Get Updates
Get notified of breaking news, exclusive insights, and must-see stories!

ನಾರಾ ಚಂದ್ರಬಾಬು ನಾಯ್ಡು

ನಾರಾ ಚಂದ್ರಬಾಬು ನಾಯ್ಡು
ಪ್ರಸ್ತುತ ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿರುವ ನಾರಾ ಚಂದ್ರಬಾಬು ನಾಯ್ಡು ತೆಲುಗು ದೇಶಂ ಪಕ್ಷದ ರಾಷ್ಟ್ರೀಯ ಅಧ್ಯಕ್ಷರೂ ಆಗಿದ್ದಾರೆ. ಚಿತ್ತೂರು ಜಿಲ್ಲೆ ತಿರುಪತಿ ಬಳಿಯ ಚಂದ್ರಗಿರಿಯಲ್ಲಿ ಕಾಂಗ್ರೆಸ್ ವಿದ್ಯಾರ್ಥಿ ನಾಯಕನಾಗಿ ರಾಜಕೀಯಕ್ಕೆ ಕಾಲಿಟ್ಟರು.
By Rashmi | Monday, April 29, 2019, 06:14:14 PM [IST]

ನಾರಾ ಚಂದ್ರಬಾಬು ನಾಯ್ಡು ಜೀವನ ಚರಿತ್ರೆ

ಪ್ರಸ್ತುತ ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿರುವ ನಾರಾ ಚಂದ್ರಬಾಬು ನಾಯ್ಡು ತೆಲುಗು ದೇಶಂ ಪಕ್ಷದ ರಾಷ್ಟ್ರೀಯ ಅಧ್ಯಕ್ಷರೂ ಆಗಿದ್ದಾರೆ. ಚಿತ್ತೂರು ಜಿಲ್ಲೆ ತಿರುಪತಿ ಬಳಿಯ ಚಂದ್ರಗಿರಿಯಲ್ಲಿ ಕಾಂಗ್ರೆಸ್ ವಿದ್ಯಾರ್ಥಿ ನಾಯಕನಾಗಿ ರಾಜಕೀಯಕ್ಕೆ ಕಾಲಿಟ್ಟರು. ತುರ್ತುಪರಿಸ್ಥಿತಿಯ ನಂತರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿದರು. ತೆಲುಗು ದೇಶಂ ಪಕ್ಷದ ಸಂಸ್ಥಾಪಕ ಹಾಗೂ ಖ್ಯಾತ ಚಿತ್ರನಟರಾಗಿದ್ದ ಎನ್‌ಟಿಆರ್ ಅವರ ಮಗಳನ್ನು 1980 ರಲ್ಲಿ ಚಂದ್ರಬಾಬು ನಾಯ್ಡು ವಿವಾಹವಾದರು. 1983ರ ವಿಧಾನ ಸಭಾ ಚುನಾವಣೆಯಲ್ಲಿ ಟಿಡಿಪಿ ಪಕ್ಷದ ಅಭ್ಯರ್ಥಿಯ ಎದುರು ಸೋತ ಬಳಿಕ ಇವರು ಕಾಂಗ್ರೆಸ್ ಬಿಟ್ಟು ಟಿಡಿಪಿ ಸೇರ್ಪಡೆಯಾದರು. 1995 ರಲ್ಲಿ ಮುಖ್ಯಮಂತ್ರಿಯಾಗಿದ್ದ ಹಾಗೂ ಸ್ವತಃ ಮಾವ ಎನ್.ಟಿ. ರಾಮರಾವ್ ವಿರುದ್ಧವೇ ರಾಜಕೀಯ ಬಂಡಾಯ ನಡೆಸಿ ಅವರನ್ನು ಕೆಳಗಿಳಿಸಿ ತಾವೇ ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾದರು. 2004 ರವರೆಗೆ ಮುಖ್ಯಮಂತ್ರಿಯ ಹುದ್ದೆಯಲ್ಲಿ ಮುಂದುವರೆದ ಅವರು ನಂತರ ಹುದ್ದೆಯನ್ನು ಉಳಿಸಿಕೊಳ್ಳಲಾಗಲಿಲ್ಲ. 2014ರ ಚುನಾವಣೆಯಲ್ಲಿ 175 ಸೀಟುಗಳ ಪೈಕಿ 102 ಸೀಟುಗಳನ್ನು ಗೆದ್ದು ಮತ್ತೆ ಮುಂಚೂಣಿಗೆ ಬಂದರು. ಇವರು ಅವಿಭಜಿತ ಆಂಧ್ರ ಪ್ರದೇಶದ ಅತಿ ದೀರ್ಘಕಾಲ ಸೇವೆ ಸಲ್ಲಿಸಿದ ಮುಖ್ಯಮಂತ್ರಿಯಾಗಿದ್ದಾರೆ. ಹಾಗೆಯೇ ಅತಿ ದೀರ್ಘ ಕಾಲ ಪ್ರತಿಪಕ್ಷ ನಾಯಕನಾಗಿ ಕೆಲಸ ಮಾಡಿದ ಹೆಗ್ಗಳಿಕೆಯೂ ಇವರದಾಗಿದೆ.

