Get Updates
Get notified of breaking news, exclusive insights, and must-see stories!

ಪ್ರಜ್ವಲ್ ರೇವಣ್ಣ

ಪ್ರಜ್ವಲ್ ರೇವಣ್ಣ
ಪ್ರಜ್ವಲ್ ರೇವಣ್ಣ ರಾಜ್ಯದ ಕ್ಯಾಬಿನೆಟ್ ಸಚಿವ ಎಚ್. ಡಿ.
By Zainab Ashraf | Monday, April 29, 2019, 06:14:14 PM [IST]

ಪ್ರಜ್ವಲ್ ರೇವಣ್ಣ ಜೀವನ ಚರಿತ್ರೆ

ಪ್ರಜ್ವಲ್ ರೇವಣ್ಣ ರಾಜ್ಯದ ಕ್ಯಾಬಿನೆಟ್ ಸಚಿವ ಎಚ್.ಡಿ. ರೇವಣ್ಣ ಅವರ ಸುಪುತ್ರ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮೊಮ್ಮಗನಾಗಿದ್ದಾರೆ. ಬಿಇ ಪದವಿ ಪಾಸು ಮಾಡಿರುವ ಪ್ರಜ್ವಲ್ ರಾಜಕೀಯ ರಂಗದಲ್ಲಿ ನೆಲೆ ಊರಲು ಕೆಲ ವರ್ಷಗಳಿಂದ ಪ್ರಯತ್ನಿಸುತ್ತಿದ್ದಾರೆ. ಬ್ರಿಟಿಷ್ ಆಡಳಿತ ಶೈಲಿಯನ್ನು ಅಭ್ಯಾಸ ಮಾಡಲು ಕಾಮನವೆಲ್ಥ್ ಪಾರ್ಲಿಮೆಂಟರಿ ಅಸೋಸಿಯೇಶನ್‌ನಿಂದ ೨೦೧೫ ರಲ್ಲಿ ಆಯ್ಕೆಯಾದ ಭಾರತದ 10 ಯುವ ರಾಜಕಾರಣಿಗಳಲ್ಲಿ ಪ್ರಜ್ವಲ್ ರೇವಣ್ಣ ಸ್ಥಾನ ಪಡೆದಿದ್ದರು. ಜೆಡಿಎಸ್ ಪಕ್ಷದ ಸದಸ್ಯರಾಗಿದ್ದರೂ 2018ರ ಚುನಾವಣೆಯಲ್ಲಿ ಚಿಕ್ಕಪ್ಪ ಎಚ್.ಡಿ. ಕುಮಾರಸ್ವಾಮಿ ಇವರಿಗೆ ಟಿಕೆಟ್ ನೀಡಲು ನಿರಾಕರಿಸಿದ್ದರಿಂದ ರಾಜಕೀಯ ಪ್ರವೇಶ ಕೊಂಚ ತಡವಾಯಿತು. ಸೂಕ್ಷ್ಮ ಮತಿಯ ಹಾಗೂ ತಾಳ್ಮೆಯ ಯುವಕನಾದ ಪ್ರಜ್ವಲ್ ಸದ್ಯಕ್ಕೆ ಹಾಸನ ಜಿಲ್ಲಾ ರಾಜಕಾರಣದಲ್ಲಿ ಸಕ್ರಿಯರಾಗಿದ್ದಾರೆ. ಪ್ರಸ್ತುತ ಹಾಸನ ಲೋಕಸಭಾ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧೆ ಮಾಡುತ್ತಿದ್ದಾರೆ. ಅಜ್ಜ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಮೊಮ್ಮಗನಿಗಾಗಿ ಹಾಸನ ಕ್ಷೇತ್ರವನ್ನೇ ಬಿಟ್ಟು ಕೊಟ್ಟಿದ್ದಾರೆ.

