Get Updates
Get notified of breaking news, exclusive insights, and must-see stories!

ರಾಜ್ಯವರ್ಧನ ಸಿಂಗ್ ರಾಠೋಡ

ರಾಜ್ಯವರ್ಧನ ಸಿಂಗ್ ರಾಠೋಡ
ಜನೇವರಿ 29, 1970 ರಂದು ಹುಟ್ಟಿದ ರಾಜ್ಯವರ್ಧನ ಸಿಂಗ್ ರಾಠೋಡ ಸೇನೆಯಲ್ಲಿ ಕರ್ನಲ್ ಆಗಿ ಸೇವೆ ಸಲ್ಲಿಸಿದ್ದಾರೆ. ಸೇನೆಯಲ್ಲಿನ ಶ್ರೇಷ್ಠ ಸೇವೆಗಾಗಿ ಅತಿ ವಿಶಿಷ್ಟ ಸೇವಾ ಮೆಡಲ್ ಪದಕವನ್ನು ಇವರು ಪಡೆದುಕೊಂಡಿದ್ದಾರೆ.
By Anushree | Friday, February 1, 2019, 05:56:02 PM [IST]

ರಾಜ್ಯವರ್ಧನ ಸಿಂಗ್ ರಾಠೋಡ ಜೀವನ ಚರಿತ್ರೆ

ಜನೇವರಿ 29, 1970 ರಂದು ಹುಟ್ಟಿದ ರಾಜ್ಯವರ್ಧನ ಸಿಂಗ್ ರಾಠೋಡ ಸೇನೆಯಲ್ಲಿ ಕರ್ನಲ್ ಆಗಿ ಸೇವೆ ಸಲ್ಲಿಸಿದ್ದಾರೆ. ಸೇನೆಯಲ್ಲಿನ ಶ್ರೇಷ್ಠ ಸೇವೆಗಾಗಿ ಅತಿ ವಿಶಿಷ್ಟ ಸೇವಾ ಮೆಡಲ್ ಪದಕವನ್ನು ಇವರು ಪಡೆದುಕೊಂಡಿದ್ದಾರೆ. ಶೂಟಿಂಗ್ ಕ್ರೀಡಾಪಟುಗಳೂ ಆಗಿರುವ ಇವರು ಭಾರತದ ಪ್ರಮುಖ ರಾಜಕಾರಣಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. 2004 ರ ಒಲಿಂಪಿಕ್ ಕ್ರೀಡಾಕೂಟದಲ್ಲಿ ಡಬಲ್ ಟ್ರ್ಯಾಪ್ ಇವೆಂಟ್ ಶೂಟಿಂಗ್‌ನಲ್ಲಿ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ. ಸುಮಾರು ಒಂದು ದಶಕದ ಕಾಲ ಶೂಟರ್ ಆಗಿ ವಿವಿಧ ಕ್ರೀಡಾಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವ ಇವರು ಕಾಮನ್ವೆಲ್ತ್ ಹಾಗೂ ಏಶಿಯನ್ ಗೇಮ್ಸಗಳಲ್ಲಿ ಹಲವಾರು ಪದಕಗಳನ್ನು ಗೆದ್ದಿದ್ದಾರೆ. 2005 ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಇವರು ಭಾಜನರಾಗಿದ್ದಾರೆ. ಶೂಟಿಂಗ್ ಹಾಗೂ ಮಿಲಿಟರಿಯಲ್ಲಿನ ಸೇವೆಯಿಂದ ನಿವೃತ್ತರಾದ ನಂತರ ಇವರು ಭಾರತೀಯ ಜನತಾ ಪಕ್ಷ ಸೇರ್ಪಡೆಯಾದರು. 2014 ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಗಳಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾದರು. 2014 ರಲ್ಲಿ ಮಾಹಿತಿ ಹಾಗೂ ಪ್ರಸಾರ ಖಾತೆ ರಾಜ್ಯ ಸಚಿವರಾಗಿ ಇವರು ಅಧಿಕಾರ ವಹಿಸಿಕೊಂಡರು. 2017 ರಲ್ಲಿ ಯುವಜನ ಹಾಗೂ ಕ್ರೀಡಾ ಇಲಾಖೆಯ ಸ್ವತಂತ್ರ ಕ್ಯಾಬಿನೆಟ್ ದರ್ಜೆಯ ಖಾತೆ ಸಚಿವರನ್ನಾಗಿ ಇವರನ್ನು ನೇಮಿಸಲಾಯಿತು.

