Get Updates
Get notified of breaking news, exclusive insights, and must-see stories!

ಯು. ಟಿ. ಖಾದರ್

ಯು. ಟಿ. ಖಾದರ್
ಯು. ಟಿ.
By Moumi Majumdar | Wednesday, August 24, 2022, 01:14:47 PM [IST]

ಯು. ಟಿ. ಖಾದರ್ ಜೀವನ ಚರಿತ್ರೆ

ಯು. ಟಿ. ಖಾದರ್ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಕಾಂಗ್ರೆಸ್ ಶಾಸಕ. ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ಉಪ ನಾಯಕ. ಕರ್ನಾಟಕದ ಮುಸ್ಲಿಂ ರಾಜಕೀಯ ನಾಯಕರಲ್ಲಿ ಪ್ರಭಾವಿ ನಾಯಕರು.

2007ರಲ್ಲಿ ಯು. ಟಿ. ಖಾದರ್ ತಂದೆ ಯು. ಟಿ. ಫರೀದ್ ನಿಧನದ ನಂತರ ಉಳ್ಳಾಲ ಕ್ಷೇತ್ರಕ್ಕೆ ಉಪ ಚುನಾವಣೆ ಎದುರಾಯಿತು. ಆಗ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದ ಯು. ಟಿ. ಖಾದರ್ ಮೊದಲ ಬಾರಿಗೆ ಗೆದ್ದು ವಿಧಾನಸಭೆ ಪ್ರವೇಶಿಸಿದರು.

ಬಳಿಕ 2008ರ ಚುನಾವಣೆ ಸಂದರ್ಭದಲ್ಲಿ ಉಳ್ಳಾಲ ಮತ್ತು ಇತರ ಪ್ರದೇಶಗಳನ್ನು ಸೇರಿಸಿ ಮಂಗಳೂರು ವಿಧಾನಸಭಾ ಕ್ಷೇತ್ರ ರಚನೆ ಮಾಡಲಾಯಿತು. ಯು. ಟಿ. ಖಾದರ್ 2008, 2013 ಮತ್ತು 2018ರ ವಿಧಾನಸಭೆ ಚುನಾವಣೆಗಳಲ್ಲಿ ಮಂಗಳೂರು ಕ್ಷೇತದಿಂದ ಗೆಲವು ಸಾಧಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಆರೋಗ್ಯ ಸಚಿವರಾಗಿದ್ದ ಯು. ಟಿ. ಖಾದರ್, 2018ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಎಚ್. ಡಿ. ಕುಮಾರಸ್ವಾಮಿ ಸಂಪುಟದಲ್ಲಿ ನಗರಾಭಿವೃದ್ಧಿ (ಬಿಬಿಎಂಪಿ) ಹೊರತುಪಡಿಸಿ, ವಸತಿ ಸಚಿವರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.

ಕಾನೂನು ಪದವೀಧರರಾಗಿರುವ ಯು. ಟಿ. ಖಾದರ್ ಎನ್‌ಎಸ್‌ಯುಐನಲ್ಲಿ ಸಕ್ರಿಯರಾಗಿದ್ದರು. 1992ರಲ್ಲಿ ಜಿಲ್ಲಾ ಎನ್‌ಎಸ್‌ಯುಐ ಪ್ರಧಾನ ಕಾರ್ಯದರ್ಶಿಯಾಗಿ, 1994ರಲ್ಲಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಣೆ ಮಾಡಿದರು.

ಮಂಗಳೂರು ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿಯೂ ಕಾರ್ಯ ನಿರ್ವಹಣೆ ಮಾಡಿದ್ದಾರೆ. 2002ರಲ್ಲಿ ಅಖಿಲ ಭಾರತ ಸೇವಾದಳದ ಮಾರ್ಗದರ್ಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಜನರೊಂದಿಗೆ ಸದಾ ಬೆರೆಯುವ ಯು. ಟಿ. ಖಾದರ್ ಮಂಗಳೂರು ನಗರದಲ್ಲಿ ಸಂಚಾರ ದಟ್ಟಣೆ ಉಂಟಾದಾಗ ಕಾರಿನಿಂದ ಇಳಿದು ಸಂಚಾರಿ ಪೊಲೀಸರಂತೆ ಕಾರ್ಯ ನಿರ್ವಹಣೆ ಮಾಡುತ್ತಾರೆ. ರಸ್ತೆ ಅಪಘಾತಗಳು ಆದಾಗ ಗಾಯಾಳುಗಳನ್ನು ತಮ್ಮ ಕಾರಿನಲ್ಲೇ ಆಸ್ಪತ್ರೆಗೆ ಕಳಿಸಿಕೊಟ್ಟಿದ್ದಾರೆ.

