Get Updates
Get notified of breaking news, exclusive insights, and must-see stories!

ರಾಜನಾಥ ಸಿಂಗ್

ರಾಜನಾಥ ಸಿಂಗ್
ರಾಜನಾಥ ಸಿಂಗ್ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ. ಪ್ರಸ್ತುತ ಕೇಂದ್ರ ಸರಕಾರದ ಗೃಹ ಸಚಿವರಾಗಿರುವ ಇವರು ರಾಜಕೀಯಕ್ಕೆ ಬರುವ ಮುನ್ನ ಭೌತಶಾಸ್ತ್ರ ಉಪನ್ಯಾಸಕರಾಗಿದ್ದರು.
By Moumi Majumdar | Thursday, May 30, 2019, 03:45:57 PM [IST]

ರಾಜನಾಥ ಸಿಂಗ್ ಜೀವನ ಚರಿತ್ರೆ

ರಾಜನಾಥ ಸಿಂಗ್ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ. ಪ್ರಸ್ತುತ ಕೇಂದ್ರ ಸರಕಾರದ ಗೃಹ ಸಚಿವರಾಗಿರುವ ಇವರು ರಾಜಕೀಯಕ್ಕೆ ಬರುವ ಮುನ್ನ ಭೌತಶಾಸ್ತ್ರ ಉಪನ್ಯಾಸಕರಾಗಿದ್ದರು. ಆರೆಸ್ಸೆಸ್ ನೊಂದಿಗಿನ ಒಡನಾಟದ ಕಾರಣದಿಂದ ಇವರು ಜನತಾ ಪಕ್ಷಕ್ಕೆ ಸೇರಿದರು. 1977 ರಲ್ಲಿ ಮಿರ್ಜಾಪುರ ವಿಧಾನಸಭಾ ಕ್ಷೇತ್ರದಲ್ಲಿ ಜೆಎನ್ಪಿ ಅಭ್ಯರ್ಥಿಯಾಗಿ ಪ್ರಥಮ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದರು. ಈ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಅಝಹರ ಆಲಮ್ ಅವರನ್ನು ಸೋಲಿಸಿ ಶಾಸಕರಾದರು. ನಂತರ ಬಿಜೆಪಿಯಿಂದ 1980 ಹಾಗೂ 1985 ರಲ್ಲಿ ಚುನಾವಣೆಗಳಲ್ಲಿ ಸ್ಪರ್ಧಿಸಿ ಸೋತರು. ನಂತರ ಪಕ್ಷಕ್ಕಾಗಿ ದುಡಿದು ಉನ್ನತ ಮಟ್ಟಕ್ಕೇರಿದ ರಾಜನಾಥ ಅವರನ್ನು 1988 ರಲ್ಲಿ ಉತ್ತರ ಪ್ರದೇಶದ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆ ಮಾಡಲಾಯಿತು. ಉತ್ತರ ಪ್ರದೇಶದಲ್ಲಿ ಪ್ರಥಮ ಬಾರಿಗೆ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರದಲ್ಲಿ 1991 ರಲ್ಲಿ ಇವರು ಶಿಕ್ಷಣ ಮಂತ್ರಿಯಾದರು. 1994 ರ ಏಪ್ರಿಲ್ನಲ್ಲಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದರು. 1997 ರಲ್ಲಿ ಉತ್ತರ ಪ್ರದೇಶ ಬಿಜೆಪಿಯ ರಾಜ್ಯಾಧ್ಯಕ್ಷರಾದರು. ನಂತರ 1999 ರಲ್ಲಿ ಕೇಂದ್ರದ ಭೂಸಾರಿಗೆ ಖಾತೆಯ ಕ್ಯಾಬಿನೆಟ್ ದರ್ಜೆ ಸಚಿವರಾದರು. ಇವರ ಸುದೀರ್ಘ ರಾಜಕೀಯ ಜೀವನದ ಕಾರಣದಿಂದ ೨೦೦೦ನೇ ಇಸ್ವಿಯಲ್ಲಿ ಸಹಜವಾಗಿಯೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಪಟ್ಟ ಒಲಿದು ಬಂದಿತು. 2005 ರಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾದರು. 2009 ರಲ್ಲಿ ಗಾಜಿಯಾಬಾದ ಕ್ಷೇತ್ರದಿಂದ ಲೋಕಸಭಾ ಸದಸ್ಯರಾಗಿ ಚುನಾಯಿತರಾದರು. 2014 ರಲ್ಲಿ ಲಖನೌ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಚುನಾಯಿತರಾದರು. ಪ್ರಸ್ತುತ ನರೇಂದ್ರ ಮೋದಿ ಸಂಪುಟದಲ್ಲಿ ಕ್ಯಾಬಿನೆಟ್ ದರ್ಜೆ ಸಚಿವರಾಗಿದ್ದಾರೆ.

