Get Updates
Get notified of breaking news, exclusive insights, and must-see stories!

ದೊರೈ ಮುರುಗನ್

ದೊರೈ ಮುರುಗನ್
ವಕೀಲ, ರಾಜಕಾರಣಿ ಮತ್ತು ಭಾಷಣಕಾರರಾಗಿರುವ ದೊರೈ ಮುರುಗನ್ ಪ್ರಸ್ತುತ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷದ ಪ್ರಧಾನ ಕಾರ್ಯದರ್ಶಿ ಆಗಿದ್ದಾರೆ. ವೃತ್ತಿಯಲ್ಲಿ ವಕೀಲರಾಗಿರುವ ಇವರು ಬಿ.
By Rashmi | Tuesday, March 23, 2021, 05:43:43 PM [IST]

ದೊರೈ ಮುರುಗನ್ ಜೀವನ ಚರಿತ್ರೆ

ವಕೀಲ, ರಾಜಕಾರಣಿ ಮತ್ತು ಭಾಷಣಕಾರರಾಗಿರುವ ದೊರೈ ಮುರುಗನ್ ಪ್ರಸ್ತುತ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷದ ಪ್ರಧಾನ ಕಾರ್ಯದರ್ಶಿ ಆಗಿದ್ದಾರೆ. ವೃತ್ತಿಯಲ್ಲಿ ವಕೀಲರಾಗಿರುವ ಇವರು ಬಿ.ಎಲ್ ಮತ್ತು ಎಂ.ಎ ಪದವಿ ಪಡೆದಿದ್ದಾರೆ. ಕಳೆದ 44 ವರ್ಷಗಳಿಂದ ಶಾಸಕರಾಗಿರುವ ಇವರು ತಮ್ಮ ಹಾಸ್ಯ ಪ್ರಜ್ಞೆ ಮತ್ತು ಚರ್ಚಾ ಕೌಶಲ್ಯಗಳಿಂದ ಹೆಸರುವಾಸಿಯಾಗಿದ್ದಾರೆ. ಡಿಎಂಕೆ ಪಕ್ಷದಲ್ಲಿ ಇವರು ಅತ್ಯಂತ ಅನುಭವಿ ಸಕ್ರಿಯ ನಾಯಕರಾಗಿದ್ದು, ಸ್ಟಾಲಿನ್‌ಗಿಂತಲೂ ಶಾಸಕಾಂಗ ಚಟುವಟಿಕೆಗಳಲ್ಲಿ ಸಾಕಷ್ಟು ಅನುಭವ ಹೊಂದಿದ್ದಾರೆ.

ಮತ್ತಷ್ಟು ಓದು

ದೊರೈ ಮುರುಗನ್ ವಯಕ್ತಿಕ ಜೀವನ

ಪೂರ್ಣ ಹೆಸರು ದೊರೈ ಮುರುಗನ್
ಜನ್ಮ ದಿನಾಂಕ 01 Jul 1938 (ವಯಸ್ಸು 87)
ಹುಟ್ಟಿದ ಸ್ಥಳ ಕಟ್ಪಾಡಿ, ತಮಿಳುನಾಡು
ಪಕ್ಷದ ಹೆಸರು Dravida Munetra Kazhagam
ವಿದ್ಯಾರ್ಹತೆ Post Graduate
ಉದ್ಯೋಗ Politician
ತಂದೆಯ ಹೆಸರು ದೊರೈಸಾಮಿ
ತಾಯಿಯ ಹೆಸರು ತವಾಸಿ ಅಮ್ಮಲ್
ಅವಲಂಬಿತರ ಹೆಸರು ಸಂತ ಕುಮಾರಿ
ಅವಲಂಬಿತರ ಉದ್ಯೋಗ ವಕೀಲೆ
ಮಕ್ಕಳು 1 ಪುತ್ರ(ರು)
ಧರ್ಮ ಹಿಂದು
ವೆಬ್‌ಸೈಟ್ NIL

