ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್. ಟಿ. ಸೋಮಶೇಖರ್. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸಹಕಾರ ಸಚಿವರು. ಒಂದು ಕಾಲದಲ್ಲಿ ಸಿದ್ದರಾಮಯ್ಯ ಆಪ್ತರಾಗಿದ್ದ ಸೋಮಶೇಖರ್ ಬಳಿಕ ಬಿಜೆಪಿ ಸೇರಿದರು.
ಒಕ್ಕಲಿಗ ಸಮುದಾಯದ ನಾಯಕ ಎಸ್. ಟಿ. ಸೋಮಶೇಖರ್ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವಿದ್ದಾಗ, ಎಚ್. ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ರಾಜೀನಾಮೆ ನೀಡಿದ 17 ಶಾಸಕರಲ್ಲಿ ಒಬ್ಬರು.
ಬಿಎಸ್‌ಸಿ, ಎಲ್‌ಎಲ್‌ಬಿ ಪದವೀಧರರಾಗಿರುವ ಎಸ್. ಟಿ. ಸೋಮಶೇಖರ್ ಒಂದು ಉಪ ಚುನಾವಣೆ ಸೇರಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 2013ರ ಚುನಾವಣೆಯಲ್ಲಿ ಬೆಂಗಳೂರಿನ ಯಶವಂತಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಸ್. ಟಿ. ಸೋಮಶೇಖರ್ 1,20,380 ಮತಗಳನ್ನು ಪಡೆದು ಗೆಲುವು ಸಾಧಿಸಿದರು.
2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಮತ್ತೆ ಕಣಕ್ಕಿಳಿದು 1,15,273 ಮತಗಳನ್ನು ಪಡೆದು
ಗೆಲುವು ಸಾಧಿಸಿದರು. ಆದರೆ ಎಚ್. ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ಬಳಿಕ ರಾಜೀನಾಮೆ ನೀಡಿದ ಶಾಸಕರ ಜೊತೆ ಬಿಜೆಪಿಗೆ ಸೇರ್ಪಡೆಗೊಂಡರು. 2019ರ ಡಿಸೆಂಬರ್‌ನಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು, ಗೆಲುವು ಸಾಧಿಸಿದರು.
ಉಪ ಚುನಾವಣೆಯಲ್ಲಿ ಗೆದ್ದ ಬಳಿಕ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಂಪುಟ ಸೇರಿದರು. ಸಹಕಾರ ಖಾತೆಯ ಹೊಣೆ ನೀಡಲಾಯಿತು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಬಳಿಕ ಮತ್ತೆ ಸಂಪುಟ ಸೇರಿದರು.
ಎಸ್. ಟಿ. ಸೋಮಶೇಖರ್ ಕರ್ನಾಟಕ ರಾಜ್ಯ ಸಹಕಾರಿ ವಸತಿ ಮಹಾಮಂಡಲ ನಿ. ಅಧ್ಯಕ್ಷರಾಗಿಯೂ ಕೆಲಸ ಮಾಡಿದರು.
| ಪೂರ್ಣ ಹೆಸರು | ಎಸ್. ಟಿ. ಸೋಮಶೇಖರ್ |
| ಜನ್ಮ ದಿನಾಂಕ | 01 Jun 1957 (ವಯಸ್ಸು 68) |
| ಹುಟ್ಟಿದ ಸ್ಥಳ | ಹೆಸರಘಟ್ಟ |
| ಪಕ್ಷದ ಹೆಸರು | Bharatiya Janta Party |
| ವಿದ್ಯಾರ್ಹತೆ | Government Science College |
| ಉದ್ಯೋಗ | ಬಿಲ್ಡರ್, ರಾಜಕಾರಣಿ |
| ತಂದೆಯ ಹೆಸರು | ದಿ. ಎ. ತಿಮ್ಮೇಗೌಡ |
| ತಾಯಿಯ ಹೆಸರು | NA |
| ಅವಲಂಬಿತರ ಹೆಸರು | ರಾಧಾ |
| ಅವಲಂಬಿತರ ಉದ್ಯೋಗ | ಗೃಹಿಣಿ |
| ಧರ್ಮ | ಹಿಂದು |
| ಜಾತಿ | ಒಕ್ಕಲಿಗ |
| ವೆಬ್‌ಸೈಟ್ | NA |
Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.