Get Updates
Get notified of breaking news, exclusive insights, and must-see stories!

ಶತ್ರುಘ್ನ ಪ್ರಸಾದ ಸಿನ್ಹಾ

ಶತ್ರುಘ್ನ ಪ್ರಸಾದ ಸಿನ್ಹಾ
ಮೂಲತಃ ಚಲನ ಚಿತ್ರನಟರಾಗಿದ್ದ ಶತ್ರುಘ್ನ ಸಿನ್ಹಾ ಭಾರತೀಯ ಜನತಾ ಪಕ್ಷ ಸೇರಿ ತಮ್ಮ ರಾಜಕೀಯ ಜೀವನ ಆರಂಭಿಸಿದರು. ಉಪಚುನಾವಣೆಯೊಂದರಲ್ಲಿ ರಾಜೇಶ ಖನ್ನಾ ವಿರುದ್ಧ ಚುನಾವಣೆಗೆ ಸ್ಪರ್ಧಿಸಿ ರಾಜಕೀಯಕ್ಕೆ ಕಾಲಿಟ್ಟರು.
By Rashmi | Thursday, May 30, 2019, 03:45:57 PM [IST]

ಶತ್ರುಘ್ನ ಪ್ರಸಾದ ಸಿನ್ಹಾ ಜೀವನ ಚರಿತ್ರೆ

ಮೂಲತಃ ಚಲನ ಚಿತ್ರನಟರಾಗಿದ್ದ ಶತ್ರುಘ್ನ ಸಿನ್ಹಾ ಭಾರತೀಯ ಜನತಾ ಪಕ್ಷ ಸೇರಿ ತಮ್ಮ ರಾಜಕೀಯ ಜೀವನ ಆರಂಭಿಸಿದರು. ಉಪಚುನಾವಣೆಯೊಂದರಲ್ಲಿ ರಾಜೇಶ ಖನ್ನಾ ವಿರುದ್ಧ ಚುನಾವಣೆಗೆ ಸ್ಪರ್ಧಿಸಿ ರಾಜಕೀಯಕ್ಕೆ ಕಾಲಿಟ್ಟರು. ಆದರೆ ಖನ್ನಾ ವಿರುದ್ಧ ಚುನಾವಣೆಗೆ ಸ್ಪರ್ಧಿಸಿದ್ದು ತಮ್ಮ ಜೀವನದ ಅತಿ ದೊಡ್ಡ ತಪ್ಪು ಎಂದು ಅವರೇ ಒಂದು ಬಾರಿ ಹೇಳಿಕೊಂಡಿದ್ದರು. ಈ ಚುನಾವಣೆಯಲ್ಲಿ ಶತ್ರುಘ್ನ ವಿರುದ್ಧ ಖನ್ನಾ ಭಾರಿ ಮತಗಳ ಅಂತರದಿಂದ ಜಯಿಸಿದರೂ ಅದರ ನಂತರ ಖನ್ನಾ ಯಾವತ್ತೂ ಶತ್ರುಘ್ನ ಜೊತೆಗೆ ಮಾತನಾಡಲಿಲ್ಲ. ಶತ್ರುಘ್ನ ಅವರ ಸ್ಪರ್ಧೆಯಿಂದ ತೀರಾ ನೊಂದಿದ್ದ ಖನ್ನಾ ಅವರನ್ನು ಶತ್ರುಘ್ನ ಅವರು ಸಮಾಧಾನಿಸಲು ಯತ್ನಿಸಿ ಮತ್ತೆ ಗೆಳೆತನ ಮುಂದುವರೆಸಲು ಬಯಸಿದರೂ ಯಾವುದೇ ಕಾರಣಕ್ಕೂ ಖನ್ನಾ ಅವರೊಂದಿಗೆ ಮಾತನಾಡಲೇ ಇಲ್ಲ. ಖನ್ನಾ 2012 ರಲ್ಲಿ ತೀರಿಕೊಳ್ಳುವವರೆಗೂ ಶತ್ರುಘ್ನ ಜೊತೆಗೆ ಮಾತಾಡಲಿಲ್ಲ.
2009 ರ ಸಾರ್ವತ್ರಿಕ ಚುನಾವಣೆಯಲ್ಲಿ ಶತ್ರುಘ್ನ ಪಾಟ್ನಾ ಸಾಹಿಬ್ ಲೋಕಸಭಾ ಕ್ಷೇತ್ರದಲ್ಲಿ ಜಯಗಳಿಸಿ ಸಂಸದರಾದರು. 2009 ರಿಂದ 2014 ಹಾಗೂ 2014 ರಿಂದ 2019 ರವರೆಗೆ ಎರಡು ಅವಧಿಯಲ್ಲಿ ಶತ್ರುಘ್ನ ರಾಜ್ಯಸಭಾ ಸದಸ್ಯರಾಗಿದ್ದರು.
13ನೇ ಲೋಕಸಭಾ ಅವಧಿಯಲ್ಲಿ ಮೂರನೇ ಬಾರಿಗೆ ವಾಜಪೇಯಿ ಸರಕಾರದಲ್ಲಿ ಶತ್ರುಘ್ನ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಮತ್ತು ಹಡಗು ಖಾತೆ ಸಚಿವರಾದರು.
2006 ರಲ್ಲಿ ಬಿಜೆಪಿಯ ಕಲೆ ಹಾಗೂ ಸಂಸ್ಕೃತಿ ವಿಭಾಗದ ಮುಖ್ಯಸ್ಥರಾಗಿ ನೇಮಕವಾದರು. ನಂತರ ಮತ್ತೊಬ್ಬ ಚಲನಚಿತ್ರ ನಟ ಶೇಖರ ಸುಮನ ಅವರ ಎದುರು ಚುನಾವಣೆ ಗೆದ್ದರು. 2014 ರ ಸಾರ್ವತ್ರಿಕ ಚುನಾವಣೆಯಲ್ಲಿ ಜಯಿಸಿ ಮತ್ತೆ ಸಂಸದರಾದರು.

