Get Updates
Get notified of breaking news, exclusive insights, and must-see stories!

ಎಂ.ಜೆ. ಅಕ್ಬರ್

ಎಂ.ಜೆ. ಅಕ್ಬರ್
ಪ್ರಖ್ಯಾತ ಪತ್ರಕರ್ತ ಹಾಗೂ ಒಳ್ಳೆಯ ಬರಹಗಾರ ಎಂ. ಜೆ.
By Anushree | Monday, April 29, 2019, 06:14:14 PM [IST]

ಎಂ.ಜೆ. ಅಕ್ಬರ್ ಜೀವನ ಚರಿತ್ರೆ

ಪ್ರಖ್ಯಾತ ಪತ್ರಕರ್ತ ಹಾಗೂ ಒಳ್ಳೆಯ ಬರಹಗಾರ ಎಂ.ಜೆ. ಅಕ್ಬರ್ 1989 ರಲ್ಲಿ ಮೊದಲ ಬಾರಿಗೆ ರಾಜಕೀಯ ರಂಗಕ್ಕೆ ಬರಲು ಯತ್ನಿಸಿದರು. ರಾಜಕೀಯ ಪ್ರವೇಶಕ್ಕೂ ಮುನ್ನ ಹಲವಾರು ಪ್ರಖ್ಯಾತ ಪತ್ರಿಕೆ, ನಿಯತಕಾಲಿಕೆಗಳ ಪ್ರಮುಖ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ಇವರು ಅವುಗಳ ಬೆಳವಣಿಗೆಗೆ ಕಾರಣಕರ್ತರಾಗಿದ್ದರು. 1971 ರಲ್ಲಿ ಟೈಮ್ಸ್ ಆಫ್ ಇಂಡಿಯಾದಲ್ಲಿ ಟ್ರೇನಿ ಜರ್ನಲಿಸ್ಟ್ ಆಗಿ ವೃತ್ತಿ ಆರಂಭಿಸಿದ ಎಂ.ಜೆ. ಅಕ್ಬರ್ ಬಹು ಬೇಗನೆ ತಮ್ಮ ಪತ್ರಕರ್ತ ಹಾಗೂ ಬರಹಗಳ ಕೌಶಲದಿಂದ ಪತ್ರಿಕಾರಂಗದಲ್ಲಿ ದೊಡ್ಡ ಹೆಸರು ಮಾಡಿದರು. ನಂತರ ತಮ್ಮ ಸ್ವಂತದ ಮಾಧ್ಯಮ ಸಂಸ್ಥೆ ಆರಂಭಿಸಿದ ಇವರು ಅತಿ ಕಡಿಮೆ ಅವಧಿಯಲ್ಲಿ ಅದನ್ನು ಎತ್ತರದ ಮಟ್ಟಕ್ಕೆ ಬೆಳೆಸಿದರು. ಅಕ್ಬರ್ ಅವರ ಏಶಿಯನ್ ಏಜ್ ಪತ್ರಿಕೆ ಅಂತಾರಾಷ್ಟ್ರೀಯ ಸುದ್ದಿಗಳ ವರದಿಗಾರಿಕೆಯಲ್ಲಿ ದೊಡ್ಡ ಹೆಸರು ಮಾಡಿತು. ಕೆಲವೇ ದಿನಗಳಲ್ಲಿ ಭಾರತ ಸೇರಿದಂತೆ ವಿಶ್ವದ ಹಲವಾರು ದೇಶಗಳಲ್ಲಿ ತನ್ನ ಕಚೇರಿಯನ್ನು ಹೊಂದುವ ಮೂಲಕ ವಿಶ್ವದ ಅತ್ಯುತ್ತಮ ಪತ್ರಿಕೆಗಳಲ್ಲೊಂದಾಗಿ ಹೆಸರು ಮಾಡಿತು.
ಕಿಶನಗಂಜ್ ಲೋಕಸಭಾ ಕ್ಷೇತ್ರದ ಸಂಸದರಾಗಿ ಚುನಾಯಿತರಾಗುವ ಮೂಲಕ ರಾಜಕೀಯ ರಂಗಕ್ಕೆ ಬಂದರಾದರೂ ಅದರ ನಂತರದ ಚುನಾವಣೆಯಲ್ಲಿ ಸೋತು ಮತ್ತೆ ಪತ್ರಿಕಾ ರಂಗಕ್ಕೆ ಹಿಂದಿರುಗಿದರು. 2009 ರಲ್ಲಿ ರಾಜ್ಯಸಭಾ ಸದಸ್ಯರಾಗಿ ಮತ್ತೆ ರಾಜಕೀಯಕ್ಕೆ ಸೇರಿ 2016ರಲ್ಲಿ ಪುನಃ ರಾಜ್ಯಸಭಾ ಸದಸ್ಯರಾದರು. 2016ರಲ್ಲಿ ವಿದೇಶಾಂಗ ಸಚಿವರಾಗಿ ನೇಮಕಗೊಂಡರಾದರೂ, ತಾವು ಸಂಪಾದಕರಾಗಿದ್ದ ವೇಳೆ ಎಸಗಿದ್ದರೆನ್ನಲಾದ ಲೈಂಗಿಕ ದೌರ್ಜನ್ಯ ಸೇರಿದಂತೆ ಇನ್ನೂ ಹಲವಾರು ಆರೋಪಗಳಿಂದಾಗಿ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಬೇಕಾಯಿತು. ಮಿಟೂ ಅಭಿಯಾನದ ಸಂದರ್ಭದಲ್ಲಿ ಸುಮಾರು 20 ಕ್ಕೂ ಹೆಚ್ಚೂ ಹೆಣ್ಣು ಮಕ್ಕಳು ಅಕ್ಬರ್ ವಿರುದ್ಧ ಲೈಂಗಿಕ ದೌರ್ಜನ್ಯದ ಆಪಾದನೆ ಹೊರಿಸಿದರು.

