ಕರ್ನಾಟಕ ರಾಜಕೀಯ ರಂಗದ ದಿಗ್ಗಜರಾದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮೊಮ್ಮಗ ಹಾಗೂ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರ ಮಗನಾದ ನಿಖಿಲ್ ಕುಮಾರಸ್ವಾಮಿ ಕನ್ನಡ ಹಾಗೂ ತೆಲುಗು ಚಲನಚಿತ್ರಗಳಲ್ಲಿ ಅಭಿನಯಿಸಿ ಈಗಾಗಲೇ ಓರ್ವ ನಟನಾಗಿ ಗುರುತಿಸಿಕೊಂಡಿದ್ದಾರೆ. ಇವರ ರಾಜಕೀಯ ರಂಗ ಪ್ರವೇಶಕ್ಕೆ ಸಂದರ್ಭ ಕೂಡಿಬಂದಿದ್ದು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದಿದ್ದಾರೆ. ದೂರಶಿಕ್ಷಣ ವ್ಯವಸ್ಥೆಯ ಮೂಲಕ ನಿಖಿಲ್ ಪದವಿ ಶಿಕ್ಷಣ ಪೂರೈಸಿದ್ದಾರೆ. 2016 ರಲ್ಲಿ ಜಾಗ್ವಾರ್ ಕನ್ನಡ ಚಲನಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದರು. ನಂತರ ಜಾಗ್ವಾರ್ ತೆಲುಗಿನಲ್ಲಿಯೂ ಬಿಡುಗಡೆಯಾಯಿತು. ಜಾಗ್ವಾರ್‌ನಲ್ಲಿನ ಅಭಿನಯಕ್ಕಾಗಿ ಸಿಮಾ (ಎಸ್‌ಐಐಎಂಎ) ನ ಅತ್ಯುತ್ತಮ ಹೊಸ ನಟ (ಪುರುಷ) ಕನ್ನಡ ವಿಭಾಗದ ಪ್ರಶಸ್ತಿ, ಅತ್ಯುತ್ತಮ ಹೊಸ ನಟ (ಪುರುಷ) ವಿಭಾಗದ ಟಿಎಸ್‌ಆರ್ ಫಿಲ್ಮ್ ಅವಾರ್ಡ್ ತೆಲುಗು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
| ಪೂರ್ಣ ಹೆಸರು | ನಿಖಿಲ್ ಕುಮಾರಸ್ವಾಮಿ |
| ಜನ್ಮ ದಿನಾಂಕ | 22 Jan 1990 (ವಯಸ್ಸು 36) |
| ಹುಟ್ಟಿದ ಸ್ಥಳ | ಬೆಂಗಳೂರು |
| ಪಕ್ಷದ ಹೆಸರು | Janata Dal (Secular) |
| ವಿದ್ಯಾರ್ಹತೆ | NULL |
| ಉದ್ಯೋಗ | ಚಿತ್ರನಟ |
| ತಂದೆಯ ಹೆಸರು | ಎಚ್.ಡಿ. ಕುಮಾರಸ್ವಾಮಿ |
| ತಾಯಿಯ ಹೆಸರು | ಅನಿತಾ ಕುಮಾರಸ್ವಾಮಿ |
| ಅವಲಂಬಿತರ ಹೆಸರು | NA |
| ಅವಲಂಬಿತರ ಉದ್ಯೋಗ | NA |
| ಧರ್ಮ | ಹಿಂದು |
Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.