Get Updates
Get notified of breaking news, exclusive insights, and must-see stories!

ಪವನ್ ಕುಮಾರ ಚಾಮ್ಲಿಂಗ್

ಪವನ್ ಕುಮಾರ ಚಾಮ್ಲಿಂಗ್
ಪವನ ಕುಮಾರ ಚಾಮ್ಲಿಂಗ್ ಸಿಕ್ಕೀಂ ರಾಜಕಾರಣಿಯಾಗಿದ್ದು, ಸಿಕ್ಕೀಂ ರಾಜ್ಯದ ಐದನೇ ಮುಖ್ಯಮಂತ್ರಿಯಾಗಿದ್ದರು. ಸಿಕ್ಕೀಂ ಡೆಮಾಕ್ರಟಿಕ್ ಪಕ್ಷದ ಸಂಸ್ಥಾಪಕ ಅಧ್ಯಕ್ಷರಾಗಿರುವ ಚಾಮ್ಲಿಂಗ್ ಅವರ ಪಕ್ಷ 1994ರಿಂದ ಸತತವಾಗಿ ಐದು ಅವಧಿಗೆ ಸಿಕ್ಕೀಂ ರಾಜ್ಯದಲ್ಲಿ ಆಡಳಿತ ನಡೆಸುವಲ್ಲಿ ಯಶಸ್ವಿಯಾಗಿದೆ.
By Ajay M V | Monday, February 8, 2021, 12:49:59 PM [IST]

ಪವನ್ ಕುಮಾರ ಚಾಮ್ಲಿಂಗ್ ಜೀವನ ಚರಿತ್ರೆ

ಪವನ ಕುಮಾರ ಚಾಮ್ಲಿಂಗ್ ಸಿಕ್ಕೀಂ ರಾಜಕಾರಣಿಯಾಗಿದ್ದು, ಸಿಕ್ಕೀಂ ರಾಜ್ಯದ ಐದನೇ ಮುಖ್ಯಮಂತ್ರಿಯಾಗಿದ್ದರು. ಸಿಕ್ಕೀಂ ಡೆಮಾಕ್ರಟಿಕ್ ಪಕ್ಷದ ಸಂಸ್ಥಾಪಕ ಅಧ್ಯಕ್ಷರಾಗಿರುವ ಚಾಮ್ಲಿಂಗ್ ಅವರ ಪಕ್ಷ 1994ರಿಂದ ಸತತವಾಗಿ ಐದು ಅವಧಿಗೆ ಸಿಕ್ಕೀಂ ರಾಜ್ಯದಲ್ಲಿ ಆಡಳಿತ ನಡೆಸುವಲ್ಲಿ ಯಶಸ್ವಿಯಾಗಿದೆ. ಸ್ವಾತಂತ್ರ್ಯಾನಂತರದ ಭಾರತದಲ್ಲಿ ಅತಿ ಹೆಚ್ಚಿನ ಅವಧಿಗೆ ಸಿಎಂ ಆಗಿ ಅಧಿಕಾರ ನಡೆಸಿದ ಕೀರ್ತಿ ಪವನಕುಮಾರ ಚಾಮ್ಲಿಂಗ್ ಅವರಿಗೆ ಸಲ್ಲುತ್ತದೆ. ಸಿಕ್ಕೀಂ ಡೆಮಾಕ್ರಟಿಕ್ ಪಕ್ಷ ಸ್ಥಾಪನೆಗೂ ಮುನ್ನ ಚಾಮ್ಲಿಂಗ್ ಕೈಗಾರಿಕೆ, ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಚಿವರಾಗಿ 1989-1992ರ ಅವಧಿಯಲ್ಲಿ ನರ್ ಬಹಾದ್ದೂರ ಬಂಢಾರಿ ಅವರ ಅವಧಿಯಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದರು.

