ಇಂದಿರಾ ಗಾಂಧಿ ಭಾರತ ದೇಶ ಮುನ್ನಡೆಸಿದ ವರ್ಚಸ್ವೀ ರಾಜಕಾರಣಿ, ವಿವಾದಾತ್ಮಕ ನಾಯಕರಲ್ಲೊಬ್ಬರು. ಅವರು 1866-77 ಮತ್ತು 1980-84 ರವರಗೆ ತಮ್ಮ ಸಾವಿನವರೆಗೂ ಈ ದೇಶದ ಪ್ರಧಾನ ಮಂತ್ರಿಯಾಗಿದ್ದರು. ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಪುತ್ರಿಯಾಗಿದ್ದ ಇಂದಿರಾ, ತನ್ನ ಬಾಲ್ಯವನ್ನು ಬಹುಕಾಲ ಸೇವಕರೊಂದಿಗೆ ಕಳೆದರು. ಅವರ ತಾಯಿ ಕಮಲಾ ನೆಹರು ಅನಾರೋಗ್ಯದಿಂದ ಇಂದಿರಾ ಚಿಕ್ಕವರಿದ್ದಾಗಲೇ ತಿರಿಕೊಂಡರು. ಇನ್ನು ಸ್ವಾತಂತ್ರ್ಯ ಚಳುವಳಿಗಳಲ್ಲಿ ನೆಹರು ಪಾಲ್ಗೊಂಡಿದ್ದ ಹಿನ್ನೆಲೆಯಲ್ಲಿ ಅವರು ಬಹುಕಾಲ ಜೈಲಿನಲ್ಲೇ ಕಳೆದರು. ಈ ಕಾರಣಕ್ಕಾಗಿ ಅವರ ಅಧ್ಯಯನವನ್ನು ಬಹುತೇಕ ಹಾಸ್ಟೆಲ್, ಬೋರ್ಡಿಂಗ್ ಇರುವ ಶಾಲೆಗಳಲ್ಲೇ ಕಳೆದರು.
1942ರಲ್ಲಿ ಫಿರೋಜ್ ಗಾಂಧಿ ಅವರನ್ನು ವಿವಾಹವಾದರು. ನಂತರ ಅವರ ತಂದೆ ನೆಹರು ಪ್ರಧಾನಿ ಆಗುತ್ತಿದ್ದಂತೆಯೇ ಅವರಿಗೆ ಸಹಾಯಕರಾಗಿ, ಅವರ ನಂತರದಲ್ಲಿ ಪ್ರಧಾನಿ ಆಗಿದ್ದ ಲಾಲ್ ಬಹಾದ್ದೂರ ಶಾಸ್ತ್ರೀ ಅವರ ಸಂಪುಟದಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವರಾಗಿ ಸೇವೆ ಸಲ್ಲಿಸಿದರು. ಇದೇ ವೇಳೆ ರಾಜಕೀಯದಲ್ಲಿ ಸಕ್ರೀಯವಾಗಿ ಪಾಲ್ಗೊಂಡ ಇಂದಿರಾ ತಮ್ಮ ಭವಿಷ್ಯತ್ತಿಗೆ ಗಟ್ಟಿಯಾದ ಅಡಿಪಾಯ ನಿರ್ಮಿಸಿಕೊಂಡರು.
