Get Updates
Get notified of breaking news, exclusive insights, and must-see stories!

ಜಯಕುಮಾರ ಡಿ.

ಜಯಕುಮಾರ ಡಿ.
ಡಿ. ಜಯಕುಮಾರ ಎಡಿಎಂಕೆ ಪಕ್ಷದ ಹಿರಿಯ ಮುಖಂಡರಾಗಿದ್ದಾರೆ.
By Rashmi | Friday, February 1, 2019, 05:56:02 PM [IST]

ಜಯಕುಮಾರ ಡಿ. ಜೀವನ ಚರಿತ್ರೆ

ಡಿ. ಜಯಕುಮಾರ ಎಡಿಎಂಕೆ ಪಕ್ಷದ ಹಿರಿಯ ಮುಖಂಡರಾಗಿದ್ದಾರೆ. ಇವರು ತಮಿಳು ನಾಡು ವಿಧಾನ ಸಭೆಯ ಶಾಸಕರಾಗಿದ್ದಾರೆ. ತಮಿಳುನಾಡು ವಿಧಾನ ಸಭೆಯ ಸ್ಪೀಕರ್ ಆಗಿ ಕೆಲಸ ಮಾಡಿದ ಇವರು ಸ್ಪೀಕರ್ ಸ್ಥಾನಕ್ಕೆ 2012ರ ಸೆಪ್ಟೆಂಬರ್ 29 ರಂದು ರಾಜಿನಾಮೆ ನೀಡಿದರು. 1991, 2001, 2006, 2011 ಹಾಗೂ 2016 ರಲ್ಲಿ ನಡೆದ ವಿಧಾನ ಸಭಾ ಚುನಾವಣೆಗಳಲ್ಲಿ ಚೆನ್ನೈನ ರೋಯಾಪುರಂ ಕ್ಷೇತ್ರದಿಂದ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಶಾಸಕರಾಗಿ ಚುನಾಯಿತರಾಗಿದ್ದಾರೆ. ಪ್ರಸ್ತುತ ಇವರು ತಮಿಳು ನಾಡಿನ ಮೀನುಗಾರಿಕೆ ಮತ್ತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಖಾತೆಗಳ ಸಚಿವರಾಗಿದ್ದಾರೆ. ಚೆನ್ನೈನ ರೋಯಾಪುರಂ ವಿಧಾನ ಸಭಾ ಕ್ಷೇತ್ರದಲ್ಲಿ ಇವರು ಎಡಿಎಂಕೆ ಪಕ್ಷದ ಪ್ರಬಲ ಅಭ್ಯರ್ಥಿಯಾಗಿ ಗುರುತಿಸಿಕೊಂಡಿದ್ದಾರೆ.

ಮತ್ತಷ್ಟು ಓದು

ಜಯಕುಮಾರ ಡಿ. ವಯಕ್ತಿಕ ಜೀವನ

ಪೂರ್ಣ ಹೆಸರು ಜಯಕುಮಾರ ಡಿ.
ಜನ್ಮ ದಿನಾಂಕ 18 Sep 1960 (ವಯಸ್ಸು 65)
ಹುಟ್ಟಿದ ಸ್ಥಳ ರೋಯಾಪುರಂ, ಚೆನ್ನೈ
ಪಕ್ಷದ ಹೆಸರು All India Anna Dravida Munnetra Kazhagam
ವಿದ್ಯಾರ್ಹತೆ Graduate Professional
ಉದ್ಯೋಗ ರಾಜಕಾರಣಿ
ತಂದೆಯ ಹೆಸರು ದುರೈ ರಾಜನ್
ತಾಯಿಯ ಹೆಸರು Not Known
ಅವಲಂಬಿತರ ಹೆಸರು Not Known
ಅವಲಂಬಿತರ ಉದ್ಯೋಗ ಹೌಸ್ ವೈಫ್
ಮಕ್ಕಳು 1 ಪುತ್ರ(ರು)
ವೆಬ್‌ಸೈಟ್ NIL

ಜಯಕುಮಾರ ಡಿ. ಒಟ್ಟು ಆಸ್ತಿ

ಒಟ್ಟು ಆಸ್ತಿ
₹1.78 CRORE
ಆಸ್ತಿ
₹1.79 CRORE
ಸಾಲಸೋಲ
₹1 LAKHS

ಜಯಕುಮಾರ ಡಿ. ಕುರಿತು ಆಸಕ್ತಿದಾಯಕ ಸಂಗತಿಗಳು

ಜಯಕುಮಾರ ವೃತ್ತಿಯಿಂದ ಓರ್ವ ನ್ಯಾಯವಾದಿ.
ಇವರ ಮಗ ಡಿ. ಜಯವರ್ಧನ, ಎಂಬಿಬಿಎಸ್, ಎಂಡಿ ಇವರು ಸಹ ರಾಜಕಾರಣಿಯಾಗಿದ್ದು, ಪ್ರಸ್ತುತ ಚೆನ್ನೈನ ದಕ್ಷಿಣ ಲೋಕಸಭಾ ಮತಕ್ಷೇತ್ರದಿಂದ ಅತಿ ಕಿರಿಯ ವಯಸ್ಸಿನ ಸಂಸದರಾಗಿದ್ದಾರೆ.
ಮೀನುಗಾರ ಸಮಾಜದ ಜನತೆ ಇವರಿಗೆ ಭಾರಿ ಬೆಂಬಲ ನೀಡಿದ್ದಾರೆ.