ದೊರೈ ಮುರುಗನ್ ಒಟ್ಟು ಆಸ್ತಿ

ಒಟ್ಟು ಆಸ್ತಿ
₹30.81 CRORE
ಆಸ್ತಿ
₹30.81 CRORE
ಸಾಲಸೋಲ
N/A

ದೊರೈ ಮುರುಗನ್ ಕುರಿತು ಆಸಕ್ತಿದಾಯಕ ಸಂಗತಿಗಳು

ತಮ್ಮ ಹಾಸ್ಯಮಯ ಟೀಕೆಗಳು, ಸನ್ನೆಗಳು ಮತ್ತು ಮುಖದ ಹಾವಭಾವದೊಂದಿಗೆ ಅಸೆಂಬ್ಲಿಯಲ್ಲಿ ಬಿಸಿ ಚರ್ಚೆಗಳು ನಡೆಯುವಾಗಲೂ ಪರಿಸ್ಥಿತಿಯನ್ನು ತಿಳಿಗೊಳಿಸುವ ಸಾಮರ್ಥ್ಯ ದೊರೈ ಮುರುಗನ್ ಅವರಿಗಿತ್ತು. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂಜಿಆರ್ ಇವರ ಹಿತೈಷಿಯಾಗಿದ್ದರು. ಮದ್ರಾಸಿನಲ್ಲಿ ಮುರುಗನ್ ಅವರ ಸ್ಥಳೀಯ ರಕ್ಷಕನಾಗಿದ್ದರಲ್ಲದೇ ಆರು ವರ್ಷಗಳ ಕಾಲ ಅವರ ವಿದ್ಯಾಭ್ಯಾಸದ ಖರ್ಚು ವೆಚ್ಚವನ್ನೆಲ್ಲಾ ಭರಿಸಿದ್ದರು. (ಎರಡನೇ ಹಾಗೂ ಮೂರನೇ ವರ್ಷದ ಬಿಎ, ಎರಡು ವರ್ಷ ಲಾ ಕಾಲೇಜ್ ಹಾಗೂ ಎರಡು ವರ್ಷಗಳ ಎಂಎ)

ದೊರೈ ಮುರುಗನ್ ರಾಜಕೀಯ ಟೈಮ್‌ಲೈನ್

  • 2009 : ಜುಲೈ 13, 2009 ರಂದು ಲೋಕೋಪಯೋಗಿ ಇಲಾಖೆಯ ಅಧಿಕಾರ ಚುಕ್ಕಾಣಿ ಹಿಡಿದಿದ್ದರು
  • 2006 : ದ್ರಾವಿಡ ಮುನ್ನೇತ್ರ ಕಳಗಂ ಪಕ್ಷದ (ಡಿಎಂಕೆ ) ಸದಸ್ಯರಾಗಿದ್ದ ದೊರೈ ಮುರುಗನ್ ತಮಿಳುನಾಡು ರಾಜ್ಯದ ಕಟ್ಪಾಡಿಯಿಂದ ಶಾಸಕರಾಗಿ ಆಯ್ಕೆಯಾದರು. 2006 ರ ವಿಧಾನಸಭಾ ಚುನಾವಣೆಯ ನಂತರ ಇವರನ್ನು ತಮಿಳುನಾಡು ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರನ್ನಾಗಿ ನೇಮಿಸಲಾಯಿತು.
  • 1989 : ಮುರುಗನ್ ಅವರು ಮತ್ತೆ ತಮ್ಮ ಹಿಂದಿನ ಕ್ಷೇತ್ರವಾದ 'ಕಟ್ಪಾಡಿ'ನಲ್ಲಿ ಅದೃಷ್ಟ ಪರೀಕ್ಷೆ ನಡೆಸಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದರು. ಆದರೆ, 1991 ರಲ್ಲಿ ಅದೃಷ್ಟ ಅವರ ಪರವಾಗಿರಲಿಲ್ಲ. ಅವರು ಅದೇ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಯಲ್ಲಿ ಸೋತರು.
  • 1980 : ರಾಣಿಪೇಟೆ ಕ್ಷೇತ್ರದಿಂದ ಶಾಸಕರಾಗಿ ಮತ್ತೆ ಆಯ್ಕೆಯಾದರು. ಆದರೆ, 1984 ರಲ್ಲಿ ಈ ಕ್ಷೇತ್ರವನ್ನು ಕಳೆದುಕೊಂಡರು.
  • 1977 : ರಾಣಿಪೇಟೆ‌ ಕ್ಷೇತ್ರದಿಂದ ಈ ಬಾರಿ ಮತ್ತೆ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದರು.
  • 1971 : ದೊರೈ ಮುರುಗನ್ ಅವರು ಮೊದಲ ಬಾರಿಗೆ 1971 ರಲ್ಲಿ ಕಟ್ಪಾಡಿಯಿಂದ ತಮಿಳುನಾಡು ವಿಧಾನಸಭೆಗೆ ಆಯ್ಕೆಯಾದರು.

ಹಿಂದಿನ ಇತಿಹಾಸ

  • 1954: 1954ರಲ್ಲಿ ಸಿಎನ್ ಅಣ್ಣಾದೊರೈ ಭಾಷಣದಿಂದ ಪ್ರೇರಿತರಾಗಿ ರಾಜಕೀಯಕ್ಕೆ ಪ್ರವೇಶ ಮಾಡಿದರು. 16ನೇ ವಯಸ್ಸಿನಲ್ಲಿಯೇ ಡಿಎಂಕೆಯ ಸದಸ್ಯರಾದರು.

ದೊರೈ ಮುರುಗನ್ ಸಾಧನೆಗಳು

ದೊರೈ ಮುರುಗನ್ ಅವರು 1971ರಲ್ಲಿ ಮೊದಲ ಬಾರಿಗೆ ತಮಿಳುನಾಡು ವಿಧಾನಸಭೆಗೆ ಆಯ್ಕೆಯಾದರು. ನಂತರ ಸತತ ಆರು ಬಾರಿ ಚುನಾಯಿತರಾದ ಹೆಗ್ಗಳಿಕೆ ಇವರಿಗಿದೆ.

2016 ರ ಚುನಾವಣೆಯಲ್ಲಿ ಸತತ ಐದನೇ ಜಯವನ್ನು ಸಾಧಿಸಿದರು.

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+