ಮತ್ತಷ್ಟು ಓದು

ನಾರಾ ಚಂದ್ರಬಾಬು ನಾಯ್ಡು ವಯಕ್ತಿಕ ಜೀವನ

ಪೂರ್ಣ ಹೆಸರು ನಾರಾ ಚಂದ್ರಬಾಬು ನಾಯ್ಡು
ಜನ್ಮ ದಿನಾಂಕ 20 Apr 1950 (ವಯಸ್ಸು 75)
ಹುಟ್ಟಿದ ಸ್ಥಳ ಚಿತ್ತೂರು, ಆಂಧ್ರ ಪ್ರದೇಶ
ಪಕ್ಷದ ಹೆಸರು Telugu Desam
ವಿದ್ಯಾರ್ಹತೆ Post Graduate
ಉದ್ಯೋಗ ರಾಜಕಾರಣಿ ಹಾಗೂ ಸಾಮಾಜಿಕ ಕಾರ್ಯಕರ್ತ
ತಂದೆಯ ಹೆಸರು ಎನ್. ಖರ್ಜೂರಾ ನಾಯ್ಡು
ತಾಯಿಯ ಹೆಸರು ಅಮನಮ್ಮಾ
ಅವಲಂಬಿತರ ಹೆಸರು ನಾರಾ ಭುವನೇಶ್ವರಿ
ಅವಲಂಬಿತರ ಉದ್ಯೋಗ ವ್ಯಾಪಾರೋದ್ಯಮಿ
ಮಕ್ಕಳು 1 ಪುತ್ರ(ರು)
ಧರ್ಮ ಹಿಂದು
ವೆಬ್‌ಸೈಟ್ https://ncbn.in/

