ ಸ್ಕೂಲ್ ಆಫ್ ಕಮ್ಯುನಿಕೇಷನ್ ಅಂಡ್ ಮ್ಯಾನೇಜ್ ಮೆಂಟ್ ಸ್ಟಡೀಸ್ ನ ಅಧ್ಯಕ್ಷರಾಗಿದ್ದರು. 1963ರಲ್ಲಿ ವಿಶ್ವಸಂಸ್ಥೆಯ ಅರ್ಥಶಾಸ್ತ್ರಜ್ಞರಾಗಿದ್ದರು. 1986ರಲ್ಲಿ ವಿಶ್ವಬ್ಯಾಂಕಿಗೆ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಸುಬ್ರಮಣಿಯನ್ ಸ್ವಾಮಿ ಸಾಧನೆಗಳು

ಸುಬ್ರಮಣಿಯನ್ ಸ್ವಾಮಿ ತಮ್ಮ 24ನೇ ವಯಸ್ಸಿನಲ್ಲೇ ಹಾರ್ವರ್ಡ್ ವಿಶ್ವವಿದ್ಯಾಲಯದ ಪಿ.ಎಚ್.ಡಿ.ಯನ್ನು ಪೂರ್ಣಗೊಳಿಸಿದ್ದರು. ತುರ್ತು ಪರಿಸ್ಥಿತಿ ನಂತರ ದೇಶಾದ್ಯಂತ ಅಭೂತಪೂರ್ವ ಗೆಲುವುಕಂಡ ಜನತಾ ಪಕ್ಷದ ಸಂಸ್ಥಾಪಕ ಸದಸ್ಯರಲ್ಲೊಬ್ಬರಾಗಿದ್ದ ಸುಬ್ರಮಣಿಯನ್ ಕೇಂದ್ರ ಸಚಿವರಾಗಿ, ನಂತರದಲ್ಲಿ ವಿರೋದ ಪಕ್ಷದ ನಾಯಕರಾಗಿದ್ದರು. ಭಾರತದಲ್ಲಿನ ಹಿಂದೂಗಳಿಗೆ ಕೈಲಾಸ ಪರ್ವತದ ಮಾನಸ ಸರೋವರ ಪ್ರವೇಶಕ್ಕೆ ಸಾಧ್ಯವಾಗುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಚೀನಾ ಕುರಿತು ಅವರ ಪ್ರಭಲ ವಿಶ್ಲೇಷಣೆ ಮತ್ತು ಅನಿಸಿಕೆಗಳನ್ನು ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ ಮತ್ತು ಡಾ.ಮನ್ ಮೋಹನ್ ಸಿಂಗ್ ಅನುಸರಿಸುತ್ತಿದ್ದರು. ಭಾರತ ಮತ್ತು ಶ್ರೀಲಂಕಾ ನಡುವೆ ಸಮುದ್ರದಲ್ಲಿ ಮುಳುಗಿರುವ ರಾಮಸೇತುವನ್ನು ಧ್ವಂಸಗೊಳಿಸಲು ನಡೆದ ಪ್ರಯತ್ನಕ್ಕೆ ಬಂಡೆಯಂತೆ ಅಡ್ಡನಿಂತ ಸ್ವಾಮಿ ಈ ಕುರಿತು ಕಾನೂನು ಹೋರಾಟ ನಡೆಸಿ ಅದನ್ನು ಐತಿಹಾಸಿಕ ಸ್ಮಾರಕ ಎಂದು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಅವರ ನೋಟ್ಸ್ ಆನ್ ಪ್ರಾಕ್ಟೈಲ್ ಗ್ರಾಫಿಕಲ್ ಅನಾಲಿಸ್ಟಿಕ್ ಪ್ರಬಂದವನ್ನು 1963ರಲ್ಲಿ ಇಕನೋಮೆಟ್ರಿಕಾದಲ್ಲಿ ಪ್ರಕಟಿಸಲಾಯಿತು. ನಂತರ ಅವರು ಪಾಲ್ ಸ್ಯಾಮುಯೆಲ್ಸ್ ಅವರೊಂದಿಗೆ 1974ರಲ್ಲಿ ಸಂಖ್ಯೆಗಳ ಸೂಚ್ಯಂಕ ಸಿದ್ದಾಂತದ ಮೇಲೆ ಪ್ರಬಂಧ ಮಂಡಿಸಿದರು. 1994ರಲ್ಲಿ ಅಂದಿನ ಪ್ರಧಾನಿ ಪಿ.ವಿ. ನರಸಿಂಹರಾವ್ ಸರ್ಕಾರದಲ್ಲಿ ಕಾರ್ಮಿಕ ಗುಣಮಟ್ಟ ಮತ್ತು ಅಂತಾರಾಷ್ಟ್ರೀಯ ವ್ಯಾಪಾರ ಆಯೋಗದ ಅಧ್ಯಕ್ಷರಾಗಿದ್ದರು. ಕೇರಳದ ಎಸ್ ಸಿ ಎಂ ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸುತ್ತಿದ್ದಾರೆ.

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+