ಸುಮಿತ್ರಾ ಮಹಾಜನ್ ಭಾರತೀಯ ಲೋಕಸಭೆಯ ಅತಿ ಹಿರಿಯ ಸದಸ್ಯೆ. ಮಧ್ಯಪ್ರದೇಶದ ಇಂದೋರ್ ಲೋಕಸಭಾ ಕ್ಷೇತ್ರದಿಂದ ನಿರಂತರವಾಗಿ ಅವರು ಎಂಟು ಬಾರಿ ಜಯಗಳಿಸಿ ಸಂಸದರಾಗಿದ್ದವರು. ಅವರ ಕ್ಷೇತ್ರದಲ್ಲಿ ಅವರು ತಾಯಿ ಎಂದೇ ಚಿರಪರಿಚಿತರು.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದರು. ತಮ್ಮ ಕ್ಷೇತ್ರದಲ್ಲಿ ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಆಗಾಗ್ಗೆ ಆಯೋಜಿಸುವ ಮೂಲಕ, ಸಂಘ-ಸಂಸ್ಥೆಗಳನ್ನು ಈ ನಿಟ್ಟಿನಲ್ಲಿ ಪ್ರೋತ್ಸಾಹಿಸುವ ಮೂಲಕ ಸಾಕ್ಷರತೆ ಹೆಚ್ಚಳಕ್ಕೂ ಇವರು ಶ್ರಮಿಸಿದವರು.
ಆದರೆ 75 ವರ್ಷ ಮೇಲ್ಪಟ್ಟವರಿಗೆ ಟಿಕೆಟಿಲ್ಲ ಎಂಬ ಬಿಜೆಪಿ ನಿಯಮದ ಅಡಿಯಲ್ಲಿ 2019ರಲ್ಲಿ ಅವರಿಗೆ ಲೋಕಸಭೇಗೆ ಸ್ಪರ್ಧಿಸಲು ಟಿಕೆಟ್ ನೀಡಲಿಲ್ಲ.
| ಪೂರ್ಣ ಹೆಸರು | ಸುಮಿತ್ರಾ ಮಹಾಜನ್ |
| ಹುಟ್ಟಿದ ಸ್ಥಳ | ಚಿಪ್ಲೂನ್, ರತ್ನಗಿರಿ ಜಿಲ್ಲೆ ಮಹಾರಾಷ್ಟ್ರ |
| ಪಕ್ಷದ ಹೆಸರು | Bharatiya Janta Party |
| ವಿದ್ಯಾರ್ಹತೆ | Post Graduate |
| ಉದ್ಯೋಗ | ರಾಜಕಾರಣಿ |
| ತಂದೆಯ ಹೆಸರು | ಪುರುಷೋತ್ತಮ ನೀಲೆಕಾಂತ್ ಸಾಥೆ |
| ತಾಯಿಯ ಹೆಸರು | ಉಷಾ |
| ಅವಲಂಬಿತರ ಹೆಸರು | ಜಯಂತ್ ಮಹಾಜನ್ |
| ಅವಲಂಬಿತರ ಉದ್ಯೋಗ | ವಕೀಲರು |
| ಮಕ್ಕಳು | 2 ಪುತ್ರ(ರು) |
Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.