Get Updates
Get notified of breaking news, exclusive insights, and must-see stories!

ಶ್ರೀಮತಿ ಮೀನಾಕ್ಷಿ ಲೇಖಿ

ಶ್ರೀಮತಿ ಮೀನಾಕ್ಷಿ ಲೇಖಿ
ಮೀನಾಕ್ಷಿ ಲೇಖಿ ಭಾರತೀಯ ಜನತಾ ಪಾರ್ಟಿಯ ಅಗ್ರಗಣ್ಯ ಮಹಿಳಾ ನಾಯಕರಲ್ಲೊಬ್ಬರು. ೨೦೧೯ರ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ದೆಹಲಿ ಪ್ರತಿನಿಧಿಸಿ ಕಾಂಗ್ರೆಸ್ನ ಅಜಯ್ ಮಾಕೆನ್ ಅವರನ್ನು ಸೋಲಿಸಿ ಪುನರಾಯ್ಕೆಯಾದರು.
By Keshav Karna | Monday, February 8, 2021, 12:43:38 PM [IST]

ಶ್ರೀಮತಿ ಮೀನಾಕ್ಷಿ ಲೇಖಿ ಜೀವನ ಚರಿತ್ರೆ

ಮೀನಾಕ್ಷಿ ಲೇಖಿ ಭಾರತೀಯ ಜನತಾ ಪಾರ್ಟಿಯ ಅಗ್ರಗಣ್ಯ ಮಹಿಳಾ ನಾಯಕರಲ್ಲೊಬ್ಬರು. ೨೦೧೯ರ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ದೆಹಲಿ ಪ್ರತಿನಿಧಿಸಿ ಕಾಂಗ್ರೆಸ್ನ ಅಜಯ್ ಮಾಕೆನ್ ಅವರನ್ನು ಸೋಲಿಸಿ ಪುನರಾಯ್ಕೆಯಾದರು. ಬಿಪಿಯ ವಕ್ತಾರರಾಗಿ ಹಾಗೂ ಸುಪ್ರೀಂ ಕೋರ್ಟ್ ವಕೀಲರಾಗಿರುವ ಮೀನಾಕ್ಷಿ ಲೇಖಿ ಅವರನ್ನು ಡೈನಮಿಕ್ ಮತ್ತು ಬಹುಮುಖ ಪ್ರತಿಭೆ ಎಂದೇ ಗುರತಿಸಲಾಗುತ್ತಿದೆ. ವಿವಿಧ ವಿಷಯಗಳ ಕುರಿತು ಪತ್ರಿಕೆಗಳಿಗೆ ನಿರಂತರವಾಗಿ ಬರೆಯುತ್ತಿರುವ ಇವರು, ಹಲವು ವಿಷಯಗಳ ಕುರಿತು ಸಾಮಾಜಿಕ ಚಿಂತನೆ ಮತ್ತು ಚರ್ಚೆಯಲ್ಲಿ ಪಾಲ್ಗೊಳ್ಳುತ್ತಿರುತ್ತಾರೆ. ಮಹಿಳಾ ಮೀಸಲಾತಿ ಮಸೂದೆ, ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳದ ಸಮಸ್ಯೆ ಕರಡು ಸಮಿತಿ ಸದಸ್ಯರಾಗಿದ್ದಾರೆ. ದೆಹಲಿ ವಿವಿಯಲ್ಲಿ ಬಿಎಸ್ಸಿ, ನಂತರ ಕಾನೂನು ಅಧ್ಯಯನ ಮಾಡಿದವರು. ಸುಪ್ರೀಂ ಕೋರ್ಟ್ನಲ್ಲಿ ವಕೀಲರಾಗಿ ಸೇವೆ, ಅಲ್ಲಿನ ಸಹೋದ್ಯೋಗಿಯನ್ನೇ ವಿವಾಹವಾಗಿ ಅವರಿಗೆ ಮೂವರು ಮಕ್ಕಳಿದ್ದಾರೆ.

