ಮುಖ್ಯಪುಟ
 » 
ಪದ್ಮ ಪ್ರಿಯಾ ಶ್ರೀನಿವಾಸನ್

ಪದ್ಮ ಪ್ರಿಯಾ ಶ್ರೀನಿವಾಸನ್

ಪದ್ಮ ಪ್ರಿಯಾ ಶ್ರೀನಿವಾಸನ್

ಚೆನ್ನೈನ ಮಧುರಾವೊಯಲ್ ನಲ್ಲಿ ಹುಟ್ಟಿ ಬೆಳೆದ ಪದ್ಮ ಪ್ರಿಯಾ ಶ್ರೀನಿವಾಸನ್ ಯುವ ಪರಿಸರವಾದಿ ಮತ್ತು ಸಾಮಾಜಿಕ ಕಾರ್ಯಕರ್ತೆ. 2018 ರಲ್ಲಿ ತಿರುಚ್ಚಿಯ ಭಾರತಿದಾಸನ್ ವಿಶ್ವವಿದ್ಯಾಲಯದಿಂದ ಮೈಕ್ರೋಬಯಾಲಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡರು.

ಪದ್ಮ ಪ್ರಿಯಾ ಶ್ರೀನಿವಾಸನ್ ಜೀವನ ಚರಿತ್ರೆ

ಚೆನ್ನೈನ ಮಧುರಾವೊಯಲ್ ನಲ್ಲಿ ಹುಟ್ಟಿ ಬೆಳೆದ ಪದ್ಮ ಪ್ರಿಯಾ ಶ್ರೀನಿವಾಸನ್ ಯುವ ಪರಿಸರವಾದಿ ಮತ್ತು ಸಾಮಾಜಿಕ ಕಾರ್ಯಕರ್ತೆ. 2018 ರಲ್ಲಿ ತಿರುಚ್ಚಿಯ ಭಾರತಿದಾಸನ್ ವಿಶ್ವವಿದ್ಯಾಲಯದಿಂದ ಮೈಕ್ರೋಬಯಾಲಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡರು.

ಪದ್ಮ ಪ್ರಿಯಾ ಅವರು ಪರಿಸರ ಸಮಸ್ಯೆಗಳ ಜೊತೆಗೆ ಸಾಮಾಜಿಕ ಸಮಸ್ಯೆಗಳ ಬಗ್ಗೆಯೂ ಧ್ವನಿ ಎತ್ತುತ್ತಿದ್ದರು. ಇವರು ತಮ್ಮ ಯೂಟ್ಯೂಬ್ ಚಾನೆಲ್ 'ಚೆನ್ನೈ ತಮಿಝಾಚಿ' ಮೂಲಕ ಖ್ಯಾತಿ ಪಡೆದುಕೊಂಡರು. ಇಲ್ಲಿ ಅವರು ಪರಿಸರ ಸಮಸ್ಯೆಗಳ ಕುರಿತು ವೀಡಿಯೊಗಳನ್ನು ಪೋಸ್ಟ್ ಮಾಡುತ್ತಿದ್ದರು. ಎನ್ವಿರಾನ್ಮೆಂಟಲ್ ಇಂಪ್ಯಾಕ್ಟ್ ಅಸೆಸ್ಮೆಂಟ್ (ಇಐಎ) 2020 ರ ಕರಡು ಕುರಿತಾದ ತಮ್ಮ ವೀಡಿಯೊಗಳಿಂದ ಹೆಚ್ಚು ಪ್ರಚಾರಕ್ಕೆ ಬಂದರು. ಇದು ವೈರಲ್ ಆಗಿ ಹಿರಿಯ ನಟ ಮತ್ತು ಎಂಎನ್ಎಂ ಮುಖ್ಯಸ್ಥ ಕಮಲ್ ಹಸನ್ ಅವರಿಂದ ಮೆಚ್ಚುಗೆ ಗಳಿಸಿತು. ನಂತರ ಕಮಲ್ ಹಸನ್ ಅವರ ಆಹ್ವಾನದ ಮೇರೆಗೆ ಮಕ್ಕಂ ನಿಧಿ ಮಾಯಂಗೆ ಸೇರಿಕೊಂಡರು ಮತ್ತು ಎಂಎನ್‌ಎಂನ ಪರಿಸರ ವಿಭಾಗದ ರಾಜ್ಯ ಕಾರ್ಯದರ್ಶಿಯಾದರು. 2021 ರಲ್ಲಿ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಮಧುರಾವೊಯಲ್ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಸಿಕ್ಕಿತು.

