Get Updates
Get notified of breaking news, exclusive insights, and must-see stories!

ಡಾ. ಪ್ರಮೋದ ಸಾವಂತ್

ಡಾ. ಪ್ರಮೋದ ಸಾವಂತ್
ಪ್ರಮೋದ ಸಾವಂತ್ ಗೋವಾದ ಜನಪ್ರೀಯ ಶಾಸಕ. ಇವರು ಉತ್ತರ ಗೋವಾದ ಸ್ಯಾನ್ಕ್ವೇಲಿಯಂ ಕ್ಷೇತ್ರವನ್ನು3 ಅವಧಿಯಿಂದ ಪ್ರತಿನಿಧಿಸುತ್ತಿದ್ದಾರೆ.
By Administrator | Monday, February 8, 2021, 12:45:01 PM [IST]

ಡಾ. ಪ್ರಮೋದ ಸಾವಂತ್ ಜೀವನ ಚರಿತ್ರೆ

ಪ್ರಮೋದ ಸಾವಂತ್ ಗೋವಾದ ಜನಪ್ರೀಯ ಶಾಸಕ. ಇವರು ಉತ್ತರ ಗೋವಾದ ಸ್ಯಾನ್ಕ್ವೇಲಿಯಂ ಕ್ಷೇತ್ರವನ್ನು3 ಅವಧಿಯಿಂದ ಪ್ರತಿನಿಧಿಸುತ್ತಿದ್ದಾರೆ. ಗೋವಾದ ಮಾಜಿ ಸಿಎಂ ಮನೋಹರ ಪರಿಕ್ಕರ್ ಅವರ ಕಟ್ಟಾ ಬೆಂಬಲಿಗರಾಗಿರುವ ಪ್ರಮೋದ ಸಾವಂತ್ ಅವರನ್ನು ತಮ್ಮ ಸಿಎಂ ಅವಧಿಯಲ್ಲಿ ಗೋವಾ ವಿಧಾನಸಭೆಯ ಸ್ಪೀಕರ್ ಹುದ್ದೆಗೆ ನಿಯುಕ್ತಿಗೊಳಿಸಿದ್ದರು. ಆದರೆ ರಾಜ್ಯದ ಕ್ಯಾಬಿನೆಟ್ ನ ಯಾವುದೇ ಹುದ್ದೆ ನೀಡಿರಲಿಲ್ಲ. ವೃತ್ತಿಯಿಂ ಆಯುರ್ವೇದ ವೈದ್ಯರಾಗಿರುವ ಡಾ.ಸಾವಂತ್ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಗಂಗಾ ಆಯುರ್ವೇಧಿಕ್ ಮೆಡಿಕಲ್ ಕಾಲೇಜಿನಲ್ಲಿ ಈ ವೃತ್ತಿ ತರಬೇತಿ ಪಡೆದಿದ್ದರು. ಅಲ್ಲದೇ ಡಾ.ಪ್ರಮೋದ ಆರ್.ಎಸ್.ಎಸ್.ನ ಸದಸ್ಯರೂ ಆಗಿದ್ದಾರೆ. ಟಿಲಕ್ ಮಹಾರಾಷ್ಟ್ರ ವಿದ್ಯಾಪೀಠದಿಂದ ಸಮಾಜ ಕಲ್ಯಾಣ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದಾರೆ. ಪರಿಕ್ಕರ್ ಅವರ ಆಶಯದ ಗೋವಾ ರಾಜ್ಯ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿಯೂ ಇವರು ಕಾರ್ಯನಿರ್ವಹಿಸಿದ್ದಾರೆ. ಮನೋಹರ ಪರಿಕ್ಕರ್ ಅವರ ನಿಧನಾ ನಂತರ ಗೋವಾ ರಾಜ್ಯದ ಮುಖ್ಯಮಂತ್ರಿಯಾಗಿ 19 ಮಾರ್ಚ್ 2019ರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಮತ್ತಷ್ಟು ಓದು

ಡಾ. ಪ್ರಮೋದ ಸಾವಂತ್ ವಯಕ್ತಿಕ ಜೀವನ

ಪೂರ್ಣ ಹೆಸರು ಡಾ. ಪ್ರಮೋದ ಸಾವಂತ್
ಜನ್ಮ ದಿನಾಂಕ 24 Apr 1973 (ವಯಸ್ಸು 52)
ಹುಟ್ಟಿದ ಸ್ಥಳ N/A
ಪಕ್ಷದ ಹೆಸರು Bharatiya Janta Party
ವಿದ್ಯಾರ್ಹತೆ Post Graduate
ಉದ್ಯೋಗ ಕೃಷಿಕ, ಆಯುರ್ವೇದ ವೈದ್ಯ, ಉದ್ಯಮಿ, ರಾಜಕಾರಣಿ
ತಂದೆಯ ಹೆಸರು ಪಾಂಡುರಂಗ ಸಾವಂತ್
ತಾಯಿಯ ಹೆಸರು ಪದ್ಮಿನಿ ಸಾವಂತ್
ಅವಲಂಬಿತರ ಹೆಸರು ಶಾಂತಾದುರ್ಗಾ
ಅವಲಂಬಿತರ ಉದ್ಯೋಗ ರಾಜಕಾರಣಿ
ಧರ್ಮ ಹಿಂದು

ಡಾ. ಪ್ರಮೋದ ಸಾವಂತ್ ಒಟ್ಟು ಆಸ್ತಿ

ಒಟ್ಟು ಆಸ್ತಿ
₹7.88 CRORE
ಆಸ್ತಿ
₹9.38 CRORE
ಸಾಲಸೋಲ
₹1.5 CRORE

ಡಾ. ಪ್ರಮೋದ ಸಾವಂತ್ ಕುರಿತು ಆಸಕ್ತಿದಾಯಕ ಸಂಗತಿಗಳು

ಈ ಹಿಂದಿನ ಅವಧಿಯಲ್ಲಿ ವಿಧಾನಸಭೆ ಸ್ಪೀಕರ್ ಆಗಿದ್ದ ಡಾ.ಪ್ರಮೋದ ಸಾವಂತ್, ಮನೋಹರ ಪರಿಕ್ಕರ್ ಅವರ ನಿಧನಾನಂತರ ಗೋವಾದ 13ನೇ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದರು.

ಡಾ. ಪ್ರಮೋದ ಸಾವಂತ್ ಸಾಧನೆಗಳು

ಪಣಜಿಯ ನೆಹರು ಯುವ ಕೇಂದ್ರದಿಂದ ರಾಜ್ಯಮಟ್ಟದ ಯುವ ಸೇವಾ ಪ್ರಶಸ್ತಿಗೆ ಡಾ.ಪ್ರಮೋದ ಬಾಜನರಾಗಿದ್ದಾರೆ.

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+