Get Updates
Get notified of breaking news, exclusive insights, and must-see stories!

ವಿ. ಸೋಮಣ್ಣ

ವಿ. ಸೋಮಣ್ಣ
ಬೆಂಗಳೂರಿನ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರು ವಿ. ಸೋಮಣ್ಣ.
By Moumi Majumdar | Tuesday, August 23, 2022, 01:27:11 PM [IST]

ವಿ. ಸೋಮಣ್ಣ ಜೀವನ ಚರಿತ್ರೆ

ಬೆಂಗಳೂರಿನ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರು ವಿ. ಸೋಮಣ್ಣ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ವಸತಿ ಸಚಿವರು. ಲಿಂಗಾಯತ ಸಮುದಾಯದ ಪ್ರಭಾವಿ ನಾಯಕರು ಎಲ್ಲಾ ಪಕ್ಷದ ನಾಯಕರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ.

ಐದು ಬಾರಿ ಶಾಸಕರಾಗಿ, ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾದ ವಿ. ಸೋಮಣ್ಣ ಅಪಾರ ರಾಜಕೀಯ ಅನುಭವ ಹೊಂದಿದ್ದಾರೆ. ಬೆಂಗಳೂರು ನಗರದ ರಾಜಕೀಯದ ಮೇಲೆ ಭಾರೀ ಹಿಡಿತ ಹೊಂದಿದ್ದಾರೆ. ಮೊದಲು ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿ, ಸಚಿವರಾಗಿದ್ದ ಸೋಮಣ್ಣ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿ ಸೇರಿದರು.

ಬೆಂಗಳೂರು ನಗರಾಭಿವೃದ್ಧಿ, ಆಹಾರ, ತೋಟಗಾರಿಕೆ, ಬಂದೀಖಾನೆ, ಸೈನಿಕ ಕಲ್ಯಾಣ, ವಸತಿ ಖಾತೆಗಳ ಸಚಿವರಾಗಿ ಕೆಲಸ ಮಾಡಿದ್ದಾರೆ. ಬಿ. ಎಸ್. ಯಡಿಯೂರಪ್ಪ ಸಂಪುಟದಲ್ಲಿ ವಸತಿ ಸಚಿವರಾಗಿದ್ದ ವಿ. ಸೋಮಣ್ಣ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಮೇಲೆಯೂ ಮತ್ತೆ ಸಚಿವರಾಗಿ ಅದೇ ಖಾತೆಯನ್ನು ಪಡೆದರು.

ಕಾಲೇಜು ದಿನಗಳಲ್ಲಿಯೇ ವಿದ್ಯಾರ್ಥಿ ಸಂಘಟನೆಗಳ ನಾಯಕರಾಗಿದ್ದ ವಿ. ಸೋಮಣ್ಣ 1983ರಲ್ಲಿ ಬೆಂಗಳೂರಿನ ವಿಜಯನಗರದಿಂದ ಮಹಾನಗರ ಪಾಲಿಕೆ ಸದಸ್ಯರಾಗಿ, ವಿವಿಧ ಸ್ಥಾಯಿ ಸಮಿತಿಗಳ ಸದಸ್ಯರಾಗಿ, ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಸಂಘಟನಾ ಚತುರ ಎಂದು ಅವರು ಹೆಸರು ಪಡೆದಿದ್ದಾರೆ.

ವಿ. ಸೋಮಣ್ಣ 1994ರಲ್ಲಿ ಬಿನ್ನಿಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಗೆಲವು ಸಾಧಿಸುವ ಮೂಲಕ ದಾಖಲೆ ಬಹುಮತದಿಂದ ಶಾಸಕರಾಗಿ ಆಯ್ಕೆಯಾದರು. 1996ರಲ್ಲಿ ಬಂದೀಖಾನೆ ಸಚಿವರಾಗಿ ಹಾಗೂ 1999ರಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಕಾರ್ಯ ನಿರ್ವಹಣೆ ಮಾಡಿದರು.

1999ರ ಚುನಾವಣೆಯಲ್ಲಿ ಬಿನ್ನಿಪೇಟೆ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಆಯ್ಕೆಯಾದರು. 2004ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ, 2008ರಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಿಂದ 4ನೇ ಬಾರಿ ಆಯ್ಕೆಯಾದರು.

