ಹೆಚ್. ಡಿ. ರೇವಣ್ಣ ಜೆಡಿಎಸ್ ಪಕ್ಷದ ಪ್ರಭಾವಿ ನಾಯಕ, ಹಾಸನ ಜಿಲ್ಲೆ ಹೊಳೆನರಸೀಪುರ ಕ್ಷೇತ್ರದ ಶಾಸಕರು. ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡರ ಪುತ್ರರಾದ ರೇವಣ್ಣ ಹಾಸನ ರಾಜಕೀಯದಲ್ಲಿ ಭಾರೀ ಪ್ರಭಾವ ಹೊಂದಿದ್ದಾರೆ.
1994ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಹೆಚ್. ಡಿ. ರೇವಣ್ಣ 1999, 2004, 2008, 2013 ಮತ್ತು 2018ರ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಲೋಕೋಪಯೋಗಿ, ವಸತಿ ಸೇರಿದಂತೆ ವಿವಿಧ ಇಲಾಖೆಗಳ ಸಚಿವರಾಗಿ ಕೆಲಸ ಮಾಡಿದ್ದಾರೆ.
ಅಪಾರ ದೈವ ಭಕ್ತರಾಗಿರುವ ಹೆಚ್. ಡಿ. ರೇವಣ್ಣ ವಾರ, ನಕ್ಷತ್ರ, ವಾಸ್ತು, ಕಾಲಗಳನ್ನು ಹೆಚ್ಚಾಗಿ ನಂಬುತ್ತಾರೆ ಎಂಬುದು ರಾಜ್ಯಕ್ಕೆ ಗೊತ್ತಿರುವ ಸಂಗತಿ. ಹಾಸನ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ, ಕೆಎಂಎಫ್ ಅಧ್ಯಕ್ಷರಾಗಿಯೂ ರೇವಣ್ಣ ಕೆಲಸ ಮಾಡಿದ್ದಾರೆ.
ಹೊಳೆನರಸೀಪುರ ತಾಲೂಕು ಪಂಚಾಯತಿ ಅಧ್ಯಕ್ಷರಾಗಿ, ಹಾಸನ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ, ಹಾಸನ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘದ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಣೆ ಮಾಡಿದ ಹೆಚ್. ಡಿ. ರೇವಣ್ಣ ಹಾಸನ, ಹೊಳೆನರಸೀಪುರದ ರಾಜಕೀಯದಲ್ಲಿ ಭಾರೀ ಪ್ರಭಾವ ಹೊಂದಿದ್ದಾರೆ.
ಹೆಚ್. ಡಿ. ರೇವಣ್ಣ ತಂದೆ ಹೆಚ್. ಡಿ. ದೇವೇಗೌಡ ಪ್ರಸ್ತುತ ರಾಜ್ಯಸಭಾ ಸದಸ್ಯರು. ಸಹೋದರ ಹೆಚ್. ಡಿ. ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿಗಳು ಪ್ರಸ್ತುತ ಚನ್ನಪಟ್ಟಣದ ಶಾಸಕರು. ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಹಾಸನದ ಸಂಸದರು.
| ಪೂರ್ಣ ಹೆಸರು | ಎಚ್.ಡಿ. ರೇವಣ್ಣ |
| ಜನ್ಮ ದಿನಾಂಕ | 17 Dec 1957 (ವಯಸ್ಸು 68) |
| ಹುಟ್ಟಿದ ಸ್ಥಳ | ಹರದನಹಳ್ಳಿ, ಮೈಸೂರು |
| ಪಕ್ಷದ ಹೆಸರು | Janata Dal (Secular) |
| ವಿದ್ಯಾರ್ಹತೆ | 10th Pass |
| ಉದ್ಯೋಗ | ಕೃಷಿಕ, ಸಾರ್ವಜನಿಕ ಸೇವಕ |
| ತಂದೆಯ ಹೆಸರು | ಎಚ್.ಡಿ. ದೇವೇಗೌಡ |
| ತಾಯಿಯ ಹೆಸರು | ಚೆನ್ನಮ್ಮ |
| ಅವಲಂಬಿತರ ಹೆಸರು | ಭವಾನಿ ರೇವಣ್ಣ |
| ಅವಲಂಬಿತರ ಉದ್ಯೋಗ | ಹೌಸ್ ವೈಫ್, ಸಾಮಾಜಿಕ ಕಾರ್ಯಕರ್ತೆ |
| ಮಕ್ಕಳು | 2 ಪುತ್ರ(ರು) |
| ಧರ್ಮ | ಹಿಂದು |
| ವೆಬ್‌ಸೈಟ್ | http://jds.ind.in/h-d-revanna/ |
Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.