1966ರಲ್ಲಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು. ಅಂದಿನ ಕಾಂಗ್ರೆಸ್ ನಾಯಕರು ಮಹಿಳೆಯಾದ ಕಾರಣ ಮೃದುವಾಗಿರುತ್ತಾರೆ, ತಮ್ಮ ಆಡಳಿತ ನಡೆಸಬಹುದು ಎಂಬ ಕಾರಣಕ್ಕೆ ಇಂದಿರಾ ಅವರನ್ನು ಪ್ರಧಾನಿ ಆಗಿಸಲು ಒಪ್ಪಿಕೊಂಡರು. ಆದರೆ ಮುಂದೆ ಆಗಿದ್ದೇ ಬೇರೆ. ಕಠಿಣ ನಿಲುವುಗಳ ಮೂಲಕ ಇಂದಿರಾ ಎಲ್ಲರಿಗೂ ಸಿಂಹಸ್ವಪ್ನರಾದರು. ಬ್ಯಾಂಕುಗಳ ರಾಷ್ಟ್ರೀಕರಣ ಘೋಷಣೆ ಮಾಡಿದಾಗ ಕಾಂಗ್ರೆಸ್ ನಾಯಕರು ತೀವ್ರವಾಗಿ ವಿರೋಧಿಸಿದರು. ಅವರನ್ನೆಲ್ಲ ವಿಶ್ವಾಸಕ್ಕೆ ತೆಗೆದುಕೊಂಡು ನಂತರದಲ್ಲಿ ಭ್ರಷ್ಟಾಚಾರ ಹಾಗೂ ನಿರಂಕುಶ ಪ್ರಭುತ್ವದಲ್ಲಿ ಅಧಿಕಾರ ನಡೆಸಿದರು ಎಂಬ ಆರೋಪವೂ ಇದೆ. ೧೯೭೭ರಲ್ಲಿ ತುರ್ತು ಪರಿಸ್ಥಿತಿ ಹೇರುವ ಮೂಲಕ ಅವರ ನಿರಂಕುಶತನ ಪರಾಕಾಷ್ಠೆಗೆ ಏರಿತು.
ನಂತರ ನಡೆದ ಚುನಾವಣೆಯಲ್ಲಿ ಸೋತು, ತದನಂತರದಲ್ಲಿ ಮತ್ತೆ ಗೆದ್ದು 1980ರಲ್ಲಿ ಮತ್ತೆ ಪ್ರಧಾನಿಯಾದರು. ಈ ವೇಳೆ ಆತುರದ ನಿರ್ಧಾರ ತೀರ್ಪಿನ ದೋಷಗಳ ಹಿನ್ನೆಲೆಯಲ್ಲಿ ಅವರ ಸಾವನ್ನು ಅವರೇ ಆಹ್ವಾನಿಸಿದರು. ಆಪರೇಷನ್ ಬ್ಲೂಸ್ಟಾರ್ ಕಾರ್ಯಾಚರಣೆ, ನೂರಾರು ಸಿಖ್ರ ಗಲ್ಲಿಗೇರಿಸುವ ಕ್ರಮ, ಸಾವಿರಾರು ವಲಸಿಗರಿಗೆ ಮತದಾನದ ಹಕ್ಕು ನೀಡುವ ಮೂಲಕ ತಮ್ಮ ಮತ ಪೆಟ್ಟಿಗೆ ಹೆಚ್ಚಿಸಿಕೊಳ್ಳಲು ನೋಡಿದರು. ಇದು ಜನಸಾಮಾನ್ಯರನ್ನು ಕೆರಳಿಸಿತು. ಇದು 1984ರಲ್ಲಿ ಇಂದಿರಾ ಅವರ ಹತ್ಯೆಯಲ್ಲಿ ಪರ್ಯವಸಾನಗೊಂಡಿತು.
| ಪೂರ್ಣ ಹೆಸರು | ಇಂದಿರಾ ಗಾಂಧಿ |
| ಜನ್ಮ ದಿನಾಂಕ | 19 Nov 1919 |
| ಮೃತಪಟ್ಟ ದಿನಾಂಕ | 31 Oct 1984 (ವಯಸ್ಸು 64) |
| ಹುಟ್ಟಿದ ಸ್ಥಳ | ಅಲಹಾಬಾದ್, ಆಗ್ರಾ ಮತ್ತು ಔದ್ನ ಪ್ರಾದೇಶಿಕ ರಾಜ ಸಂಸ್ಥಾನ, ಬ್ರಿಟೀಷ್ ಇಂಡಿಯಾ |
| ಪಕ್ಷದ ಹೆಸರು | Indian National Congress |
| ವಿದ್ಯಾರ್ಹತೆ | |
| ಉದ್ಯೋಗ | ರಾಜಕಾರಣಿ, ಸಾಮಾಜಿಕ ಕಾರ್ಯಕರ್ತರು |
| ತಂದೆಯ ಹೆಸರು | ಜವಾಹರಲಾಲ್ ನೆಹರು |
| ತಾಯಿಯ ಹೆಸರು | ಕಮಲಾ ನೆಹರು |
| ಅವಲಂಬಿತರ ಹೆಸರು | ಫಿರೋಜ್ ಗಾಂಧಿ |
| ಮಕ್ಕಳು | 2 ಪುತ್ರ(ರು) |
Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.