ಮತ್ತಷ್ಟು ಓದು

ಶತ್ರುಘ್ನ ಪ್ರಸಾದ ಸಿನ್ಹಾ ವಯಕ್ತಿಕ ಜೀವನ

ಪೂರ್ಣ ಹೆಸರು ಶತ್ರುಘ್ನ ಪ್ರಸಾದ ಸಿನ್ಹಾ
ಜನ್ಮ ದಿನಾಂಕ 15 Jul 1946 (ವಯಸ್ಸು 79)
ಹುಟ್ಟಿದ ಸ್ಥಳ ಪಾಟ್ನಾ, ಬಿಹಾರ
ಪಕ್ಷದ ಹೆಸರು All India Trinamool Congress
ವಿದ್ಯಾರ್ಹತೆ Graduate
ಉದ್ಯೋಗ ಚಿತ್ರನಟ, ಸಾಮಾಜಿಕ ಕಾರ್ಯಕರ್ತ
ತಂದೆಯ ಹೆಸರು ದಿವಂಗತ ಶ್ರೀ ಬಿ.ಪಿ. ಸಿನ್ಹಾ
ತಾಯಿಯ ಹೆಸರು ದಿವಂಗತ ಶ್ರೀ ಶ್ಯಾಮಾ ದೇವಿ ಸಿನ್ಹಾ
ಅವಲಂಬಿತರ ಹೆಸರು ಶ್ರೀಮತಿ ಪೂನಂ ಸಿನ್ಹಾ
ಮಕ್ಕಳು 2 ಪುತ್ರ(ರು) 1 ಪುತ್ರಿ(ಯರು)
ವೆಬ್‌ಸೈಟ್ sinhashatrughan.in

ಶತ್ರುಘ್ನ ಪ್ರಸಾದ ಸಿನ್ಹಾ ಒಟ್ಟು ಆಸ್ತಿ

ಒಟ್ಟು ಆಸ್ತಿ
₹192.9 CRORE
ಆಸ್ತಿ
₹210.5 CRORE
ಸಾಲಸೋಲ
₹17.61 CRORE

ಶತ್ರುಘ್ನ ಪ್ರಸಾದ ಸಿನ್ಹಾ ಕುರಿತು ಆಸಕ್ತಿದಾಯಕ ಸಂಗತಿಗಳು

ರೆಡಿಫ್ ಸಂಸ್ಥೆಯ ಭಾರತೀಯ ಹಿಂದಿ ಚಿತ್ರರಂಗದ ಅತ್ಯಂತ ಅಸಾಂಪ್ರದಾಯಿಕ ನಟರ ಪಟ್ಟಿಯಲ್ಲಿ ಸಿನ್ಹಾ ಸ್ಥಾನ ಪಡೆದರು. (ಅಜಯ ದೇವಗನ್, ಅಮಿತಾಭ ಬಚ್ಚನ್, ಇರ್ಫಾನ್ ಖಾನ, ರಾಜೇಶ ಖನ್ನಾ, ರಜಿನಿಕಾಂತ್, ಶಾರುಕ್ ಖಾನ ಮತ್ತು ಸುನೀಲ ಶೆಟ್ಟಿ ಈ ಪಟ್ಟಿಯಲ್ಲಿ ಸ್ಥಾನ ಪಡೆದ ಇತರ ನಟರಾಗಿದ್ದಾರೆ.)

