Get Updates
Get notified of breaking news, exclusive insights, and must-see stories!

ಗುಲಾಂ ನಭಿ ಆಜಾದ್

ಗುಲಾಂ ನಭಿ ಆಜಾದ್
ಬಲೆಸ್ಸಾ ಬ್ಲಾಕ್ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಯಾಗಿ 1973ರಲ್ಲಿ ರಾಜಕೀಯ ಜೀವನ ಆರಂಭಿಸಿದ ಗುಲಾಂ ನಭಿ ಆಜಾದ್, ನಂತರದಲ್ಲಿ ಬಡ್ತಿ ಪಡೆದು ಯುವ ಕಾಂಗ್ರೆಸ್ನ ಅಧ್ಯಕ್ಷರಾಗಿ ನೇಮಕಗೊಂಡರು. 1980ರಲ್ಲಿ ಮಹಾರಾಷ್ಟ್ರದ ವಾಶಿಮ್ ಲೋಕಸಭಾ ಕ್ಷೇತ್ರದಲ್ಲಿ ಮೊದಲ ಬಾರಿಗೆ ಗೆಲುವು ಸಾಧಿಸಿದರು.
By Zainab Ashraf | Monday, February 8, 2021, 12:37:25 PM [IST]

ಗುಲಾಂ ನಭಿ ಆಜಾದ್ ಜೀವನ ಚರಿತ್ರೆ

ಬಲೆಸ್ಸಾ ಬ್ಲಾಕ್ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಯಾಗಿ 1973ರಲ್ಲಿ ರಾಜಕೀಯ ಜೀವನ ಆರಂಭಿಸಿದ ಗುಲಾಂ ನಭಿ ಆಜಾದ್, ನಂತರದಲ್ಲಿ ಬಡ್ತಿ ಪಡೆದು ಯುವ ಕಾಂಗ್ರೆಸ್ನ ಅಧ್ಯಕ್ಷರಾಗಿ ನೇಮಕಗೊಂಡರು. 1980ರಲ್ಲಿ ಮಹಾರಾಷ್ಟ್ರದ ವಾಶಿಮ್ ಲೋಕಸಭಾ ಕ್ಷೇತ್ರದಲ್ಲಿ ಮೊದಲ ಬಾರಿಗೆ ಗೆಲುವು ಸಾಧಿಸಿದರು. 1982ರಲ್ಲಿ ಕೇಂದ್ರ ಸರ್ಕಾರದ ಕಾನೂನು, ನ್ಯಾಯ ಮತ್ತು ಕಂಪನಿ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸಿದರು. ಹಂತ ಹಂತವಾಗಿ ಅಧಿಕಾರದಲ್ಲಿ ಮೆಲೇರಿದ ನಭಿ ಹಲವು ಮಹತ್ವದ ಹುದ್ದೆಗಳನ್ನು ಪಡೆದರು. ಜತೆಗೆ ಜಮ್ಮು- ಕಾಶ್ಮೀರದ ಮುಖ್ಯಮಂತ್ರಿಯಾಗಿ 2005ರಲ್ಲಿ ಗದ್ದುಗೆ ಏರಿದರು. ೨೦೦೮ರಲ್ಲಿ ಮುಸ್ಲಿಂ ದಂಗೆ ಪರಿಣಾಮವಾಗಿ ಹಿಂದೂ ಮಂದಿರ ನಿರ್ಮಾಣಕ್ಕೆ ಭೂಮಿ ಹಸ್ತಾಂತರಿಸುವ ಪ್ರಕ್ರಿಯೆಯನ್ನು ರದ್ದುಗೊಳಿಸಿ ಹಿಂದೂ-ಮುಸ್ಲಿಂ ದಂಗೆಗೆ ಕಾರಣರಾದರು. ಇದರ ಹೋರಾಟದಲ್ಲಿ ಪಾಲ್ಗೊಂಡ ಹಿಂದೂ ಯಾತ್ರಿಗಳು ಪ್ರಾಣ ಕಳೆದುಕೊಂಡರು. ಈ ದುರ್ಘಟನೆಯಿಂದಾಗಿ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಹುದ್ದೆಗೆ ಗುಲಾಂನಭಿ ಆಜಾದ್ ರಾಜೀನಾಮೆ ನೀಡುವಂತಾಯಿತು. ಪ್ರಸ್ತುತ ಐದನೇ ಬಾರಿಗೆ ರಾಜ್ಯಸಭಾ ಸದಸ್ಯರಾಗಿ ಮುಂದುವರಿಯುತ್ತಿದ್ದಾರೆ.

