ಮುಖ್ಯಪುಟ
 » 
ಡಾ. ಹರ್ಷ ವರ್ಧನ್

ಡಾ. ಹರ್ಷ ವರ್ಧನ್

ಡಾ. ಹರ್ಷ ವರ್ಧನ್

ವೃತ್ತಿಯಿಂದ ವೈದ್ಯರಾದರೂ ರಾಜಕಾರಣಿಯಾಗಿ ತೊಡಗಿಸಿಕೊಂಡವರು. 16ನೇ ಲೋಕಸಭೆಗೆ ದೆಹಲಿಯ ಚಾಂದನಿ ಚೌಕ್ ದಿಂದ ಸಂಸದರಾಗಿ ಆಯ್ಕೆಯಾದರು.

ಡಾ. ಹರ್ಷ ವರ್ಧನ್ ಜೀವನ ಚರಿತ್ರೆ

ವೃತ್ತಿಯಿಂದ ವೈದ್ಯರಾದರೂ ರಾಜಕಾರಣಿಯಾಗಿ ತೊಡಗಿಸಿಕೊಂಡವರು. 16ನೇ ಲೋಕಸಭೆಗೆ ದೆಹಲಿಯ ಚಾಂದನಿ ಚೌಕ್ ದಿಂದ ಸಂಸದರಾಗಿ ಆಯ್ಕೆಯಾದರು. ಡಾ. ಹರ್ಷವರ್ಧನ್ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಕೇಂದ್ರ ಸಚಿವ.

2013ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅವರು ದೆಹಲಿ ಸಿಎಂ ಅಭ್ಯರ್ಥಿಯಾಗಿದ್ದರು. 1993ರಿಂದ ದೆಹಲಿಯ ಸಕ್ರೀಯ ರಾಜಕಾರಣದಲ್ಲಿ ತೊಡಗಿಸಿಕೊಂಡಿರುವ ಡಾ.ಹರ್ಷವರ್ಧನ್ ಬಾಲ್ಯದಿಂದಲೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಕ್ರೀಯ ಕಾರ್ಯಕರ್ತರಾಗಿದ್ದಾರೆ.

ಮತ್ತಷ್ಟು ಓದು
By Zainab Ashraf Updated: Monday, February 8, 2021, 12:43:28 PM [IST]

ಡಾ. ಹರ್ಷ ವರ್ಧನ್ ವಯಕ್ತಿಕ ಜೀವನ

ಪೂರ್ಣ ಹೆಸರು ಡಾ. ಹರ್ಷ ವರ್ಧನ್
ಜನ್ಮ ದಿನಾಂಕ 13 Dec 1954 (ವಯಸ್ಸು 69)
ಹುಟ್ಟಿದ ಸ್ಥಳ ದೆಹಲಿ
ಪಕ್ಷದ ಹೆಸರು Bharatiya Janta Party
ವಿದ್ಯಾರ್ಹತೆ Post Graduate
ಉದ್ಯೋಗ ವೈದ್ಯ, ರಾಜಕಾರಣಿ
ತಂದೆಯ ಹೆಸರು ಶ್ರೀ ಓಂಪ್ರಕಾಶ್
ತಾಯಿಯ ಹೆಸರು ಶ್ರೀಮತಿ ಸ್ನೇಹಲತಾ
ವೆಬ್‌ಸೈಟ್ www.drharshvardhan.com
ಸಾಮಾಜಿಕ ಜಾಲತಾಣದ ವಿಳಾಸ ಸಾಮಾಜಿಕ ಜಾಲತಾಣದ ವಿಳಾಸ:

ಡಾ. ಹರ್ಷ ವರ್ಧನ್ ಒಟ್ಟು ಆಸ್ತಿ

ಒಟ್ಟು ಆಸ್ತಿ: ₹3.02 CRORE
ಆಸ್ತಿ:₹3.02 CRORE
ಸಾಲಸೋಲ: N/A

ಡಾ. ಹರ್ಷ ವರ್ಧನ್ ಕುರಿತು ಆಸಕ್ತಿದಾಯಕ ಸಂಗತಿಗಳು

ಆರೋಗ್ಯ ಸೇವೆಗಳ ಕುರಿತು ಅತ್ಯಂತ ಮುತುವರ್ಜಿ ಹೊಂದಿರುವ ಡಾ.ಹರ್ಷವರ್ಧನ ಪೊಲೀಯೋ ನಿರ್ಮೂಲನೆ, ತಂಬಾಕು ಬಳಕೆ ನಿಯಂತ್ರಣ, ಅಗತ್ಯ ಔಷಧಿ ಲಭ್ಯತೆ ಮತ್ತು ಮಾನವ ಅಂಗಾಂಗ ದಾನ ಮತ್ತು ಸಂಯೋಜನೆ ಕ್ಷೇತ್ರಗಳಲ್ಲಿನ ನೀತಿ ನಿರೂಪಣೆಗಳನ್ನು ರೂಪಿಸುವಲ್ಲಿ ತಜ್ಞರಾಗಿದ್ದಾರೆ.

ಡಾ. ಹರ್ಷ ವರ್ಧನ್ ಸಾಧನೆಗಳು

ವಿಶ್ವ ಆರೋಗ್ಯ ಸಂಘಟನೆ (ಡಬ್ಲು.ಎಚ್.ಒ)ಗೆ ಹಲವು ವರ್ಷಗಳ ಕಾಲ ಸಲಹೆಗಾರರಾಗಿ, ಅಂತಾರಾಷ್ಟ್ರೀಯ ತಾಂತ್ರಿಕ ಸಮಿತಿಗಳ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಸೇವೆ ಮೆಚ್ಚಿ 1994 ರಲ್ಲಿ ಐ.ಎಂ.ಎ. ಪ್ರೆಸಿಡೆಂಟ್ಸ್ ಸ್ಪೇಷಲ್ ಅವಾರ್ಡ್ ಆಫ್ ಅಪ್ರಿಸಿಯೇಷನ್ ಪ್ರಶಸ್ತಿಗೆ ಭಾಜನರಾದರು.
1995 ದೇಶಾದ್ಯಂತ ಪೊಲೀಯೋ ನಿರ್ಮೂಲನೆಗೆ ಯೋಜನೆ ರೂಪಿಸಿ ಅನುಷ್ಠಾನಕ್ಕೆ ಮುಂದಾದ ಪರಿಣಾಮ 88 ಲಕ್ಷ ಮಕ್ಕಳಿಗೆ ಏಕಕಾಲಕ್ಕೆ ಲಸಿಕೆ ಹಾಕುವ ಅಭಿಯಾನ ಯಶಸ್ವಿಗೊಂಡಿತು.
2001ರಲ್ಲಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಡಾ.ಹರ್ಷವರ್ಧನ್ ಅವರನ್ನು ಪೊಲೀಯೋ ಚಾಂಪಿಯನ್ ಪ್ರಶಸ್ತಿ ನೀಡಿ ಗೌರವಿಸಿದರೆ, 2002ರಲ್ಲಿ ಪೊಲೀಯೋ ಪ್ಲಸ್ ಇಂಟರ್ನ್ಯಾಷನಲ್ ಪ್ರೆಸಿಡೆನ್ಷಿಯಲ್ ಸಮ್ಮಿಟ್ನಲ್ಲಿ ಗೌರವಿಸಿ ಪುರಸ್ಕರಿಸಲಾಗಿದೆ.
ಇದರ ಪರಿಣಾಮ ವಿಶ್ವ ಆರೋಗ್ಯ ಸಂಘಟನೆ 2014ರಲ್ಲಿ ಭಾರತವನ್ನು ಪೊಲೀಯೋ ಮುಕ್ತ ದೇಶ ಎಂದು ಘೋಷಣೆ ಮಾಡಿದೆ.

Disclaimer: The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X