ನಾರಾ ಚಂದ್ರಬಾಬು ನಾಯ್ಡು ಒಟ್ಟು ಆಸ್ತಿ

ಒಟ್ಟು ಆಸ್ತಿ
₹921.46 CRORE
ಆಸ್ತಿ
₹931.84 CRORE
ಸಾಲಸೋಲ
₹10.38 CRORE

ನಾರಾ ಚಂದ್ರಬಾಬು ನಾಯ್ಡು ಕುರಿತು ಆಸಕ್ತಿದಾಯಕ ಸಂಗತಿಗಳು

ತಮ್ಮ 28ನೇ ವಯಸ್ಸಿನಲ್ಲಿ ಆಂಧ್ರ ವಿಧಾನ ಸಭೆಯ ಅತಿ ಕಿರಿಯ ಶಾಸಕನಾಗಿ ಆಯ್ಕೆಯಾಗಿ ಮಂತ್ರಿಯೂ ಆದರು. ನಾಯ್ಡು ನೇತೃತ್ವದಲ್ಲಿ ತೆಲುಗು ದೇಶಂ ಪಕ್ಷವು ಆಂಧ್ರ ವಿಧಾನ ಸಭೆಯ 294 ಸ್ಥಾನಗಳ ಪೈಕಿ 185 ಹಾಗೂ 1999ರ ಸಾರ್ವತ್ರಿಕ ಚುನಾವಣೆಯಲ್ಲಿ 42 ಲೋಕಸಭಾ ಸ್ಥಾನಗಳ ಪೈಕಿ 29 ಸ್ಥಾನಗಳನ್ನು ಗೆಲ್ಲುವ ಮೂಲಕ ಆಗಿನ ಬಿಜೆಪಿ ನೇತೃತ್ವದ ಎನ್‌ಡಿಎ ಸಮ್ಮಿಶ್ರ ಸರಕಾರದಲ್ಲಿ ಎರಡನೇ ಅತಿ ದೊಡ್ಡ ಪಕ್ಷವಾಯಿತು. 2003 ರಲ್ಲಿ ನೆಲಬಾಂಬ್ ಸ್ಫೋಟಿಸಿ ಕೊಲೆ ಮಾಡುವ ಯತ್ನದಿಂದ ಸ್ವಲ್ಪದರಲ್ಲೇ ಪಾರಾದರು. ಈ ಸ್ಪೋಟದಿಂದ ಅವರ ಕುತ್ತಿಗೆ ಹಾಗೂ ದೇಹದ ಕೆಲ ಭಾಗಗಳಲ್ಲಿ ಗಾಯಗಳಾಗಿದ್ದವು. ತಮ್ಮ ಚಿಕ್ಕಂದಿನಲ್ಲಿ ಇವರು ಪ್ರತಿದಿನ 11 ಕಿಮೀ ನಡೆದು ಶಾಲೆಗೆ ಹೋಗುತ್ತಿದ್ದರು. 1992ರಲ್ಲಿ ಇವರು ಸ್ಥಾಪಿಸಿದ ಹೆರಿಟೇಜ್ ಗ್ರೂಪ್ ದಕ್ಷಿಣ ಭಾರತದಲ್ಲಿಯೇ ಅತಿದೊಡ್ಡ ಹಾಲಿನ ಡೇರಿ ಉತ್ಪನ್ನ ಸಂಸ್ಥೆಗಳಲ್ಲೊಂದಾಗಿದೆ.

ನಾರಾ ಚಂದ್ರಬಾಬು ನಾಯ್ಡು ಸಾಧನೆಗಳು

ಇಂಡಿಯಾ ಟುಡೇ ಸುದ್ದಿ ಸಂಸ್ಥೆಯ ಐಟಿ ಇಂಡಿಯನ್ ಮ್ಯಾನ್ ಆಫ್ ಮಿಲೇನಿಯಂ ಅವಾರ್ಡ, ಎಕನಾಮಿಕ್ ಟೈಮ್ಸ್‌ನ ಬ್ಯುಸಿನೆಸ್ ಪರ್ಸನ್ ಆಫ್ ದ ಇಯರ್, ಟೈಮ್ ಏಶಿಯಾದ ಸೌಥ್ ಏಶಿಯನ್ ಆಫ್ ದ ಇಯರ್ ಪ್ರಶಸ್ತಿಗಳನ್ನು ಇವರು ಪಡೆದುಕೊಂಡಿದ್ದಾರೆ. ವರ್ಲ್ಡ್ ಎಕನಾಮಿಕ್ ಫೋರಂ ಡ್ರೀಂ ಕ್ಯಾಬಿನೆಟ್ ಸದಸ್ಯರಾಗಿಯೂ ಆಯ್ಕೆಯಾದರು. ಮೇ 2017 ರಲ್ಲಿ ಪರಿವರ್ತನಾ ಮುಖ್ಯಮಂತ್ರಿ ಪ್ರಶಸ್ತಿ ಪಡೆದಿದ್ದಾರೆ.

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+