ಮತ್ತಷ್ಟು ಓದು

ಯು. ಟಿ. ಖಾದರ್ ವಯಕ್ತಿಕ ಜೀವನ

ಪೂರ್ಣ ಹೆಸರು ಯು. ಟಿ. ಖಾದರ್
ಜನ್ಮ ದಿನಾಂಕ 12 Oct 1969 (ವಯಸ್ಸು 56)
ಹುಟ್ಟಿದ ಸ್ಥಳ ಮಂಗಳೂರು
ಪಕ್ಷದ ಹೆಸರು Indian National Congress
ವಿದ್ಯಾರ್ಹತೆ Graduate Professional
ಉದ್ಯೋಗ ರಾಜಕಾರಣಿ
ತಂದೆಯ ಹೆಸರು ಹಾಜಿ ಯು. ಟಿ. ಫರೀದ್
ತಾಯಿಯ ಹೆಸರು ನಸೀಮಾ
ಅವಲಂಬಿತರ ಹೆಸರು ಲಮೀಸ್ ಖಾದರ್
ಅವಲಂಬಿತರ ಉದ್ಯೋಗ ವ್ಯಾಪಾರ
ಧರ್ಮ ಇಸ್ಲಾಂ
ಜಾತಿ ಮುಸ್ಲಿಂ

ಯು. ಟಿ. ಖಾದರ್ ಒಟ್ಟು ಆಸ್ತಿ

ಒಟ್ಟು ಆಸ್ತಿ
₹6.28 CRORE
ಆಸ್ತಿ
₹6.98 CRORE
ಸಾಲಸೋಲ
₹69.81 LAKHS

ಯು. ಟಿ. ಖಾದರ್ ಕುರಿತು ಆಸಕ್ತಿದಾಯಕ ಸಂಗತಿಗಳು

ಸರಳ ಮತ್ತು ಸದಾ ಜನರೊಂದಿಗೆ ಬೆರೆಯುವ ಯುವ ನಾಯಕ.

ಮಂಗಳೂರು ನಗರದಲ್ಲಿ ಸಂಚಾರ ದಟ್ಟಣೆ ಉಂಟಾದಾಗ ಹಲವು ಬಾರಿ ಕಾರಿನಿಂದ ಇಳಿದು ಸಂಚಾರಿ ಪೊಲೀಸ್ ಆಗಿ ಕಾರ್ಯ ನಿರ್ವಹಣೆ.

ಮೋಟಾರ್ ಕ್ರಾಸಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಿರುವ ಯು. ಟಿ. ಖಾದರ್ ರಾಜ್ಯ, ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಯು. ಟಿ. ಖಾದರ್ ರಾಜಕೀಯ ಟೈಮ್‌ಲೈನ್

  • 2022: ಕರ್ನಾಟಕ ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕರಾಗಿ ನೇಮಕ
  • 2018: 80,813 ಮತಗಳನ್ನು ಪಡೆದು ಶಾಸಕರಾಗಿ ಆಯ್ಕೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಎಚ್. ಡಿ. ಕುಮಾರಸ್ವಾಮಿ ಸಂಪುಟದಲ್ಲಿ ವಸತಿ, ನಗರಾಭಿವೃದ್ಧಿ ಸಚಿವ ಖಾತೆ ಹೊಣೆ.
  • 2013: ಮಂಗಳೂರು ಕ್ಷೇತ್ರದಿಂದ ಮತ್ತೆ ಶಾಸಕರಾಗಿ ಆಯ್ಕೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಆರೋಗ್ಯ ಸಚಿವರಾಗಿ ಕಾರ್ಯ ನಿರ್ವಹಣೆ.
  • 2008: ಮಂಗಳೂರು ಕ್ಷೇತ್ರದಿಂದ ಯು. ಟಿ. ಖಾದರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ, ಗೆಲುವು
  • 2007: ಉಳ್ಳಾಲ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆಲುವು. ಮೊದಲ ಬಾರಿಗೆ ಶಾಸಕರಾಗಿ ಆಯ್ಕೆ
  • 2002: ಅಖಿಲ ಭಾರತ ಸೇವಾದಳದ ಮಾರ್ಗದರ್ಶಕರಾಗಿಯೂ ಸೇವೆ
  • 1994: ಎನ್‌ಎಸ್‌ಯುಐ ಅಧ್ಯಕ್ಷರಾಗಿ ಸೇವೆ. ಮಂಗಳೂರು ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿ ನೇಮಕ
  • 1992: ಎನ್‌ಎಸ್‌ಯುಐನಲ್ಲಿ ಸಕ್ರಿಯರಾಗಿದ್ದ ಯು. ಟಿ. ಖಾದರ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ

ಯು. ಟಿ. ಖಾದರ್ ಸಾಧನೆಗಳು

2018ರ ಚುನಾವಣೆಯಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಗೆಲುವು ಸಾಧಿಸಿದ ಏಕೈಕ ಕಾಂಗ್ರೆಸ್ ನಾಯಕ

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+