ಮತ್ತಷ್ಟು ಓದು

ರಾಜನಾಥ ಸಿಂಗ್ ವಯಕ್ತಿಕ ಜೀವನ

ಪೂರ್ಣ ಹೆಸರು ರಾಜನಾಥ ಸಿಂಗ್
ಜನ್ಮ ದಿನಾಂಕ 10 Jul 1951 (ವಯಸ್ಸು 74)
ಹುಟ್ಟಿದ ಸ್ಥಳ ಭಭೋರಾ ಗ್ರಾಮ, ಚಂದೌಲಿ ಜಿಲ್ಲೆ, ಉತ್ತರ ಪ್ರದೇಶ
ಪಕ್ಷದ ಹೆಸರು Bharatiya Janta Party
ವಿದ್ಯಾರ್ಹತೆ Post Graduate
ಉದ್ಯೋಗ ಶಿಕ್ಷಕ
ತಂದೆಯ ಹೆಸರು ಶ್ರೀ ರಾಮ ಬದನ್ ಸಿಂಗ್
ತಾಯಿಯ ಹೆಸರು ಶ್ರೀಮತಿ ಗುಜರಾತಿ ದೇವಿ
ಅವಲಂಬಿತರ ಹೆಸರು ಶ್ರೀಮತಿ ಸಾವಿತ್ರಿ ಸಿಂಗ್
ಅವಲಂಬಿತರ ಉದ್ಯೋಗ NA
ಮಕ್ಕಳು 2 ಪುತ್ರ(ರು) 1 ಪುತ್ರಿ(ಯರು)
ಧರ್ಮ ಹಿಂದು

ರಾಜನಾಥ ಸಿಂಗ್ ಒಟ್ಟು ಆಸ್ತಿ

ಒಟ್ಟು ಆಸ್ತಿ
₹2.92 CRORE
ಆಸ್ತಿ
₹2.92 CRORE
ಸಾಲಸೋಲ
N/A

ರಾಜನಾಥ ಸಿಂಗ್ ಕುರಿತು ಆಸಕ್ತಿದಾಯಕ ಸಂಗತಿಗಳು

ಬಾಲಿವುಡ್ ನಟ ಅಕ್ಷಯ ಕುಮಾರ ಅವರೊಂದಿಗೆ ಭಾರತ ಕೆ ವೀರ್ ವೆಬ್ ಪೋರ್ಟಲ್ ಹಾಗೂ ಆಪ್ ನ ಮುಂದಾಳತ್ವ ವಹಿಸಿದರು. ಹುತಾತ್ಮ ಯೋಧರ ಕುಟುಂಬಗಳಿಗೆ ನೆರವಾಗಲು ಈ ಯೋಜನೆ ರೂಪಿಸಲಾಗಿದೆ.
2013 ರಲ್ಲಿ ಭ್ರಷ್ಟಾಚಾರ ಆರೋಪಗಳ ಹಿನ್ನೆಲೆಯಲ್ಲಿ ನಿತಿನ್ ಗಡ್ಕರಿ ಅವರ ರಾಜಿನಾಮೆಯಿಂದ ತೆರವಾದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಇವರನ್ನು ನೇಮಿಸಲಾಯಿತು. ಇದು ರಾಜನಾಥ ಅವರ ಬಿಜೆಪಿ ಅಧ್ಯಕ್ಷರಾಗಿ ಎರಡನೇ ಅವಧಿಯಾಗಿದೆ.

ರಾಜನಾಥ ಸಿಂಗ್ ಸಾಧನೆಗಳು

2003 ರಲ್ಲಿ ತಾವು ಕೃಷಿ ಸಚಿವರಾಗಿದ್ದಾಗ ಕಿಸಾನ್ ಕಾಲ್ ಸೆಂಟರ್ ಹಾಗೂ ಕೃಷಿ ಆದಾಯ ಖಾತರಿ ವಿಮಾ ಯೋಜನೆಗಳನ್ನು ಜಾರಿಗೆ ತಂದರು. ಕೃಷಿ ಸಾಲದ ಬಡ್ಡಿಗಳನ್ನು ಗಣನೀಯವಾಗಿ ಕಡಿಮೆ ಮಾಡಿದರು, ರೈತರ ಅಭಿವೃದ್ಧಿ ಪ್ರಧಿಕಾರ ಸ್ಥಾಪಿಸಿದರು ಹಾಗೂ ಕೃಷಿ ಆದಾಯ ಖಾತರಿ ವಿಮಾ ಯೋಜನೆ ಜಾರಿಗೆ ತಂದರು.

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+