ಭಾರತದ ಹಿಂದಿ ಚಿತ್ರರಂಗದ ಖ್ಯಾತ ನಟಿ ಊರ್ಮಿಳಾ ಮಾತೋಂಡ್ಕರ್. ಈಕೆ ಮೂರು ದಶಕಗಳ ಕಾಲ ಹಿಂದಿ ಚಿತ್ರರಂಗದಲ್ಲಿ ವಿವಿದ ಪಾತ್ರಗಳಲ್ಲಿ ನಟಿಸಿ ಜನಪ್ರೀಯತೆ ಗಳಿಸಿದ್ದಾರೆ. ಅಲ್ಲದೇ ಮರಾಠಿ, ತೆಲುಗು, ತಮಿಳು, ಮಲಯಾಳಂ ಭಾಷೆಯ ಚಿತ್ರದಲ್ಲೂ ನಟಿಸಿದ ಬಹುಭಾಷಾ ತಾರೆ. 1980ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಊರ್ಮಿಳಾ ಹಲವು ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಅಲ್ಲದೇ ವಾಣಿಜ್ಯ ಕ್ಷೇತ್ರದಲ್ಲೂ ಗಲ್ಲಾ ಪೆಟ್ಟಿಗೆ ದೋಚುವಲ್ಲಿ ಯಶಸ್ವಿಯಾಗಿವೆ. ಭೂತ್, ಏಕ್ ಹಸೀನಾ ಥೀ, ನೈನಾ, ಮೈನೆ ಗಾಂಧಿ ಕೋ ನಹೀನ್ ಮಾರಾ ಸೇರಿದಂತೆ ಮುಂತಾದ ಖ್ಯಾತನಾಮ ಚಿತ್ರಗಳ ಪ್ರಮುಖ ಭೂಮಿಕೆಯಲ್ಲಿ ೨೦೦೪ರವರೆಗೂ ಊರ್ಮಿಳಾ ನಟಿಸಿ ಸೈ ಎನಿಸಿಕೊಂಡಿದ್ದಾರೆ. 2019ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಊರ್ಮಿಳಾ ಮಾತೋಂಡ್ಕರ್ ಉತ್ತರ ಮುಂಬೈ ಲೋಕಸಭಾ ಕ್ಷೇತ್ರದಿಂದ ಅದೃಷ್ಟಪರೀಕ್ಷೆಗೆ ಇಳಿದರು. ಆದರೂ ಅವರಿಗೆ ರಾಜಕೀಯವಾಗಿ ಅದೃಷ್ಟ ಕೈಹಿಡಿಯದೇ ಅವರು ಸೋಲನ್ನು ಅನುಭವಿಸುವಂತಾಯಿತು.
| ಪೂರ್ಣ ಹೆಸರು | ಊರ್ಮಿಳಾ ಮಾಡೋಂಡ್ಕರ್ |
| ಜನ್ಮ ದಿನಾಂಕ | 04 Feb 1974 (ವಯಸ್ಸು 52) |
| ಹುಟ್ಟಿದ ಸ್ಥಳ | ಮುಂಬೈ ಮಹಾರಾಷ್ಟ್ರ, ಭಾರತ |
| ಪಕ್ಷದ ಹೆಸರು | Indian National Congress |
| ವಿದ್ಯಾರ್ಹತೆ | |
| ಉದ್ಯೋಗ | ನಟಿ, ರಾಜಕಾರಣಿ |
| ತಂದೆಯ ಹೆಸರು | ಶಿವೇಂದ್ರ ಸಿಂಗ್ |
| ತಾಯಿಯ ಹೆಸರು | ರುಕ್ಸಾನಾ ಸುಲ್ತಾನಾ |
| ಅವಲಂಬಿತರ ಹೆಸರು | ಮೊಹಸಿನ್ ಅಕ್ತರ್ ಮಿರ್ |
| ಅವಲಂಬಿತರ ಉದ್ಯೋಗ | ಮಾಡೆಲ್ ಮತ್ತು ಉದ್ಯಮಿ |
Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.