ಮತ್ತಷ್ಟು ಓದು

ಪ್ರಜ್ವಲ್ ರೇವಣ್ಣ ವಯಕ್ತಿಕ ಜೀವನ

ಪೂರ್ಣ ಹೆಸರು ಪ್ರಜ್ವಲ್ ರೇವಣ್ಣ
ಜನ್ಮ ದಿನಾಂಕ 05 Aug 1990 (ವಯಸ್ಸು 35)
ಹುಟ್ಟಿದ ಸ್ಥಳ ಬೆಂಗಳೂರು
ಪಕ್ಷದ ಹೆಸರು Janata Dal (Secular)
ವಿದ್ಯಾರ್ಹತೆ NULL
ಉದ್ಯೋಗ ರಾಜಕಾರಣಿ
ತಂದೆಯ ಹೆಸರು ಎಚ್.ಡಿ. ರೇವಣ್ಣ
ತಾಯಿಯ ಹೆಸರು ಭವಾನಿ ರೇವಣ್ಣ
ಅವಲಂಬಿತರ ಹೆಸರು NA
ಧರ್ಮ ಹಿಂದು

ಪ್ರಜ್ವಲ್ ರೇವಣ್ಣ ಒಟ್ಟು ಆಸ್ತಿ

ಒಟ್ಟು ಆಸ್ತಿ
₹6.06 CRORE
ಆಸ್ತಿ
₹9.78 CRORE
ಸಾಲಸೋಲ
₹3.73 CRORE

ಪ್ರಜ್ವಲ್ ರೇವಣ್ಣ ಕುರಿತು ಆಸಕ್ತಿದಾಯಕ ಸಂಗತಿಗಳು

2014 ರ ಲೋಕಸಭಾ ಚುನಾವಣೆಯಲ್ಲಿ ಎಚ್.ಡಿ. ದೇವೇಗೌಡರ ಪರವಾಗಿ ಚುನಾವಣಾ ಪ್ರಚಾರ ನಡೆಸಿದ್ದಾರೆ.

ಪ್ರಜ್ವಲ್ ರೇವಣ್ಣ ರಾಜಕೀಯ ಟೈಮ್‌ಲೈನ್

  • 2019 : 2019ರ ಲೋಕಸಭಾ ಚುನಾವಣೆಗಾಗಿ ಜೆಡಿಎಸ್‌ನ ಹಾಸನ ಅಭ್ಯರ್ಥಿಯಾಗಿ ಘೋಷಿತರಾದರು.
  • 2018 : ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್ ಪರವಾಗಿ ರಾಜ್ಯಾದ್ಯಂತ ಸುತ್ತಾಡಿ ಬಿರುಸಿನ ಪ್ರಚಾರ ಮಾಡಿದರು.
  • 2015 : ಜೆಡಿಎಸ್ ಪಕ್ಷದ ಸದಸ್ಯರಾದರು.
  • 2014 : ಹಾಸನ ಲೋಕಸಭಾ ಕ್ಷೇತ್ರದಲ್ಲಿ ತನ್ನ ಅಜ್ಜ ಎಚ್.ಡಿ. ದೇವೇಗೌಡರ ಪರವಾಗಿ ವ್ಯಾಪಕ ಚುನಾವಣಾ ಪ್ರಚಾರ ಕೈಗೊಂಡರು.

ಪ್ರಜ್ವಲ್ ರೇವಣ್ಣ ಸಾಧನೆಗಳು

ಬ್ರಿಟಿಷ್ ಆಡಳಿತ ಶೈಲಿಯನ್ನು ಅಭ್ಯಾಸ ಮಾಡಲು ಕಾಮನವೆಲ್ಥ್ ಪಾರ್ಲಿಮೆಂಟರಿ ಅಸೋಸಿಯೇಶನ್‌ನಿಂದ 2015 ರಲ್ಲಿ ಆಯ್ಕೆಯಾದ ಭಾರತದ 10 ಯುವ ರಾಜಕಾರಣಿಗಳಲ್ಲಿ ಪ್ರಜ್ವಲ್ ರೇವಣ್ಣ ಸ್ಥಾನ ಪಡೆದಿದ್ದರು.

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+