ಶಿವರಾಜ್ ಸಿಂಗ್ ಚೌಹಾನ್ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್.ಎಸ್.ಎಸ್.) ಮೂಲಕ ಸಾಮಾಜಿಕ ಜೀವನಕ್ಕೆ ಕಾಲಿಟ್ಟ ಶಿವರಾಜ್ ನಂತರದಲ್ಲಿ ಬಿಜೆಪಿ ಸೇರ್ಪಡೆ ಮೂಲಕ ರಾಜಕೀಯಕ್ಕೆ ಕಾಲಿಟ್ಟರು. ತಮ್ಮ 13ನೇ ವಯಸ್ಸಿನಲ್ಲಿದ್ದಾಗಲೇ 1972ರಲ್ಲಿ ಆರ್.ಎಸ್.ಎಸ್.ಗೆ ಸೇರ್ಪಡೆಗೊಂಡಿದ್ದರು. ವಿಧಿಶಾ ಲೋಕಸಭಾ ಕ್ಷೇತ್ರದಿಂದ ಐದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸಂಘಟನೆಯ ವಿವಿಧ ಹುದ್ದೆಗಳನ್ನು ಇವರು ನಿರ್ವಹಿಸಿದ್ದರು. ತಮ್ಮ ರಾಜಕೀಯ ಜೀವನ ಆರಂಭಿಸುವ ಮುನ್ನ ಅಖಿಲ ಭಾರತೀಯ ಕ್ಷೇತ್ರೀಯ ವಾಹಿನಿಯಲ್ಲೂ ಕೆಲಸ ಮಾಡಿದ್ದಾರೆ.
ಮಹಿಳಾ ಸಾಕ್ಷರತೆ, ಸಬಲೀಕರಣ ಮತ್ತು ಕ್ಷೇಮಾಭಿವೃದ್ಧಿ ಯೋಜನೆಗಳಿಂದ ಅವರು ದೇಶದಲ್ಲಿ ಹೆಚ್ಚಿನ ಜನಪ್ರೀಯತೆ ಗಳಿಸಿದವರು. ಗಾಂವ ಕಿ ಬೇಟಿ, ಜನನಿ ಸುರಕ್ಷಾ, ಜನನಿ ಪ್ರಸವ್ ಯೋಜನಾ, ಸ್ವಾಗತಂ ಲಕ್ಷ್ಮೀ, ಉಷಾ ಕಿರಣ, ತೇಜಸ್ವಿನಿ ಹೀಗೆ ಮಹಿಳಾ ಸುರಕ್ಷತೆಗೆ ಆಧ್ಯತೆ ನೀಡಿ ಹಲವು ಯೋಜನೆ ಆರಂಭಿಸಿ ಅನುಷ್ಠಾನಗೊಳಿಸಿದರು. ಇವು ಸಿಎಂ ಆಗಿದ್ದ ಶಿವರಾಜ್ ಸಿಂಗ್ ಅವರ ಜನಪ್ರೀಯತೆಯನ್ನು ಮತ್ತಷ್ಟು ಹೆಚ್ಚಿಸಿದವು.
ಬಾಲ್ಯದಿಂದಲೂ ಶಿವರಾಜ್ ಸಿಂಗ್ ಕ್ರೀಡಾಪಟುವಾಗಿ ಮತ್ತು ನದಿಯಲ್ಲಿ ಈಜುವಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದರು. ಮುಂದೆ ಕೂಡ ಅವರು ನದಿ ಉಳಿಸಿ ಆಂದೋಲನ, ನದಿಯೊಂದಿಗೆ ಭಾವನಾತ್ಮಕ ಸಂಬಂಧ, ಪರಿಸರ ವ್ಯವಸ್ಥೆ ಸಂರಕ್ಷಣೆಗೆ ಹೆಚ್ಚಿನ ಆಧ್ಯತೆ ನೀಡಿದರು.
| ಪೂರ್ಣ ಹೆಸರು | ಶಿವರಾಜ ಸಿಂಗ್ ಚೌಹಾನ್ |
| ಜನ್ಮ ದಿನಾಂಕ | 05 Mar 1959 (ವಯಸ್ಸು 67) |
| ಹುಟ್ಟಿದ ಸ್ಥಳ | ಸೆಹೋರ್, ಮಧ್ಯಪ್ರದೇಶ |
| ಪಕ್ಷದ ಹೆಸರು | Bharatiya Janta Party |
| ವಿದ್ಯಾರ್ಹತೆ | Post Graduate |
| ಉದ್ಯೋಗ | ಕೃಷಿಕ, ರಾಜಕಾರಣಿ |
| ತಂದೆಯ ಹೆಸರು | ಪ್ರೇಮ್ ಸಿಂಗ್ ಚೌಹಾನ್ |
| ತಾಯಿಯ ಹೆಸರು | ಸುಂದರ್ ಬಾಯಿ ಚೌಹಾನ್ |
| ಅವಲಂಬಿತರ ಹೆಸರು | ಸಾಧನಾ ಸಿಂಗ್ ಚೌಹಾನ್ |
| ಅವಲಂಬಿತರ ಉದ್ಯೋಗ | ಗೃಹಿಣಿ |
| ಮಕ್ಕಳು | 2 ಪುತ್ರ(ರು) |
| ಧರ್ಮ | ಹಿಂದು |
| ವೆಬ್‌ಸೈಟ್ | http://www.shivrajsinghchouhan.org/ |
Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.