ಶತ್ರುಘ್ನ ಪ್ರಸಾದ ಸಿನ್ಹಾ ಸಾಧನೆಗಳು

2016 ರಲ್ಲಿ ಇವರ ಆತ್ಮಕಥನ ’ಎನಿಥಿಂಗ್ ಬಟ್ ಖಾಮೋಶ’ ಪ್ರಕಟಗೊಂಡಿತು.
ಇವರು ಪಡೆದ ಪ್ರಶಸ್ತಿ, ಸನ್ಮಾನಗಳ ಪಟ್ಟಿ ಹೀಗಿದೆ:
ತನ್ಹಾಯಿ ಚಿತ್ರದಲ್ಲಿನ ನಟನೆಗಾಗಿ ಬಿಎಫ್ಜೆಐ ಉತ್ತಮ ಪೋಷಕ ನಟ ಪ್ರಶಸ್ತಿ
ಖುದ್ಗರ್ಜ್ ಚಿತ್ರದ ನಟನೆಗಾಗಿ ಪಂಜಾಬ ಕಲಾ ಶ್ರೀ ಉತ್ತಮ ನಟ ಪ್ರಶಸ್ತಿ
ಅಂತೋರ್ಜೊಲಿ ಜಾತ್ರಾ ಚಿತ್ರದ ನಟನೆಗಾಗಿ 1988 ರಲ್ಲಿ ತಾಷ್ಕೆಂಟ್ ಗೋಲ್ಡನ್ ಸೆಮುರ್ಗ ಅವಾರ್ಡ್.
ಆಲ್ ಇಂಡಿಯಾ ಫಿಲ್ಮ್ ಗೋಅರ್ಸ್ ’ಅಭಿನಯ ಸಾಮ್ರಾಟ್’ ಪ್ರಶಸ್ತಿ.
ಮಧ್ಯ ಪ್ರದೇಶ ಸರಕಾರದ ರಾಷ್ಟ್ರೀಯ ಕಿಶೋರ ಕುಮಾರ ಸನ್ಮಾನ.
ಮುಖ್ಯವಾಹಿನಿ ಹಿಂದಿ ಚಲನಚಿತ್ರ ರಂಗದ ನಟನೊಬ್ಬ ಪ್ರಥಮ ಬಾರಿಗೆ ಕೇಂದ್ರ ಸರಕಾರದ ಮಂತ್ರಿ ಆಗಿದ್ದಕ್ಕೆ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸನಲ್ಲಿ ಹೆಸರು ಬರೆದರು.
ಸಮಾಜೋಪಯೋಗಿ ಕೆಲಸಗಳಿಗಾಗಿ ಬಿಹಾರ ರತ್ನ ಪ್ರಶಸ್ತಿ.
ಭಾರತೀಯ ಸಿನಿಮಾ ರಂಗಕ್ಕೆ ಉತ್ಕೃಷ್ಟ ಕೊಡುಗೆ ನೀಡಿದ್ದಕ್ಕಾಗಿ ನ್ಯೂಯಾರ್ಕ್ ಹಾಗೂ ಟೊರೊಂಟೊಗಳಲ್ಲಿ ಅವಾರ್ಡ್ ಆಫ್ ಆನರ್ ಗೌರವ.
ಸಂಸದರಾಗಿ ಕೈಗೊಂಡ ಉತ್ತಮ ಕೆಲಸಗಳಿಗಾಗಿ ನಸಾವು ಕೌಂಟಿ ಲೆಜಿಸ್ಲೇಚರ್ನಿಂದ ಪ್ರಮಾಣ ಪತ್ರ.
ಯುಎಸ್ಎ ಫ್ಲೊರಿಡಾದಲ್ಲಿ ಐಐಎಫ್ಎ ಅವಾರ್ಡ್.
ಜೀವಮಾನದ ಸಾಧನೆ ಸೇರಿದಂತೆ ಇನ್ನೂ ಹತ್ತು ಹಲವಾರು ಪ್ರಶಸ್ತಿ, ಸನ್ಮಾನಗಳು.
ಇಂಡೊ-ಜಪಾನ್ ಫ್ರೆಂಡಶಿಪ್ ಚೇರಮನ್.

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+