ಮತ್ತಷ್ಟು ಓದು

ಪವನ್ ಕುಮಾರ ಚಾಮ್ಲಿಂಗ್ ವಯಕ್ತಿಕ ಜೀವನ

ಪೂರ್ಣ ಹೆಸರು ಪವನ್ ಕುಮಾರ ಚಾಮ್ಲಿಂಗ್
ಜನ್ಮ ದಿನಾಂಕ 22 Sep 1950 (ವಯಸ್ಸು 75)
ಹುಟ್ಟಿದ ಸ್ಥಳ ಯಾಂಗಾಂಗ್
ಪಕ್ಷದ ಹೆಸರು Sikkim Democratic Front
ವಿದ್ಯಾರ್ಹತೆ Doctorate
ಉದ್ಯೋಗ ರಾಜಕಾರಣಿ
ತಂದೆಯ ಹೆಸರು ಆಶ್ ಬಹಾದ್ದೂರ ಚಾಮ್ಲಿಂಗ್
ತಾಯಿಯ ಹೆಸರು ಆಶಾರಾಣಿ ಚಾಮ್ಲಿಂಗ್
ಅವಲಂಬಿತರ ಹೆಸರು ಟಿಕಾ ಮಾಯಾ/ ಧನ ಮಾಯಾ ಚಾಮ್ಲಿಂಗ್
ಅವಲಂಬಿತರ ಉದ್ಯೋಗ ಕೃಷಿ ತಜ್ಞೆ / ಹೂ ಬೆಳೆಗಾರ್ತಿ, ತಜ್ಞೆ
ಮಕ್ಕಳು 4 ಪುತ್ರ(ರು) 4 ಪುತ್ರಿ(ಯರು)
ವೆಬ್‌ಸೈಟ್ http://pawanchamling.in/

ಪವನ್ ಕುಮಾರ ಚಾಮ್ಲಿಂಗ್ ಒಟ್ಟು ಆಸ್ತಿ

ಒಟ್ಟು ಆಸ್ತಿ
₹5.66 CRORE
ಆಸ್ತಿ
₹10.7 CRORE
ಸಾಲಸೋಲ
₹5.05 CRORE

ಪವನ್ ಕುಮಾರ ಚಾಮ್ಲಿಂಗ್ ಕುರಿತು ಆಸಕ್ತಿದಾಯಕ ಸಂಗತಿಗಳು

ಸ್ವಾತಂತ್ರ್ಯಾನಂತರದ ಭಾರತದಲ್ಲಿ ಅತಿ ಹೆಚ್ಚಿನ ಅವಧಿಗೆ ಅಂದರೆ ಸತತ ಐದು ಅವಧಿಗೆ ಸಿಎಂ ಆಗಿ ಅಧಿಕಾರ ನಡೆಸಿದ ಕೀರ್ತಿ ಪವನಕುಮಾರ ಚಾಮ್ಲಿಂಗ್ ಅವರಿಗೆ ಸಲ್ಲುತ್ತದೆ. ಚಾಮ್ಲಿಂಗ್ ನೇಪಾಳಿ ಭಾಷೆಯ ಸಾಹಿತಿಯಾಗಿದ್ದು, ಸಿಕ್ಕೀಂ ಸಾಹಿತ್ಯ ಪರಿಷತ್ತಿನಿಂದ 2010ರಲ್ಲಿ ಬಾನು ಪುರಸ್ಕಾರ ಪಡೆದಿದ್ದಾರೆ. ಅವರ ಕಾವ್ಯನಾಮ ಪವನ್ ಚಾಮ್ಲಿಂಗ್ ಕಿರಣ್.

