Get Updates
Get notified of breaking news, exclusive insights, and must-see stories!

ವೈ.ಎಸ್. ಜಗನ್ ಮೋಹನ ರೆಡ್ಡಿ

ವೈ.ಎಸ್. ಜಗನ್ ಮೋಹನ ರೆಡ್ಡಿ
ಯೆದುಗುರಿ ಸಂದಿಂಟಿ ಜಗನ್ ಮೋಹನ ರೆಡ್ಡಿ ಇವರು ಭಾರತದ ಪ್ರಮುಖ ರಾಜಕಾರಣಿಗಳಲ್ಲೊಬ್ಬರು. ಇವರು ಆಂಧ್ರ ಪ್ರದೇಶದವರಾಗಿದ್ದು, ವೈಎಸ್‌ಆರ್ ಕಾಂಗ್ರೆಸ್ ಪಕ್ಷ ಹಾಗೂ ಆಂಧ್ರ ಪ್ರದೇಶ ವಿಧಾನ ಸಭೆಯ ಮುಖಂಡರಾಗಿದ್ದಾರೆ.
By Rashmi | Friday, February 1, 2019, 05:56:02 PM [IST]

ವೈ.ಎಸ್. ಜಗನ್ ಮೋಹನ ರೆಡ್ಡಿ ಜೀವನ ಚರಿತ್ರೆ

ಯೆದುಗುರಿ ಸಂದಿಂಟಿ ಜಗನ್ ಮೋಹನ ರೆಡ್ಡಿ ಇವರು ಭಾರತದ ಪ್ರಮುಖ ರಾಜಕಾರಣಿಗಳಲ್ಲೊಬ್ಬರು. ಇವರು ಆಂಧ್ರ ಪ್ರದೇಶದವರಾಗಿದ್ದು, ವೈಎಸ್‌ಆರ್ ಕಾಂಗ್ರೆಸ್ ಪಕ್ಷ ಹಾಗೂ ಆಂಧ್ರ ಪ್ರದೇಶ ವಿಧಾನ ಸಭೆಯ ಮುಖಂಡರಾಗಿದ್ದಾರೆ. ಜಗನ್ ಮೋಹನ ರೆಡ್ಡಿಯವರು ರಾಜಕಾರಣದ ಹಿನ್ನೆಲೆಯ ಕುಟುಂಬದಿಂದ ಬಂದವರಾಗಿದ್ದಾರೆ. ಇವರು ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ ಅವರ ಸುಪುತ್ರ. ಇವರು ಆಂಧ್ರ ಪ್ರದೇಶದ ಕಡಪಾ ಜಿಲ್ಲೆಯ ಪುಲಿವೆಂದುಲ ಗ್ರಾಮದಲ್ಲಿ ಡಿಸೆಂಬರ್ 21, 1972 ರಂದು ಜನಿಸಿದರು. ಇವರು ತಮ್ಮ ಶಾಲಾಭ್ಯಾಸವನ್ನು ಹೈದರಾಬಾದ್ ಪಬ್ಲಿಕ್ ಸ್ಕೂಲ್‌ನಲ್ಲಿ ಮುಗಿಸಿದರು. ನಂತರ ನಿಜಾಮ್ ಕಾಲೇಜಿನಿಂದ ಪದವಿ ಶಿಕ್ಷಣ ಪೂರ್ಣಗೊಳಿಸಿದರು. ಇವರು ಬಿ.ಕಾಂ. ಪದವಿ ಹಾಗೂ ಮಾಸ್ಟರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಶನ್ (ಎಂ.ಬಿ.ಎ) ಸ್ನಾತಕೋತ್ತರ ಶಿಕ್ಷಣ ಪದವಿಗಳನ್ನು ಪಡೆದುಕೊಂಡಿದ್ದಾರೆ. ಆಗಸ್ಟ್ 28, 1996 ರಂದು ಭಾರತಿ ಅವರೊಂದಿಗೆ ವಿವಾಹವಾದರು. ಭಾರತಿ ಇವರು ಸ್ಥಳೀಯ ಪುಲಿವೆಂದುಲದ ಚಿಕ್ಕ ಮಕ್ಕಳ ತಜ್ಞವೈದ್ಯ ಹಾಗೂ ಮಾನವತಾವಾದಿ ಡಾ. ಇ.ಸಿ. ಗಂಗಿರೆಡ್ಡಿ ಅವರ ಪುತ್ರಿ. ಜಗನ್ ರೆಡ್ಡಿ ದಂಪತಿಗೆ ಇಬ್ಬರು ಪುತ್ರಿಯರಿದ್ದಾರೆ.

