ಜಯಾ ಭಾದುರಿ ಓರ್ವ ಚಲನಚಿತ್ರ ನಟಿ ಹಾಗೂ ರಾಜಕಾರಣಿಯಾಗಿದ್ದಾರೆ. ತಮ್ಮ ಯೌವನದ ಕಾಲದಲ್ಲಿ ಹಿಂದಿ ಚಿತ್ರರಂಗದ ಶ್ರೇಷ್ಠ ಅಭಿನೇತ್ರಿಯಾಗಿ ಇವರು ಹೆಸರು ಮಾಡಿದ್ದರು. ತಮ್ಮ 12ನೇ ವಯಸ್ಸಿನಲ್ಲಿ ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ಜಯಾ, ಹಲವಾರು ಚಿತ್ರಗಳಲ್ಲಿ ನೆನಪಿನಲ್ಲಿ ಉಳಿಯುವಂಥ ಪಾತ್ರಗಳನ್ನು ನಿಭಾಯಿಸಿ ಪ್ರಖ್ಯಾತಿ ಪಡೆದರು. ಪುಣೆಯ ಫಿಲಂ ಹಾಗೂ ಟೆಲೆವಿಜನ್ ಇನಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ನಟನಾ ತರಬೇತಿ ಪಡೆದ ಇವರು ಅಲ್ಲಿ ಚಿನ್ನದ ಪದಕದೊಂದಿಗೆ ಪದವಿ ತೇರ್ಗಡೆಯಾದರು. ತಮ್ಮ ನಟನಾ ವೃತ್ತಿ ಜೀವನದಲ್ಲಿ 9 ಬಾರಿ ಫಿಲ್ಮಫೇರ್ ಅವಾರ್ಡ್ ಪಡೆದುಕೊಂಡಿದ್ದಾರೆ. ಇದರಲ್ಲಿ ಮೂರು ಬಾರಿ ಅತ್ಯುತ್ತಮ ನಟಿ ಹಾಗೂ ಮೂರು ಬಾರಿ ಅತ್ಯುತ್ತಮ ಪೋಷಕ ನಟಿ ವಿಭಾಗದಲ್ಲಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ನಂತರ ಭಾರತ ಸರಕಾರದ ಪ್ರತಿಷ್ಠಿತ ಪದ್ಮಶ್ರೀ ಪುರಸ್ಕಾರ ಪಡೆದ ಇವರು ಅತಿ ಹೆಚ್ಚು ಪ್ರಶಸ್ತಿಗಳನ್ನು ಪಡೆದ ಏಕೈಕ ನಟಿಯಾಗಿದ್ದಾರೆ.
ಪ್ರಸ್ತುತ ಚಿತ್ರರಂಗದಿಂದ ಬಂದು ರಾಜಕಾರಣಿಯಾಗಿರುವ ಜಯಾ ಭಾದುರಿ ಬಚ್ಚನ್ ರಾಜ್ಯಸಭಾ ಸಂಸದೆಯಾಗಿದ್ದಾರೆ. 2004 ರಿಂದ ಸಮಾಜವಾದಿ ಪಕ್ಷದಿಂದ 4 ಬಾರಿ ರಾಜ್ಯಸಭಾ ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ. ಪ್ರಥಮ ಬಾರಿ 2004 ರಲ್ಲಿ ಉತ್ತರ ಪ್ರದೇಶದಿಂದ ಸಮಾಜವಾದಿ ಪಕ್ಷದ ವತಿಯಿಂದ ರಾಜ್ಯಸಭಾ ಸದಸ್ಯರಾಗಿ 2006 ರವರೆಗೆ ಸೇವೆ ಸಲ್ಲಿಸಿದರು. ನಂತರ ಜೂನ್ 2006 ರಿಂದ ಜುಲೈ 2010 ರವರೆಗೆ ದ್ವಿತೀಯ ಅವಧಿಗೆ ರಾಜ್ಯಸಭಾ ಸದಸ್ಯೆಯಾಗಿದ್ದರು. ನಂತರ 2012 ರಲ್ಲಿ ಮೂರನೇ ಬಾರಿ ಹಾಗೂ 2018 ರಲ್ಲಿ ನಾಲ್ಕನೇ ಬಾರಿ ಸಮಾಜವಾದಿ ಪಕ್ಷದಿಂದ ರಾಜ್ಯಸಭೆಗೆ ಆಯ್ಕೆಯಾದರು.
| ಪೂರ್ಣ ಹೆಸರು | ಜಯಾ ಬಚ್ಚನ್ |
| ಜನ್ಮ ದಿನಾಂಕ | 09 Apr 1948 (ವಯಸ್ಸು 77) |
| ಹುಟ್ಟಿದ ಸ್ಥಳ | ಜಬಲ್ಪುರ, ಮಧ್ಯ ಪ್ರದೇಶ ರಾಜ್ಯ |
| ಪಕ್ಷದ ಹೆಸರು | Samajwadi Party |
| ವಿದ್ಯಾರ್ಹತೆ | NULL |
| ಉದ್ಯೋಗ | ಚಿತ್ರನಟಿ |
| ತಂದೆಯ ಹೆಸರು | ದಿವಂಗತ ತರೂನ ಕುಮಾರ ಭಾದುರಿ |
| ತಾಯಿಯ ಹೆಸರು | ಇಂದಿರಾ ಭಾದುರಿ |
| ಅವಲಂಬಿತರ ಹೆಸರು | ಅಮಿತಾಭ ಬಚ್ಚನ್ |
| ಅವಲಂಬಿತರ ಉದ್ಯೋಗ | ಚಿತ್ರನಟ |
| ಮಕ್ಕಳು | 1 ಪುತ್ರ(ರು) 1 ಪುತ್ರಿ(ಯರು) |
Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.