ಯತೀಂದ್ರ ಸಿದ್ದರಾಮಯ್ಯ ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರದ ಕಾಂಗ್ರೆಸ್ ಶಾಸಕರು. ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪುತ್ರ. ಸ್ಪರ್ಧಿಸಿದ ಮೊದಲ ಚುನಾವಣೆಯಲ್ಲಿಯೇ ಶಾಸಕರಾಗಿ ಆಯ್ಕೆಯಾಗಿ ವಿಧಾನಸಭೆ ಪ್ರವೇಶಿಸಿದರು.
ಎಂಬಿಬಿಎಸ್ ಪದವಿ ಪಡೆದು ವೈದ್ಯರಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದ ಯತೀಂದ್ರ ಸಿದ್ದರಾಮಯ್ಯ ರಾಜಕೀಯಕ್ಕೆ ಬಂದಿರುವುದೇ ಆಕಸ್ಮಿಕ. ಸಿದ್ದರಾಮಯ್ಯ ಮತ್ತೊಬ್ಬ ಪುತ್ರರಾಗಿದ್ದ ರಾಕೇಶ್ ಅಕಾಲಿಕ ಮರಣ ಯತೀಂದ್ರ ರಾಜಕೀಯಕ್ಕೆ ಬರುವಂತೆ ಮಾಡಿತು.
2018ರ ಚುನಾವಣೆ ಸಮಯದಲ್ಲಿ ಸಿದ್ದರಾಮಯ್ಯ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದ ಚುನಾವಣಾ ಕಣಕ್ಕಿಳಿದರು. ವರುಣಾ ಕ್ಷೇತ್ರವನ್ನು ಪುತ್ರನಿಗೆ ಬಿಟ್ಟುಕೊಟ್ಟರು. ಮೊದಲ ಬಾರಿಗೆ ಚುನಾವಣೆ ಎದುರಿಸಿದ ಯತೀಂದ್ರ ಸಿದ್ದರಾಮಯ್ಯ 96,435 ಮತಗಳನ್ನು ಪಡೆದು ಗೆಲುವು ಕಂಡರು.
ಯತೀಂದ್ರ ಸಿದ್ದರಾಮಯ್ಯರದ್ದು ಮೃದು ಸ್ವಭಾವದ ವ್ಯಕ್ತಿತ್ವ. ಎಂ.ಡಿ. ಇನ್ ಪ್ಯಾಥಾಲಜಿ ಮುಗಿಸಿ ತಮ್ಮದೇ ಖಾಸಗಿ ಡಯಗ್ನಾಸ್ಟಿಕ್ ಸಂಸ್ಥೆಯೊಂದನ್ನು ನಡೆಸುತ್ತಿದ್ದವರು. 2016ರಲ್ಲಿ ಸಹೋದರ ರಾಕೇಶ್ ನಿಧನದ ಬಳಿಕ ವರುಣಾ ಕ್ಷೇತ್ರದ ಉಸ್ತುವಾರಿಯನ್ನು ಯತೀಂದ್ರ ನೋಡಿಕೊಳ್ಳುತ್ತಿದ್ದರು.
ತಂದೆ ಮುಖ್ಯಮಂತ್ರಿಯಾದರೂ, ಅಣ್ಣ ಹಾಗೂ ತಂದೆಯ ರಾಜಕಾರಣದ ಪ್ರಭಾವವಿದ್ದರೂ ಯತೀಂದ್ರ ರಾಜಕೀಯದಲ್ಲಿ ಕಾಣಿಸಿಕೊಂಡವರಲ್ಲ. ತಾವಾಯಿತು ವೈದ್ಯಕೀಯ ವೃತ್ತಿಯಾಯ್ತು ಎಂಬಂತಿದ್ದರು. ಆದರೆ ರಾಕೇಶ್ ಅಕಾಲಿಕ ಮರಣದ ಬಳಿಕ ಜವಾಬ್ದಾರಿ ಹೆಚ್ಚಿ ರಾಜಕೀಯಕ್ಕೆ ಬರುವಂತೆ ಆಯಿತು.
| ಪೂರ್ಣ ಹೆಸರು | ಯತೀಂದ್ರ ಸಿದ್ದರಾಮಯ್ಯ |
| ಜನ್ಮ ದಿನಾಂಕ | 27 Jun 1980 (ವಯಸ್ಸು 45) |
| ಹುಟ್ಟಿದ ಸ್ಥಳ | ಬೆಂಗಳೂರು |
| ಪಕ್ಷದ ಹೆಸರು | Indian National Congress |
| ವಿದ್ಯಾರ್ಹತೆ | MBBS at Bangalore Medical College, MD at KLE Deemed University |
| ಉದ್ಯೋಗ | ವೈದ್ಯರು, ರಾಜಕಾರಣಿ |
| ತಂದೆಯ ಹೆಸರು | ಸಿದ್ದರಾಮಯ್ಯ |
| ತಾಯಿಯ ಹೆಸರು | ಪಾರ್ವತಿ |
| ಅವಲಂಬಿತರ ಹೆಸರು | ತಿಳಿದಿಲ್ಲ |
| ಧರ್ಮ | ಹಿಂದು |
| ಜಾತಿ | ಕುರುಬ |
| ವೆಬ್‌ಸೈಟ್ | NA |
Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.