ಮತ್ತಷ್ಟು ಓದು

ಶ್ರೀಮತಿ ಮೀನಾಕ್ಷಿ ಲೇಖಿ ವಯಕ್ತಿಕ ಜೀವನ

ಪೂರ್ಣ ಹೆಸರು ಶ್ರೀಮತಿ ಮೀನಾಕ್ಷಿ ಲೇಖಿ
ಜನ್ಮ ದಿನಾಂಕ 30 Apr 1967 (ವಯಸ್ಸು 58)
ಹುಟ್ಟಿದ ಸ್ಥಳ ನವದೆಹಲಿ, ಭಾರತ
ಪಕ್ಷದ ಹೆಸರು Bharatiya Janta Party
ವಿದ್ಯಾರ್ಹತೆ Graduate Professional
ಉದ್ಯೋಗ ವಕಿಲರು, ಸಾಮಾಜಿಕ ಕಾರ್ಯಕರ್ತರು, ರಾಜಕಾರಣಿ
ತಂದೆಯ ಹೆಸರು ಶ್ರೀ ಭಗವಾನ್ ಖನ್ನಾ
ತಾಯಿಯ ಹೆಸರು ಶ್ರೀಮತಿ ಅಮರಲತಾ ಖನ್ನಾ
ಅವಲಂಬಿತರ ಹೆಸರು ಶ್ರೀ ಅಮನ್ ಲೇಖಿ
ಅವಲಂಬಿತರ ಉದ್ಯೋಗ ವಕೀಲರು
ಮಕ್ಕಳು 2 ಪುತ್ರ(ರು) 1 ಪುತ್ರಿ(ಯರು)
ವೆಬ್‌ಸೈಟ್ http://www.meenakshilekhi.com

ಶ್ರೀಮತಿ ಮೀನಾಕ್ಷಿ ಲೇಖಿ ಒಟ್ಟು ಆಸ್ತಿ

ಒಟ್ಟು ಆಸ್ತಿ
₹34.66 CRORE
ಆಸ್ತಿ
₹34.99 CRORE
ಸಾಲಸೋಲ
₹32.76 LAKHS

ಶ್ರೀಮತಿ ಮೀನಾಕ್ಷಿ ಲೇಖಿ ಕುರಿತು ಆಸಕ್ತಿದಾಯಕ ಸಂಗತಿಗಳು

ಮಹಿಳೆಯರಿಗೆ ನ್ಯಾಯ ಒದಗಿಸುವಲ್ಲಿ ಇವರು ಮೊದಲಿಗರಾಗಿದ್ದು, ಅದಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದವರು. ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸದಾ ಸಕ್ರೀಯರಾಗಿರುವ ಮೀನಾಕ್ಷಿ, ಕುರುಡು ಪರಿಹಾರ ಸಂಘಟನೆ ಜಂಟೀ ಕಾರ್ಯದರ್ಶಿಯಾಗಿದ್ದಾರೆ, ಬಿಜೆಪಿ ವಕ್ತಾರರಾಗಿ ಪಕ್ಷದ ನೀತಿ ನಿಯಮಾವಳಿಗಳ ಸಮರ್ಥ ಪ್ರಚಾರದಲ್ಲಿ ಯಶಸ್ವಿ ಕಂಡಿದ್ದಾರೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಷಯಗಳ ಕುರಿತು ಟೀವಿ ಚರ್ಚೆ, ಸಂವಾದಗಳಲ್ಲಿ ಪಾಲ್ಗೊಂಡಿದ್ದಾರೆ.

ಶ್ರೀಮತಿ ಮೀನಾಕ್ಷಿ ಲೇಖಿ ಸಾಧನೆಗಳು

2018ರ ಏಪ್ರೀಲ್ನ ದಾಖಲೆಗಳ ಪ್ರಕಾರ ಅವರು ಲೋಕಸಭೆಯ 95 ಚರ್ಚೆಗಳಲ್ಲಿ (ಶೇ.57.9) ಪಾಲ್ಗೊಂಡು 378 ಪ್ರಶ್ನೆಗಳನ್ನು ಕೇಳಿದ್ದಾರೆ. 15 ಖಾಸಗಿ ಸದಸ್ಯರ ಮಸೂದೆಗಳನ್ನು ಪರಿಚಯಿಸಿದ್ದಾರೆ. ಇನ್ನು ಸಂಸತ್ತಿಗೆ ಹಾಜರಾಗುವ ಸಂಸದರ ಸರಾಸರಿ ಶೇ.80 ಇದ್ದು, ಮೀನಾಕ್ಷಿ ಅವರು ಶೇ.95 ರಷ್ಟು ಹಾಜರಾತಿ ಹೊಂದಿದ್ದಾರೆ.

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+