ಪವನ್ ಕುಮಾರ ಚಾಮ್ಲಿಂಗ್ ಸಾಧನೆಗಳು

ಸಿಕ್ಕೀಂ ರಾಜ್ಯದ ಅಭೂತಪೂರ್ವ ಅಭಿವೃದ್ಧಿ ಹಾಗೂ ಶಾಂತಿಗೆ ಅವಿರತವಾಗಿ ಶ್ರಮಿಸಿದ ಕಾರಣ ಪವನ ಕುಮಾರ ಚಾಮ್ಲಿಂಗ್ ಅತಿ ಹೆಚ್ಚು ಅವಧಿಗೆ ಸಿಕ್ಕೀಂ ಸಿಎಂ ಹುದ್ದೆಯಲ್ಲಿ ಮುಂದುವರೆಯಲು ಸಾಧ್ಯವಾಯಿತು. 18 ಜನವರಿ 2016ರಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಏಕೈಕ ಹಾಗೂ ಮೊದಲ ಸಾವಯವ ರಾಜ್ಯ ಎಂದು ಸಿಕ್ಕೀಂ ರಾಜ್ಯವನ್ನು ಘೋಷಣೆ ಮಾಡಿದರು. ಅಲ್ಲಿ ರಾಜ್ಯಾದ್ಯಂತ ಸಾವಯವ ಕೃಷಿಯನ್ನು ಅನುಷ್ಠಾನಕ್ಕೆ ತರಲಾಗಿದೆ. ಈ ಕಾರಣಕ್ಕಾಗಿ 15 ಮೇ 2017ರಲ್ಲಿ ಚಾಮ್ಲಿಂಗ್ ಅವರಿಗೆ ಮೊದಲ ಬೈರೂನ್ ಸಿಂಗ್ ಶೇಖಾವತ್ ಜೀವಮಾನ ಸಾಧನೆ ಪುರಸ್ಕಾರ ನೀಡಿ ಗೌರವಿಸಲಾಗಿದೆ. ಅಮೇರಿಕದ ಬಯಾಗ್ರಫಿಕಲ್ ಇನ್ಸ್ಟಿಟ್ಯೂಟ್ ಕೂಡ ಇದೇ ಕಾರಣಕ್ಕೆ ಚಾಮ್ಲಿಂಗ್ ಅವರನ್ನು 1998 ರಲ್ಲಿ ಮ್ಯಾನ್ ಆಫ್ ದ ಇಯರ್ ಎಂದು ಗೌರವಿಸಿದ್ದಲ್ಲದೇ, ಸಮುದಾಯ ಹಾಗೂ ಗೆಳೆಯರಿಗಾಗಿ ಅದ್ಬುತವಾದ ಸಾಧನೆಯ ಮಾರ್ಗ ತೋರಿಸಿಕೊಟ್ಟಿದ್ದಾರೆ ಎಂದು ಮುಕ್ತಕಂಠದಿಂದ ಶ್ಲಾಘಿಸಿದೆ. ನವದೆಹಲಿಯ ಇನ್ಸ್ಟಿಟ್ಯೂಟ್ ಆಫ್ ಇಕನಾಮಿಕ್ ಸ್ಟಡೀಸ್ ಸಂಸ್ಥೆ 1999ರಲ್ಲಿ ಮಾನವ ಸೇವಾ ಪುರಸ್ಕಾರ, 2002ರಲ್ಲಿ ಕಲ್ಕತ್ತಾದ ಪೊಯಿಟ್ಸ್ ಫೌಂಡೇಷನ್ ಅವಾರ್ಡ್, ಸಿಕ್ಕೀಂ-ಮಣಿಪಾಲ ವಿವಿಯಿಂದ ಗೌರವ ಡಾಕ್ಟರೆಟ್ ಪ್ರಧಾನ, 2009ರಲ್ಲಿ ಲೀಡರ್ ಶಿಪ್, ಗುಡ್ ಗವರ್ನನ್ಸ್ ಅವಾರ್ಡ್, 2010ರಲ್ಲಿ ತೇಕೋಂಗ್ ಅಂಬಾಸಡರ್ ಆಫ್ ಪೀಸ್ ಅವಾರ್ಡ್, 2012ರಲ್ಲಿ ಭಾರತ್ ಅಸ್ಮಿತಾ ಜೀವನ್ ಗೌರವ ಪುರಸ್ಕಾರ, 2016ರಲ್ಲಿ ಯುವ ಕವಿ ಸಿದ್ಧಿ ಚರಣ ಅವಾರ್ಡ್, ಸಸ್ಟೇನೆಬಲ್ ಡೆವಲೆಪ್ಮೆಂಟ್ ಅವಾರ್ಡ್, ಅಂತಾರಾಷ್ಟ್ರೀಯ ಮಟ್ಟದ ಒನ್ ವರ್ಲ್ಡ್ ಅವಾರ್ಡ್, ಬುಕ್ ಆಫ್ ರೆಕಾರ್ಡ್ಸ್, ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಗೌರವಕ್ಕೆ ಭಾಜನರಾಗಿದ್ದಾರೆ.

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+