ಮತ್ತಷ್ಟು ಓದು

ಗುಲಾಂ ನಭಿ ಆಜಾದ್ ವಯಕ್ತಿಕ ಜೀವನ

ಪೂರ್ಣ ಹೆಸರು ಗುಲಾಂ ನಭಿ ಆಜಾದ್
ಜನ್ಮ ದಿನಾಂಕ 07 Mar 1949 (ವಯಸ್ಸು 77)
ಹುಟ್ಟಿದ ಸ್ಥಳ Village Soti, Bhadarwah, Distt. Doda (Jammu & Kashmir)
ಪಕ್ಷದ ಹೆಸರು Indian National Congress
ವಿದ್ಯಾರ್ಹತೆ
ಉದ್ಯೋಗ ರಾಜಕಾರಣಿ, ಸಾಮಾಜಿಕ ಕಾರ್ಯಕರ್ತ
ತಂದೆಯ ಹೆಸರು ಶ್ರೀ ರೆಹಮತುಲ್ಲಾ
ತಾಯಿಯ ಹೆಸರು ಶ್ರೀಮತಿ ಬಸಾ ಬೇಗಂ
ಅವಲಂಬಿತರ ಹೆಸರು ಶ್ರೀಮತಿ ಶಮೀಮ್ ದೇವ್ ಆಜಾದ್
ಅವಲಂಬಿತರ ಉದ್ಯೋಗ ಸಾಮಾಜಿಕ ಸೇವೆ
ಮಕ್ಕಳು 1 ಪುತ್ರ(ರು) 1 ಪುತ್ರಿ(ಯರು)
ಧರ್ಮ ಇಸ್ಲಾಂ
ವೆಬ್‌ಸೈಟ್ NA