ಮತ್ತಷ್ಟು ಓದು

ವೈ.ಎಸ್. ಜಗನ್ ಮೋಹನ ರೆಡ್ಡಿ ವಯಕ್ತಿಕ ಜೀವನ

ಪೂರ್ಣ ಹೆಸರು ವೈ.ಎಸ್. ಜಗನ್ ಮೋಹನ ರೆಡ್ಡಿ
ಜನ್ಮ ದಿನಾಂಕ 21 Dec 1972 (ವಯಸ್ಸು 53)
ಹುಟ್ಟಿದ ಸ್ಥಳ ಪುಲಿವೆಂದುಲ ಗ್ರಾಮ, ಕಡಪಾ ಜಿಲ್ಲೆ, ಆಂಧ್ರ ಪ್ರದೇಶ
ಪಕ್ಷದ ಹೆಸರು Yuvajana Sramika Rythu Congress Party
ವಿದ್ಯಾರ್ಹತೆ Graduate
ಉದ್ಯೋಗ ಉದ್ಯಮಿ, ಮಾಧ್ಯಮ ವ್ಯವಹಾರ ಮತ್ತು ರಾಜಕಾರಣಿ
ತಂದೆಯ ಹೆಸರು ವೈ.ಎಸ್. ರಾಜಶೇಖರ ರೆಡ್ಡಿ
ತಾಯಿಯ ಹೆಸರು ವೈ.ಎಸ್. ವಿಜಯಮ್ಮ
ಅವಲಂಬಿತರ ಹೆಸರು ವೈ.ಎಸ್. ಭಾರತಿ
ಅವಲಂಬಿತರ ಉದ್ಯೋಗ ಮಹಿಳಾ ಉದ್ಯಮಿ
ಮಕ್ಕಳು 2 ಪುತ್ರಿ(ಯರು)
ಧರ್ಮ ಹಿಂದು

ವೈ.ಎಸ್. ಜಗನ್ ಮೋಹನ ರೆಡ್ಡಿ ಒಟ್ಟು ಆಸ್ತಿ

ಒಟ್ಟು ಆಸ್ತಿ
₹720.6 CRORE
ಆಸ್ತಿ
₹757.65 CRORE
ಸಾಲಸೋಲ
₹37.05 CRORE

ವೈ.ಎಸ್. ಜಗನ್ ಮೋಹನ ರೆಡ್ಡಿ ಕುರಿತು ಆಸಕ್ತಿದಾಯಕ ಸಂಗತಿಗಳು

ತಮ್ಮ ತಂದೆಯ ನಿಧನದ ನಂತರ ಜಗನ್ ಮೋಹನ ರೆಡ್ಡಿ ಓದರ್ಪು ಯಾತ್ರೆ ಮಾಡಿದರು. ತಂದೆ ವೈ.ಎಸ್. ರಾಜಶೇಖರ ರೆಡ್ಡಿಯವರ ನಿಧನಾನಂತರ ಆತ್ಮಹತ್ಯೆ ಮಾಡಿಕೊಂಡ ಅಥವಾ ಅದರ ಆಘಾತದಿಂದ ಅನಾರೋಗ್ಯಕ್ಕೊಳಗಾದ ಜನತೆಯನ್ನು ಭೇಟಿ ಮಾಡಿ ಸಾಂತ್ವನ ಹೇಳುವುದು ಓದರ್ಪು ಯಾತ್ರೆಯ ಉದ್ದೇಶವಾಗಿತ್ತು.
ನವೆಂಬರ್ 6, 2017 ರಂದು ಜಗನ್ ಮೋಹನ ರೆಡ್ಡಿ 3000 ಕಿ.ಮೀ. ಮಾರ್ಗದ ಪ್ರಜಾ ಸಂಕಲ್ಪ ಯಾತ್ರೆ ಹೆಸರಿನ ಪಾದಯಾತ್ರೆ ಆರಂಭಿಸಿದರು.