ಜಯಕುಮಾರ ಡಿ. ರಾಜಕೀಯ ಟೈಮ್‌ಲೈನ್

  • 2017: 2017ರ ಆರಂಭದಲ್ಲಿ ಜಯಲಲಿತಾರ ನಿಧನದ ನಂತರ ಇಪಿಎಸ್ ಹಾಗೂ ಓಪಿಎಸ್ ಬಣಗಳು ಇಬ್ಭಾಗವಾದ ಸಂದರ್ಭದಲ್ಲಿ ಶಶಿಕಲಾ ಅವರ ಬೆಂಬಲದಿಂದ ಹಣಕಾಸು ಸಚಿವರಾಗಿ ಆಯ್ಕೆಯಾದರು.
  • 2016: 2016 ರಲ್ಲಿ ತಮಿಳು ನಾಡು ವಿಧಾನ ಸಭೆಯ ಶಾಸಕರಾಗಿ ಚುನಾಯಿತರಾದ ಜಯಕುಮಾರ ಶಶಿಕಲಾ ಅವರ ಮೂಲಕ ಜಯಲಲಿತಾರ ಮನವೊಲಿಸಿ ಮೀನುಗಾರಿಕೆ ಸಚಿವರಾದರು.
  • 2011: 2011 ರಲ್ಲಿ ಮತ್ತೊಮ್ಮೆ ರೋಯಾಪುರಂ ಕ್ಷೇತ್ರದಿಂದ ಶಾಸಕರಾಗಿ ಚುನಾಯಿತರಾದ ಜಯಕುಮಾರ ಅದೇ ವರ್ಷ ತಮಿಳು ನಾಡು ವಿಧಾನ ಸಭೆಯ ಸ್ಪೀಕರ್ ಆಗಿ ನೇಮಕಗೊಂಡರು.
  • 2006: ರೋಯಾಪುರಂ ಕ್ಷೇತ್ರದಿಂದ ಮತ್ತೆ ಶಾಸಕರಾದರು.
  • 1991: 1991 ರಲ್ಲಿ ಜಯಲಲಿತಾ ಅವರು ರೋಯಾಪುರಂ ಕ್ಷೇತ್ರದಿಂದ ಸ್ಪರ್ಧಿಸಲು ಜಯಕುಮಾರ ಅವರಿಗೆ ಅವಕಾಶ ನೀಡಿದರು. ಈ ಚುನಾವಣೆಯಲ್ಲಿ ಜಯಶಾಲಿಯಾದ ಜಯಕುಮಾರ, ಜಯಲಲಿತಾ ಅವರ ವಿಶ್ವಾಸ ಗಳಿಸಿದರು.
  • Not Known: ಎಡಿಎಂಕೆ ಪಕ್ಷದ ಸದಸ್ಯರಾದರು.

ಹಿಂದಿನ ಇತಿಹಾಸ

  • Early 80's: ಪಾಚಿಯಪ್ಪಾಸ್ ಕಾಲೇಜಿನಲ್ಲಿ ವಿಜ್ಞಾನ ಪದವಿ ಶಿಕ್ಷಣ ಪೂರೈಸಿದ ಜಯಕುಮಾರ ಮದ್ರಾಸ್ ಲಾ ಕಾಲೇಜಿನಲ್ಲಿ ಕಾನೂನು ಪದವಿ ಪಡೆದರು.

ಜಯಕುಮಾರ ಡಿ. ಸಾಧನೆಗಳು

ಡಿ. ಜಯಕುಮಾರ ಅವರು ತಮ್ಮಲ್ಲಿನ ವಿಶಿಷ್ಟ ಕೌಶಲಗಳ ಕಾರಣದಿಂದ ತಮಿಳುನಾಡು ವಿಧಾನ ಸಭೆಯ ಸ್ಪೀಕರ್ ಆಗಿ ನೇಮಿಸಲ್ಪಟ್ಟರು.
ಹಣಕಾಸು ಸಚಿವರಾಗಿ ಕಾರ್ಯ ನಿರ್ವಹಿಸಿದ ನಂತರ ಮೀನುಗಾರಿಕೆ ಸಚಿವರಾಗಿದ್ದಾರೆ.
ಇವರು ರೋಯಾಪುರಂ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ಚುನಾಯಿತರಾಗಿದ್ದಾರೆ.

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+