ಗುಲಾಂ ನಭಿ ಆಜಾದ್ ಒಟ್ಟು ಆಸ್ತಿ

ಒಟ್ಟು ಆಸ್ತಿ
₹4.14 CRORE
ಆಸ್ತಿ
₹4.14 CRORE
ಸಾಲಸೋಲ
N/A

ಗುಲಾಂ ನಭಿ ಆಜಾದ್ ಕುರಿತು ಆಸಕ್ತಿದಾಯಕ ಸಂಗತಿಗಳು

ಕಾಂಗ್ರೆಸ್ ನಿಂದ ಆಯ್ಕೆಯಾದ ಜಮ್ಮು ಕಾಶ್ಮೀರದ ಮೂರನೇ ಮುಖ್ಯಮಂತ್ರಿ ಗುಲಾಂ ನಭಿ ಆಜಾದ್

ಗುಲಾಂ ನಭಿ ಆಜಾದ್ ರಾಜಕೀಯ ಟೈಮ್‌ಲೈನ್

  • 2015 : ಐದನೇ ಬಾರಿಗೆ ರಾಜ್ಯಸಭಾ ಸದಸ್ಯರಾಗಿ ಆಯ್ಕೆ
  • 2014 : ರಾಜ್ಯಸಭೆ ವಿರೋಧಪಕ್ಷದ ನಾಯಕರಾಗಿ ನೇಮಕ
  • 2014 : ಜಲಸಂಪನ್ಮೂಲ ಖಾತೆ ಕೇಂದ್ರ ಸಚಿವರಾಗಿ (ಹೆಚ್ಚುವರಿ) ಜವಾಬ್ದಾರಿ
  • 2009 : ನಾಲ್ಕನೇ ಬಾರಿಗೆ ರಾಜ್ಯಸಭೆಗೆ ಆಯ್ಕೆ, ಜತೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೇಂದ್ರ ಸಚಿವರಾಗಿ ನೇಮಕ
  • 2008 : ಜಮ್ಮು ಕಾಶ್ಮೀರ ವಿಧಾನಸಭೆಗೆ ಬದರ್ವಾ ಕ್ಷೇತ್ರದಲ್ಲಿ ದಯಾ ಕೃಶನ್ ಅವರನ್ನು 29,436 ಮತಗಳಿಂದ ಸೋಲಿಸಿ ಪುನರಾಯ್ಕೆ.
  • 2006 : ಜಮ್ಮು-ಕಾಶ್ಮೀರದ ವಿಧಾನಸಭಾ ಉಪಚುನಾವಣೆಯಲ್ಲಿ ಐತಿಹಾಸಿಕ ಅತಿ ಹೆಚ್ಚು ಮತಗಳಿಂದ ಗೆಲುವು
  • 2005 : ಜಮ್ಮು-ಕಾಶ್ಮೀರದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ
  • 2004 : ಕೇಂದ್ರ ಸರ್ಕಾರದ ಸಂಸದೀಯ ಮತ್ತು ನಗರಾಭಿವೃದ್ಧಿ ಸಚಿವರಾಗಿ ನೇಮಕ
  • 2002 : ಮೂರನೇ ಬಾರಿಗೆ ರಾಜ್ಯಸಭೆಗೆ ಆಯ್ಕೆ
  • 2000 : ವಕ್ಫ್ ಬೋರ್ಡ್ಗಳ ಜೆಪಿಸಿ ಕಾರ್ಯಕಾರಿ ಸಮಿತಿ ಸದಸ್ಯರಾಗಿ ನಿಯುಕ್ತಿ
  • 1999 : ಸಾರಿಗೆ, ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಮಿತಿ ಸದಸ್ಯರಾಗಿ ಆಯ್ಕೆ
  • 1998 : ಇಂಧನ ಸಮಿತಿ ಮತ್ತು ರಾಜಘಾಟ್ ಸಮಾಧಿ ಸಮಿತಿ ಸದಸ್ಯರಾಗಿ ನೇಮಕ
  • 1996 : ಎರಡನೇ ಬಾರಿಗೆ ರಾಜ್ಯಸಭೆಗೆ ಪುನರಾಯ್ಕೆ
  • 1993 : ಕೇಂದ್ರ ನಾಗರೀಕ ವಿಮಾನಯಾನ ಮತ್ತು ಪ್ರವಾಸೋದ್ಯಮ ಇಲಾಖೆ ಕೇಂದ್ರ ಸಚಿವ
  • 1991 : ಸಂಸದೀಯ ವ್ಯವಹಾರಗಳ ಕೇಂದ್ರ ಸಚಿವರಾಗಿ ಆಯ್ಕೆ
  • 1990 : ರಾಜ್ಯಸಭೆಗೆ ನೇಮಕ
  • 1986 : ಕೇಂದ್ರ ಗೃಹ ಇಲಾಖೆ ಮತ್ತು ಆಹಾರ ಹಾಗೂ ನಾಗರೀಕ ಸರಬಲಾಜು ಸಚಿವಾಲಯಗಳ ರಾಜ್ಯ ಖಾತ ಸಚಿವರಾಗಿ ನಿಯುಕ್ತಿ
  • 1985 : ಎಂಟನೇ ಲೋಕಸಭೆಗೆ ಸಂಸದರಾಗಿ ಆಯ್ಕೆ
  • 1983 : ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಸಹಾಯಕ ಸಚಿವರಾಗಿ ನೇಮಕ
  • 1982 : ಕಾನೂನು, ನ್ಯಾಯ, ಕಂಪನಿ ವ್ಯವಹಾರಗಳ ಸಚಿವಾಲಯದ ಸಹಾಯಕ ಸಚಿವರಾಗಿ ಆಯ್ಕೆ
  • 1980 : ಸಾರ್ವಜನಿಕ ಸಂಸ್ಥೆಗಳ ಸಮಿತಿ ಮತ್ತು ರಕ್ಷಣಾ ಸಚಿವಾಲಯದ ಸಲಹಾ ಸಮಿತಿ ಸದಸ್ಯರಾಗಿ ನೇಮಕ
  • 1980 : ಏಳನೇ ಲೋಕಸಭಾ ಸದಸ್ಯರಾಗಿ ಆಯ್ಕೆ. ಮಹಾರಾಷ್ಟ್ರದ ವಾಶಿಮ್ ಲೋಕಸಭಾ ಕ್ಷೇತ್ರದಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ ಜೆಎನ್ಪಿಯ ಪ್ರತಾಪ್ಸಿಂಗ್ ರಾಮಸಿಂಗ್ ಅವರನ್ನು ಸೋಲಿಸಿದರು.

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+