ವೈ.ಎಸ್. ಜಗನ್ ಮೋಹನ ರೆಡ್ಡಿ ರಾಜಕೀಯ ಟೈಮ್‌ಲೈನ್

  • 2014: ಶಾಸಕರಾಗಿ ಆಯ್ಕೆಯಾದರು.
  • 2011: ಉಪ ಚುನಾವಣೆಯಲ್ಲಿ ಜಯಿಸಿದ ಜಗನ್ ರೆಡ್ಡಿ ಜೂನ್ 13 ರಂದು 15ನೇ ಲೋಕಸಭೆಯ ಸದಸ್ಯರಾಗಿ ಮರು ಆಯ್ಕೆಯಾದರು.
  • 2011: ಫೆಬ್ರುವರಿ 16, 2011 ರಂದು ತಮ್ಮದೇ ಆದ ವೈಎಸ್‌ಆರ್ ಕಾಂಗ್ರೆಸ್ (ಯುವಜನ ಶ್ರಮಿಕ ರೈತು ಕಾಂಗ್ರೆಸ್ ಪಾರ್ಟಿ) ಹೆಸರಿನ ಹೊಸ ಪಕ್ಷ ಆರಂಭಿಸಿದರು.
  • 2010: 15 ನೇ ಲೋಕಸಭಾ ಸದಸ್ಯತ್ವಕ್ಕೆ ರಾಜಿನಾಮೆ ಸಲ್ಲಿಸಿದರು.
  • 2009: ಹಣಕಾಸು ಸಮಿತಿಯ ಸದಸ್ಯರಾಗಿ ಆಯ್ಕೆಯಾದರು.
  • 2009: ಕಡಪಾ ಕ್ಷೇತ್ರದಿಂದ ಭಾರತೀಯ ಕಾಂಗ್ರೆಸ್ ಪಕ್ಷದಿಂದ (ಐಎನ್‌ಸಿ) ಲೋಕಸಭಾ ಸದಸ್ಯರಾಗಿ ಆಯ್ಕೆಯಾದರು.
  • 2004: 2004 ರ ಚುನಾವಣೆಯಲ್ಲಿ ಕಡಪಾ ಜಿಲ್ಲೆಯಲ್ಲಿ ಕಾಂಗ್ರೆಸ್ ಪರವಾಗಿ ಚುನಾವಣಾ ಪ್ರಚಾರದೊಂದಿಗೆ ತಮ್ಮ ರಾಜಕೀಯ ಜೀವನ ಆರಂಭಿಸಿದರು.

ಹಿಂದಿನ ಇತಿಹಾಸ

  • 1999-2000: ಯೆದುಗುರಿ ಸಂದಿಂಟಿ ಜಗನ್ ಮೋಹನ ರೆಡ್ಡಿ ಆರಂಭದಲ್ಲಿ ಚಿಕ್ಕ ಮಟ್ಟದ ಉದ್ಯಮಿಯಾಗಿದ್ದರು. 1999-2000 ರ ಅವಧಿಯಲ್ಲಿ ಕರ್ನಾಟಕದ ಸಂಡೂರಿನಲ್ಲಿ ಒಂದು ಸಣ್ಣ ಇಂಧನ ಕಂಪನಿ ಆರಂಭಿಸಿದರು. ನಂತರದ ದಿನಗಳಲ್ಲಿ ಈಶಾನ್ಯ ರಾಜ್ಯಗಳಿಗೆ ತಮ್ಮ ವ್ಯವಹಾರ ವಿಸ್ತರಿಸಿದರು.

ವೈ.ಎಸ್. ಜಗನ್ ಮೋಹನ ರೆಡ್ಡಿ ಸಾಧನೆಗಳು

ಮಾಹಿತಿ ಲಭ್ಯವಿಲ್ಲ

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+