ಮತ್ತಷ್ಟು ಓದು

ಎಂ.ಜೆ. ಅಕ್ಬರ್ ವಯಕ್ತಿಕ ಜೀವನ

ಪೂರ್ಣ ಹೆಸರು ಎಂ.ಜೆ. ಅಕ್ಬರ್
ಜನ್ಮ ದಿನಾಂಕ 11 Jan 1959 (ವಯಸ್ಸು 67)
ಹುಟ್ಟಿದ ಸ್ಥಳ ತೆಲಿನಿಪಾರಾ, ಹೂಗ್ಲಿ ಜಿಲ್ಲೆ, ಪಶ್ಚಿಮ ಬಂಗಾಳ
ಪಕ್ಷದ ಹೆಸರು Bharatiya Janta Party
ವಿದ್ಯಾರ್ಹತೆ
ಉದ್ಯೋಗ ಲೇಖಕ ಹಾಗೂ ಪತ್ರಕರ್ತ. ಪ್ರಸ್ತುತ ಸಾರ್ವಜನಿಕ ರಂಗದಲ್ಲಿ ಕೆಲಸ
ತಂದೆಯ ಹೆಸರು ಶ್ರೀ ಶೇಖ ಅಕ್ಬರ ಅಲಿ
ತಾಯಿಯ ಹೆಸರು ಶ್ರೀಮತಿ ಇಮ್ತಿಯಾಜ ಅಕ್ಬರ
ಅವಲಂಬಿತರ ಹೆಸರು ಶ್ರೀಮತಿ ಮಲ್ಲಿಕಾ ಅಕ್ಬರ್
ಅವಲಂಬಿತರ ಉದ್ಯೋಗ ಪತ್ರಕರ್ತೆ
ಮಕ್ಕಳು 1 ಪುತ್ರ(ರು) 1 ಪುತ್ರಿ(ಯರು)

ಎಂ.ಜೆ. ಅಕ್ಬರ್ ಒಟ್ಟು ಆಸ್ತಿ

ಒಟ್ಟು ಆಸ್ತಿ
N/A
ಆಸ್ತಿ
N/A
ಸಾಲಸೋಲ
N/A

ಎಂ.ಜೆ. ಅಕ್ಬರ್ ಕುರಿತು ಆಸಕ್ತಿದಾಯಕ ಸಂಗತಿಗಳು

ಅಕ್ಟೋಬರ್ ೨೦೧೮ ರಲ್ಲಿ ಪತ್ರಕರ್ತೆ ಪ್ರಿಯಾ ರಮಣಿ, ಯುನೈಟೆಡ್ ಕಿಂಗಡಮ್‌ನಲ್ಲಿರುವ ಪತ್ರಕರ್ತೆ ರುಥ್ ಡೆವಿಡ್, ಸಿಎನ್ನೆನ್ ಪತ್ರಕರ್ತೆ ಮಜ್ಲಿಸ್ ಡೆ ಪು ಕಾಂಪ್, ಪತ್ರಕರ್ತೆ ಸುತಪಾ ಪಾಲ್, ಪತ್ರಕರ್ತೆ ಸುಪರ್ಣಾ ಶರ್ಮಾ ಸೇರಿದಂತೆ ಇನ್ನೂ ಕೆಲವರು ಎಂ.ಜೆ. ಅಕ್ಬರ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದರು. ಸುಳ್ಳು ಆರೋಪಗಳಿಂದ ತಮ್ಮ ತೇಜೋವಧೆ ಮಾಡಿದ್ದಾರೆಂದು ಪ್ರಿಯಾ ರಮಣಿ ವಿರುದ್ಧ ಅಕ್ಬರ್ ಮಾನನಷ್ಟ ಮೊಕದ್ದಮೆ ಹೂಡಿದರು.

ಎಂ.ಜೆ. ಅಕ್ಬರ್ ಸಾಧನೆಗಳು

ಜವಾಹರ ಲಾಲ ನೆಹರು ಅವರ ಜೀವನಾಧರಿತ ’ದಿ ಮೇಕಿಂಗ್ ಆಫ್ ಇಂಡಿಯಾ’, ಕಾಶ್ಮೀರ ಕುರಿತಾದ ’ಕಾಶ್ಮೀರ ಬಿಹೈಂಡ್ ವೇಲ್’, ’ದಿ ಸೀಜ್ ವಿದಿನ್’ ಸೇರಿದಂತೆ ಹಲವಾರು ಗ್ರಂಥಗಳನ್ನು ಬರೆದಿದ್ದಾರೆ. ಜಿಹಾದ್ ಇತಿಹಾಸದ ಬಗ್ಗೆ ತಿಳಿಸುವ ’ದಿ ಶೇಡ್ ಆಫ್ ಸ್ವೋರ್ಡ್ಸ’ ಕೃತಿ ರಚಿಸಿದ್ದಾರೆ.

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+