ಮತ್ತಷ್ಟು ಓದು

ರಾಜ್ಯವರ್ಧನ ಸಿಂಗ್ ರಾಠೋಡ ವಯಕ್ತಿಕ ಜೀವನ

ಪೂರ್ಣ ಹೆಸರು ರಾಜ್ಯವರ್ಧನ ಸಿಂಗ್ ರಾಠೋಡ
ಜನ್ಮ ದಿನಾಂಕ 29 Jan 1970 (ವಯಸ್ಸು 56)
ಹುಟ್ಟಿದ ಸ್ಥಳ ಜೈಸಲ್ಮೇರ, ರಾಜಸ್ಥಾನ
ಪಕ್ಷದ ಹೆಸರು Bharatiya Janta Party
ವಿದ್ಯಾರ್ಹತೆ Graduate
ಉದ್ಯೋಗ ರಕ್ಷಣಾ ಇಲಾಖೆಯ ನಿವೃತ್ತ ಉದ್ಯೋಗಿ, ಕ್ರೀಡಾಪಟು- ಶೂಟಿಂಗ್ ಸ್ಪರ್ಧೆಯಲ್ಲಿ ಒಲಿಂಪಿಕ್ ಚಿನ್ನದ ಪದಕ ವಿಜೇತ
ತಂದೆಯ ಹೆಸರು ಲಕ್ಷ್ಮಣ ಸಿಂಗ್ ರಾಠೋಡ
ತಾಯಿಯ ಹೆಸರು ಮಂಜು ರಾಠೋಡ
ಅವಲಂಬಿತರ ಹೆಸರು ಡಾ. ಗಾಯತ್ರಿ ರಾಠೋಡ
ಮಕ್ಕಳು 1 ಪುತ್ರ(ರು) 1 ಪುತ್ರಿ(ಯರು)

ರಾಜ್ಯವರ್ಧನ ಸಿಂಗ್ ರಾಠೋಡ ಒಟ್ಟು ಆಸ್ತಿ

ಒಟ್ಟು ಆಸ್ತಿ
₹8.36 CRORE
ಆಸ್ತಿ
₹8.37 CRORE
ಸಾಲಸೋಲ
₹1.17 LAKHS

ರಾಜ್ಯವರ್ಧನ ಸಿಂಗ್ ರಾಠೋಡ ಕುರಿತು ಆಸಕ್ತಿದಾಯಕ ಸಂಗತಿಗಳು

ಕ್ರೀಡೆ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ಇವರು ಆಸಕ್ತಿ ಹೊಂದಿದ್ದಾರೆ.

ರಾಜ್ಯವರ್ಧನ ಸಿಂಗ್ ರಾಠೋಡ ರಾಜಕೀಯ ಟೈಮ್‌ಲೈನ್

  • 2018: 2018 ರಲ್ಲಿ ಇವರು ಯುವಜನ ಹಾಗೂ ಕ್ರೀಡಾ ಇಲಾಖೆ (ಸ್ವತಂತ್ರ ಖಾತೆ) ಯ ರಾಜ್ಯ ದರ್ಜೆಯ ಸಚಿವರಾಗಿ ಹಾಗೂ ಮಾಹಿತಿ ಹಾಗೂ ಪ್ರಸಾರ ಖಾತೆ (ಸ್ವತಂತ್ರ) ಸಚಿವರಾಗಿ ನೇಮಕಗೊಂಡರು.
  • 2017: ಸೆಪ್ಟೆಂಬರ್ 3, 2017 ರಿಂದ ಮೇ 14, 2018 ರವರೆಗೆ ಯುವಜನ ಹಾಗೂ ಕ್ರೀಡಾ ಇಲಾಖೆ (ಸ್ವತಂತ್ರ ಖಾತೆ) ಯ ರಾಜ್ಯ ದರ್ಜೆಯ ಸಚಿವರಾಗಿ ಹಾಗೂ ಮಾಹಿತಿ ಹಾಗೂ ಪ್ರಸಾರ ಖಾತೆ ರಾಜ್ಯ ಸಚಿವರಾಗಿ ಕೆಲಸ ನಿರ್ವಹಿಸಿದ್ದಾರೆ.
  • 2014: ಸೆಪ್ಟೆಂಬರ್ 1, 2014 ರಿಂದ ನವೆಂಬರ್ 9, 2014 ರವರೆಗೆ ರಕ್ಷಣಾ ಖಾತೆಯ ಸ್ಥಾಯಿ ಸಮಿತಿ ಸದಸ್ಯರಾಗಿದ್ದರು. ನವೆಂಬರ್ 9, 2014 ರಿಂದ ಸೆಪ್ಟೆಂಬರ್ 3, 2017 ರವರೆಗೆ ಮಾಹಿತಿ ಹಾಗೂ ಪ್ರಸಾರ ಖಾತೆ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.
  • 2014: 2014 ರಲ್ಲಿ ರಾಜಸ್ಥಾನದ ಜೈಪುರ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಡಾ. ಸಿ.ಪಿ. ಜೋಶಿ ಅವರನ್ನು ಸೋಲಿಸಿ 16 ನೇ ಲೋಕಸಭಾ ಸದಸ್ಯರಾಗಿ ರಾಠೋಡ ಆಯ್ಕೆಯಾದರು.

ರಾಜ್ಯವರ್ಧನ ಸಿಂಗ್ ರಾಠೋಡ ಸಾಧನೆಗಳು

ಇವರು ಪದ್ಮಶ್ರೀ ಹಾಗೂ ಅತಿ ವಿಶಿಷ್ಟ ಸೇವಾ ಮೆಡಲ್ ಪದಕಗಳನ್ನು ಪಡೆದುಕೊಂಡಿದ್ದಾರೆ.

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+