ವೈ. ಎಸ್. ವಿ. ದತ್ತಾ

ವೈ. ಎಸ್. ವಿ. ದತ್ತಾ
ವೈ. ಎಸ್.
By Rashmi | Monday, September 26, 2022, 03:07:09 PM [IST]

ವೈ. ಎಸ್. ವಿ. ದತ್ತಾ ಜೀವನ ಚರಿತ್ರೆ

ವೈ. ಎಸ್. ವಿ. ದತ್ತಾ ಯಗಟಿ ಸೂರ್ಯನಾರಾಯಣ ವೆಂಕಟೇಶ ದತ್ತ) ಜೆಡಿಎಸ್‌ ನಾಯಕ. ಚಿಕ್ಕಮಗಳೂರು ಜಿಲ್ಲೆಯ ಕಡೂರು ಜಿಲ್ಲೆಯ ಮಾಜಿ ಶಾಸಕ.

ಬ್ರಾಹ್ಮಣ ಸಮುದಾಯಕ್ಕೆ ಸೇರಿದ ವೈ. ಎಸ್. ವಿ. ದತ್ತಾ 2006 ರಿಂದ 2012ರ ತನ ವಿಧಾನ ಪರಿಷತ್ ಸದಸ್ಯರಾಗಿದ್ದರು. 2013ರ ಚುನಾವಣೆಯಲ್ಲಿ ಜಯಗಳಿಸುವ ಮೂಲಕ ಶಾಸಕರಾಗಿ ಆಯ್ಕೆಗೊಂಡರು.

2018ರ ಚುನಾವಣೆಯಲ್ಲಿ ವೈ. ಎಸ್‌. ವಿ. ದತ್ತಾ 46,860 ಮತಗಳನ್ನು ಪಡೆದು ಕಡೂರು ಕ್ಷೇತ್ರದಲ್ಲಿ ಬಿಜೆಪಿಯ ಕೆ. ಎಸ್. ಪ್ರಕಾಶ್ ವಿರುದ್ಧ ಸೋಲು ಕಂಡರು.

ಜೆಡಿಎಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ, ಪಕ್ಷದ ವಕ್ತಾರರಾಗಿಯೂ ವೈ. ಎಸ್. ವಿ. ದತ್ತಾ ಕಾರ್ಯ ನಿರ್ವಹಣೆ ಮಾಡಿದ್ದಾರೆ. ಆಟೋದಲ್ಲಿ ಸಂಚಾರ ನಡೆಸುವ ದತ್ತ ಜನರ ಪ್ರೀತಿಯ ದತ್ತಣ್ಣ.

ಸಾಹಿತ್ಯದಲ್ಲಿ ಅಪಾರವಾದ ಆಸಕ್ತಿ ಹೊಂದಿರುವ ವೈ. ಎಸ್. ವಿ. ದತ್ತಾ ರಾಜಕೀಯಕ್ಕೆ ಬರುವ ಮೊದಲು ಶಿಕ್ಷಕರಾಗಿದ್ದರು. ಲಾಕ್‌ಡೌನ್ ಅವಧಿಯಲ್ಲಿ ಎಸ್‌ಎಸ್ಎಲ್‌ಸಿ ಮಕ್ಕಳಿಗೆ ಫೇಸ್‌ಬುಕ್ ಲೈವ್ ಮೂಲಕ ಪಾಠ ಮಾಡುವ ಮೂಲಕ ದತ್ತಾ ಮತ್ತೆ ಶಿಕ್ಷಕರಾಗಿದ್ದರು.

ಸರಳ ಜೀವನಕ್ಕೆ ದತ್ತಣ್ಣ ಬಹಳ ಪ್ರಸಿದ್ಧಿ. ಶಾಸಕರಾಗಿದ್ದಾಗಲೂ ವಿಧಾನಸೌಧಕ್ಕೆ ಆಟೋದಲ್ಲಿ ಆಗಮಿಸುತ್ತಿದ್ದರು. ಆಟೋದಲ್ಲಿ ಸಂಚಾರ ನಡೆಸುವ ಶಾಸಕ ಎಂಬ ಹೆಸರಿನಲ್ಲಿ ಹಲವಾರು ಇಂಗ್ಲಿಶ್‌ ಚಾನೆಲ್‌ಗಳು ವರದಿಗಳನ್ನೂ ಮಾಡಿವೆ.

