ಜಯಂತ್ ಸಿನ್ಹಾ ಲೋಕಸಭಾ ಸದಸ್ಯರು ಹಾಗೂ ನಾಗರೀಕ ವಿಮಾನ ಯಾನ ಖಾತೆಯ ರಾಜ್ಯ ಸಚಿವರಾಗಿದ್ದರು. ಹಣಕಾಸು ಸಚಿವಾಲಯದ ಮಾಜಿ ಸಹಾಯಕ ಸಚಿವರು. 1990ರಿಂದಲೂ ರಾಜಕೀಯ ನೀತಿ ನಿರೂಪಣೆ ವಿಷಯದಲ್ಲಿ ಕಾರ್ಯನಿರ್ವಹಿಸುತ್ತ ಬಂದಿದ್ದಾರೆ. ಇವರ ತಂದೆ ಯಶವಂತ್ ಸಿನ್ಹಾ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರದಲ್ಲಿ (1998-2002) ಹಣಕಾಸು ಸಚಿವರಾಗಿದ್ದರು. ಈ ವೇಳೆ ಜಯಂತ್ ಸಿನ್ಹಾ, ಅಡಮಾನ ಸಾಲದ ಬಡ್ಡಿ ಮನ್ನಾ, ಸರಳ ರೂಪದಲ್ಲಿ ಆದಾಯ ತೆರಿಗೆ ಘೋಷಣೆ ಸೇರಿದಂತೆ ಹಲವು ಉಪಕ್ರಮಗಳನ್ನು ಕೈಗೊಳ್ಳುವ ಮೂಲಕ ತೆರಿಗೆ ಸುಧಾರಣೆ, ಹಣದ ಒಳಹರಿವು ಹೆಚ್ಚಳಕ್ಕೆ ಕ್ರಮಗಳನ್ನು ಕೈಗೊಂಡರು. ಅಲ್ಲದೇ ಹಲವಾರು ಖಾಸಗಿ ಕಂಪನಿಗಳಲ್ಲಿ ಪಾಲುದಾರರಾಗಿ ಸಮರ್ಥವಾಗಿ ನಿರ್ವಹಿಸಿದ ಅನುಭವ ಹೊಂದಿದ್ದಾರೆ.
| ಪೂರ್ಣ ಹೆಸರು | ಜಯಂತ್ ಸಿನ್ಹಾ |
| ಜನ್ಮ ದಿನಾಂಕ | 21 Apr 1963 (ವಯಸ್ಸು 62) |
| ಹುಟ್ಟಿದ ಸ್ಥಳ | ಗಿರಿದಿಹ್ (ಜಾರ್ಖಂಡ್) |
| ಪಕ್ಷದ ಹೆಸರು | Bharatiya Janta Party |
| ವಿದ್ಯಾರ್ಹತೆ | Post Graduate |
| ಉದ್ಯೋಗ | ಉದ್ಯಮಿ, ಹೂಡಿಕೆದಾರ, ಆರ್ಥಿಕ ತಜ್ಞ |
| ತಂದೆಯ ಹೆಸರು | ಯಶವಂತ್ ಸಿನ್ಹಾ |
| ತಾಯಿಯ ಹೆಸರು | ನಿಲಿಮಾ ಸಿನ್ಹಾ |
| ಅವಲಂಬಿತರ ಹೆಸರು | ಪುನಿತಾ ಕುಮಾರಿ ಸಿನ್ಹಾ |
| ಅವಲಂಬಿತರ ಉದ್ಯೋಗ | ಗೃಹಿಣಿ |
| ಮಕ್ಕಳು | 2 ಪುತ್ರ(ರು) |
| ಧರ್ಮ | ಹಿಂದು |
Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.