ಮತ್ತಷ್ಟು ಓದು
By Administrator Updated: Monday, April 12, 2021, 05:39:44 PM [IST]

ಪದ್ಮ ಪ್ರಿಯಾ ಶ್ರೀನಿವಾಸನ್ ವಯಕ್ತಿಕ ಜೀವನ

ಪೂರ್ಣ ಹೆಸರು ಪದ್ಮ ಪ್ರಿಯಾ ಶ್ರೀನಿವಾಸನ್
ಜನ್ಮ ದಿನಾಂಕ 05 Sep 1995 (ವಯಸ್ಸು 28)
ಹುಟ್ಟಿದ ಸ್ಥಳ ಮಧುರಾವೊಯಲ್, ಚೆನ್ನೈ, ತಮಿಳುನಾಡು
ಪಕ್ಷದ ಹೆಸರು Makkal Needhi Maiam
ವಿದ್ಯಾರ್ಹತೆ M.Sc. Microbiology
ಉದ್ಯೋಗ ಮೈಕ್ರೋಬಯಾಲಜಿಸ್ಟ್, ಪರಿಸರವಾದಿ, ಸಾಮಾಜಿಕ ಕಾರ್ಯಕರ್ತೆ
ತಂದೆಯ ಹೆಸರು ಶ್ರೀನಿವಾಸನ್
ತಾಯಿಯ ಹೆಸರು ದೇವಕಿ
ಧರ್ಮ ಹಿಂದು
ಸಾಮಾಜಿಕ ಜಾಲತಾಣದ ವಿಳಾಸ ಸಾಮಾಜಿಕ ಜಾಲತಾಣದ ವಿಳಾಸ:

ಪದ್ಮ ಪ್ರಿಯಾ ಶ್ರೀನಿವಾಸನ್ ಒಟ್ಟು ಆಸ್ತಿ

ಒಟ್ಟು ಆಸ್ತಿ: ₹28.84 LAKHS
ಆಸ್ತಿ:₹28.84 LAKHS
ಸಾಲಸೋಲ: N/A

ಪದ್ಮ ಪ್ರಿಯಾ ಶ್ರೀನಿವಾಸನ್ ಕುರಿತು ಆಸಕ್ತಿದಾಯಕ ಸಂಗತಿಗಳು

ಇವರು ಸೂಕ್ಷ್ಮ ಜೀವಶಾಸ್ತ್ರಜ್ಞರು ಮತ್ತು ಜನಪ್ರಿಯ ಯೂಟ್ಯೂಬರ್.

ಪದ್ಮ ಪ್ರಿಯಾ ಶ್ರೀನಿವಾಸನ್ ರಾಜಕೀಯ ಟೈಮ್‌ಲೈನ್

2021
  • ತಮಿಳುನಾಡು ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮಧುರಾವೊಯಲ್ ಕ್ಷೇತ್ರದಿಂದ ಎಐಎಡಿಎಂಕೆ ಹಾಲಿ ಸಚಿವ ಪಿ. ಬೆಂಜಮಿನ್ ವಿರುದ್ಧ ಪದ್ಮ ಪ್ರಿಯಾ ಶ್ರೀನಿವಾಸನ್ ಸ್ಪರ್ಧಿಸಿದ್ದಾರೆ.
2020
  • ಪದ್ಮ ಪ್ರಿಯಾ ಅವರು ಕಮಲ್ ಹಾಸನ್ ಅವರ ಮಕ್ಕಲ್ ನಿಧಿ ಮಾಯಂ ಪಕ್ಷ ಸೇರುತ್ತಿದ್ದಂತೆ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು.

ಹಿಂದಿನ ಇತಿಹಾಸ

2018
  • ತಿರುಚ್ಚಿಯ ಭಾರತಿದಾಸನ್ ವಿಶ್ವವಿದ್ಯಾಲಯದಿಂದ ಮೈಕ್ರೋಬಯಾಲಜಿ ವಿಷಯದಲ್ಲಿ ಸ್ನಾತಕೋತ್ತರ ಪದವಿ‌ ಪಡೆದುಕೊಂಡರು.

Disclaimer: The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X