ಬಳಿಕ ಬಿಜೆಪಿ ಸೇರಿದ ವಿ. ಸೋಮಣ್ಣ ವಸತಿ ಮತ್ತು ಮುಜರಾಯಿ ಸಚಿವರಾದರು. ಜೂನ್‌ 2010ರಲ್ಲಿ ವಿಧಾನ ಪರಿಷತ್‌ ಸದಸ್ಯರಾಗಿ ಆಯ್ಕೆಗೊಂಡರು. ಬಳಿಕ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರಾಗಿ, 2010 ರಿಂದ 2013ರ ತನಕ ವಸತಿ ಸಚಿವರಾಗಿ ಕಾರ್ಯ ನಿರ್ವಹಣೆ ಮಾಡಿದರು.

ಮತ್ತಷ್ಟು ಓದು

ವಿ. ಸೋಮಣ್ಣ ವಯಕ್ತಿಕ ಜೀವನ

ಪೂರ್ಣ ಹೆಸರು ವಿ. ಸೋಮಣ್ಣ
ಜನ್ಮ ದಿನಾಂಕ 20 Jul 1950 (ವಯಸ್ಸು 75)
ಹುಟ್ಟಿದ ಸ್ಥಳ ದೊಡ್ಡಮರಳವಾಡಿ
ಪಕ್ಷದ ಹೆಸರು Bharatiya Janta Party
ವಿದ್ಯಾರ್ಹತೆ V.V. Pura Evening College of Arts & Commerce
ಉದ್ಯೋಗ ರಾಜಕಾರಣಿ
ತಂದೆಯ ಹೆಸರು ದಿ. ವೀರಣ್ಣ
ತಾಯಿಯ ಹೆಸರು ಕೆಂಪಮ್ಮ
ಅವಲಂಬಿತರ ಹೆಸರು ಶೈಲಜಾ
ಅವಲಂಬಿತರ ಉದ್ಯೋಗ ಕೃಷಿ
ಧರ್ಮ ಹಿಂದು
ಜಾತಿ ಲಿಂಗಾಯತ
ವೆಬ್‌ಸೈಟ್ vsomanna.in

ವಿ. ಸೋಮಣ್ಣ ಒಟ್ಟು ಆಸ್ತಿ

ಒಟ್ಟು ಆಸ್ತಿ
₹40.8 CRORE
ಆಸ್ತಿ
₹48.24 CRORE
ಸಾಲಸೋಲ
₹7.44 CRORE

ವಿ. ಸೋಮಣ್ಣ ಕುರಿತು ಆಸಕ್ತಿದಾಯಕ ಸಂಗತಿಗಳು

ರಾಜಕೀಯದ ಹೊರತಾಗಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿ. ಸೋಮಣ್ಣ ಅಪಾರ ಆಸಕ್ತಿ ಹೊಂದಿದ್ದಾರೆ.

ಆರ್ಯಸೇವಾಶ್ರಮದ ಟ್ರಸ್ಟಿಯಾಗಿದ್ದಾರೆ.

ಜನಸ್ಪಂದನ ಟ್ರಸ್ಟ್‌ನ ಗೌರವಾಧ್ಯಕ್ಷರು.

ವಿ. ಸೋಮಣ್ಣ ರಾಜಕೀಯ ಟೈಮ್‌ಲೈನ್

  • 2021 : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟ ಸೇರ್ಪಡೆ. ವಸತಿ ಇಲಾಖೆ, ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆ ಹೊಣೆ
  • 2019 : ವಸತಿ ಸಚಿವರಾಗಿ ವಿ. ಸೋಮಣ್ಣ ಬಿ. ಎಸ್. ಯಡಿಯೂರಪ್ಪ ಸಂಪುಟ ಸೇರಿದರು.
  • 2019 – 2020 : ತೋಟಗಾರಿಕಾ ಸಚಿವರಾಗಿ ಕಾರ್ಯ ನಿರ್ವಹಣೆ
  • 2019 – 2020 : ಕರ್ನಾಟಕ ಸರ್ಕಾರದಲ್ಲಿ ರೇಷ್ಮೆ ಸಚಿವರಾಗಿ ಕಾರ್ಯ ನಿರ್ವಹಣೆ
  • 2018 : ಬೆಂಗಳೂರಿನ ಗೋವಿಂದರಾಜ ನಗರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ
  • 2010 – 2010 : ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವರಾಗಿ ಕರ್ತವ್ಯ
  • 2010 – 2018 : ಕರ್ನಾಟಕ ವಿಧಾನ ಪರಿಷತ್ ಸದಸ್ಯರಾಗಿ ಕಾರ್ಯ ನಿರ್ವಹಣೆ
  • 2009 – 2009 : ಕರ್ನಾಟಕ ಸರ್ಕಾರದಲ್ಲಿ ಮುಜರಾಯಿ ಇಲಾಖೆ ಸಚಿವರಾಗಿ ಕಾರ್ಯ ನಿರ್ವಹಣೆ

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+