ಮತ್ತಷ್ಟು ಓದು

ವೈ. ಎಸ್. ವಿ. ದತ್ತಾ ವಯಕ್ತಿಕ ಜೀವನ

ಪೂರ್ಣ ಹೆಸರು ವೈ. ಎಸ್. ವಿ. ದತ್ತಾ
ಜನ್ಮ ದಿನಾಂಕ 24 Jun 1954 (ವಯಸ್ಸು 71)
ಹುಟ್ಟಿದ ಸ್ಥಳ ಯಗಟಿ ಕಡೂರು ಚಿಕ್ಕಮಗಳೂರು ಜಿಲ್ಲೆ
ಪಕ್ಷದ ಹೆಸರು Janata Dal (Secular)
ವಿದ್ಯಾರ್ಹತೆ B. Sc.
ಉದ್ಯೋಗ ಶಿಕ್ಷಕ, ರಾಜಕಾರಣಿ
ತಂದೆಯ ಹೆಸರು ವೈ. ವಿ. ಸೂರ್ಯನಾರಾಯಣ
ತಾಯಿಯ ಹೆಸರು NA
ಅವಲಂಬಿತರ ಹೆಸರು ದಿ. ಆರ್. ನಿರ್ಮಲಾ
ಅವಲಂಬಿತರ ಉದ್ಯೋಗ ಗೃಹಿಣಿ
ಧರ್ಮ ಹಿಂದು
ಜಾತಿ ಬ್ರಾಹ್ಮಣ
ವೆಬ್‌ಸೈಟ್ jds.ind.in

ವೈ. ಎಸ್. ವಿ. ದತ್ತಾ ಒಟ್ಟು ಆಸ್ತಿ

ಒಟ್ಟು ಆಸ್ತಿ
₹2.22 CRORE
ಆಸ್ತಿ
₹3.15 CRORE
ಸಾಲಸೋಲ
₹93.2 LAKHS

ವೈ. ಎಸ್. ವಿ. ದತ್ತಾ ಕುರಿತು ಆಸಕ್ತಿದಾಯಕ ಸಂಗತಿಗಳು

ಬಿಎಸ್‌ಸಿ ಪದವೀಧರರಾದ ವೈ. ಎಸ್. ವಿ. ದತ್ತಾ ರಾಜಕೀಯಕ್ಕೆ ಬರುವ ಮೊದಲು ಶಿಕ್ಷಕರಾಗಿದ್ದರು.

ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಆನ್‌ಲೈನ್ ಮೂಲಕ 10ನೇ ತರಗತಿ ವಿದ್ಯಾರ್ಥಿಗಳಿಗೆ ಗಣಿತ ಪಾಠ ಮಾಡುತ್ತಿದ್ದರು.

ಶಾಸಕರಾಗಿದ್ದಾಗ ಆಟೋದಲ್ಲಿ ವಿಧಾನಸೌಧಕ್ಕೆ ಆಗಮಿಸುತ್ತಿದ್ದರು.

ವೈ. ಎಸ್. ವಿ. ದತ್ತಾ ರಾಜಕೀಯ ಟೈಮ್‌ಲೈನ್

  • 2018: 46,860 ಮತಗಳನ್ನು ಪಡೆದು ಚುನಾವಣೆಯಲ್ಲಿ ಸೋಲು
  • 2013: 68,733 ಮತಗಳನ್ನು ಪಡೆದು ಶಾಸಕರಾಗಿ ಆಯ್ಕೆ
  • 2006: ವಿಧಾನ ಪರಿಷತ್ ಸದಸ್ಯರಾಗಿ ನೇಮಕ

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+